2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆಯಡಿ “ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ಅಡಿಕೆ ದೋಟಿ ಖರೀದಿಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.
ತೋಟಗಾರಿಕೆ ಇಲಾಖೆಯಿಂದ ಅರ್ಥಿಕವಾಗಿ ಹಿಂದುಳಿದ ರೈತರಿಗೆ ಅಡಿಕೆ ದೋಟಿ-Adhike dhoti ಖರೀದಿಸಲು ಅರ್ಥಿಕವಾಗಿ ನೆರವು ನೀಡವ ದೇಸೆಯಲ್ಲಿ 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆಯಡಿ ಸಹಾಯಧನ ಒದಗಿಸಲಾಗುತ್ತಿದೆ.
ಆಸಕ್ತ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಸಹಾಯಧನದಲ್ಲಿ ಅಡಿಕೆ ದೋಟಿ ಖರೀದಿಸಬವುದಾಗಿದೆ.
Adhike dhoti subsidy-2023: ಹೈಟೆಕ್ ಕಾರ್ಬನ್ ಫೈಬರ್ ಅಡಿಕೆ ದೋಟಿ ಖರೀದಿ ಲಾಭಗಳು:
1) ಈ ದೋಟಿಗಳು ಅಡಿಕೆ, ತೆಂಗು ಕೊಯ್ಯಲು ಹಾಗೂ ಔಷಧಿ ಸಿಂಪಡಿಸುವ ಇಂಟರ್ ಲಾಕ್ ಹಾಗೂ ಪ್ರೀಮಿಯಮ್ ಶಾಕ್ ಪ್ರೊಫಿಂಗ್ ಸಿಸ್ಟಮ್ ಹೊಂದಿವೆ.
2) ದೀರ್ಘ ಬಾಳ್ವಿಕೆಯ ಕಾರ್ಬನ್ ಫೈಬರ್ ನಿಂದ ತಯಾರಿಸಲಾಗಿರುತ್ತದೆ.
3) 50 ,60, 70, 80 ಅಡಿ ವಿವಿಧ ಅಳತೆಗಳಲ್ಲಿ ದೋಟಿ ಲಭ್ಯವಿದ್ದು, ಬಳಕೆ ಮಾಡಲು ಅತ್ಯಂತ ಹಗುರ, ಸಮಯ, ಶ್ರಮ ಹಾಗೂ ಹಣದ ಉಳಿತಾಯವಾಗುತ್ತದೆ.
4) ಅಡಿಕೆ ಕೊಯ್ಲು ಹಾಗೂ ಸಿಂಪಡಣೆಗೆ ತುಂಬಾ ಸೂಕ್ತವಾಗಿವೆ.
ಇದನ್ನೂ ಓದಿ: ಅಹಾರ ಇಲಾಖೆಯಿಂದ ಪಡಿತರ ಚೀಟಿಯ ಅರ್ಹ ಮತ್ತು ಅನರ್ಹ ಪಟ್ಟಿ ಬಿಡುಗಡೆ!
ರೈತರು ಪಾವತಿಸಬೇಕಾದ ಹಣದ ವಿವರ:
ದೋಟಿ ಅಳತೆ | ಸಾಮಾನ್ಯ ವರ್ಗ | ಎಸ್.ಸಿ / ಎಸ್.ಟಿ ರೈತರ ವಂತಿಗೆ |
50 ಅಡಿ ದೋಟಿ | 30000 | 25000 |
60 ಅಡಿ ದೋಟಿ | 36400 | 30500 |
70 ಅಡಿ ದೋಟಿ | 45000 | 38000 |
80 ಅಡಿ ದೋಟಿ | 53000 | 45000 |
ಸಹಾಯಧನ ಮತ್ತು ದೋಟಿ ಖರೀದಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈಸೀ ಲೈಫ್ ಕಂಪನಿಯ ಶಾಖೆಯ ಸಂಪರ್ಕ ವಿವರ:
- ಚಿತ್ರದುರ್ಗ- 9901876682
- ದಾವಣಗೆರೆ-9483802068
- ಚಿಕ್ಕಮಗಳೂರು- 9880548013
- ಉಡುಪಿ- 9945745536
- ಶಿವಮೊಗ್ಗ-9880349012
- ಉತ್ತರಕನ್ನಡ- 9483805851
- ತುಮಕೂರು- 9900603222
ಸಧ್ಯ ಅಡಿಕೆ ಕಾಯಿ ಕೆಡವಲು ಮತ್ತು ಅಡಿಕೆ ಮರಗಳಿಗೆ ಔಷದಿ ಸಿಂಪರಣೆ ಮಾಡಲು ಮರ ಹತ್ತಿ ಕೆಲಸ ಮಾಡುವ ನೂರಿತ ಕೂಲಿ-ಕಾರ್ಮಿಕರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದಕ್ಕೆ ಸೂಕ್ತ ಪರಿಹಾರವಾಗಿ ರೈತರು ಈ ದೋಟಿ ಮೊರೆ ಹೊಗುತ್ತಿದ್ದಾರೆ.
ದೋಟಿಯಿಂದ ಸ್ವ-ಉದ್ಯೋಗ ಆರಂಭ:
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ “ಅಡಿಕೆ ಕೌಶಲ್ಯ ಪಡೆ” ಎಂದು ರಚನೆ ಮಾಡಿಕೊಂಡು ಒಂದಿಷ್ಟು ಯುವಕರ ಗುಂಪು ಸೇರಿಕೊಂಡು 3-4 ದೋಟಿಯನ್ನು ಖರೀದಿಸಿ ನೇರವಾಗಿ ರೈತರ ತಾಕಿಗೆ ಭೇಟಿ ಮಾಡಿ ಅಡಿಕೆ ಕಾಯಿ ಕೊಯ್ಲು ಮತ್ತು ಔಷದಿ ಸಿಂಪರಣೆ ಮಾಡುತ್ತಿದ್ದಾರೆ. ಇದಕ್ಕೆ ಎಕರೆ ಇಂತಿಷ್ಟು ಹಣವನ್ನು ನಿಗದಿ ಮಾಡಿ ರೈತರಿಂದ ಹಣ ಪಡೆಯುತ್ತಾರೆ.
ಈ ರೀತಿಯ ಸ್ವ-ಉದ್ಯೋಗ ಅವಕಾಶವು ಸಹ ಈ ಕಾರ್ಬನ್ ಫೈಬರ್ ದೋಟಿಯಿಂದ ಸಾಧ್ಯವಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ತುಂಬಾ ಬೇಡಿಕೆಯು ಸಹ ಇದೆ.