- Advertisment -
HomeNew postsBagar Hukum-ಬಗರ್ ಹುಕುಂ ಅರ್ಜಿ ವಿಲೇವಾರಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Bagar Hukum-ಬಗರ್ ಹುಕುಂ ಅರ್ಜಿ ವಿಲೇವಾರಿ ಕುರಿತು ಮಹತ್ವದ ಮಾಹಿತಿ ಪ್ರಕಟ!

ಇತ್ತೀಚಿಗೆ ವಿಧಾನಸಭೆಯಲ್ಲಿ ಬಗರ್ ಹುಕುಂ(Bagar Hukum) ಸಕ್ರಮದ ಕುರಿತು ಬಹಳ ಗಂಭಿರವಾಗಿ ಚರ್ಚೆ ನಡೆದಿದ್ದು, ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸಲಾಗಿದೆ. ಈಗಾಗಲೇ ಬೆಳೆಗಳನ್ನು ಬೆಳೆದು ಕಟಾವಿಗೆ ಕಾಯುತ್ತಿರುವ ರೈತರಿಗೆ ಸಿಹಿ ಸುದ್ದಿ ಹಾಗೂ ಹೊಸದಾಗಿ ಅರ್ಜಿಗಳ ಪರಿಶೀಲನೆ ಕುರಿತು ಕಹಿ ಸುದ್ದಿಯನ್ನು ಕಂದಾಯ ಸಚಿವರು ನೀಡಿದ್ದಾರೆ.

ಹಾಗಾದರೆ ವಿಧಾನಸಭಾ ಚರ್ಚೆಯಲ್ಲಿ ಯಾವೆಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಹಾಗೂ ಇನ್ನೂ ಯಾವೆಲ್ಲ ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಮಿತಿ(Akrama Sakrama) ರಚನೆಯಾಗಿಲ್ಲ, ಬಗರ್ ಹುಕುಂ ಜಮೀನಿನಲ್ಲಿ ಈಗಾಗಲೇ ಬೆಳೆ ಬೆಳೆದು ಕಟಾವಿಗೆ ಕಾಯುತ್ತಿರುವ ರೈತರಿಗೆ ನೀಡಿದ ಮಾಹಿತಿ ಏನು ಎಂಬ ಸಂಪೂರ್ಣ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

ಸರಕಾರಿ ಇನ್ನಿತರೇ ಜಮೀನಿನಲ್ಲಿ ಕಳೆದ ಅನೇಕ ವರ್ಷಗಳಿಂದ ಸಾಗುವಳಿಯನ್ನು(Saguvali Cheeti) ಮಾಡಿಕೊಂಡು ಬರುತ್ತಿರುವ ರೈತರಿಗೆ ಬಗರ್ ಹುಕುಂ ಯೋಜನೆಯಡಿ ಆ ಜಮೀನಿನ ಅಧಿಕೃತ ಸಾಗುವಳಿ ಚೀಟಿಯನ್ನು ರೈತರಿಗೆ ನೀಡಿ ಜಮೀನನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಲಾಗುತ್ತಿದೆ ಇದಕ್ಕಾಗಿ ಬಗರ್ ಹುಕುಂ ಸಮಿತಿಯನ್ನು ಪ್ರತಿ ಜಿಲ್ಲೆಯಲ್ಲಿಯು ಸಹ ರಚನೆ ಮಾಡಲು ಸರಕಾರ ಕ್ರಮ ವಹಿಸಲು ಮುಂದಾಗಿದೆ.

Karnataka Revenue Department-ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ:

ಬಗರ್ ಸಮಿತಿಯಿಂದ ಅರ್ಜಿಗಳು ಇತ್ಯರ್ಥವಾಗುವ ತನಕ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು, ಬೆಳೆ ಕಟಾವಿಗೆ ಅಡ್ಡಪಡಿಸುವುದು ಯಾವುದೇ ವ್ಯಕ್ತಿಗೆ ಯಾವುದೇ ರೀತಿಯ ಅವಕಾಶ ಅಥವಾ ಅನುಮತಿ ಇರುವುದಿಲ್ಲ ಹಾಗೂ ಇಂತಹ ಘಟನೆಗಳು ಕಂಡು ಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತನ್ನಿರಿ ಎಂದು ಕಂದಾಯ ಸಚಿವರು ಮಾಹಿತಿಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

bagar hukum yojane

Bagar Hukum Samiti-ಇನ್ನೂ 13 ಕ್ಷೇತ್ರಗಳಲ್ಲಿ ರಚನೆಯಾಗದ ಬಗರ್ ಹುಕುಂ ಸಮಿತಿ!

