ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ(Cyclone Details) ಪರಿಣಾಮದಿಂದ ಅಲ್ಪ ಪ್ರಮಾಣದಲ್ಲಿ ಅಲ್ಲಲಿ ಮಳೆಯಾಗುತ್ತಿದ್ದು, ಅಧಿಕ ಉಷ್ಣಾಂಶದ ಪ್ರಭಾವದಿಂದಲೂ ಸಹ ಅನೇಕ ಕಡೆ ಮಳೆ ದಾಖಲಾಗಿರುತ್ತದೆ.
ಕರ್ನಾಟಕ ಮಳೆ ನಕ್ಷೆಯ ಮಾಹಿತಿಯ(Tomorrow Weather Karnataka) ಪ್ರಕಾರ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ದ್ಯಾವನಹಳ್ಳಿ ವ್ಯಾಪ್ತಿಯಲ್ಲಿ ಅತ್ಯಧಿಕ 26 ಮಿಲಿ ಮೀಟರ್ ಮಳೆ ದಾಖಲಾಗಿದ್ದು ಉಳಿದಂತೆ ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಕೆಲವು ಜಿಲ್ಲೆ ಅಲ್ಲಲ್ಲಿ ಮಳೆ ಬಂದಿರುತ್ತದೆ.
ಇದನ್ನೂ ಓದಿ: Milk incentive Amount- ರೈತರಿಗೆ ₹400 ಕೋಟಿ ಹಾಲಿ ಪ್ರೋತ್ಸಾಹಧನ ಪಾವತಿ: ಸಚಿವ ಕೆ.ವೆಂಕಟೇಶ್!
Karnataka Male Munsuchane-ರಾಜ್ಯದಲ್ಲಿ ದಾಖಲಾದ ಮಳೆ ಪ್ರಮಾಣದ ವಿವರ:
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು(KSNDMC) ರಾಜ್ಯದಾದ್ಯಂತ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಳವಡಿಕೆ ಮಾಡಿರುವ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಾಹಿತಿಯ ಪ್ರಕಾರ ನಿನ್ನೆ(07-04-2025)ರಾಜ್ಯದಲ್ಲಿ ದಾಖಲಾದ ಮಳೆ ಪ್ರಮಾಣದ ವಿವರ ಹೀಗಿದೆ:
ಒಟ್ಟು 14 ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗಿರುತ್ತದೆ ಹಾವೇರಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡ, ರಾಮನಗರ, ದಾವಣಗೆರೆ, ಮಂಡ್ಯ, ಹಾಸನ, ಮೈಸೂರು, ಉಡುಪಿ, ಧಾರವಾಡ, ಚಿತ್ರದುರ್ಗ ಮತ್ತು ದಕ್ಷಿಣಕನ್ನಡ.
ಉಳಿದಂತೆ ರಾಯಚೂರು, ಬೆಳಗಾವಿ, ಬಾಗಲಕೊಟೆ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗದಗ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೀದರ್, ಕೊಪ್ಪಳ, ವಿಜಯನಗರ, ಯಾದಗಿರಿ ಜಿಲ್ಲೆಯಲ್ಲಿ ಒಣಹವೆ ಮುಂದುವರೆದಿದೆ.
ಇದನ್ನೂ ಓದಿ: Mobile canteen subsidy-ಫಾಸ್ಟ್ ಫುಡ್ ವಾಹನ ಖರೀದಿಗೆ ₹5 ಲಕ್ಷದ ವರೆಗೆ ಸಬ್ಸಿಡಿ ಪಡೆಯಲು ಅರ್ಜಿ ಅಹ್ವಾನ!
Next 3 days weather in karnataka-ಮುಂದಿನ 3 ದಿನದ ರಾಜ್ಯದ ಮಳೆ ಮುನ್ಸೂಚನೆ:
ಕರ್ನಾಟಕ ಮಳೆ ಮುನ್ಸೂಚನೆ ನಕ್ಷೆಯ ಮಾಹಿತಿಯ ಪ್ರಕಾರವಾಗಿ ರಾಜ್ಯದಲ್ಲಿ ಮುಂದಿನ ಮೂರು ದಿನದ ಮಳೆ ಮುನ್ಸೂಚನೆ ವಿವರ ಹೀಗಿದೆ ರಾಜ್ಯದ ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ನಾಳೆ ಮಳೆ ಸಾಧ್ಯತೆ ಇರುತ್ತದೆ ಉಳಿದಂತೆ ನಾಳೆ ಮತ್ತು ಮರುದಿನ ಬೀದರ್ ಮತು ವಿಜಯಪುರ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಯ ಕೆಲವು ಭಾಗಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.

Tomorrow weather ನಾಳೆ ಬೆಳಗ್ಗೆ(08 ಎಪ್ರಿಲ್ 2025) 8-00 ಗಂಟೆವರೆಗಿನ ರಾಜ್ಯದ ಮಳೆ ಮುನ್ಸೂಚನೆ:
ಕರಾವಳಿ ಜಿಲ್ಲೆಗಳಲ್ಲಿ:
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಸುಳ್ಯ, ಸುಬ್ರಮಣ್ಯ, ಧರ್ಮಸ್ಥಳ ಸುತ್ತಮುತ್ತ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ಕರಾವಳಿಯಲ್ಲಿ ಎಪ್ರಿಲ್ 9ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆಗಳಿವೆ.
ಇದನ್ನೂ ಓದಿ: PM-Kisan 2025: ಪಿಎಂ ಕಿಸಾನ್ ಯೋಜನೆಯಡಿ 10 ಲಕ್ಷ ರೈತರ ಕೈತಪ್ಪಿದ ಆರ್ಥಿಕ ನೆರವು! ಇಲ್ಲಿದೆ ಅಧಿಕೃತ ಪಟ್ಟಿ!
ಮಲೆನಾಡು ಜಿಲ್ಲೆಗಳಲ್ಲಿ:
ಕೊಡಗು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮೋಡ ಸ್ವಲ್ಪ ಜಾಸ್ತಿ ಇರಲಿದ್ದು ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ ಎಪ್ರಿಲ್ 9ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.
ಒಳನಾಡು ಜಿಲ್ಲೆಗಳಲ್ಲಿ:
ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಈಗಿನಂತೆ ಎಪ್ರಿಲ್ 10ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಸಾಧ್ಯತೆಗಳು ಗೋಚರಿಸುತ್ತಿವೆ.
ಇದನ್ನೂ ಓದಿ: Bescom Helpline-ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗೆ ಜಿಲ್ಲಾವಾರು ಸಹಾಯವಾಣಿ ಬಿಡುಗಡೆ!
Karnataka Cyclone Details-ವಾಯುಭಾರ ಕುಸಿತದ ವಿವರ ಹೀಗಿದೆ:
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದರಿಂದ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಮಾಣವು ಕಡಿಮೆಯಾಗಿದ್ದರಿಂದ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ವಾಯುಭಾರ ಕುಸಿತ ಚಲಿಸುವ ದಿಕ್ಕಿನ ಸ್ಪಷ್ಟತೆ ಸಿಗಬಹುದು.
ಮಾಹಿತಿ ಕೃಪೆ: ಸಾಯಿಶೇಖರ್ ಬಿ& KSNDMC, Bengalore