agriculture equipment subsidy: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಯಂತ್ರೋಪಕರಣ ವಿವರ ಮತ್ತು ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು?

ಕಡಿಮೆ ಜಮೀನು ಹೊಂದಿರುವ ಮತ್ತು ಅರ್ಥಿಕವಾಗಿ ಹಿಂದುಲಿದ ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಗೆ(agriculture equipment subsidy scheme) ಕೃಷಿ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ.

ಇತ್ತಿಚೀನ ದಿನಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಕೂಲಿ-ಕಾರ್ಮಿಕರ ಕೊರತೆ ಹೆಚ್ಚುತ್ತಿದ್ದು ಇದಕ್ಕೆ ಪರ್ಯಾಯವಾಗಿ ಕೃಷಿ ಯಂತ್ರೋಪಕರಣ ಬಳಕೆ ಅನಿವಾರ್ಯವಾಗಿದೆ. ಕಡಿಮೆ ಜಮೀನು ಹೊಂದಿರುವ ಮತ್ತು ಅರ್ಥಿಕವಾಗಿ ಹಿಂದುಲಿದ ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಗೆ(agriculture equipment subsidy scheme) ಕೃಷಿ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ.

ಇದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಉತ್ತಮ ಸಂಸ್ಕರಣೆಗೆ ಒಳಪಡಿಸಿ ಗುಣಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ದೊರೆಯುತ್ತದೆ. ಉತ್ತಮ ಗುಣಮಟ್ಟದ ಹಾಗೂ ಸಂಸ್ಕರಿಸಿದ ಉತ್ಪನ್ನಗಳು ರೈತರಿಗೆ ಹೆಚ್ಚಿನ ಬೆಲೆಯನ್ನೂ ಸಹ ಒದಗಿಸಿಕೊಡುವುದರಿಂದ ಅವರ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತದೆ. 

ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ ಘಟಕಗಳನ್ನು ಸಹ ಇಲಾಖೆಯಿಂದ ಪಡೆಯಬವುದು. ಕೃಷಿ ಸಂಸ್ಕರಣಾ ಘಟಕಗಗಳಿಗೆ ಸಾಮಾನ್ಯ ರೈತರಿಗೆ ಶೇ.50 ರಷ್ಟು ಹಾಗೂ ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ.90 ರಷ್ಟು ಮತ್ತು ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇ..75 ಕ್ಕೆ ಮೀರದಂತೆ ಹಾಗೂ ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.

ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು, 05 ಪದರಗಳುಳ್ಳ 250 GSM, ಕಪ್ಪು ಬಣ್ಣದ HDPE tarpaulins confirming IS 7903/2017 (Type-II)8X6 mtr. ಅಳತೆಯ ಟಾರ್ಪಲೀನ್ ಗಳನ್ನು ವಿತರಿಸಲಾಗುತ್ತದೆ.

ಇದನ್ನೂ ಓದಿ: NHM scheme- ತೋಟಗಾರಿಕೆ ಇಲಾಖೆಯಿಂದ ಸಣ್ಣ ಟ್ರ್ಯಾಕ್ಟರ್, ಡ್ರಾಗನ್ ಪ್ರೂಟ್, ಈರುಳ್ಳಿ ಶೇಖರಣಾ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

ಕೃಷಿ ಯಾಂತ್ರೀಕರಣ ಮಹತ್ವ: ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಸಕಾಲದಲ್ಲಿ ಕೃಷಿ ಚಟುವಟಿಕೆ ಬೇಸಾಯದ ಖರ್ಚು ಕಡಿಮೆ ಮಾಡುವುದು.
 
Agriculture equipment subsidy scheme- ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಖರೀದಿಸಬವುದಾದ ಯಂತ್ರೋಪಕರಣಗಳು:

  • ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್
  • ಭೂಮಿ ಸಿದ್ಧತೆ ಉಪಕರಣಗಳು
  • ಬಿತ್ತನೆ/ನಾಟಿ ಯಂತ್ರಗಳು
  • ಅಂತರ ಬೇಸಾಯ ಉಪಕರಣಗಳು
  • ಸಸ್ಯ ಸಂರಕ್ಷಣಾ/ಸಿಂಪರಣಾ ಯಂತ್ರಗಳು
  • ಕಟಾವು, ಒಕ್ಕಣೆ ಉತ್ಪನ್ನಗಳ ಸಂಸ್ಕರಣಾ ಯಂತ್ರಗಳು
  • ಮೇವು/ತ್ಯಾಜ್ಯ ನಿರ್ವಹಣಾ ಯಂತ್ರಗಳು
  • ಡೀಸೆಲ್ ಪಂಪಸೆಟ್ಸ್