ಮಾರ್ಚ್ 10ನೇ ತಾರೀಕಿನಂದು ನಡೆದ ವಿಧಾನಸಭೆ ಚರ್ಚೆಯಲ್ಲಿ ಸರ್ಕಾರದ ಉತ್ತರದಿಂದಲೇ ಬೆಳಕಿಗೆ ಬಂದಿರುವುದು ಏನೆಂದರೆ, ರಾಜ್ಯದಲ್ಲಿ ಇಲ್ಲಿಯವರೆಗೆ ಇನ್ನು 13 ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಮಿತಿಗಳು ರಚನೆ ಆಗೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರು ಹಲವು ಕಾರಣಗಳನ್ನು ಹೇಳಿದ್ದು, ಇದನ್ನು ಕುರಿತು ಯಾರಿಗೂ ಧೂಷಣೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

10 ದಿನಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ:

ವಿವಿಧ ಕಾರಣಗಳಿಂದಾಗಿ ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡಲು ಸಾಧ್ಯವಾಗಿರುವುದಿಲ್ಲ. ಆದರೆ ಮುಂದಿನ ಒಂದು ವಾರ ಅಥವಾ 10 ದಿನಗಳ ಒಳಗಾಗಿಯೆ ಬಗರ್ ಕುಮಾರ್ ಸಮಿತಿಗಳನ್ನು ರಚನೆ ಮಾಡುವುದಾಗಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ(Krishna Byre Gowda) ಅವರು ತಿಳಿಸಿದ್ದಾರೆ.

ಈಗಾಗಲೇ ಬಗರ್ ಹುಕುಂ ಸಮಿತಿಗಳನ್ನು ರಚಿಸಿ, ಸಮಿತಿಗಳು ಪರಿಗಣಿಸಿ ವಿಲೇವಾರಿಯಾಗಿರುವಂತಹ ಅರ್ಜಿಗಳನ್ನು ಹೊಸದಾಗಿ ಪರಿಗಣಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

Bagar Hukum Details-ಬಗರ್ ಹುಕುಂ ಸಮಿತಿಗಳು ಅಂಕಿ-ಅಂಶ ವಿವರ:

ಕರ್ನಾಟಕ ರಾಜ್ಯದಲ್ಲಿ ಬಗರ್ ಹುಕುಂಗೆ ಸಂಬಂಧಿಸಿದಂತೆ ಒಟ್ಟು 185 ಸಮಿತಿಗಳಿವೆ. ಅದೇ ರೀತಿ ಇನ್ನೂ 13 ಬಗರ್ ಹುಕುಂ ಸಮಿತಿಗಳು ರಚನೆಯಾಗಬೇಕಾಗಿದ್ದು, 13 ರಲ್ಲಿ 7 ಸಮಿತಿಗಳು ಬೀದರ ಜಿಲ್ಲೆಯದ್ದಾಗಿದೆ ಎಂಬುದು ವಿಷಾದಕರ.

Akrama Sakrama Yojana-ಸರ್ಕಾರಿ ಬೀಳು ಅಥವಾ ಪಡಾ ಜಮೀನುಗಳು ಸ್ಥಿತಿ ಏನು?

ಟ್ಯಾಕ್ಸ್ ಕಟ್ಟುವುದರ ಬಾಕಿಯಿಂದಾಗಿ ಸರ್ಕಾರಿ ಬೀಳು ಅಥವಾ ಪಡಾ ಎಂದು ಈಗಾಗಲೇ ದಾಖಲಾಗಿರುವ ಜಮೀನುಗಳನ್ನು ಪುನಃ ಸಾಗುವಳಿ ಜಮೀನುಗಳು ಎಂದು ಆರ್‌ಟಿಸಿಗಳಲ್ಲಿ ದಾಖಲಿಸಿ ಅವುಗಳನ್ನು ರೈತರಿಗೆ ನೀಡಲು ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಏಕೆಂದರೆ ಇದಕ್ಕಾಗಿ 2012 ರಿಂದ 2014ರವರೆಗೆ ರೈತರಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೇ ರೀತಿ ಈಗ ಪುನಃ ಮತ್ತೊಮ್ಮೆ ಅವಕಾಶ ನೀಡಲು ಸಾಧ್ಯವಿಲ್ಲ, ಏಕೆಂದರೆ ಇದರಿಂದ ಅನೇಕ ಜಟಿಲ ಮತ್ತು ಸಂಕಿರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: Business loan-ಸ್ವಂತ ಉದ್ದಿಮೆಯನ್ನು ಮಾಡಲು 15 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Bhoomi RTC Status Check-ನಿಮ್ಮ ಜಮೀನಿನ ಪಹಣಿಯ ನೈಜ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವ ವಿಧಾನ:

ಕಂದಾಯ ಇಲಾಖೆಯ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ರೈತರು ಕಾಲ ಕಾಲಕ್ಕೆ ನಿಮ್ಮ ಜಮೀನಿನಲ್ಲಿ ದಾಖಲಾಗಿರುವ ಮಾಲೀಕರ ವಿವರದಲ್ಲಿ ಯಾವುದೇ ಬಗ್ಗೆಯ ತಿದ್ದುಪಡಿ ಅಗಿದಿಯೇ? ಎಂದು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು ಇದಕ್ಕಾಗಿ ಅಧಿಕೃತ Bhoomi ತಂತ್ರಾಂಶದ ಲಿಂಕ್- CLICK HERE

RTC Status Check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಜಮೀನ ಸರ್ವೆ ನಂಬರ್ ಅನ್ನು ನಮೂದಿಸಿ ಜಮೀನಿನ ಮಾಲೀಕರ ವಿವರ, ಆ ಜಮೀನಿನ ಮೇಲೆ ಯಾವೆಲ್ಲ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲಾಗಿದೆ? ಜಂಟಿ ಮಾಲೀಕರ ವಿವರ ಇನ್ನಿತರ ಮಾಹಿತಿಯನ್ನು ಮೊಬೈಲ್ ನಲ್ಲಿ ಪಡೆಯಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -