ಸರಕಾರಿ ಜಮೀನನ್ನು ಮಂಜೂರಾತಿ ಪಡೆದು ಸಾಗುವಳಿ ಮಾಡುತ್ತಿರುವ ರೈತರಿಗೆ ರಾಜ್ಯ ಸರಕಾರದಿಂದ ಸಿಹಿ ಸುದ್ದಿ ನೀಡಿದ್ದು, ಬಗರ್ ಹುಕುಂ(Bagar hukum) ಡಿಜಿಟಲ್ ಸಾಗವಳಿ ಚೀಟಿ ವಿತರಣೆಗೆ ಅಧಿಕೃತವಾಗಿ ಗುಂಡ್ಲುಪೇಟೆ ತಾಲೂಕು, ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಗಿದೆ.
ಅನೇಕ ವರ್ಷಗಳಿಂದ ರಾಜ್ಯ ಸರಕಾರದ ವಿವಿಧ ಯೋಜನೆಯಡಿ ದೊಡ್ಡ ಸಂಖ್ಯೆಯ ರೈತರು ಜಮೀನನ್ನು ಸಾಗುವಳಿ ಮಾಡಲು ಮಂಜೂರಾತಿ ಪಡೆದಿದ್ದರು ಸಹ ತಮ್ಮ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲಾತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಸರಕಾರಿ ಕಚೇರಿ ಅಲೇದಾಡುವ ಪರಿಸ್ಥಿತಿಗೆ ಬ್ರೇಕ್ ಬಿಳಲಿದ್ದು ರೈತರಿಗೆ ತಮ್ಮ ಜಮೀನಿನ ಹಕ್ಕು ಪತ್ರ ವಿತರಣೆಗೆ ಕಂದಾಯ ಇಲಾಖೆಯಿಂದ ನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ.
ಇದನ್ನೂ ಓದಿ: Free cylinder Scheme- ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅವಕಾಶ! ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ!
ಏನಿದು ಬಗರ ಹುಕುಂ ಯೋಜನೆ? ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಪ್ರಕ್ರಿಯೆ ಹೇಗಿರುತ್ತದೆ? ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹಂಚಿಕೊಂಡಿರುವ ಪ್ರಕಟಣೆ ವಿವರ ಸೇರಿದಂತೆ ಇನ್ನಿತರ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
what is Bagar hukum yojana- ಏನಿದು “ಬಗರ ಹುಕುಂ”ಯೋಜನೆ?
ಕೃಷಿ ಬಳಕೆಗಾಗಿ ಒಬ್ಬ ರೈತ ಸರಕಾರಿ ಜಮೀನನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡು ನಂತರ ಆ ಜಮೀನನ್ನು ಸಕ್ರಮಗೊಳಿಸಲು 108 ಸಿ (1) ಅಡಿಯಲ್ಲಿ ಕರ್ನಾಟಕ ಭೂ ಕಂದಾಯ ನಿಯಮಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿ ತನ್ನ ಜಮೀನಿಗೆ ಹಕ್ಕುಪತ್ರವನ್ನು ಪಡೆಯುವುದಕ್ಕೆ “ಬಗರ ಹುಕುಂ” ಭೂಮಿ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Student Scholarship- ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ರೂ 25,000 ಸಾವಿರ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ!
Krishna byre gowda- ಡಿಜಿಟಲ್ ಸಾಗುವಳಿ ಚೀಟಿಯಿಂದ ಕಚೇರಿಗಳಿಗೆ ಅಲೆದಾಡುವ ತಾಪತ್ರಯ ತಪ್ಪಲಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬಗರ್ ಹುಕುಂ ಮಂಜೂರಾತಿ ಪಡೆದ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿಯನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇದರಿಂದ ದಾಖಲೆಗಳನ್ನು ಕಳೆದುಕೊಳ್ಳುವ ಮತ್ತು ಕಚೇರಿಗಳಿಗೆ ಅಲೆದಾಡುವ ತಾಪತ್ರಯ ತಪ್ಪಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!
ಇದನ್ನೂ ಓದಿ: Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Bagar Hukum Digital saguvali cheeti-ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ: ಅರ್ಜಿ ವಿಲೇವಾರಿ ಹೇಗೆ ಮಾಡಲಾಗುತ್ತದೆ?