ಇದನ್ನೂ ಓದಿ: Karnataka guarantee schemes: ಈ ಪಟ್ಟಿಯಲ್ಲಿ ಹೆಸರಿಲ್ಲದವರಿಗಿಲ್ಲ ಅನ್ನಭಾಗ್ಯ,ಗೃಹಲಕ್ಷ್ಮಿ ಹಣ! ಇಲ್ಲಿದೆ ಪರಿಷ್ಕೃತ ರೇಷನ್ ಕಾರ್ಡ ಪಟ್ಟಿ.

  • ಮಿನಿ ಟ್ರಾಕ್ಟರ್           
  • ಪವರ್ ಟಿಲ್ಲರ್           
  • ಟ್ರಾಕ್ಟರ್ ಚಾಲಿತ ಎಂ.ಬಿ. ಪ್ಲೋ (ಫಿಕ್ಸ್ಡ್)       
  • ಟ್ರಾಕ್ಟರ್ ಚಾಲಿತ ಎಂ.ಬಿ. ಪ್ಲೋ (ರಿವರ್ಸಿಬಲ್)        
  • ಟ್ರಾಕ್ಟರ್ ಚಾಲಿತ ಲೇಸರ್ ಭೂಮಿ ಮಟ್ಟ ಮಾಡುವ ಯಂತ್ರ         
  • ರೋಟೊವೇಟರ್
  • ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (2 ಡಿಸ್ಕ್)        
  • ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (3 ಡಿಸ್ಕ್)        
  • ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (10 ಡಿಸ್ಕ್)
  • ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (14 ಡಿಸ್ಕ್)            
  • ಕಬ್ಬಿನ ರವದಿ ಪುಡಿ ಮಾಡುವ ಯಂತ್ರ         
  • ತೆಂಗಿ ಗರಿ ಕತ್ತರಿಸುವ ಯಂತ್ರ
  • ಟ್ರ್ಯಾಕ್ಟರ್ ಚಾಲಿತ ರಿಡ್ಜರ್/ ಫರೊ ಓಪನರ್ (3)      
  • ಟ್ರ್ಯಾಕ್ಟರ್ ಚಾಲಿತ ರಿಡ್ಜರ್/ ಫರೊ ಓಪನರ್ (5)      
  • ಟ್ರ್ಯಾಕ್ಟರ್ ಚಾಲಿತ 9 ಟೈನ್ಸ್ ಸಂಯುಕ್ತ ಬಿತ್ತನೆ ಕೂರಿಗೆ    
  • ಹ್ಯಾಂಡ್ ಪುಶ್ ಸೀಡರ್         
  • ಹ್ಯಾಂಡ್ ಪುಶ್ ಸೀಡರ್ ಕಂ ಫರ್ಟಿಲೈಜರ್  
  • ಭತ್ತ ನಾಟಿ ಯಂತ್ರ     
  • ಬ್ರಶ್ ಕಟ್ಟರ್ 
  • ರೋಟರಿ ಟಿಲ್ಲರ್ (5 ಹೆಚ್.ಪಿ)           
  • ರೋಟರಿ ಟಿಲ್ಲರ್ (7 ಹೆಚ್.ಪಿ)           
  • ರೋಟರಿ ಟಿಲ್ಲರ್ (5 ಹೆಚ್.ಪಿ)           
  • ಡೀಸೆಲ್ ಪಂಪಸೆಟ್ ( 3 ಹೆಚ್.ಪಿ)      
  • ಡೀಸೆಲ್ ಪಂಪಸೆಟ್ ( 4 ಹೆಚ್.ಪಿ)      
  • ಡೀಸೆಲ್ ಪಂಪಸೆಟ್ ( 5 ಹೆಚ್.ಪಿ)      
  • ಡೀಸೆಲ್ ಪಂಪಸೆಟ್ ( 8-10 ಹೆಚ್.ಪಿ)            
  • ಶೇಂಗಾ ಕಟಾವು ಯಂತ್ರ        
  • ಶೇಂಗಾಕಾಯಿ ಬಿಡಿಸುವ ಯಂತ್ರ    
  • ಬಹುಬೆಳೆ ಕಟಾವು ಯಂತ್ರ    
  • ಬಹುಬೆಳೆ ಒಕ್ಕಣೆ ಯಂತ್ರ (10 ಹೆಚ್.ಪಿ)        
  • ಬಹುಬೆಳೆ ಒಕ್ಕಣೆ ಯಂತ್ರ (8 ಹೆಚ್.ಪಿ)          
  • ಬೇಲರ್ (ಟ್ರ್ಯಾಕ್ಟರ್ ಚಾಲಿತ)25-55 ಹೆಚ್.ಪಿ
  • ಮೇವು ಕತ್ತರಿಸುವ ಯಂತ್ರ (ಹ್ಯಾಂಡ್)          
  • ಮೇವು ಕತ್ತರಿಸುವ ಯಂತ್ರ (2 ಹೆಚ್.ಪಿ)        
  • ಮೇವು ಕತ್ತರಿಸುವ ಯಂತ್ರ (3 ಹೆಚ್.ಪಿ)        
  • ಪಲ್ವರೈಸರ್ (1 ಹೆಚ್.ಪಿ)      
  • ಪಲ್ವರೈಸರ್ (3 ಹೆಚ್.ಪಿ)      
  • ಫ್ಲೋರ್ ಮಿಲ್ (7.5 ಹೆಚ್.ಪಿ)            
  • ಫ್ಲೋರ್ ಮಿಲ್ (10 ಹೆಚ್.ಪಿ)
  • ರಾಗಿ ಕ್ಲೀನಿಂಗ್ ಮಶಿನ್ (3 ಹೆಚ್.ಪಿ) 
  • ದಾಲ್ ಪ್ರೊಸೆಸ್ಸರ್ – ಬೇಳೆ ಮಾಡುವ ಯಂತ್ರ (2 ಹೆಚ್.ಪಿ)
  • ಮಲ್ಟಿ ಆಯಿಲ್ ಸೀಡ್ಸ್ ಪ್ರೆಸ್ ಮಶೀನ್          
  • ಆಟೋಮೇಟಿಕ್ ಕೋಲ್ಡ್ ಆಯಿಲ್ ಪ್ರೆಸ್ ಮಶೀನ್ 

ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಮೇಲಿನ ಯತ್ರೋಪಕರಣ ಖರೀದಿ ಮಾಡಲು ಇಚ್ಚಿಸುವ ರೈತರು ನಿಮ್ಮ ಹತ್ತಿರದ/ಹೋಬಳಿಯ ರೈತ ಸಂಪರ್ಕ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.

ಅಗತ್ಯ ದಾಖಲಾತಿಗಳು:

  1. ಅಧಾರ್ ಕಾರ್ಡ ಪ್ರತಿ.
  2. ಬ್ಯಾಂಕ್ ಪಾಸ್ ಬುಕ್ ಪ್ರತಿ.
  3. ಪಹಣಿ/ಉತಾರ್/RTC.
  4. ಪೋಟೋ 
  5. 20 ರೂ ಬಾಂಡ್.
  6. ಜಂಟಿ ಮಾಲೀಕರ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ.
  7. ಹಿಡುವಳಿ ಪ್ರಮಾಣ ಪತ್ರ.

ಅನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬವುದು:

ರೈತರು ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ಭೇಟಿ ಮಾಡಿ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ನೀವೆ ಸ್ವತಃ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬವುದು.

ಅರ್ಜಿ ಸಲ್ಲಿಸಲು ಲಿಂಕ್: Apply Now

ಗಮನಿಸಿ: ಅನುದಾನ ಲಭ್ಯತೆ ಆಧಾರದ ಮೇಲೆ ತಾಲ್ಲೂಕುವಾರು ರೈತರಿಗೆ ಯಂತ್ರೋಪಕರಣಗಳನ್ನು ನೀಡಲಾಗುತ್ತದೆ
 
ಸಹಾಯಧನದಲ್ಲಿ ಎಲ್ಲಾ ಬಗ್ಗೆಯ ಕೃಷಿ ಯಂತ್ರೋಪಕರಣಗಳ ಖರೀದಿಗೆ ಇಂದೇ ಸಂಪರ್ಕಿಸಿ: 9901876682(ಕಾರ್ತಿಕ್, ಈಸೀ ಲೈಫ್ ಎಂಟರ್ ಪ್ರೈಸಸ್, ಉಡುಪಿ) (ಇದು ಜಾಹೀರಾತು ಅಗಿರುತ್ತದೆ)

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

 Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!