ಪ್ರತಿಯೊಬ್ಬ ನಾಗರಿಕನು ವಿವಿಧ ಹಂತಗಳಲ್ಲಿ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಹಣ ನಿಮ್ಮ ಬಳಿ ಇಲ್ಲದಿದ್ದಾಗ ಬ್ಯಾಂಕ್ ಮೂಲಕ ಸಾಲ(bank loan) ಪಡೆಯುವಾಗ ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ತಪ್ಪದೆ ಅನುಸರಿಸಿ.
ಸಾರ್ವಜನಿಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ(Education loan), ಮನೆ ಕಟ್ಟಲು(home loan), ವಾಹನ ಖರೀದಿಸಲು(car loan), ಸ್ವಂತ ಬಿಸಿನೆಸ್(business loan) ಮಾಡಲು ಅಥವಾ ವೈಯಕ್ತಿಕ ಸಾಲವನ್ನು(personal loan) ಪಡೆಯಲು ಬ್ಯಾಂಕ್ ಗಳ ಮೊರೆ ಹೋಗುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಅಗತ್ಯವಾಗಿ ಅನುಸರಿಸಬೇಕಾದ ಕ್ರಮಗಳನ್ನು ಕೆಳಗೆ ವಿವರಿಸಲಾಗಿದೆ.
Bank loan tips-ಬ್ಯಾಂಕ್ ಗಳ ಮೂಲಕ ಸಾಲವನ್ನು ಪಡೆಯುವಾಗ ತಪ್ಪದೇ ಅನುಸರಿಸಬೇಕಾದ ಅಂಶಗಳು:
1) ಬಡ್ಡಿದರ ಹೋಲಿಕೆ ಮಾಡುವುದು.
2) ಸಾಲದ ಅಗತ್ಯತೆ ಬಗ್ಗೆ ನಿರ್ಣಯಿಸುವುದು.
3) ಮರುಪಾವತಿ ಸಾಮರ್ಥ್ಯದ ಕುರಿತು ಯೋಜನೆ ರೂಪಿಸುವುದು.
4) Credit Score Check ಮಾಡಿಕೊಳ್ಳುವುದು.
5) ಉತ್ತಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವುದು.
Bank loan interest rates-ಬಡ್ಡಿದರ ಹೋಲಿಕೆ ಮಾಡುವುದು:
ನೇರವಾಗಿ ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಸಾಲ ಪಡೆಯುವುದಕ್ಕಿಂತ ಮೊದಲು ನಿಮ್ಮ ಹಳ್ಳಿಗೆ ಹತ್ತಿರದಲ್ಲಿರುವ ನಗರ ಪ್ರದೇಶದ 4 ಅಥವಾ 5 ಬ್ಯಾಂಕ್ ಶಾಖೆಗಳನ್ನು ಭೇಟಿ ಮಾಡಿ ಎಲ್ಲಾ ಬ್ಯಾಂಕಿನ ಬಡ್ಡಿ ದರವನ್ನು ಪಟ್ಟಿ ಮಾಡಿ ಕಡಿಮೆ ಬಡ್ಡಿ ನಿಗದಿಪಡಿಸುವ ಬ್ಯಾಂಕನ್ನು ಆಯ್ಕೆ ಮಾಡಿಕೊಂಡು ಆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯುವುದು.
ಇದನ್ನೂ ಓದಿ: Money saving tips- ನಿಮ್ಮ ಬಳಿ ಹಣ ಉಳಿಯುತ್ತಿಲ್ಲವೇ? ಇಲ್ಲಿದೆ ಹಣ ಉಳಿತಾಯಕ್ಕೆ ಸೂಕ್ತ ಸಲಹೆಗಳು!
ಸಾಲದ ಅಗತ್ಯತೆ ಬಗ್ಗೆ ನಿರ್ಣಯಿಸುವುದು:
ನೀವು ಯಾವ ಉದ್ದೇಶಕ್ಕೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ನಿರ್ಧರಿಸಿದ್ದೀರೋ ಆ ಕೆಲಸಕ್ಕೆ ಎಷ್ಟು ಹಣ ಅವಶ್ಯಕತೆ ಇದೆ ಎಂದು ಮುಂಚಿತವಾಗಿ ಮೌಲ್ಯಮಾಪನ ಮಾಡಿಕೊಂಡು ಅದಕ್ಕೆ ಎಷ್ಟು ಹಣ ಅವಶ್ಯಕವಿರುತ್ತದೆಯೋ ಅಷ್ಟೇ ಸಾಲವನ್ನು ಬ್ಯಾಂಕ್ ಮೂಲಕ ಪಡೆಯಲು ನಿರ್ಣಯಿಸುವುದು.
Bank loan installment- ಮರುಪಾವತಿ ಸಾಮರ್ಥ್ಯದ ಕುರಿತು ಯೋಜನೆ ರೂಪಿಸುವುದು:
ಇಂತಿಷ್ಟು ಸಾಲವನ್ನು ಪಡೆಯಲು ಅಂತಿಮ ನಿರ್ಧಾರವನ್ನು ಕೈಗೊಂಡ ಬಳಿಕ ಆ ಸಾಲವನ್ನು ಬ್ಯಾಂಕಿಗೆ ಎಷ್ಟು ತಿಂಗಳ ಒಳಗಾಗಿ ಮರುಪಾವತಿ ಮಾಡಬೇಕೆಂದು ಮುಂಚಿತವಾಗಿ ವಿಸ್ತೃತ ಯೋಜನೆಯನ್ನು ರೂಪಿಸಿಕೊಳ್ಳುವುದು. ಬ್ಯಾಂಕ್ ನಿಂದ ಸಾಲ ಪಡೆದ ನಂತರ ಪ್ರತಿ ತಿಂಗಳು ತಪ್ಪದೇ ಸಾಲದ ಕಂತನ್ನು ಪಾವತಿ ಮಾಡಬೇಕು. ಒಂದೊಮ್ಮೆ ಪ್ರತಿ ತಿಂಗಳ ಸಮಯಕ್ಕೆ ಸರಿಯಾಗಿ ಪಾವತಿ ಮಾಡದಿದ್ದಲ್ಲಿ ಹೆಚ್ಚುವರಿ ಬಡ್ಡಿದರವನ್ನು ವಿನಾಕಾರಣ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ ತಪ್ಪದೇ ಪ್ರತಿ ತಿಂಗಳು ಪಾವತಿ ಮಾಡುವ ಕುರಿತು ಯೋಜನೆಯನ್ನು ಹಾಕಿಕೊಳ್ಳಿ.
Credit Score Check ಮಾಡಿಕೊಳ್ಳುವುದು:
ಯಾವುದೇ ಬ್ಯಾಂಕ್ ನಿಂದ ಸಾರ್ವಜನಿಕರು ವಿವಿಧ ಬಗೆಯ ಅಂದರೆ bike loan, car loan, education loan, personal loan, home loan,ಪಡೆಯಲು ಬ್ಯಾಂಕ್ ಮಾರ್ಗಸೂಚಿ ಪ್ರಕಾರ ಇಂತಿಷ್ಟು Credit Score ಹೊಂದಿರುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನಿಮ್ಮ Credit Score ಎಷ್ಟಿದೆ ಎಂದು ಚೆಕ್ ಮಾಡಿಕೊಳ್ಳುವುದು.
ಉತ್ತಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವುದು:
ಗ್ರಾಹಕರೇ ಒಮ್ಮೆ ನೀವು ಸಾಲವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಿದಾಗ ಯಾವ ಬ್ಯಾಂಕ್ ನಿಂದ ಸಾಲವನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಸಹ ಜಾಗ್ರತೆಯಿಂದ ನಿರ್ಣಯ ಕೈಗೊಳ್ಳಬೇಕು. ಏಕೆಂದರೆ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ಶುಲ್ಕವನ್ನು ನೀವು ಪಡೆಯುವ ಸಾಲಕ್ಕೆ ಪಾವತಿಸಬೇಕಾಗುತ್ತದೆ. ಆದ್ದರಿಂದ ಕಡಿಮೆ ಶುಲ್ಕ ವಿಧಿಸುವ ಮತ್ತು ಉತ್ತಮ ಗ್ರಾಹಕ ಸ್ನೇಹಿ ಸೇವೆಯನ್ನು ನೀಡುವ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.
ಇದನ್ನೂ ಓದಿ: Land Mutation-ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಲು ವೆಬ್ಸೈಟ್ ಬಿಡುಗಡೆ!
Bank loan EMI calculator-ನಿಮ್ಮ ಮೊಬೈಲ್ ನಲ್ಲಿ EMI ಲೆಕ್ಕಾಚಾರ ಹಾಕುವ ವಿಧಾನ:
ಸಾರ್ವಜನಿಕರು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲಿ ನೀವು ಪಡೆಯುವ ಒಟ್ಟು ಸಾಲಕ್ಕೆ ಪ್ರತಿ ತಿಂಗಳು ಎಷ್ಟು EMI ಕಟ್ಟಬೇಕೆಂದು ಚೆಕ್ ಮಾಡಿಕೊಳ್ಳಬಹುದು.
