ಕಳೆದ ಅನೇಕ ವರ್ಷಗಳ ಹಿಂದೆ ಸರಕಾರಿ ಜಮೀನನ್ನು ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಂಡು ಈಗ ಆ ಜಮೀನನ್ನು ಸಕ್ರಮಗೊಳಿಸಲು(Akrama sakrama yojane) ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ಸಿಹಿ ಸುದ್ದಿ ನೀಡಲಾಗಿದ್ದು ಈ ಕುರಿತು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಹಂಚಿಕೊಂಡಿರುವ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.
ವಿವಿಧ ಯೋಜನೆಯಡಿ ಸರಕಾರಿ ಜಮೀನಿನನ್ನು ಪಡೆದುಕೊಂಡು ತಮ್ಮ ತಮ್ಮ ಹೆಸರಿಗೆ ಆ ಜಮೀನನ್ನು ಮಾಡಿಸಿಕೊಳ್ಳಲು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ನಿಯಮಾನುಸಾರ ಅರ್ಹ ಇರುವ ಅರ್ಜಿ ತಿರಸ್ಕೃತಗೊಂಡಿದ್ದಲ್ಲಿ ಪುನಃ ಮರು ಪರಿಶೀಲನೆಗೆ ಅವಕಾಶ ನೀಡಲಾಗಿದೆ ಎಂದು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಇದನ್ನೂ ಓದಿ: LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?
Akrama sakrama yojane application-ಸಲ್ಲಿಕೆಯಾದ ಅರ್ಜಿಯಲ್ಲಿ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದೆ:
ಬಗರ್ ಹುಕುಂ ಯೋಜನೆಯಡಿ ಅರ್ಹ ಫಲಾನುಭವಿ ರೈತರಿಗೆ ತಾವು ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕು ಪತ್ರವನ್ನು ನೀಡಲು ಅರ್ಜಿ ಸಲ್ಲಿಸಲು ಕಂದಾಯ ಇಲಾಖೆಯಿಂಡ ಈ ಹಿಂದೆ ಅವಕಾಶ ನೀಡಲಾಗಿತ್ತು ಒಟ್ಟು ಸಂಗ್ರಹಣೆಯಾದ ಅರ್ಜಿಯಲ್ಲಿ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ರಾಜ್ಯಾದ್ಯಂತ ತಿರಸ್ಕೃತಗೊಳಿಸಲಾಗಿದ್ದು, ಮಾರ್ಗಸೂಚಿ ಪ್ರಕಾರ ಪರೀಶಿಲನೆ ಕೈಗೊಂಡು ಕಂದಾಯ ಇಲಾಖೆ ಅಧಿಕಾರಿಗಳು ಈ ಕ್ರಮವನ್ನು ಕೈಗೊಂಡಿದ್ದರೆ.
Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ನಮೂನೆ 50, 53, 57 ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆ. ನಮೂನೆ 57ರ ಅಡಿ ಸಲ್ಲಿಕೆಯಾದ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ರಾಜ್ಯಾದ್ಯಂತ ತಿರಸ್ಕೃತಗೊಳಿಸಲಾಗಿದೆ.
ಒಂದು ವೇಳೆ ರೈತರು ಇದರಿಂದ ಬಾಧಿತರಾಗಿದ್ದರೆ, ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಪ್ರಕರಣಗಳನ್ನು ಮರು ಪರಿಶೀಲಿಸುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದರೆ, ಬಗರ್ ಹುಕುಂ ಸಮಿತಿಗಳಲ್ಲಿ ತಿರಸ್ಕೃತಗೊಂಡ ನಮೂನೆ 57ರ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಪರಿಗಣಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ(Krishana byre gowda) ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು.
ಇದನ್ನೂ ಓದಿ: PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ!
Karnataka Revenue Department-ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ:
ಒಂದೊಮ್ಮೆ ಮಾರ್ಗಸೂಚಿ ಪ್ರಕಾರ ಬಗರ್ ಹುಕುಂ ಯೋಜನೆಯಡಿ ಹಕ್ಕುಪತ್ರ ಪಡೆಯಲು ಅರ್ಹರ ಇರುವ ರೈತರು ತಮ್ಮ ಅರ್ಜಿ ತಿರಸ್ಕೃತ ಅಗಿದ್ದಲ್ಲಿ ಒಮ್ಮೆ ನಿಮ್ಮ ಉಪವಿಭಾಗಾಧಿಕಾರಿಗಳ(AC office) ಕಚೇರಿಯನ್ನು ನೀವು ಪ್ರಸ್ತುತ ಸಾಗುವಳಿ ಮಾಡುತ್ತಿರುವ ಜಮೀನಿಗೆ ಸಂಬಂಧಿಸಿದ ಅಗತ್ಯ ಲಭ್ಯವಿದ್ದಲ್ಲಿ ಅವುಗಳನ್ನು ತೆಗೆದುಕೊಂಡು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ನಿಮ್ಮ ನಮೂನೆ 57 ಅರ್ಜಿ ಮರು ಪರೀಶಿಲನೆಗೆ ಮೇಲ್ಮನವಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ!
ಅರ್ಜಿ ತಿರಸ್ಕೃತಗೊಳಿಸಲು ಪ್ರಮುಖ ಕಾರಣಗಳು ಹೀಗಿವೆ:
5 ಎಕರೆಗಿಂತ ಅಧಿಕ ಜಮೀನನ್ನು ಹೊಂದಿಯು ಅರ್ಜಿಯನ್ನು ಸಲ್ಲಿಸಿದವರ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.
ರೈತಾಪಿ ಕೆಲಸವನ್ನು ಮಾಡದೇ ಆ ಜಮೀನಿನಲ್ಲಿ ಸಾಗುವಳಿಯನ್ನು ಮಾಡದೇ ಇರುವ ಅರ್ಜಿಯನ್ನು ತಿರಸ್ಕಾರ ಮಾಡಲಾಗಿರುತ್ತದೆ.
ಅರ್ಜಿದಾರರ ವಯಸ್ಸು 18 ವರ್ಷ ಭರ್ತಿಯಾಗದೆಯೇ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ 7,000 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿರುತ್ತದೆ.
ಕೆರೆ, ರಸ್ತೆ, ಗುಂಡುತೋಪು, ದೇವರಕಾಡು ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ 27,452 ಅರ್ಜಿಯನ್ನು, ನಗರ ಮತ್ತು ಪಟ್ಟಣಗಳ ಬಫರ್ ಜೋನ್ ನಲ್ಲಿ ಉಳುಮೆ ಮಾಡುತ್ತಿರುವುದಾಗಿ ಸಲ್ಲಿಸಿದ 33,000 ಅರ್ಜಿಗಳನ್ನು, ಅರಣ್ಯ ಜಮೀನಿಗೆ ಸಂಬಂಧಿಸಿದ 12,000 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.