ಎ.ಟಿ ಎಂ ಬಳಕೆ ಮಾಡುವವರು ಯಾವೆಲ್ಲ ವಿಷಯಗಳನ್ನು ತಿಳಿದುಕೊಂಡಿರಬೇಕು ಎಂದು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ನಾವು ಹಣ ಗಳಿಸುವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೆವೊ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹಣವನ್ನು ಸುರಕ್ಷತೆಯಿಂದ ಇರಿಸಲು ಒತ್ತು ಕೊಡಬೇಕು.
ಪ್ರಸುತ್ತ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಜನರು ಎ.ಟಿ.ಎಂ ಕಾರ್ಡ ಅನ್ನು ಬಳಕೆ ಮಾಡುತ್ತಾರೆ, ಈ ಕಾರ್ಡ ಅನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂದು ಅದರ ಸುರಕ್ಷತೆ ಹೇಗೆ ನಿರ್ವಹಿಸಬೇಕು ಎಂದು ಈ ಕೆಳಗೆ ಒಂದೊಂದಾಗೆ ವಿವರಿಸಲಾಗಿದೆ.
ಎಟಿಎಂ ಕಾರ್ಡ್ ಕಳೆದುಹೋಗಿದ್ದರೆ, ಅದನ್ನು ಬ್ಲಾಕ್ ಮಾಡಬೇಕು. ಈ ಕಾರ್ಯವನ್ನು ನಿಮ್ಮ ಮೊಬೈಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಮಾಡಬಹುದು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಬಳಸುತ್ತೇವೆ . ಶಾಪಿಂಗ್ ಮಾಡಿದಾಗ ಹಣ ಪಾವತಿಗೆ ಡೆಬಿಟ್ ಕಾರ್ಡ್ (Debit Card) ಬಳಸುತ್ತೇವೆ . ನಾವು ಈ ಡೆಬಿಟ್ ಕಾರ್ಡ್ ಗಳನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು . ವಂಚಕರು ನಿಮ್ಮ ಕಾರ್ಡನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಹೆಚ್ಚು . ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ? ಕಳೆದು ಹೋದ ಆ ಡೆಬಿಟ್ ಕಾರ್ಡನ್ನು ಕೂಡಲೇ ನಿಷ್ಕ್ರಿಯಗೊಳಿಸುವುದು ಹೇಗೆ?
ಕಳೆದು ಹೋದ ಡೆಬಿಟ್ ಕಾರ್ಡ್ (debit card )ನಿಮ್ಮದಾಗಿದ್ದರೆ ಮೂರ್ನಾಲ್ಕು ಸುಲಭ ವಿಧಾನಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು . ಸಹಾಯವಾಣಿ ಸಂಖ್ಯೆ (Toll free number)ಗೆ ಕರೆ ಮಾಡುವ ಮೂಲಕ ಮತ್ತು ಎಸ್.ಎಮ್.ಎಸ್ (SMS) ಕಳಿಸುವ ಮೂಲಕ ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್ ( internet banking) ಮೂಲಕ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬಹುದು. Toll free number ಗೆ ಗ್ರಾಹಕರು ತಮ್ಮ ಬ್ಯಾಂಕಿನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಯನ್ನು (mobile number) ಬಳಸಿಕೊಂಡು ಕರೆ ಮಾಡಬೇಕು.
ಇಂಟರ್ನೆಟ್ ಬ್ಯಾಂಕಿಂಗ್ ( internet banking) ಮೂಲಕ ಡೆಬಿಟ್ ಕಾರ್ಡ್(debit card block) ಬ್ಲಾಕ್ ಮಾಡುವ ವಿಧಾನ.
Step-1: ಬ್ಯಾಂಕಿನ ಅಧಿಕೃತವಾದ web site ಗೆ log in ಆಗಬೇಕು .ಲಾಗಿನ್ ಆದ ಬಳಿಕ. ಇ–ಸರ್ವಿಸ್ e-service ಸೆಕ್ಷನ್ಗೆ ಹೋಗಿ. ಎಟಿಎಂ ಕಾರ್ಡ್ ಸರ್ವಿಸ್ ATM card service ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬ್ಲಾಕ್ ಎಟಿಎಂ ಕಾರ್ಡ್ Block ATM card (option)ಅನ್ನು ಒತ್ತಿರಿ.