Step 1: ಮೊದಲಿಗೆ ಈ EMI calculator link ಮೇಲೆ click ಮಾಡಿ ಅಧಿಕೃತ Bajaj Finance EMI calculator website ನ್ನು ಭೇಟಿ ಮಾಡಬೇಕು.
Step 2: ಈ Page ನಲ್ಲಿ ಕಾಣುವ Calculate your personal loan EMIs ನಲ್ಲಿ ಒಟ್ಟು ನೀವು ಪಡೆಯಬೇಕೆಂದು ನಿರ್ಧರಿಸುವ ಸಾಲದ ಮೊತ್ತವನ್ನು ಅಥವಾ Loan Amount ಅನ್ನು ಹಾಕಬೇಕು. ತದನಂತರ ಕೆಳಗಿನ ಆಯ್ಕೆಯಲ್ಲಿ ಎಷ್ಟು ತಿಂಗಳಲ್ಲಿ ಈ ಸಾಲವನ್ನು ಹಿಂತಿರುಗಿಸುತ್ತೀರಿ ಎಂದು ಹಾಕಬೇಕು ಬಳಿಕ ಕೊನೆಯ ಕಾಲ Rate of Intrest ನಲ್ಲಿ ಬ್ಯಾಂಕಿನ ಬಡ್ಡಿದರವನ್ನು ನಮೂದಿಸಿದರೆ ನೀವು ಪ್ರತಿ ತಿಂಗಳು ಎಷ್ಟು ಹಣವನ್ನು ಕಟ್ಟಬೇಕು ಎಂದು ತೋರಿಸುತ್ತದೆ.
ಇದನ್ನೂ ಓದಿ: Ration card list-2024: 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ! ಇಲ್ಲಿದೆ ರದ್ದಾದ ರೇಷನ್ ಕಾರ್ಡ ಪಟ್ಟಿ!
ನೀವು ಪಡೆದ ಸಾಲವನ್ನು ತ್ವರಿತವಾಗಿ ಮರುಪಾವತಿ ಮಾಡಲು ಈ ಕ್ರಮಗಳನ್ನು ಅನುಸರಿಸಿ:
ಸಾರ್ವಜನಿಕರ ಒಮ್ಮೆ ಬ್ಯಾಂಕ್ ಮೂಲಕ ವಿವಿಧ ಉದ್ದೇಶಗಳಿಗೆ bike loan,car loan,education loan,personal loan,home loan,ಗಳನ್ನು ತೆಗೆದುಕೊಂಡಾಗ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ತಿಂಗಳುಗಳನ್ನು ಬಳಕೆ ಮಾಡಿಕೊಂಡು ಸಾಲವನ್ನು ಮರಳಿ ಬ್ಯಾಂಕಿಗೆ ಮರುಪಾವತಿ ಮಾಡಿದರೆ ಕಡಿಮೆ ಬಡ್ಡಿದರ ಬೀಳುತ್ತದೆ.
ತ್ವರಿತವಾಗಿ ಅಥವಾ ಕಡಿಮೆ ಕಂತುಗಳನ್ನು ಕಟ್ಟಿ ಸಾಲವನ್ನು ಮರುಪಾವತಿ ಮಾಡಲು ಯಾವ ಕ್ರಮವನ್ನು ಅನುಸರಿಸಬೇಕೆಂದು ತಿಳಿಯೋಣ.
ಉದಾಹರಣೆಗೆ ಹೇಳುವುದಾದರೆ ನೀವು ಬ್ಯಾಂಕ್ನಿಂದ ಆರು ಲಕ್ಷ ಸಾಲವನ್ನು 60 ತಿಂಗಳ ಅವಧಿಗೆ ಪಡೆದಿದ್ದೀರಾ ಎಂದುಕೊಳ್ಳೋಣ. ಇದಕ್ಕೆ ಪ್ರತಿ ತಿಂಗಳು 12500/- ರೂ EMI ಕಂತು ಪಾವತಿ ಮಾಡುವುದಿದ್ದರೆ ನೀವು ಇದಕ್ಕೆ ಎಷ್ಟು ಸಾಧ್ಯವೋ ಅಷ್ಟು ಅಧಿಕ ಹಣವನ್ನು ಸೇರ್ಪಡೆ ಮಾಡಿ EMI ಕಂತನ್ನು ಪ್ರತಿ ತಿಂಗಳು ಪಾವತಿ ಮಾಡಿದರೆ 60 ತಿಂಗಳ ಒಳಗಾಗಿಯೇ ನಿಮ್ಮ 6 ಲಕ್ಷ ಸಾಲ ತೀರುತ್ತದೆ.