ರಾಜ್ಯ ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನೀಡುವ ಆರ್ಥಿಕ ನೆರವಿನ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ.
ಒಟ್ಟು 1.28 ಕೋಟಿ ಕುಟುಂಬಗಳ ಪೈಕಿ ದಾಖಲಾತಿ ಸರಿಯಾಗಿರುವ 1.07 ಕೋಟಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಪ್ರತಿ ಸದಸ್ಯರಿಗೆ 170 ರೂ ರಂತೆ ಒಟ್ಟು ಸದಸ್ಯರ ಅನುಗುಣವಾಗಿ ನೇರ ನಗದು ವರ್ಗಾವಣೆ(DBT) ಮೂಲಕ ಫಲಾನುಭಾವಿ ಖಾತೆಗೆ ಹಣವನ್ನು ಹಾಕಲಾಗಿದೆ.
ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡುವ ವಿಧಾನ:
ಸಾರ್ವಜನಿಕರು ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮಗೆ ಆರ್ಥಿಕ ನೆರವಿನ ಹಣ ಬಂದಿದಿಯೋ? ಅಥವಾ ಇಲ್ಲವೋ? ಎಂದು ಮತ್ತು ಅರ್ಜಿ ಯಾವ ಹಂತದಲ್ಲಿದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿಯಬವುದಾಗಿದೆ.
Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣ ಭೇಟಿ ಮಾಡಬೇಕು. ನಂತರ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ “ನೇರ ನಗದು ವರ್ಗಾವಣೆ ಸ್ಥಿತಿ”(DBT Status) ಅಯ್ಮೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
Step-2: ಇಲ್ಲಿ ತಿಂಗಳ ಆಯ್ಕೆಯಲ್ಲಿ ಆಗಸ್ಟ್ ಎಂದು ಆಯ್ಕೆ ಮಾಡಬೇಕು ನಂತರ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು(Ration card number) ನಮೂದಿಸಿ ಕ್ಯಾಪ್ಚಾರ ಕೋಡ್ ಹಾಕಿ “GO” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಹಣ ಎಷ್ಟು ಜಮಾ ಆಗಿದೆ ಎಂದು ಗೋಚರಿಸುತ್ತದೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಹಣ ಪಾವತಿ ಮತ್ತು ಅಕ್ಕಿ ವಿತರಣೆ ಕುರಿತು ಮಹತ್ವದ ಮಾಹಿತಿ ನೀಡಿದ: ಸಚಿವ ಮುನಿಯಪ್ಪ.
ನಿಮಗೆ ಹಣ ವರ್ಗಾವಣೆ ಆಗದಿದ್ದಲ್ಲಿ ಏನು ಮಾಡಬೇಕು?
ಒಂದೊಮ್ಮೆ ಮೇಲಿನ ವಿಧಾನ ಅನುಸರಿಸಿ ಚೆಕ್ ಮಾಡಿದಾಗ ನಿಮಗೆ ಹಣ ಸಂದಾಯವಗದಿದ್ದಲಿ ನೀವು ಒಮ್ಮೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
ನಿಮ್ಮ ಮೊಬೈಲ್ ನಲ್ಲೇ ಆಧಾರ್ ಲಿಂಕ್ ಆಗಿರಿವುದನ್ನು ಪರಿಶೀಲಿಸಿ:
Play store ನಲ್ಲಿ ಲಭ್ಯವಿರುವ ಆಧಾರ್ ಪ್ರಾಧಿಕಾರದ “My adhaar” mobile aplication ಅನ್ನು ದೌನ್ಲೋಡ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದಿಯೋ? ಇಲ್ಲವೋ ಎಂದು ತಿಳಿದುಕೊಳ್ಳಬವುದು ಮತ್ತು ಲಿಂಕ್ ಆಗಿದ್ದರೆ ಯಾವ ಬ್ಯಾಂಕ್ ಖಾತೆಗೆ ಆಗಿದೆ ಎಂದು ಸಹ ನೋಡಬವುದು.
Download link: https://play.google.com/store/apps/details?id=in.gov.uidai.mAadhaarPlus
21 ಲಕ್ಷ ರೇಷನ್ ಕಾರ್ಡ್ ದಾರರಿಗಿಲ್ಲ ಜಮಾ ಆಗಿಲ್ಲ ಅನ್ನಭಾಗ್ಯ ಯೋಜನೆ ಹಣ:
ಒಟ್ಟು 1.28 ಕೋಟಿ ರೇಷನ್ ಕಾರ್ಡ್ ಗಳ ಪೈಕಿ 1.07 ಕೋಟಿ ರೇಷನ್ ಕಾರ್ಡ್ ಗಳ ಮುಖ್ಯಸ್ಥರಿಗೆ ಮಾತ್ರ ಆರ್ಥಿಕ ನೆರವಿನ ಹಣ ವರ್ಗಾವಣೆ ಆಗಿರುತ್ತದೆ ಇನ್ನುಳಿದ 21 ಲಕ್ಷ ಕಾರ್ಡ್ ದಾರರಿಗೆ ಬ್ಯಾಂಕ್ ಖಾತೆಯ ವಿವರ ಆಹಾರ ಇಲಾಖೆಯಲ್ಲಿ ಲಭ್ಯವಿಲ್ಲದ ಕಾರಣ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದ ಕಾರಣ ಇವರಿಗೆ ಹಣ ವರ್ಗಾವಣೆ ಆಗಿರುವುದಿಲ್ಲ.
ರೇಷನ್ ಕಾರ್ಡ ಕುರಿತು ನಮ್ಮ ಪುಟದ ಇತರೆ ಅಂಕಣಗಳು:
- ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಯಾವೆಲ್ಲ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿ ಬಿಡುಗಡೆ!
- ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡಲು ವೆಬ್ಸೈಟ್ ಲಿಂಕ್.
- ಆಹಾರ ಇಲಾಖೆಯಿಂದ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ
- ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್.
- ರೇಷನ್ ಕಾರ್ಡ ಕಳೆದು ಹೋದರೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
- ರೇಷನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ವಿವರ ಬದಲಾವಣೆ ಮಾಡುವುದೇಗೆ? ರೇಷನ್ ಕಾರ್ಡ್ ಕುರಿತು ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.