Akrama sakrama yojana: 2 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮಗೊಳಿಸಿದ ರಾಜ್ಯ ಸರಕಾರ! ಯಾವೆಲ್ಲ ಪಂಪ್ ಸೆಟ್ ಸಕ್ರಮ ವ್ಯಾಪ್ತಿಗೆ ಬರುತ್ತವೆ?

ರಾಜ್ಯ ಸರಕಾರದಿಂದ ಈ ಭಾರಿ ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ್ಯಂತ ವಿವಿಧ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿರುವ ರೈತರ ಒಟ್ಟು 2 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು 6,099 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

ಈ ಕ್ರಮದಿಂದ ರೈತರ ತಮ್ಮ ಕೃಷಿ ಬೆಳೆಗಳಿಗೆ ನೀರನ್ನು ಪೂರೈಸಲು ಅಕ್ರಮವಾಗಿ ವಿದ್ಯುತ್ ಸೌಲಭ್ಯವನ್ನು ಪಡೆದಿರುವ 2 ಲಕ್ಷ ಪಂಪ್ ಸೆಟ್ ಗಳ ಸಂಪರ್ಕವನ್ನು ಸಕ್ರಮ ವ್ಯಾಪ್ತಿಗೆ ಬರುತ್ತವೆ.

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಈ ಕುರಿತು ಮಾಹಿತಿ ಹಂಚಿಕೊಂಡ ಕಾನೂನು ಸಚಿವ ಹೆಚ್.ಕೆ ಪಾಟೀಲ್ ರವರು ಕಳೆದ 8 ವರ್ಷದಲ್ಲಿ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಿಂದ(Escom) 2 ಲಕ್ಷದಷ್ಟು ಕೃಷಿ ನೀರಾವರಿ ಬಳಕೆ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು 6,099 ಕೋಟಿ ವೆಚ್ಚ ಭರಿಸಲಾಗಿದ್ದು, ರೈತರಿಗೆ ಅನುಕೂಲ ಮಾಡಿಕೊಡುವ ದೇಸೆಯಲ್ಲಿ ಈ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Annabhagya September amount: ಅನ್ನಭಾಗ್ಯ ಯೋಜನೆ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ! ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡಿ.

Akrama sakrama Yojanae- ಯಾವೆಲ್ಲ ಪಂಪ್ ಸೆಟ್  ಸಕ್ರಮ ವ್ಯಾಪ್ತಿಗೆ ಬರುತ್ತವೆ?

1) ಕೃಷಿ ನೀರಾವರಿ ಪಂಪ್ ಸೆಟ್ ಗಳಿಗೆ ಮಾತ್ರ ಅನ್ವಯವಾಗುತ್ತದೆ.

2) 2015 ರಿಂದ 22 ಸೆಪ್ಟೆಂಬರ್ 2023 ರ ವರಗೆ ಈಗಾಗಲೇ ಚಾಲ್ತಿಯಲ್ಲಿರುವ ಐಪಿ ಸೆಟ್ ಗಳು ಸಕ್ರಮ ವ್ಯಾಪ್ತಿಗೆ ಬರುತ್ತದೆ.

3) 23 ಸೆಪ್ಟೆಂಬರ್ 2023  ರ ನಂತರ ಕೃಷಿ ಪಂಪ್ ಸೆಟ್ ಗಳಿಗೆ  ಯಾರಾದರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದರೆ ಸಕ್ರಮ ವ್ಯಾಪ್ತಿಗೆ ಒಳಪಡುವುದಿಲ್ಲ.

ಇದನ್ನೂ ಓದಿ: PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

PM Kusum solar pump set  subsidy yojana-ಸೋಲಾರ್ ಪಂಪ್ ಸೆಟ್ ಸ್ಥಾಪನೆಗೆ ರೈತರಿಗೆ ಈ ಯೋಜನೆಯಡಿ ಇದೆ ಅವಕಾಶ:

ಪಿ.ಎಂ ಕುಸುಮ ಯೋಜನೆಯಡಿ ರೈತರು ಕೇವಲ ಒಟ್ಟು ಕಾಮಗಾರಿ ವೆಚ್ಚದಲ್ಲಿ ಶೇ 20 ರಷ್ಟು ಹಣವನ್ನು ಹಾಕಿ ಸೋಲಾರ್ ಪಂಪ್ ಸೆಟ್ ಅಳವಡಿಕೆ ಮಾಡಿಕೊಳ್ಳಬವುದಾಗಿದೆ. ಈ ಯೋಜನೆಗ ಕೇಂದ್ರ ಸರಕಾರದಿಂದ 30% ಮತ್ತು ರಾಜ್ಯ ಸರಕಾರದಿಂದ 50% ಸಹಾಯಧನ ಒದಗಿಸಲಾಗುತ್ತದೆ.

PM- Kusum Solar subsidy Scheme- Apply Now

ಪಿ ಎಂ ಕುಸುಮ ಯೋಜನೆಯ ಕನ್ನಡ ಮಾರ್ಗಸೂಚಿಯ ಕೈಪಿಡಿ: Download Now