akashavani bengaluru job-ಆಕಾಶವಾಣಿ ಕೇಂದ್ರ ಬೆಂಗಳೂರಿನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ!

All india radio bangalore requirement: ಆಕಾಶವಾಣಿ ಕೇಂದ್ರ ಬೆಂಗಳೂರಿನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಾಂದರ್ಭಿಕ ಸುದ್ದಿ ಸಂಪಾದಕರು ಹಾಗೂ ಸಾಂದರ್ಭಿಕ ವಾರ್ತಾ ವಾಚಕರು-ಅನುವಾದಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

akashavani bengaluru job-ಆಕಾಶವಾಣಿ ಕೇಂದ್ರ ಬೆಂಗಳೂರಿನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ!
akashavani bengaluru job notification-2024

ಆಕಾಶವಾಣಿ ಕೇಂದ್ರ ಬೆಂಗಳೂರಿನಲ್ಲಿ(akashavani bengaluru job) ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಾಂದರ್ಭಿಕ ಸುದ್ದಿ ಸಂಪಾದಕರು ಹಾಗೂ ಸಾಂದರ್ಭಿಕ ವಾರ್ತಾ ವಾಚಕರು-ಅನುವಾದಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ಆಕಾಶವಾಣಿಯ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಖಾಲಿ ಇರುವ ಸಾಂದರ್ಭಿಕ ಸುದ್ದಿ ಸಂಪಾದಕರು ಹಾಗೂ ಸಾಂದರ್ಭಿಕ ವಾರ್ತಾ ವಾಚಕರು-ಅನುವಾದಕರ ಹುದ್ದೆಗಳಿಗೆ, 21 ರಿಂದ 50 ವರ್ಷಗಳ ಒಳಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

All india radio bangalore requirement-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಸಾಂದರ್ಭಿಕ ಸುದ್ದಿ ಸಂಪಾದಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಕನಿಷ್ಠ ಒಂದು ವರ್ಷದ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. 

ಇದನ್ನೂ ಓದಿ: Voter list-2024: ಲೋಕಸಭೆ ಚುನಾವಣೆ ಅಂತಿಮ 5.37 ಕೋಟಿ ಮತದಾರರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ? ಚೆಕ್ ಮಾಡಿ.

ಪತ್ರಿಕೋದ್ಯಮ ಪದವಿ ಅಥವಾ ಡಿಪ್ಲೊಮಾ ಇಲ್ಲದಿದ್ದಲ್ಲಿ ಮುದ್ರಣ ಮಾಧ್ಯಮ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ ಅಥವಾ ಸುದ್ದಿ ಸಂಪಾದಕರಾಗಿ 5 ವರ್ಷ ಅನುಭವ ಹೊಂದಿರಬೇಕು.

ಸಾಂದರ್ಭಿಕ ವಾರ್ತಾ ವಾಚಕರು-ಅನುವಾದಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಪ್ರಸಾರಕ್ಕೆ ಯೋಗ್ಯವಾದಂತಹ ಧ್ವನಿ ಹೊಂದಿರಬೇಕು.

ಸಾಂದರ್ಭಿಕ ಸುದ್ದಿ ಸಂಪಾದಕರು ಮತ್ತು ಸುದ್ದಿ ವಾಚಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಇಂಗ್ಲಿಷ್‌ನಿಂದ ಕನ್ನಡ ಭಾಷೆಗೆ ಅನುವಾದಿಸುವ ಸಾಮರ್ಥ್ಯವನ್ನು ಕಡ್ಡಾಯವಾಗಿ ಹೊಂದಿರಬೇಕು.

ಇದನ್ನೂ ಓದಿ: Agriculture loan Interest-ಕೃಷಿ ಸಾಲದ ಬಡ್ಡಿ ಮನ್ನಾಕ್ಕೆ ಯಾರೆಲ್ಲ ಅರ್ಹರು? ಅಧಿಕೃತ ಮಾರ್ಗಸೂಚಿ ಬಿಡುಗಡೆ!

All india radio bangalore job-ಆಯ್ಕೆ ವಿಧಾನ:

ಈ ಎರಡು  ಹುದ್ದೆಗಳಿಗೆ ರೇಡಿಯೋ ಅಥವಾ ದೂರದರ್ಶನದಲ್ಲಿ ಕೆಲಸ ಮಾಡಿದ ಅನುಭವ ಕಂಪ್ಯೂಟರ್ ಜ್ಞಾನ ಉಳ್ಳವರಿಗೆ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಪ್ರಾಶಸ್ತ್ಯ ನೀಡಲಾಗುವುದು ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಅಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

Application fee- ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಬ್ಯರ್ಥಿಗಳು 354 ರೂ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಬ್ಯರ್ಥಿಗಳು 266 ರೂ ಮೊತ್ತದ ಡಿಡಿ ಅನ್ನು Station Director, All India Radio, Bengaluru ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bank adhar link status: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲದ ರೈತರ ಪಟ್ಟಿ ಬಿಡುಗಡೆ! ಇಲ್ಲಿದೆ ಚೆಕ್ ಮಾಡಲು ವೆಬ್ಸೈಟ್ ಲಿಂಕ್.

ಅರ್ಜಿ ಸಲ್ಲಿಸಲು ವಿಳಾಸ:

The Deputy Director Ganeral(E)(Attn Regional News Unit) All India Radio, Ra bhavan road bengaluru-560001  ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.

Last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2024

ಹೆಚ್ಚಿನ ಮಾಹಿತಿಗಾಗಿ: 080-22356344 ಸಂಪರ್ಕಿಸಿ.

ಇದನ್ನೂ ಓದಿ: Crop loan interest- ರೈತರ ಕೃಷಿ ಸಾಲದ 440 ಕೋಟಿ ರೂ ಬಡ್ಡಿ ಮನ್ನಾ! ಬಡ್ಡಿ ಮನ್ನಾಕ್ಕೆ ಯಾರೆಲ್ಲ ಅರ್ಹರು?