ರಾಜ್ಯ ಸರ್ಕಾರದಿಂದ ರೈತರಿಗೆ(Farmers) ಯುಗಾದಿ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಕೃಷಿಕರಿಗೆ(Agriculture Loan) ಸಹಕಾರಿ ಸಂಘದಲ್ಲಿ ಯಾವುದೇ ಬಡ್ಡಿ ಇಲ್ಲದೇ ಕೃಷಿ ಸಾಲವನ್ನು ನೀಡಲು ನೂತನ ಘೋಷಣೆಯನ್ನು ಮಾಡಲಾಗಿದೆ.
ಕೃಷಿಕರಿಗೆ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಸೊಸೈಟಿಗಳ ಮೂಲಕ ಈಗಾಗಲೇ ಶೂಲ್ಯ ಬಡ್ಡಿದರದಲ್ಲಿ(agriculture loan interest) ಸಾಲವನ್ನು ವಿತರಣೆಯನ್ನು ಮಾಡಲಾಗುತ್ತಿದ್ದು ಇದರ ಜೊತೆಯಲ್ಲಿ ಇನ್ನು ಮುಂದೆ ಮತ್ತೊಂದು ಬಾಂಕ್ ಮೂಲಕವು ಸಹ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: Yashaswini Card-2025: ಯಶಸ್ವಿನಿ ಕಾರ್ಡ ಪಡೆಯಲು ಇನ್ನು 10 ದಿನ ಮಾತ್ರ ಅವಕಾಶ!
ಪ್ರಸ್ತುತ ರಾಜ್ಯ ಸರ್ಕಾರದಿಂದ ಯಾವೆಲ್ಲ ಬ್ಯಾಂಕ್ ನಲ್ಲಿ(PLD bank) ರೈತರಿಗೆ ಶೂನ್ಯ ಬಡ್ದಿದರದಲ್ಲಿ ಸಾಲವನ್ನು ನೀಡಲಾಗುತ್ತದೆ? ಶೂನ್ಯ ಬಡ್ಡಿದರದಲ್ಲಿ ಎಷ್ಟ ಲಕ್ಷದವರೆಗೆ ರೈತರ ಸಾಲವನ್ನು ಪಡೆಯಬಹುದು? ಸಾಲ ಸೌಲಭ್ಯವನ್ನು ಪಡೆಯಲು ನಿಗದಿಪಡಿಸಿರುವ ಮಾನದಂಡಗಳೇನು? ಇತ್ಯಾದಿ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.
ಇನ್ನು ಮುಂದೆ ಪಿ.ಎಲ್.ಡಿ (PLD Bank) ಬ್ಯಾಂಕ್ ನಲ್ಲಿ ಸಿಗಲಿದೆ ಬಡ್ಡಿರಹಿತ ಸಾಲ:
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಈಗಾಗಲೇ ಗ್ರಾಮೀಣ ಭಾಗದ ಸೊಸೈಟಿಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ಅರ್ಹತೆ ಅನುಗುಣವಾಗಿ ರೈತರಿಗೆ ನೀಡಲಾಗುತ್ತಿದ್ದು, ಇದೇ ಮಾದರಿಯಲ್ಲಿ ಇನ್ನು ಮುಂದೆ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್(PLD Bank) ನಲ್ಲಿಯು ಸಹ ₹5 ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೇ ರೈತರು ಸಾಲವನ್ನು ತೆಗೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Agriculture Loan-13,689 ರೈತರ ಖಾತೆಗೆ ಶೂನ್ಯ ಬಡ್ಡಿದರದಲ್ಲಿ ₹589 ಕೋಟಿ ಸಾಲ!
Agriculture Loan Interest Scheme-ಹೆಚ್ಚುವರಿಯಾಗಿ 38 ಕೋಟಿ ರೂ. ಮೀಸಲು: ಮುಖ್ಯಮಂತ್ರಿ ಸಿದ್ದರಾಮಯ್ಯ
ಹವಾಮಾನ ವೈಪರೀತ್ಯ, ಅನಿಶ್ಚಿತ ಫಸಲು ಹಾಗೂ ರೋಗರುಜಿನಗಳಿಂದ ತತ್ತರಿಸಿಹೋಗಿರುವ ಕೃಷಿ ಕ್ಷೇತ್ರದಲ್ಲಿ ಮತ್ತೆ ಉತ್ಸಾಹವನ್ನು ಕಾಣಲು ನಮ್ಮ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಅನ್ನದಾತರ ಕೈಗಳಿಗೆ ಹಣ ನೀಡಿ ಅದನ್ನು ಕೃಷಿಯಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿ, ಆ ಮೂಲಕ ನಾಡಿನ ಆರ್ಥಿಕತೆಗೆ ಬಲತುಂಬುವುದು ನಮ್ಮ ಸರ್ಕಾರದ ಆಶಯ.
5 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿ ರೂಪದಲ್ಲಿ ನೀಡಲಾಗುವ ಸಾಲವನ್ನು ಸಹಕಾರಿ ಕೃಷಿ ಬ್ಯಾಂಕ್ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಿಗೆ ವಿಸ್ತರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 38 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದ್ದು, ರೈತರ ಕಾಳಜಿ ಎನ್ನುವುದು ನಮ್ಮ ಭಾಷಣದ ಸರಕಲ್ಲ, ಆಡಳಿತದ ಕೇಂದ್ರಬಿಂದು ಎಂಬುದನ್ನು ಮತ್ತೆ ಸಾಬೀತು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Land Conversion-ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಚಿವ ಕೃಷ್ಣಬೈರೇಗೌಡ

How To Apply For Agriculture Loan-ರೈತರು ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ಪಡೆಯುವುದು ಹೇಗೆ?
ರೈತರು ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಖಾಸಗಿ ವಲಯದಲ್ಲಿ ಸಾಲವನ್ನು ಮಾಡಿ ಅಧಿಕ ಬಡ್ಡಿಯನ್ನು ಕಟ್ಟುವುದನ್ನು ತಪ್ಪಿಸಲು ಸಹಕಾರಿ ಬ್ಯಾಂಕ್ ನಲ್ಲಿ ಬಡ್ಡಿ ರಹಿತವಾಗಿ ಕೃಷಿ ಸಾಲವನ್ನು ಪಡೆಯಲು ಅವಕಾಶವಿದ್ದು ಒಟ್ಟು ಲಭ್ಯವಿರುವ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ ಸಾಲವನ್ನು ನೀಡಲಾಗುತ್ತದೆ.
ಸಾಲವನ್ನು ಪಡೆಯಲು ಆಸಕ್ತ ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್(PLD Bank) ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಆ ಶಾಖೆಯ ಮ್ಯಾನೇಜರ್ ಅವರ ಬಳಿ ಅರ್ಜಿಯನ್ನು ಸಲ್ಲಿಸಿಬೇಕು.
ಇದನ್ನೂ ಓದಿ: Diploma Certificate Courses-ಕೃಷಿ ವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವ ಅರ್ಜಿ ಆಹ್ವಾನ!
Agriculture Loan Eligibility-ಸಾಲ ಪಡೆಯಲು ಜಾರಿಯಲ್ಲಿರುವ ನಿಯಮಗಳು:
ರೈತರು ಕೃಷಿ ಸಾಲವನ್ನು ಪಡೆಯಲು ಈ ಕೆಳಗಿನ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ ಈ ನಿಯಮಗಳನ್ನು ಪಾಲನೆ ಮಾಡದ್ದಿದ್ದಲ್ಲಿ ಅಂತಹ ರೈತರಿಗೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಒಂದು ಜಮೀನಿನ ಪಹಣಿ/RTC ಅನ್ನು ಬ್ಯಾಂಕ್ ನಲ್ಲಿ ಸಲ್ಲಿಸಿ ಕೇವಲ ಒಂದು ಬ್ಯಾಂಕ್ ನಲ್ಲಿ ಮಾತ್ರ ಕೃಷಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ ಒಂದೊಮ್ಮೆ ಈಗಾಗಲೇ ಬೇರೆ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದಿದ್ದಲ್ಲಿ ಆ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮರು ಪಾವತಿ ಮಾಡಿದ ಬಳಿಕವೇ ಮತ್ತೊಂದು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಾಧ್ಯ.
ಒಂದು ವೇಳೆ ಜಂಟಿ ಖಾತೆ ಇದ್ದರೆ ಜಂಟಿ ಮಾಲೀಕರ ಒಪ್ಪಿಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಇದನ್ನೂ ಓದಿ: Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!
Documents For Agriculture Loan-ಸಾಲ ಪಡೆಯಲು ಒದಗಿಸಬೇಕಾದ ದಾಖಲಾತಿಗಳು:
1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಪಾನ್ ಕಾರ್ಡ ಪ್ರತಿ
3) ಪೋಟೋ
4) ಜಮೀನಿನ ದಾಖಲೆಗಳು(ಪಹಣಿ/RTC/ಹಿಡುವಳಿ ಇತ್ಯಾದಿ)
5) ಬ್ಯಾಂಕ್ ಪಾಸ್ ಬುಕ್ ಪ್ರತಿ