Baal aadhaar- ಚಿಕ್ಕ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ! ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದರೆ ತಪ್ಪದೇ ಈ ಮಾಹಿತಿ ತಿಳಿಯಿರಿ!

Facebook
Twitter
Telegram
WhatsApp

ಆಧಾರ್ ಪ್ರಾಧಿಕಾರದಿಂದ ಚಿಕ್ಕ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ(Baal aadhaar) ಅನ್ನು ನೀಡಲಾಗುತ್ತದೆ ಇದರ ಮಾನ್ಯತಾ ಅವದಿ ಮತ್ತು ಇತ್ಯಾದಿ ಅಗತ್ಯ ವಿಷಯಗಳ ಕುರಿತು ಇಂದು ಈ ಲೇಖನದಲ್ಲಿ ವಿವರಿಸಲಾಗಿದ್ದು ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದರೆ ತಪ್ಪದೇ ಈ ಮಾಹಿತಿಯನ್ನು ಸಪೂರ್ಣವಾಗಿ ತಿಳಿಯಿರಿ.

ಆಧಾರ್ ಅನ್ನು ನಮ್ಮ ದೇಶದಲ್ಲಿ ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಕೆ ಮಾಡಲಾಗುತ್ತದೆ. ಆಧಾರ್ ಕಾರ್ಡ್, ಸಂಪೂರ್ಣ ಹೆಸರು, ಆ ನಾಗರಿಕನ ಶಾಶ್ವತ ವಿಳಾಸ ಮತ್ತು ಜನ್ಮ ದಿನಾಂಕದ ವಿವರ ಒಳಗೊಂಡಂತೆ ನಾಗರಿಕರ ಬಗ್ಗೆ ಪ್ರಮುಖ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಿಡಲಾಅಗುತ್ತದೆ. 

ಈ ದಾಖಲೆಯನ್ನು ಉಪಯೋಗಿಸಿ ನಾಗರಿಕರು ಹಣ ವಹಿವಾಟು ಮಾಡಲು ಹಾಗೂ ಇತರೆ ಕಾರಣಗಳಿಗೆ ಬ್ಯಾಂಕ್ ಅಕೌಂಟ್ ತೆರೆಯಲು ಮತ್ತು ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಿಮ್ ಕಾರ್ಡ ಖರೀದಿಸಲು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಾಯಧನ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡ್ ಹೊಂದುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ: Labour card- ಕಾರ್ಮಿಕ ಕಾರ್ಡ ಹೊಂದಿರುವವರು ಇ-ಕಾರ್ಡ ಪಡೆಯಲು ಅರ್ಜಿ ಆಹ್ವಾನ!

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು(UIDAI) ನೀಲಿ ಆಧಾರ್ ಕಾರ್ಡ್ (Baal aadhaar) ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ಕಾರ್ಡ ನಿರ್ದಿಷ್ಟವಾಗಿ 5 ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಚಿಕ್ಕ ಮಕ್ಕಳನ್ನು ಸೇರಿಸುವುದನ್ನು ಸರಳಗೊಳಿಸುವಲ್ಲಿ ನೀಲಿ ಆಧಾರ್ ಕಾರ್ಡ್ ಅಪಾರ ಮಹತ್ವವನ್ನು ಹೊಂದಿದೆ.

ಈ ಆಧಾರ್ ಕಾರ್ಡ್‌ನ ಪ್ರಮುಖ ವೈಶಿಷ್ಟ್ಯವೆಂದರೆ 5 ವರ್ಷದೊಳಗಿನ ಮಕ್ಕಳು ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವ ಅಗತ್ಯವಿಲ್ಲ. ಬದಲಾಗಿ, ಅವರ UID (ವಿಶಿಷ್ಟ ಗುರುತು) ಅನ್ನು ಜನಸಂಖ್ಯಾ ಡೇಟಾ ಮತ್ತು ಅವರ ಪೋಷಕರ UID ಗೆ ಸಂಪರ್ಕಿಸಲಾದ ಮುಖದ ಚಿತ್ರವನ್ನು ಬಳಸಿಕೊಂಡು ಪ್ರಕ್ರಿಯೆಗೊಳಿಸಲಾಗುತ್ತದೆ.