ರೈತರು ಬಗರ್ ಹುಕುಂ ಯೋಜನೆಯಡಿ ತಮ್ಮ ಜಮೀನಿಗೆ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ ಆ ಅರ್ಜಿಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಬಗರ್ ಹುಕುಂ ಸಮಿತಿಯಲ್ಲಿ ಮಂಡನೆ ಮಾಡಲಾಗುತ್ತದೆ ಮಾರ್ಗಸೂಚಿ ಪ್ರಕಾರ ಹಕ್ಕುಪತ್ರ ಪಡೆಯಲು ಅರ್ಹರಿರುವ ರೈತರ ಅರ್ಜಿಯನ್ನು ಈ ಸಮಿತಿ ಸಭೆಯಲ್ಲಿ ಅನುಮೋದನೆ ಮಾಡಿ ರಾಜ್ಯ ಸರಕಾರದ ಪರವಾಗಿ ತಹಶೀಲ್ದಾರರು ಅಧಿಕೃತ ಡಿಜಿಟಲ್ ಸಾಗುವಳಿ ಚೀಟಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿ ಫಲಾನುಭವಿ ರೈತೈಗೆ ಹಸ್ತಾಂತರಿಸುತ್ತಾರೆ.
ಗುಂಡ್ಲುಪೇಟೆ ತಾಲೂಕು, ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಶ್ರೀ ನಂಜುಂಡಯ್ಯ ಬಿನ್ ಹುಚ್ಚಯ್ಯ ಹೆಸರಿನ ರೈತರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ರಾಜ್ಯದಲ್ಲೇ ಮೊದಲ ಡಿಜಿಟಲ್ ಸಾಗುವಳಿ ಚೀಟಿ ಪಡೆದ ಘಳಿಗೆ ಪಾತ್ರರಾಗಿದ್ದಾರೆ.
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲೇ ಮೊದಲ ನೋಂದಣಿ ಮಾಡಿಸಿದ ಡಿಜಿಟಲ್ ಸಾಗುವಳಿ ಚೀಟಿ ಪಡೆದ ಫಲಾನುಭವಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000!
saguvali cheeti vitarane-ಮುಂದಿನ 6 ತಿಂಗಳಲ್ಲಿ ಎಲ್ಲಾ 1.26 ಲಕ್ಷ ಅರ್ಹ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ವಿತರಣೆ ಮಾಡಲಾಗುವುದು: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬಗರ್ ಹುಕುಂ ಯೋಜನೆಯಡಿ ಇಲ್ಲಿಯವರೆಗೆ ಸಲ್ಲಿಕೆಯಾಗಿರುವ ಒಟ್ಟಾರೆ ಅರ್ಜಿಗಳ ಪೈಕಿ 1.26 ಲಕ್ಷ ಅರ್ಜಿದಾರರನ್ನು ಅರ್ಹರು ಎಂದು ಪರೀಶಿಲನೆಯಲ್ಲಿ ಗುರುತಿಸಲಾಗಿದ್ದು. ಮೊದಲ ಹಂತದಲ್ಲಿ ಡಿಸೆಂಬರ್ ತಿಂಗಳು ಮುಕ್ತಾಯವಾಗುವುದರ ಒಳಗೆ ಕನಿಷ್ಟ 5000 ಜನರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿಯನ್ನು ಕಂದಾಯ ಇಲಾಖೆಯಿಂದ ಹಾಕಿಕೊಳ್ಳಲಾಗಿದ್ದು. ಜನವರಿ ತಿಂಗಳ ವೇಳೆಗೆ ಈ ಸಂಖ್ಯೆಯನ್ನು 15 ರಿಂದ 20ಸಾವಿರಕ್ಕೆ ಏರಿಸಲಾಗುವುದು ಎಂದು ಕಂದಾಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದಲ್ಲದೇ, ಮುಂದಿನ 6 ತಿಂಗಳ ಒಳಗಾಗಿ ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ಸಾಗುವಳಿ ಚೀಟಿಯನ್ನು ವಿತರಣೆ ಮಾಡುವ ಯೋಜನೆಯನ್ನು ರೂಪಿಸಲಾಗಿದ್ದು, ಎಲ್ಲರಿಗೂ ಗುಂಡ್ಲುಪೇಟೆ ಮಾದರಿಯಲ್ಲೇ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಯೇ ಹಕ್ಕುಪತ್ರ ನೀಡಲಾಗುವುದು. ಈ ಮೂಲಕ ರೈತರ ಮಾಲೀಕತ್ವಕ್ಕೆ ಸರ್ಕಾರದ ಅಧಿಕೃತ ಮುದ್ರೆ ಒತ್ತಲಾಗುವುದು ಎಂದು ಹೇಳಲು ಸಂತಸವಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.