ರಾಜ್ಯ ಸರಕಾರದಿಂದ ಚುನಾವಣೆಗೂ ಪೂರ್ವದಲ್ಲಿ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ(Annabhagya) ಯೋಜನೆಯ ಹೆಚ್ಚುವರಿ 5 KG ಅಕ್ಕಿಯ ಬದಲು ಹಣ ವಿತರಣೆ ಕುರಿತು ಆಹಾರ ಇಲಾಖೆ ಸಚಿವರಾದ ಕೆ ಎಚ್ ಮುನಿಯಪ್ಪ ಅವರು ನೂತನ ಪ್ರಕಟಣೆಯನ್ನು ಹೊರಡಿಸಿದ್ದು ಇದರ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆದ 1-2 ವಾರದಿಂದ ಅನ್ನಭಾಗ್ಯ ಯೋಜನೆಯಡಿ(Annabhagya Amount) ಹೆಚ್ಚುವರಿ 5 KG ಅಕ್ಕಿಯ ಬದಲು ನೀಡುವ ಹಣ ಸಮರ್ಪಕವಾಗಿ ಜಮಾ ಅಗುತ್ತಿಲ್ಲ ಎಂದು ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ದೂರನ್ನು ಹೇಳುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರವು ಅಕ್ಕಿ ಬದಲು ಹಣ ನೀಡುವುದರ ಕುರಿತು ಮಹತ್ವದ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಈ ಮಾಹಿತಿಯ ಜೊತೆ ಜೊತೆಗೆ ಈ ಅಂಕಣದಲ್ಲಿ ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ(Annabhagya Yojane) ಎಷ್ಟು ಹಣ ಜಮಾ ಅಗಿದೆ? ಎಂದು ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಸಹ ತಿಳಿಸಲಾಗಿದೆ, ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.
ಇದನ್ನೂ ಓದಿ: Karnataka Nigamagalu-ಕರ್ನಾಟಕ ಆರ್ಯ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅನುದಾನ ಬಿಡುಗಡೆ!

Annabhagya Latest News-ಇನ್ಮುಂದೆ ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿ ಹಣದ ಬದಲು ಅಕ್ಕಿ ವಿತರಣೆ: ಸಚಿವ ಕೆ ಎಚ್ ಮುನಿಯಪ್ಪ
ರಾಜ್ಯ ಸರಕಾರದಿಂದ ಪಡಿತರ ಚೀಟಿ ಫಲಾನುಭವಿಗಳಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವುದರ ಕುರಿತು ಆಹಾರ ಸಚಿವರು ಈ ರೀತಿ ಪ್ರಕಟಣೆಯನ್ನು ಹೊರಡಿಸಿದ್ದಾರೆ “ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ಬದಲು 10 ಕೆ.ಜಿ. ಅಕ್ಕಿಯನ್ನು ವಿತರಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದಿಂದ 5 ಕೆ.ಜಿ. ಅಕ್ಕಿಯನ್ನು ಒಎಂಎಸ್‌ಎಸ್ ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಅಕ್ಕಿ ವಿತರಿಸಲಾಗುವುದು” ಎಂದು ರಾಜ್ಯ ಸರಕಾರದ ಆಹಾರ ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Annabhagya Yojana-ರಾಜ್ಯ ಸರಕಾರಕ್ಕೆ ಅನುದಾನದಲ್ಲಿ ಉಳಿತಾಯ:
ಆಹಾರ ಸಚಿವರಾದ ಕೆ ಎಚ್ ಮುನಿಯಪ್ಪ ಅವರು ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಥಿಯಲ್ಲಿ ಈ ರೀತಿ ತಿಳಿಸಿದ್ದಾರೆ “ಇಲ್ಲಿಯವರೆಗೆ ಕೇಂದ್ರ ಸರಕಾರವು ಅಕ್ಕಿ ಕೊಡಲು ಒಪ್ಪದೇ ಇರುವುದರಿಂದ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗಿರುವುದಿಲ್ಲ, ಅದರೆ ಪ್ರಸ್ತುತ ಕೇಂದ್ರವು ನಮಗೆ ಪ್ರತಿ ತಿಂಗಳು ಅವಶ್ಯವಿರುವ 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು 22.5 ರೂ ಗೆ ನೀಡಲು ಒಪ್ಪಿಗೆ ಸೂಚಿಸುವುದರಿಂದ ಹಣದ ಬದಲು ಅಕ್ಕಿ ವಿತರಣೆ ಮಾಡುವುದರಿಂದ ರಾಜ್ಯ ಸರಕಾರಕ್ಕೆ ಪ್ರತಿ ತಿಂಗಳು 150 ರಿಂದ 190 ಕೋಟಿ ಉಳಿತಾಯ ಅಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: PM-Kisan Amount-ಪಿ ಎಂ ಕಿಸಾನ್ 9.7 ಕೋಟಿ ರೈತರ ಖಾತೆಗೆ ₹ 21,000 ಸಾವಿರ ಕೋಟಿ ಹಣ!

