- Advertisment -
HomeAgricultureAgriculture Loan- ರೈತರಿಗೆ ಸಿಹಿ ಸುದ್ದಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ ಸರಕಾರ!

Agriculture Loan- ರೈತರಿಗೆ ಸಿಹಿ ಸುದ್ದಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ ಸರಕಾರ!

ಕರ್ನಾಟಕ ರಾಜ್ಯ ಸರಕಾರದಿಂದ ಈ ಬಾರಿಯ ಬಜೆಟ್ ನಲ್ಲಿ ಸಹಕಾರಿ ಬ್ಯಾಂಕ್ ನಲ್ಲಿರುವ ರೈತರ ಸಾಲದ(Agriculture Loan)ಲಿರುವ ಬಡ್ಡಿ ಮನ್ನಾ ಮಾಡಲು ಅನುದಾನವನ್ನು ಮೀಸಲಿಡಲಾಗಿದೆ. ಯಾವೆಲ್ಲ ಬ್ಯಾಂಕ್ ನಲ್ಲಿ ರೈತರು ತೆಗೆದುಕೊಂಡ ಸಾಲದ ಬಡ್ಡಿ ಮನ್ನಾ ಅಗಲಿದೆ? ಮತ್ತು ರೈತಾಪಿ ವರ್ಗಕ್ಕೆ ಈ ಬಾರಿಯ ಬಜೆಟ್ ನಲ್ಲಿ(Karnataka Budget) ಯೋಜನೆವಾರು ಎಷ್ಟು ಅನುದಾನ ನೀಡಲಾಗಿದೆ ವಿವರ ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು(CM siddaramaiah) ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತನ್ನು ನೀಡಲಾಗಿದ್ದು ಕೃಷಿ(Agriculture), ತೋಟಗಾರಿಕೆ(Horticulture), ರೇಷ್ಮೆ(Serculture), ಪಶುಸಂಗೋಪನೆ(Veterinary), ಮೀನುಗಾರಿಕೆ(Fisheries) ಇಲಾಖೆಯ ಯಾವೆಲ್ಲ ಯೋಜನೆಗೆ ಎಷ್ಟು ಅನುದಾನವನ್ನು ನೀಡಲಾಗಿದೆ? ಹಾಗೆಯೇ ಸಹಕಾರಿ ಬ್ಯಾಂಕ್ ನಲ್ಲಿ ರೈತರು ತೆಗೆದುಕೊಂಡಿರುವ ಸಾಲದ ಬಡ್ಡಿ ಮನ್ನಾದ ವಿವರವನ್ನು ಸಹ ಈ ಲೇಖನದಲ್ಲಿ ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Krishi Pumpset-ಕೃಷಿ ಪಂಪ್ ಸೆಟ್ ಗೆ 7 ತಾಸು ವಿದ್ಯುತ್ ಪೂರೈಕೆ ಮಹತ್ವದ ಪ್ರಕಟಣೆ!

Agriculture Loan Interest-ಸಹಕಾರಿ ಬ್ಯಾಂಕ್ ನ ₹240 ಕೋಟಿ ರೈತರ ಬಡ್ಡಿ ಮನ್ನಾ ಘೋಷಿಸಿದ ರಾಜ್ಯ ಸರಕಾರ:

ರಾಜ್ಯ ಸರಕಾರದಿಂದ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕ್ ನಲ್ಲಿ ತೆಗೆದುಕೊಂಡಿರುವ ಕೃಷಿ ಸಾಲದ ಬಡ್ಡಿಯನ್ನು ಮನ್ನಾ ಮಾಡಲು ಕ್ರಮವನ್ನು ಕೈಗೊಳ್ಳಲಾಗಿದ್ದು, ಸಹಕಾರಿ ಬ್ಯಾಂಕ್ ಅಂದರೆ ಡಿಸಿಸಿ (DCC), ಪಿಕಾರ್ಡ್ ಬ್ಯಾಂಕ್‌ಗಳಲ್ಲಿ (Picard Bank) ರೈತರು ಮಾಡಿರುವ ಸಾಲದ ಒಟ್ಟೂ ₹240 ಕೋಟಿ ಬಡ್ಡಿ ಮನ್ನಾ ಮಾಡಲು ಅನುದಾನ ಒದಗಿಸಲಾಗಿದೆ.

Agriculture loan application-ಹೊಸದಾಗಿ 37 ಲಕ್ಷ ರೈತರಿಗೆ ಸಾಲಕ್ಕಾಗಿ ₹28,000 ಕೋಟಿ ಅನುದಾನ:

ರೈತಾಪಿ ವರ್ಗದವರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಕಾಲ ಕಾಲಕ್ಕೆ ಬೇಕಾಗುವ ಹಣವನ್ನು ಕಡಿಮೆ ಬಡ್ಡಿಯಲ್ಲಿ ಸಾಲದ ರೂಪದಲ್ಲಿ ಬ್ಯಾಂಕ್ ಮೂಲಕ ತೆಗೆದುಕೊಳ್ಳಲು ಈ ಬಾರಿಯ ಬಜೆಟ್ ನಲ್ಲಿ 37 ಲಕ್ಷ ರೈತರಿಗೆ ಸಾಲಕ್ಕಾಗಿ ₹28,000 ಕೋಟಿ ಹಣವನ್ನು ರಾಜ್ಯ ಸರಕಾರದಿಂದ ಒದಗಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Adike Bele Parihara-ರೈತರಿಗೆ ₹104 ಕೋಟಿ ಬೆಳೆ ನಷ್ಟ ಪರಿಹಾರ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