Step-2: ಎಟಿಎಂ ATM card ಗೆ ಸಂಬಂಧಿಸಿದ ಖಾತೆಯನ್ನು ಆರಿಸಿ ಹಾಗೂ ನೀವು block ಮಾಡಲು ಬಯಸುವ ಕಾರ್ಡ ನ ಮೊದಲ ನಾಲ್ಕು ಮತ್ತು ಕೊನೆಯ ನಾಲ್ಕು ಅಂಕಿಗಳು ಕಾಣುತ್ತವೆ. ನಂಬರ್ ಅನ್ನು ಚೆಕ್ ಮಾಡಿ ನಂತರ ಬ್ಲಾಕ್ ಮಾಡಬೇಕೆಂದಿರುವ ಕಾರ್ಡನ್ನು ಆರಿಸಿಕೊಳ್ಳಿ ಬ್ಲಾಕ್ ಮಾಡುವುದಕ್ಕೆ ಕಾರಣ ಏನೆಂದು ನಮೂದಿಸಿ submitt ಕೊಡಿ.
ಇದನ್ನೂ ಓದಿ: ರೇಷನ್ ಕಾರ್ಡ ಹೊಂದಿರುವವರು ಆಗಸ್ಟ್ 31ರ ಒಳಗಾಗಿ ಈ ಕೆಲಸ ತಪ್ಪದೇ ಮಾಡಿ!
ATM PIN change- ಎ.ಟಿ.ಎಂ ಪಿನ್ ಬದಲಾವಣೆ ಮಾಡುವುದು ಹೇಗೆ?
ATM ಕಾರ್ಡ್ PIN ಬದಲಾವಣೆಯನ್ನು ATM ಗೆ ಭೇಟಿ ನೀಡುವ ಮೂಲಕ, ನೆಟ್ ಬ್ಯಾಂಕಿಂಗ್ ಮೂಲಕ ಅಥವಾ SMS ಮೂಲಕ ATM ಕಾರ್ಡ್ ಪಿನ್ ಬದಲಾವಣೆಯನ್ನು (reset) ಹಲವು ವಿಧಾನಗಳಲ್ಲಿ ಮಾಡಬಹುದು .
ATM ನಲ್ಲಿ ATM ಪಿನ್ ಬದಲಾಯಿಸುವುದು ಎಲ್ಲಾ ATM ಗಳು ಪ್ರತಿ ಬಾರಿ ನೀವು ಎಟಿಎಂನಲ್ಲಿ ನಿಮ್ಮ ಎಟಿಎಂ ಖಾತೆಗೆ ಲಾಗ್ ಇನ್ ಮಾಡಿದಾಗ, ಬ್ಯಾಲೆನ್ಸ್ ಪರಿಶೀಲಿಸುವುದು, ನಗದು ಹಿಂಪಡೆಯುವಿಕೆ, ಪಿನ್ ಬದಲಾವಣೆ ಮುಂತಾದ ಹಲವಾರು ಆಯ್ಕೆಗಳು ಪರದೆಯ (screen) ಮೇಲೆ ಪ್ರದರ್ಶಿಸಲ್ಪಡುತ್ತವೆ. ATM ನಲ್ಲಿ ATM ಪಿನ್ ಬದಲಾವಣೆಗಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು:
ATM ಕಾರ್ಡ್ ಅನ್ನು ATM machine ಗೆ ಹಾಕಿದಾಗ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ, ‘PIN ಬದಲಿಸಿ/ಮರುಹೊಂದಿಸಿ’ reset ಗೆ ಹೋಗಿ ಅಸ್ತಿತ್ವದಲ್ಲಿರುವ PIN ಅನ್ನು ನಮೂದಿಸಿ ನಂತರ ಮುಂದಿನ ಬಾರಿ ಬಳಸಲು ಬಯಸುವ ಹೊಸ PIN ಅನ್ನು ನಮೂದಿಸಿ (new ATM pin) ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸಲಾದ ಮೋಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ; ಕ್ರಿಯೆಯನ್ನು ಮೌಲ್ಯೀಕರಿಸಲು ಈ OTP ಅನ್ನು ನಮೂದಿಸಬೇಕು,
ನಿಮ್ಮ ATM ಪಿನ್ ಅನ್ನು ನೀವು ಮರೆತಿದ್ದರೆ, ನಿಮ್ಮ ಎಟಿಎಂ ಕಾರ್ಡ್ ಅನ್ನು ATM machine ಗೆ ಹಾಕಿದ ನಂತರ ಕಾರ್ಡ್ ರೀಡರ್ ನಿಮ್ಮ ಕಾರ್ಡ್ ಅನ್ನು ಓದಿದ ನಂತರ ‘ಪಿನ್ ಮರೆತಿದೆ’ forgot PIN ಕ್ಲಿಕ್ ಮಾಡಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ, ಅದಕ್ಕೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿ ಮತ್ತು ಹೊಸ ATM ಪಿನ್ ಅನ್ನು reset ಮಾಡಬಹುದು.
