ಕೇಂದ್ರ ಸರಕಾರದಿಂದ ನಮ್ಮ ದೇಶದಲ್ಲಿ ಅರ್ಥಿಕವಾಗಿ ಹಿಂದುಳಿದಿರುವ ನಾಗರಿಕರಿಗೆ ಆರೋಗ್ಯ ವಿಮೆ ಯೋಜನೆಯ ಸೌಲಭ್ಯವನ್ನು ಒದಗಿಸಲು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದು ಹೇಗೆ ಎನ್ನುವ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ(PMJAY) ₹5 ಲಕ್ಷದವರೆಗೆ ನಗದು ರಹಿತ ಉಚಿತ ಚಿಕಿತ್ಸೆ ಪಡೆಯಲು ಅವಕಾಶವಿದ್ದು ಈ ಯೋಜನೆಯಡಿ ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ? ಕಾರ್ಡ ಪಡೆಯಲು ಕೇಂದ್ರ ಸರಕಾರದಿಂದ ನಿಗದಿಪಡಿಸಿರುವ ಅರ್ಹತೆಗಳೇನು? ಈ ಕಾರ್ಡ ಬಳಕೆ ಮಾಡಿಕೊಂಡು ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು? ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿರುವ ಅಂಕಿ-ಅಂಶದ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಒಟ್ಟು 8,19,73,363 ನಾಗರಿಕರು ಆಯುಷ್ಮಾನ್ ಕಾರ್ಡ್ ಪಡೆದಿದ್ದಾರೆ.
ಇದನ್ನೂ ಓದಿ: Budget 2025-ಕೇಂದ್ರ ಬಜೆಟ್ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೃಷಿ ಸಾಲದ ಮಿತಿ ಹೆಚ್ಚಳ!
Ayushman Bharat Yojana-ಆಯುಷ್ಮಾನ್ ಭಾರತ್ ಯೋಜನೆ:
ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳಲ್ಲಿ “ಆಯುಷ್ಮಾನ್ ಭಾರತ್ ಯೋಜನೆ”ಯು ಮಹತ್ವದ ಯೋಜನೆಯಲ್ಲಿ ಒಂದಾಗಿದ್ದು ದೇಶಾದ್ಯಂತ ಈ ಯೋಜನೆಯಡಿ ಆಯುಷ್ಮಾನ್ ಕಾರ್ಡ್ ಅನ್ನು ಹೊಂದಿರುವವರು 30 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಲು ಅವಕಾಶವಿರುತ್ತದೆ.
Ayushman card Benefits-ಆಯುಷ್ಮಾನ್ ಕಾರ್ಡ್ ಪ್ರಯೋಜನಗಳು
ಆಯುಷ್ಮಾನ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ಆಸ್ಪತ್ರೆ ಚಿಕಿತ್ಸೆಗಾಗಿ ಒಂದು ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದವರೆಗೆ ಉಚಿತ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: RTI Act-ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!
Ayushman card-ಯಾವೆಲ್ಲ ಚಿಕಿತ್ಸೆ ಪಡೆಯಲು ಅವಕಾಶವಿದೆ?
ಆಯುಷ್ಮಾನ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳನ್ನು ಪಡೆಯಲು ಅವಕಾಸವಿರುತ್ತದೆ.
Find Hospitals-ಖಾಸಗಿ ಆಸ್ಪತ್ರೆಯ ವಿವರವನ್ನು ಈ ಕೆಳಗಿನ ವಿಧಾನ ಅನುಸರಿಸಿ ಪಡೆಯಬಹುದು:
ನಿಮ್ಮ ಹತ್ತಿರದಲ್ಲಿರುವ ಯಾವೆಲ್ಲ ಖಾಸಗಿ ಆಸ್ಪತ್ರೆಯಲ್ಲಿ ಈ ಕಾರ್ಡ ಬಳಕೆ ಮಾಡಿಕೊಂಡು ಚಿಕಿತ್ಸೆಯನ್ನು ಪಡೆಯಬಹುದು ಎಂದು ತಿಳಿಸಲು ಈ Find Hospitals ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ, ಜಿಲ್ಲೆ ಇನ್ನಿತರೆ ವಿವರವನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ ಕ್ಯಾಪ್ಚ ಕೋಡ್ ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಿ ವಿವರವನ್ನು ಮೊಬೈಲ್ ನಲ್ಲೇ ಪಡೆಯಬಹುದು.
ಇದನ್ನೂ ಓದಿ: National Horticulture Fair 2025-ರಾಜ್ಯದಲ್ಲಿ 3 ದಿನ ರಾಷ್ಟ್ರೀಯ ತೋಟಗಾರಿಕಾ ಮೇಳ! ಇಲ್ಲಿದೆ ಮೇಳದ ಸಂಪೂರ್ಣ ವಿವರ!
Documents For Ayushman Card-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
1) ಆಧಾರ್ ಕಾರ್ಡ್ ಪ್ರತಿ
2) ರೇಷನ್ ಕಾರ್ಡ ಪ್ರತಿ
3) ಆದಾಯ ಪ್ರಮಾಣ ಪತ್ರ
4) ವಿಳಾಸ ಪ್ರಮಾಣಪತ್ರ
5) ಬ್ಯಾಂಕ್ ಪಾಸ್ ಬುಕ್ ಪ್ರತಿ
6) ಪೋಟೋ
7) ಮೊಬೈಲ್ ನಂಬರ್
How to Apply For Ayushman Card-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡು “ಆಯುಷ್ಮಾನ್ ಕಾರ್ಡ್” ಅನ್ನು ಪಡೆಯಬಹುದು ಅಥವಾ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Ration Angadi-ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?
Online Apply method For Ayushman Card-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
ಕೇಂದ್ರ ಸರಕಾರದ ಅಧಿಕೃತ PMJAY ಜಾಲತಾಣವನ್ನು ಪ್ರವೇಶ ಮಾಡಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
Step-1: ಮೊದಲಿಗೆ ಇಲ್ಲಿ ಕ್ಲಿಕ್ Ayushman card Online Application ಮಾಡಿ ಅಧಿಕೃತ ಆಯುಷ್ಮಾನ್ ಭಾರತ್ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಬಳಿಕ ಈ ಪೇಜ್ ನ ಬಲ ಬದಿಯಲ್ಲಿ ಮೇಲೆ ಕಾಣುವ “Am I Eligible” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಆಗ ಅರ್ಜಿ ಸಲ್ಲಿಸುವ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “Captcha” ಕೋಡ್ ಮತ್ತು ಅರ್ಜಿದಾರರ ಮೊಬೈಲ್ ನಂಬರ್ ಮತ್ತು OTP ಹಾಗೂ authentication mode ಅನ್ನು ಆಯ್ಕೆ ಮಾಡಿಕೊಂಡು “Login” ಆಗಬೇಕು.
Step-4: “Login” ಅದ ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯನ್ನು “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಸಹಾಯವಾಣಿ ಸಂಖ್ಯೆ/Helpline Number- 14555 ಅಥವಾ 1800-111-565