Annabhagya DBT Amount-ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಪಾವತಿ ಮಾಡಲಾಗುತ್ತಿತ್ತು?
ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಿಗೆ 170 ರೂ ನಂತೆ ಅಕ್ಕಿ ಬದಲು ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗುತ್ತಿತ್ತು.
Annabhagya grants details-ಅನ್ನಭಾಗ್ಯ ಅನುದಾನದ ಲೆಕ್ಕಾಚಾರ ಹೀಗಿದೆ:
1) ಪ್ರತಿ ತಿಂಗಳು ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಮಾಡಲು ಬೇಕಿರುವ ಒಟ್ಟು ಅಕ್ಕಿ ಪ್ರಮಾಣ- 2.10 ಲಕ್ಷ ಮೇಟ್ರಿಕ್ ಟನ್
2) ಅಕ್ಕಿ ವಿತರಣೆಗೆ ಪ್ರತಿ ತಿಂಗಳು ಅವಶ್ಯವಿರುವ ಅನುದಾನ- 537 ಕೋಟಿ, ವರ್ಷಕ್ಕೆ- 6,444 ಕೋಟಿ
3) ಅಕ್ಕಿ ಬದಲು ಹಣ ನೀಡುವುದಕ್ಕೆ ತಗಲುತ್ತಿದ್ದ ವೆಚ್ಚ- ಪ್ರತಿ ತಿಂಗಳಿಗೆ 890 ಕೋಟಿ, ಒಂದು ವರ್ಷಕ್ಕೆ- 10,092ಕೋಟಿ
4) ಒಟ್ಟು ಕಾರ್ಡಗಳು – 1,16,39,179
5) ರೇಶನ್ ಕಾರ್ಡ ನಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ- 4,12,16,838
6) ರಾಜ್ಯ ಸರಕಾರಕ್ಕೆ ಸಾಗಣಿಕಾ ವೆಚ್ಚ ಸೇರಿ ಒಟ್ಟು ಒಂದು ಕೆಜಿ ಅಕ್ಕಿ ವಿತರಣೆಗೆ ತಗಲು ವೆಚ್ಚ- 25/- ರೂ
ಇದನ್ನೂ ಓದಿ: Karnataka Budget-2025: ಕರ್ನಾಟಕ ಬಜೆಟ್ ಮಂಡನೆ ದಿನಾಂಕ ಘೋಷಿಸಿದ ಸಿಎಂ ಸಿದ್ದರಾಮಯ್ಯ!
Annabhagya DBT Amount-ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯ ಹಣ ಎಷ್ಟು ಜಮಾ ಆಗಿದೆ? ಎಂದು ತಿಳಿಯುವ ವಿಧಾನ:
ಪಡಿತರ ಚೀಟಿ ಹೊಂದಿರುವ ಗ್ರಾಹಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲೇ ಅನ್ನಭಾಗ್ಯ ಯೋಜನೆಯ ಹಣ ಜಮಾ ವಿವರವನ್ನು ಪಡೆಯಬಹುದು.
Step-1: Download Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Step-2: ತದನಂತರ ಈ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅಗಿ ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ ಅನ್ನು ನಂಬರ್ ಅನ್ನು ನಮೂದಿಸಿ ನಿಮ್ಮ ಮೊಬೈಲ್ ನಂಬರ್ ಗೆ ಬರುವ ಒಟಿಪಿಯನ್ನು ನಮೂದಿಸಿ ಈ ಅಪ್ಲಿಕೇಶನ್ ಅನ್ನು ಲಾಗಿನ್ ಅಗಲು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಪಾಸ್ವರ್ಡ ಹಾಕಿ ಲಾಗಿನ್ ಅಗಬೇಕು.
Step-3: ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಗೆ ಲಾಗಿನ್ ಅದ ನಂತರ ಇಲ್ಲಿ ನಾಲ್ಕು ಆಯ್ಕೆಗಳು ತೋರಿಸುತ್ತವೆ ಇಲ್ಲಿ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ಅನ್ನಭಾಗ್ಯ ಯೋಜನೆ” ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ತಿಂಗಳುವಾರು ಈ ಯೋಜನೆಯಡಿ ಜಮಾ ಅಗಿರುವ ಒಟ್ಟು ಹಣದ ವಿವರ ಗೋಚರಿಸುತ್ತದೆ. ಇಲ್ಲಿ ಜಮಾ ಅದ ದಿನಾಂಕ, ಬ್ಯಾಂಕ್ ಹೆಸರು, UTR ಸಂಖ್ಯೆ ಇನ್ನಿತರ ವಿವರ ತೋರಿಸುತ್ತದೆ.