ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಅಣಬೆ ಉತ್ಪಾದನಾ ತಂತ್ರಜ್ಞಾನ ಕುರಿತು ನಾಲ್ಕು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ತರಬೇತಿಯ ಉದ್ದೇಶಗಳು:
ಅಣಬೆ ಉತ್ಪಾದನಾ ಕೌಶಲ್ಯವನ್ನು ತಿಳಿಸಿಕೊಡುವುದು,
ಪಾತ್ಯಕ್ಷಿಕೆಯ ಮೂಲಕ ಅಣಬೆ ಬೇಸಾಯದ ಹಂತಗಳನ್ನು ಪರಿಚಯಿಸುವುದು.
ಅಣಬೆಯ ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತು ತಿಳಿಸುವುದು ಮಾರುಕಟ್ಟೆ ತಾಂತ್ರಿಕತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕುರಿತು ಮಾಹಿತಿ.
ತರಬೇತಿಯಲ್ಲಿ ಯಾವೆಲ್ಲ ವಿಷಯ ತಿಳಿಸಲಾಗುತ್ತದೆ:
ಅಣಬೆ ಕೃಷಿ ಪರಿಚಯ ಮತ್ತು ಮಹತ್ವ.
ಆಯಿಸ್ಟರ್, ಬಟನ್ ಮತ್ತು ಮಿಲ್ಕಿ ಅಣಬೆಯ ಉತ್ಪಾದನಾ ತಂತ್ರಜ್ಞಾನಗಳು.
ಅಣಬೆ ಬೀಜ ಉತ್ಪಾದನೆ.
ಆಯಿಸ್ಟರ್ ಅಣಬ್ಬೆ ಕೃಷಿಗಾಗಿ ಸಬ್ ಸ್ಟೇಟ್ಸ್ ತಯಾರಿಕಾ ವಿಧಾನಗಳು ಆಯಿಸರ್ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು.
ಇತರೆ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು ಹೆಸರಘಟ್ಟದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(IIHR)ಅಣಬೆ ಕೃಷಿ ಘಟಕಕ್ಕೆ ಭೇಟಿ.
ಅಣಬೆಯ ಸಂಸ್ಕರಣೆ, ಸಂರಕ್ಷಣೆಯಲ್ಲಿ ಸುರಕ್ಷತಾ ವಿಧಾನಗಳು ಅಣಬೆ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳು.
ಅಣಬೆ ಉತ್ಪಾದನೆಯ ಆರ್ಥಿಕತೆ ಹಾಗೂ ಮಾರುಕಟ್ಟೆ ನಿರ್ವಹಣೆ.
ತರಬೇತಿ ವಿಧಾನ: ಉಪನ್ಯಾಸ, ಕೌಶಲ್ಯ ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ
ತರಬೇತಿ ನಡೆಯುವ ದಿನಾಂಕ: 26-06-2023 ರಿಂದ 29-06-2023(ಸೋಮವಾರ ದಿಂದ ಗುರುವಾರ)
ಸಮಯ: ಬೆಳಿಗ್ಗೆ 10.00 ರಿಂದ ಸಾಯಂಕಾಲ 5,00 (4 ದಿನಗಳು) :
ಅರ್ಜಿ ಸಲ್ಲಿಕೆ ವಿಧಾನ ಹೇಗೆ?
https://forms.gle/9RjnJtWUe4hqct8LA ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಗೂಗಲ್ ಪಾರ್ಮ್ ಒಪನ್ ಆಗುತ್ತದೆ ಅಲ್ಲಿ ನಿಮ್ಮ ವೈಯಕ್ತಿಕ ವಿವರ ಇತ್ಯಾದಿ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಯಾರು ಈ ತರಬೇತಿ ಪಡೆದುಕೊಳ್ಳಬವುದು?
ಆಸಕ್ತ ಕೃಷಿಕರು ಕೃಷಿಕ ಮಹಿಳೆಯರು, ಗ್ರಾಮೀಣ ಯುವಕರು/ಯುವತಿಯರು ಮತ್ತು ಅಣಬೆ ಉದ್ಯಮದಲ್ಲಿ ಆಸಕ್ತಿ ಇರುವ ನಗರವಾಸಿಗಳು.
ತರಬೇತಿ ಶುಲ್ಕ
ವಸತಿ ಸಹಿತ: 4.800/-
ವಸತಿ ರಹಿತ: 3.700/-
ನೊಂದಣಿ ವಿಧಾನ:
The Comptroller, UAS, GKVK, Bangalore ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಡಿಡಿಯನ್ನು ತೆಗೆದುಕೊಂಡು ದಿನಾಂಕ 20-06-2013 ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸುವುದು.
ಸಂಸ್ಥೆಯ ವಿಳಾಸ : ಮುಖ್ಯಬೋಧಕರು, ರೈತ ತರಬೇತಿ ಸಂಸ್ಥೆ ಕೃ,ವಿ,ವಿ. ಜಿ.ಕೆವಿಕೆ. ಬೆಂಗಳೂರು -56006, ದೂರವಾಣಿ: 080-23626455.
ಇತರೆ ಮಾಹಿತಿಗಾಗಿ ಸಂಪರ್ಕಿಸಿ:
1. ಡಾ. ಬನು ದೇಶಪಾಂಡೆ
ಸಹ ಪ್ರಾಧ್ಯಾಪಕರು & ತರಬೇತಿ ಸಂಯೋಜಕರು ಮೊ: 9844176675
2. ಶ್ರೀಮತಿ ಪವಿತ್ರ ಎ ಸಹಾಯಕರು ಮೊ: 8747988880
3. ಶ್ರೀಮತಿ ರಮ್ಯ, ಎ. ಕೆ
ಬೆರಳಚ್ಚುಗಾರರು ಮತ್ತು ಗಣಕಯಂತ್ರ ಆಪರೇಟರ್ ಮೊ: 9620459342
ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: ವಿವಿಧ ಇಲಾಖೆಯ ಸಚಿವರನ್ನು ಸಂಪರ್ಕಿಸಲು ರಾಜ್ಯ ಸರಕಾರದಿಂದ ದೂರವಾಣಿ ಸಂಖ್ಯೆಗಳ ಪಟ್ಟಿ ಬಿಡುಗಡೆ.