ಇದನ್ನೂ ಓದಿ: Crop insurance amount-2024: 13 ಲಕ್ಷ ರೈತರಿಗೆ 1,400 ಕೋಟಿ ಬೆಳೆ ವಿಮೆ ಪರಿಹಾರ: ಸಚಿವ ಚೆಲುವರಾಯಸ್ವಾಮಿ

Baal aadhaar validity- ಈ ಬಾಲ್ ಆಧಾರ್ ಕಾರ್ಡ ಅವಧಿ ಕೇವಲ 5 ವರ್ಷ ಮಾತ್ರ:

ಆಧಾರ್ ಕಾರ್ಡ ಅನ್ನು ಪಡೆಯಲು ಅರ್ಜಿ ಸಲ್ಲಿಸಿ ಪಡೆದ ನಂತರ 5 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿರುತ್ತದೆ. ಇದಕ್ಕೆ ಬಾಲ್ ಆಧಾರ್ ಎಂದು ಹೇಳಲಾಗುತ್ತದೆ. ಮಗುವಿನ ವಯಸ್ಸು 5 ವರ್ಷ ಪೂರ್ಣಗೊಂಡ ಬಳಿಕ ಈಗ ಅಂದರೆ ಅಲ್ಲಿಯವರೆಗೆ ಇರುವ ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ ಅವಧಿ ಮುಕ್ತಾಯವಾಗುತ್ತದೆ ತದನಂತರ ಪುನಃ ಅರ್ಜಿ ಸಲ್ಲಿಸಿ ಮಗುವಿನ ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳುವುದು ಬಹುಮುಖ್ಯವಾಗಿದೆ.

5 ವರ್ಷ (ದಾಟಿದ ನಂತರ, ಮಗುವಿನ ಬಯೋಮೆಟ್ರಿಕ್ಸ್ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಐದು ವರ್ಷದ ನಂತರ ಆಧಾರ್ ನವೀಕರಿಸಬೇಕಾಗುತ್ತದೆ. ಆಗ ಮಕ್ಕಳ ಹೆಬ್ಬೆಟ್ಟಿನ ಗುರುತು ಹಾಗೂ ಕಣ್ರೆಪ್ಪೆ (Eyelash) ಗುರುತನ್ನು ಪಡೆಯಲಾಗುತ್ತದೆ. ಇದಲ್ಲದೇ ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಮತ್ತೆ ಆಧಾರ್ ಕಾರ್ಡ ನವೀಕರಣ ಮಾಡಬೇಕಾಗುತ್ತದೆ.

Required documents for Baal aadhaar- ಬಾಲ್ ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ಮಗುವಿನ ಜನನ ಪ್ರಮಾಣ ಪತ್ರ
  • ಪೋಷಕರ ಆಧಾರ್ ಕಾರ್ಡ ಪ್ರತಿ
  • ಮೊಬೈಲ್ ನಂಬರ್

ಇದನ್ನೂ ಓದಿ: Annabhagya yojana- ಈ ಪಟ್ಟಿಯಲ್ಲಿರುವವರಿಗೆ ಮಾರ್ಚ-2024 ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆ ಮತ್ತು ಅಕ್ಕಿ ಹಣ ವರ್ಗಾವಣೆ ಪ್ರಾರಂಭ!

Baal aadhaar application- ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಆಧಾರ್ ಕೇಂದ್ರ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಆಧಾರ್ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸಲು ಅಪಾಯಿಂಟ್‌ಮೆಂಟ್ ಮಾಡಿಕೊಳ್ಳಬಹುದು.