ನಿಮ್ಮ ಎಟಿಎಂ ಕಾರ್ಡ್ ಪಿನ್ ಬದಲಾವಣೆ ಮಾಡಿದ ನಂತರ, ಯಶಸ್ವಿ ಪಿನ್ ಬದಲಾವಣೆಯನ್ನು ತಿಳಿಸುವ ಸಂದೇಶವನ್ನು ನೀವು ಪಡೆಯುತ್ತೀರಿ, ಹೀಗೇ ನೆಟ್ ಬ್ಯಾಂಕಿಂಗ್ ಮೂಲಕ ಮತ್ತು ಬ್ಯಾಂಕ್ ಶಾಖೆಯಲ್ಲಿ ಎಟಿಎಂ ಪಿನ್ ಅನ್ನು ಬದಲಾಯಿಸಬಹುದು.
ಪ್ರತಿಯೊಬ್ಬರೂ ಪ್ರತಿ 5 ರಿಂದ 6 ತಿಂಗಳಿಗೆ ಒಮ್ಮೆ ATM pin reset ಮಾಡುವುದು ಅವಶ್ಯಕವಾಗಿದೆ. ಇದರಿಂದ ವಂಚಕರು ನಿಮ್ಮ ಕಾರ್ಡನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಯನ್ನು ತಡೆಯಬಹುದು,
ಕರೆ ಮಾಡಿದಾಗ ಸಿವಿ ನಂಬರ್/ಓ.ಟಿ.ಪಿ ಶೇರ್ ಮಾಡದಿರಿ:
ಸಹಜವಾಗಿ ಯಾವುದೇ ಬ್ಯಾಂಕ್ ಗಳಿಂದ ATM CVV number ಅಥವಾ OTP ಯನ್ನು ಕೇಳಲು ಕರೆ ಮಾಡುವುದಿಲ್ಲ. ನೀವು ಅಪರಿಚಿತ ನಂಬರ್ ನಿಂದ ಕರೆಯನ್ನು ಸ್ವೀಕರಿಸಿದಾಗ ಅವರು ನಿಮ್ಮ ATM CVV number ಅಥವಾ OTP ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬಾರದು. ಒಮ್ಮೆ ನೀವು CVV number ಅಥವಾ OTP ಅನ್ನು ಹೇಳಿದರೆ ಇದರಿಂದ ನಿಮ್ಮ ಬ್ಯಾಂಕ್ ನಲ್ಲಿ ಇರುವ ಹಣವನ್ನು ಅವರು ಸುಲಭವಾಗಿ ವರ್ಗಾಹಿಸಿಕೊಳ್ಳುತ್ತಾರೆ.
ರೇಷನ್ ಕಾರ್ಡ ಕುರಿತು ಈ ಸುದ್ದಿಗಳನ್ನು ಓದಿದ್ದೀರಾ?
- ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಯಾವೆಲ್ಲ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿ ಬಿಡುಗಡೆ!
- ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡಲು ವೆಬ್ಸೈಟ್ ಲಿಂಕ್.
- ಆಹಾರ ಇಲಾಖೆಯಿಂದ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ
- ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್.
- ರೇಷನ್ ಕಾರ್ಡ ಕಳೆದು ಹೋದರೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
- ರೇಷನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ವಿವರ ಬದಲಾವಣೆ ಮಾಡುವುದೇಗೆ? ರೇಷನ್ ಕಾರ್ಡ್ ಕುರಿತು ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.