ATM Cash-ಎಟಿಎಂನಲ್ಲಿ ಹರಿದ ನೋಟ್ ಬಂದರೆ ಏನು ಮಾಡಬೇಕು?

ನಮ್ಮ ದೇಶದಲ್ಲಿ ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಲು ಎಟಿಎಂ(ATM Card) ನೆರವನ್ನು ಪಡೆದುಕೊಳ್ಳಲಾಗುತ್ತದೆ ಒಮ್ಮೊಮ್ಮೆ ಈ ಎಟಿಎಂಗಳಿಂದ ಹಣವನ್ನು ಡ್ರಾ ಮಾಡುವಾಗ ಹರಿದ ನೋಟ್ ಬಂದರೆ ಏನು ಮಾಡಬೇಕು? ಈ ನೋಟ್ ಗಳನ್ನು ಬದಲಾಯಿಸುವುದು ಹೇಗೆ ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಸರ್ವೆ ಸಾಮಾನ್ಯವಾಗಿ ಬಹುತೇಕ ಜನರ ಬಳಿ ಎಟಿಎಂ ಕಾರ್ಡ ಇದ್ದೆ ಇರುತ್ತದೆ ಈ ಕಾರ್ಡಗಳನ್ನು ಹೊಂದಿರುವವರು ಇದರ ಬಳಕೆ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡಿರುವುದು ಅಷ್ಟೇ ಮುಖ್ಯವಾಗಿದೆ ಆದ್ದರಿಂದ ಈ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಎಟಿಎಂ ನಲ್ಲಿ ಹಣ ವಿತ್ ಡ್ರಾ ಮಾಡುವಾಗ ಕೆಲವೊಮ್ಮೆ ಅರ್ದ ತುಂಡಾದ ಅಥವಾ ಹರಿದ ನೋಟ್ ಸಿಕ್ಕರೆ ಗಾಬರಿಯಾಗುತ್ತದೆ, ಈ ನೋಟ್ ಅನ್ನು ತೆಗೆದುಕೊಂಡು ಯಾವ ವ್ಯವಹಾರ ಮಾಡಲು ಸಾಧ್ಯ ಎಂದು ತಲೆನೋವು ಶುರುವಾಗಿಬಿಡುತ್ತದೆ. ಈ ತಲೆನೋವಿಗೆ ಇಲ್ಲಿದೆ ಸೂಕ್ತ ಪರಿಹಾರ ಕ್ರಮ.

ಇದನ್ನೂ ಓದಿ: Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ATM Cash-ಎಟಿಎಂನಲ್ಲಿ ಹರಿದ ನೋಟ್ ಬಂದರೆ ಏನು ಮಾಡಬೇಕು?

ಸಾರ್ವಜನಿಕರು ATM ಕೇಂದ್ರವನ್ನು ಭೇಟಿ ಮಾಡಿ ಹಣ ವಿತ್ ಡ್ರಾ ಮಾಡಿದ ಸಮಯದಲ್ಲಿ ತುಂಡಾದ ಹಣ ಅಥವಾ ಹರಿದ ಹಣ ಬಂದರೆ ತಲೆಗೆಡಿಸಿಕೊಳ್ಳಬೇಡಿ ಏಕೆಂದರೆ ಎಟಿಎಂ ನಿಂದ ಸಿಕ್ಕ ಹರಿದ ಹಣವನ್ನು/ನೋಟುಗಳನ್ನು ಆ ಎಟಿಎಂ ಮಶಿನಿನ ಬ್ಯಾಂಕ್ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಸುಲಭವಾಗಿ ಹರಿದ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

ಭಾರತೀಯ ರಿಸರ್ವ ಬ್ಯಾಂಕ್(RBI) ನ ಅಧಿಕೃತ ಆದೇಶದನ್ವಯ ಎಟಿಎಂ ನಲ್ಲಿ ಹರಿದ ಅಥವಾ ತುಂಡಾದ ನೋಟ್ ಸಿಕ್ಕರೆ ಸಾರ್ವಜನಿಕರು ಆ ಎಟಿಎಂ ಮಶಿನ್ ಅನ್ನು ನಿರ್ವಹಣೆ ಮಾಡುವ ಅದೇ ಬ್ಯಾಂಕಿನ ಬ್ರಾಂಚ್ ಅನ್ನು ಭೇಟಿ ಮಾಡಿ ಹರಿದ ನೋಟ್ ಗಳನ್ನು ಬದಲಾಯಿಸಿಕೊಳ್ಳಬಹುದು.