ನೀಲಿ ಆಧಾರ್ ರ್ಕಾರ್ಡ್‌ಗೆ (Baal aadhaar) ಅರ್ಜಿ ಸಲ್ಲಿಸುವ ವಿಧಾನ:

ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವೆಬ್ಸೈಟ್ ಭೇಟಿ ಮಾಡಬೇಕು. ಬಳಿಕ  ಇಲ್ಲಿ ನೋಂದಣಿಗಾಗಿ ಅಪಾಯಿಂಟ್‌ಮೆಂಟ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು ತದನಂತರ ಹತ್ತಿರದ ದಾಖಲಾತಿ ಕೇಂದ್ರವನ್ನು ಹುಡುಕಿ ಮತ್ತು ಅಲ್ಲಿ ಅಪಾಯಿಂಟ್‌ಮೆಂಟ್ ಆಯ್ಕೆಯನ್ನು ಆಯ್ಕೆ ಮಾಡಿ. ಹತ್ತಿರದ ದಾಖಲಾತಿ ಕೇಂದ್ರವನ್ನು ಹುಡುಕಿ ಮತ್ತು ಅಲ್ಲಿ ಅಪಾಯಿಂಟ್‌ಮೆಂಟ್ ಮಾಡಿ ನಿಮ್ಮ (ಪೋಷಕರ) ಆಧಾರ್, ಮಗುವಿನ ಜನನ ಪ್ರಮಾಣಪತ್ರ ದಾಖಲಾತಿಗಳನ್ನು ಆಧಾರ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪಡೆಯಬೇಕು.

ಇದನ್ನೂ ಓದಿ: Online marriage registration- ಇನ್ನು ಮುಂದೆ ವಿವಾಹ ನೋಂದಣಿ ಭಾರೀ ಸುಲಭ ನಿಮ್ಮ ಮೊಬೈಲ್ ಮೂಲಕವೇ ನೋಂದಣಿ ಮಾಡಿ!

ಆಧಾರ್ ಸೇವೆಗಳಿಗೆ ನಿಮ್ಮ ಮಗುವನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕಬಳಿಕ ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ನಿಂದ ನಿಮ್ಮ ಮಗುವಿನ ಆಧಾರ್ ಕಾರ್ಡ್ ಡಿಜಿಟಲ್ ಪ್ರತಿಯನ್ನು ಡೌನ್ ಲೋಡ್ ಮಾಡಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಆಧಾರ್ ಪ್ರಾಧಿಕಾರದ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: Click here

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(Pradhan Mantri Kisan Samman Nidhi) ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಗಾವಣೆ ಮಾಡುವ ರೂ 2,000 ಹಣವನ್ನು ದೇಶದ ಎಲ್ಲಾ ರೈತರಿಗೆ ಇಂದು(05-10-2024) ಜಮಾ ಅಗಲಿದ್ದು, ರೈತರು ತಮ್ಮ ಮೊಬೈಲ್

Best insurance plan-2024: ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷ ಅಪಘಾತ ವಿಮೆ ಪರಿಹಾರಕ್ಕೆ ಅರ್ಜಿ!

ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷದವರೆಗೆ ಅಪಘಾತ ವಿಮೆ(Accidental insurance) ಪ್ರಯೋಜನ ಪಡೆಯಲು ನೂತನ ಯೋಜನೆಯನ್ನು ರಾಜ್ಯ ಸರಕಾರದಿಂದ ಜಾರಿಗೆ(insurance plan) ತರಲಾಗಿದ್ದು, ಈ ಯೋಜನೆಯ ಕುರಿತು

Bele parihara

Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಬೆಳೆ ನಷ್ಟ ಪರಿಹಾರವನ್ನು(bele parihara) ಪಡೆಯಲು ಎಲ್ಲಾ ದಾಖಲಾತಿಗಳು ಆನ್ಲೈನ್ ನಲ್ಲಿ ಸರಿಯಾಗಿ ಸಲ್ಲಿಸಿರುವ ರೈತರ ಹಳ್ಳವಾರು ಪಟ್ಟಿಯನ್ನು(Parihara farmer list) ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ನಲ್ಲಿ ಹಳ್ಳಿವಾರು ರೈತರ ಪಟ್ಟಿಯನ್ನು