Karnataka Budget details

Agriculture Schemes in Karnataka-ರೈತಾಪಿ ವರ್ಗಕ್ಕೆ ಈ ಬಾರಿ ಬಜೆಟ್ ನಲ್ಲಿ ಯಾವೆಲ್ಲ ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ:

ರೈತರು ಕೃಷಿ ಚಟುವಟಿಕೆಗಳನ್ನು ಮಾಡಲು ರಾಜ್ಯ ಸರಕಾರದಿಂದ ವಿವಿಧ ಇಲಾಖೆಯ ಮೂಲಕ ಸಹಾಯಧನ ಯೋಜನೆಯಡಿ ಸವಲತ್ತುಗಳನ್ನು ಪಡೆಯಲು ಅವಕಾಶವಿದ್ದು ಈ ಬಾರಿ ಬಜೆಟ್ ನಲ್ಲಿ ಯಾವೆಲ್ಲ ಯೋಜನೆಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ತೀರುವಳಿ ದೊರೆತ ಕೂಡಲೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯಡಿ ಕೇಂದ್ರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಪ್ರಾರಂಭ.

ಕೃಷ್ಣಾ, ಕಾವೇರಿ ಮತ್ತು ಇತರ ನದಿಗಳ ಕಣಿವೆಯಡಿ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಕ್ರಮ.

ರಾಜ್ಯದಲ್ಲಿ 5,000 ಕಿರು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅನುದಾನ.

ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ.

ಇದನ್ನೂ ಓದಿ: Bhagyalaxmi Bond-ಭಾಗ್ಯಲಕ್ಷ್ಮಿ ಬಾಂಡ್ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1 ಲಕ್ಷ ಹಣ ಜಮಾ! ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ ಸ್ಥಾಪನೆಗೆ ಅನುಮೋದನೆ.

195 ಕೋಟಿ ವೆಚ್ಚದಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಜಾರಿಗೆ ಕ್ರಮ.

ರಾಜ್ಯದ ಒಟ್ಟು 20 GI ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆಗೆ ಅನುದಾನ ಮೀಸಲಿಡಲಾಗಿದ್ದು ಜೊತೆಗೆ ತೋಟಗಾರಿಕಾ ಪ್ರವಾಸೋದ್ಯಮಕ್ಕೆ ಉತ್ತೇಜನಕ್ಕೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ₹428 ಕೋಟಿ ವೆಚ್ಚದಲ್ಲಿ 50 ಸಾವಿರ ರೈತರಿಗೆ ಸಹಾಯಧನ ಸೌಲಭ್ಯ.

ಹನಿ ಮತ್ತು ತುಂತುರು ನೀರಾವರಿ ಘಟಕ ಅಳವಡಿಕೆಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಡಿ ಒಟ್ಟು 1.81 ಲಕ್ಷ ರೈತರಿಗೆ ₹440 ಕೋಟಿ ಸಹಾಯಧನ ಹಾಗೂ ತೊಗರಿ ಉತ್ಪಾದನೆ ಉತ್ತೇಜನಕ್ಕೆ ₹88 ಕೋಟಿ ನೆರವು.

ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ.

ರಾಮನಗರ ಮತ್ತು ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿ ₹250 ಕೋಟಿ ವೆಚ್ಚದಲ್ಲಿ ಅನುಷ್ಠಾನ.

ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣಕ್ಕಾಗಿ Assayer ಗಳ ನಿಯೋಜನೆ.

“ಅನುಗ್ರಹ’ ಯೋಜನೆಯಡಿ ಪರಿಹಾರ ಮೊತ್ತ ಹೆಚ್ಚಳ; ಎಮ್ಮೆ ಮತ್ತು ಎತ್ತುಗಳಿಗೆ ₹15,000, /₹7,500, ಕುರಿ/ ಮೇಕೆ ಮರಿಗಳಿಗೆ ₹5000 ಗಳಿಗೆ ಹೆಚ್ಚಳ ಮಾಡಲಾಗಿದೆ.

50 ನೂತನ ಪಶು ಚಿಕಿತ್ಸಾಲಯಗಳ ಪ್ರಾರಂಭಕ್ಕೆ ಕ್ರಮ ಮತ್ತು 2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳ ಅಭಿವೃದ್ಧಿಗೆ ₹30 ಕೋಟಿ ಹಾಗೂ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಮೀರಿದ ಇಂಜಿನ್ ಬದಲಾವಣೆಗೆ ಗರಿಷ್ಠ ₹1 ಲಕ್ಷ ಸಹಾಯಧನ ಮತ್ತು ರಾಜ್ಯದಲ್ಲಿ ಹೊಸ ಮೀನುಗಾರಿಕಾ ನೀತಿ ಜಾರಿ.

37 ಲಕ್ಷ ರೈತರಿಗೆ ₹28,000 ಕೋಟಿ ಸಾಲ ವಿತರಣೆಯ ಗುರಿ ಮತ್ತು 3 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಸಂಪೂರ್ಣ ಗಣಕೀಕರಣಕ್ಕೆ ಕ್ರಮ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ₹60 ಕೋಟಿ ವೆಚ್ಚದಲ್ಲಿ ಗ್ರಾಮೀಣ ಉಗ್ರಾಣಗಳ ನಿರ್ಮಾಣ.

- Advertisment -
LATEST ARTICLES

Related Articles

- Advertisment -

Most Popular

- Advertisment -