ಇದನ್ನೂ ಓದಿ: agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ATM -ಎಟಿಎಂನಲ್ಲಿ ಸಿಕ್ಕ ಹರಿದ ನೋಟ್ ಬದಲಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ!

ಗ್ರಾಹಕರು ತಮಗೆ ಎಟಿಎಂ ನಲ್ಲಿ ಸಿಗುವ ಹರಿದ ನೋಟ್ ಗಳನ್ನು ಬ್ಯಾಂಕ್ ಬ್ರಾಂಚ್ ಭೇಟಿ ಮಾಡಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ಯಾವುದೇ ತರನಾದ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆಯಿರುವುದಿಲ್ಲ. ಉಚಿತವಾಗಿ ಹರಿದ ನೋಟ್ ಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿ ಉತ್ತಮ ಸ್ಥಿತಿಯಲ್ಲಿರುವ ನೋಟ್ ಗಳನ್ನು ಪಡೆದುಕೊಳ್ಳಬಹುದು.

ಒಂದು ದಿನಕ್ಕೆ 20 ನೋಟ್ ಗಳಂತೆ 5 ಸಾವಿರದ ಮೊತ್ತದವರೆಗೆ ಹರಿದ ಹಣವನ್ನು ಬದಲಾವಣೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ATM Card- ಎಟಿಎಂ ಕಾರ್ಡ ಬಳಕೆದಾರರು ತಪ್ಪದೇ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ:

ನಿಮ್ಮ ಎಟಿಎಂ ಕಾರ್ಡ ಪಿನ್ ನಂಬರ್ ಅನ್ನು ನಿಮ್ಮ ಕಾರ್ಡ ಕವರ್ ಮೇಲೆ ಯಾವುದೇ ಕಾರಣಕ್ಕೂ ಬರೆಯದಿರಿ.

ಒಂದೊಮ್ಮೆ ನಿಮ್ಮ ಎಟಿಎಂ ಕಾರ್ಡ ಕಳೆದ ಹೋದರೆ ಕೂಡಲೇ ಸಹಾಯವಾಣಿ ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ಭೇಟಿ ಮಾಡಿ ನಿಮ್ಮ ಎಟಿಎಂ ಕಾರ್ಡ ಅನ್ನು ಬ್ಲಾಕ್(ATM card Block) ಮಾಡಿಸಿ.

ಆನ್ಲೈನ್ ಮೂಲಕ ಎಟಿಎಂ ಕಾರ್ಡ ಬಳಕೆ ಮಾಡಿ ಹಣ ಪಾವತಿ ಮಾಡುವಾಗ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಮಾತ್ರ ಕ್ಲಿಕ್ ಮಾಡಿ ಎಟಿಎಂ ವಿವರ ಹಾಕಿ ಹಣ ಪಾವತಿ ಮಾಡಬೇಕು. ಅನದಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿವರ ಹಾಕದಿರಿ ಈ ಕುರಿತು ಜಾಗ್ರತೆವಹಿಸುವುದು ಅತ್ಯಗತ್ಯ.

ಇದನ್ನೂ ಓದಿ: Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ATM card Block- ಎಟಿಎಂ ಕಾರ್ಡ ಬ್ಲಾಕ್ ಮಾಡುವುದು ಹೇಗೆ?

ಗ್ರಾಹಕರು ಅಜಾಗೃಕತೆಯಿಂದ ತಮ್ಮ ಎಟಿಎಂ ಅನ್ನು ಕಳೆದುಕೊಂಡರೆ ಅದನ್ನು ಬ್ಲಾಕ್ ಮಾಡುವುದು ಹೇಗೆ ಎಂದು ತಿಳಿಯೋಣ ನೀವು ಯಾವ ಬ್ಯಾಂಕಿನ ಎಟಿಎಂ ಕಾರ್ಡ ಅನ್ನು ಬಳಕೆ ಮಾಡುತ್ತಿದ್ದಿರೋ ಆ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅಲ್ಲಿ ನೀಡಿರುವ ಎಟಿಎಂ ಸಹಾಯವಾಣಿಗೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ನಿಂದ ಕರೆ ಮಾಡಿ ನಿಮ್ಮ ಎಟಿಎಂ ಅನ್ನು ಬ್ಲಾಕ್ ಮಾಡಬಹುದು.

ಅಥವಾ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿರುವ ಶಾಖೆಯನ್ನು ಭೇಟಿ ಮಾಡಿ ನಿಮ್ಮ ಎಟಿಎಂ ಅನ್ನು ಬ್ಲಾಕ್ ಮಾಡಬಹುದು.