ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಣೆ ಮಾಡುವ 5 ಕೆಜಿ ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ(Annabhagya DBT Status) ಮೂಲಕ ಅನ್ನಭಾಗ್ಯ ಯೋಜನೆಯಡಿ ನೀಡುವ ಅರ್ಥಿಕ ನೆರವನ್ನು ಜಮಾ ಮಾಡಲಾಗಿದೆ.
ಜನವರಿ-2025 ತಿಂಗಳ ಅನ್ನಭಾಗ್ಯ(Annabhagya) ಯೋಜನೆಯ ಹಣವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು, ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ರೇಶನ್ ಕಾರ್ಡ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಹಣ ಜಮಾ ವಿವರವನ್ನು ಒಂದೆರಡು ಕ್ಲಿಕ್ ನಲ್ಲಿ ಪಡೆಯಬಹುದಾಗಿದೆ.
ಕಳೆದ ಕೆಲವು ತಿಂಗಳಲ್ಲಿ ಈ ಯೋಜನೆಯಡಿ ಅರ್ಥಿಕ ನೆರವನ್ನು ಜಮಾ ಮಾಡಲಾಗುರುವುದಿಲ್ಲ ಅದರೆ ಪ್ರಸ್ತುತ ಜನವರಿ-2025 ರ ಕೊನೆಯ ವಾರ ರಾಜ್ಯದ ಎಲ್ಲಾ ಜಿಲ್ಲೆಯ ಪಡಿತರ ಚೀಟಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ಮಾಡಲಾಗಿರುತ್ತದೆ, ಗ್ರಾಹಕರು DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಯೋಜನೆಯಡಿ ಜಮಾ ಅಗಿರುವ ಹಣದ ಜಮಾ ವಿವರದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: Milk Price-ರೈತರಿಗೆ ಸಿಹಿ ಸುದ್ದಿ! ಹಾಲಿದ ದರ ಹೆಚ್ಚಳ ಮಾಡಿದ ಕೆ ಎಂ ಎಫ್!
Annabhagya- ಅನ್ನಭಾಗ್ಯ ಯೋಜನೆಯಡಿ ಎಷ್ಟು ಅರ್ಥಿಕ ನೆರವು ನೀಡಲಾಗುತ್ತದೆ?
ರಾಜ್ಯ ಸರಕಾರದ ನೂತನ ಘೋಷಣೆಯನ್ವಯ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು ಇದರನ್ವಯ 5 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಉಳಿಕೆ 5 ಕೆಜಿ ಅಕ್ಕಿ ಬದಲಾಗಿದೆ ಪ್ರತಿ ಕೆಜೆ ಅಕ್ಕಿಗೆ ₹34 ರೂ ರಂತೆ ಒಟ್ಟು ₹170 ರೂ ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಅರ್ಹ ಪಡಿತರ ಚೀಟಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತಿದೆ.
ನಿಮ್ಮ ಕಾರ್ಡನಲ್ಲಿರುವ ಸದಸ್ಯರ ಸಂಖ್ಯೆಯ ಅನುಗುಣವಾಗಿ ಈ ಯೋಜನೆಯಡಿ ಅರ್ಥಿಕ ನೆರವನ್ನು ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: Ayushman card-ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?
Annabhagya DBT Status- ಅನ್ನಭಾಗ್ಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ವಿಧಾನ:
ರಾಜ್ಯ ಸರಕಾರದಿಂದ ಪ್ರತಿ ತಿಂಗಳು ನೇರ ನಗದು ವರ್ಗಾವಣೆ ಮೂಲಕ ಅರ್ಹ ಪಡಿತರ ಚೀಟಿದಾರರಿಗೆ(Ration Card) ಜಮಾ ಮಾಡುವ ಅಕ್ಕಿ ಹಣದ ಜಮಾ ವಿವರವನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಡಿಬಿಟಿ ಕರ್ನಾಟಕ ಮೊಬೈಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಮಾಹಿತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಪಡೆಯಬಹುದು.
Step-1: ಮೊದಲಿಗೆ ಇಲ್ಲಿ ಕ್ಲಿಕ್ Annabhagya Status Check ಮಾಡಿ ಅಧಿಕೃತ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.
Step-2: ಇದಾದ ಬಳಿಕ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಅರ್ಜಿದಾರರ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಿ ಬಳಕೆದಾರ ಐಡಿಯನ್ನು ನೊಂದಣಿ ಮಾಡಿಕೂಂಡು ಈ ಅಪ್ಲಿಕೇಶನ್ ಅನ್ನು ಲಾಗಿನ್ ಅಗಲು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Budget 2025-ಕೇಂದ್ರ ಬಜೆಟ್ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೃಷಿ ಸಾಲದ ಮಿತಿ ಹೆಚ್ಚಳ!
Step-3: ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ರಚನೆ ಮಾಡಿಕೊಂಡಿರುವ ಪಾಸ್ವರ್ಡ ಅನ್ನು ಹಾಕಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಲಾಗಿನ್ ಅಗಬೇಕು.
Step-4: “Login” ಅದ ನಂತರ ಈ ಅಪ್ಲಿಕೇಶನ್ ಮುಖಪುಟದ ಎಡಬದಿಯಲ್ಲಿ ಮೇಲೆ ಕಾಣುವ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ಅನ್ನಭಾಗ್ಯ ಯೋಜನೆ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನ ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ ಜನವರಿ-2025 ತಿಂಗಳ ಅನ್ನಭಾಗ್ಯ ಹಣ ಜಮಾ ವಿವರ ಕಾಣಿಸುತ್ತದೆ.
ಇಲ್ಲಿ ಜನವರಿ-2025 ತಿಂಗಳ ಯಾವ ದಿನಾಂಕದಂದು ಹಣ ಜಮಾ ಅಗಿದೆ? ಎಷ್ಟು ಹಣ ಜಮಾ ಅಗಿದೆ? ಜಮಾ ಅದ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕಿಗಳು, ಮತ್ತು ಬ್ಯಾಂಕ್ ಹೆಸರು ಇತ್ಯಾದಿ ವಿವರವನ್ನು ನೋಡಬಹುದು.