1st installment-ಮೊದಲ ಕಂತಿನ ರೂ 2,000 ಹಣ ಬರ ಪರಿಹಾರ‍ ವರ್ಗಾವಣೆ ಪ್ರಾರಂಭ! ನಿಮಗೆ ಜಮಾ ಅಗಿದಿಯಾ? ಚೆಕ್ ಮಾಡಿ.

Bara parihara status-ಯಾರಿಗೆಲ್ಲ ಬರ ಪರಿಹಾರ ಸಿಗಲಿದೆ? ಈ ಪರಿಹಾರದ ಹಣ ಪಡೆಯಲು ಏನು ಮಾಡಬೇಕು? ಯಾವೆಲ್ಲ ಮಾಹಿತಿ ಸರಿಯಾಗಿದ್ದರೆ ನಿಮಗೆ ಹಣ ಜಮಾ ಅಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ರಾಜ್ಯ ಸರಕಾರದಿಂದ ಅರ್ಹ ರೈತರಿಗೆಗೆ ಮೊದಲ ಕಂತಿನ ಬರ ಪರಿಹಾರದ ಹಣವನ್ನು ವರ್ಗಾವಣೆ ಕಾರ್ಯವು ಪ್ರಾರಂಭವಾಗಿದೆ.

FID ಸಂಖ್ಯೆ ಹೊಂದಿರುವ ಅರ್ಹ ರೈತರ ಖಾತೆಗೆ ಮೊದಲ ಕಂತಿನ ರೂ 2,000 ಹಣ ವರ್ಗಾವಣೆ ಪಕ್ರಿಯೆಯು ಆರಂಭವಾಗಿದೆ ಎಂದು ರಾಜ್ಯ ಸರಕಾರದ ವಾರ್ತಾ ಇಲಾಖೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಯಾರಿಗೆಲ್ಲ ಬರ ಪರಿಹಾರ ಸಿಗಲಿದೆ? ಈ ಪರಿಹಾರದ ಹಣ ಪಡೆಯಲು ಏನು ಮಾಡಬೇಕು? ಯಾವೆಲ್ಲ ಮಾಹಿತಿ ಸರಿಯಾಗಿದ್ದರೆ ನಿಮಗೆ ಹಣ ಜಮಾ ಅಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: LPG cylinder Ekyc-ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ಡಿ,31 ರ ಒಳಗಾಗಿ ಇ-ಕೆವೈಸಿ ವೈರಲ್ ಸುದ್ದಿ ಕುರಿತು ಅಧಿಕಾರಿಗಳಿಂದ ಸ್ಪಷ್ಟನೆ!

(1) FID ನಂಬರ್ ಕಡ್ಡಾಯ:

ಬರ ಪರಿಹಾರ ಪಡೆಯಲು ಎಲ್ಲಾ ರೈತರು ತಪ್ಪದೇ ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ FID ನಂಬರ್ ರಚನೆ ಮಾಡಿಕೊಂಡ ರೈತರಿಗೆ ಮಾತ್ರ ಈ ಪರಿಹಾರದ ಹಣ ಸಿಗಲಿದೆ ಅದ್ದರಿಂದ ಜಮೀನು ಹೊಂದಿರುವ ಎಲ್ಲಾ ರೈತರು ತಪ್ಪದೇ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ನೀಡಿ FID ನಂಬರ್ ರಚನೆ ಮಾಡಿಕೊಳ್ಳಿ.

ನಿಮ್ಮ ಆಧಾರ್ ನಂಬರ್ ಹಾಕಿ ನಿಮ್ಮ FID ನಂಬರ್ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: Find FID number

ಇದನ್ನೂ ಓದಿ: Secondary agriculture-ಕೃಷಿ ಇಲಾಖೆಯಿಂದ ಶೇ 50 ಸಬ್ಸಿಡಿಯಲ್ಲಿ ನರ್ಸರಿ ಸೇರಿದಂತೆ ಹಲವು ಯೋಜನೆಗೆ ಅರ್ಜಿ  ಆಹ್ವಾನ!

(2) Aadhar link-ಆಧಾರ್ ಲಿಂಕ್ ಕಡ್ಡಾಯ:

ರೈತರು ಸರಕಾರದ ಯಾವುದೇ ಸಹಾಯಧನ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಅಗಲು ಆಧಾರ್ ಲಿಂಕ್/NPCI ಮ್ಯಾಪಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇದ್ದರೆ ಮಾತ್ರ ನಿಮಗೆ ಬರ ಪರಿಹಾರದ ಹಣ ಜಮಾ ಅಗಲಿದೆ. ಈ ಸಂಬಂಧ ರೈತರು ಮರೆಯದೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಕೊಳ್ಳಿ.

ಈಗಾಗಲೇ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಲು ವೆಬ್ಸೈಟ್ ಲಿಂಕ್: aadhar link status

(3) bara parihara status-ರೂ 2,000 ಬರ ಪರಿಹಾರ ಚೆಕ್ ಮಾಡುವ ವಿಧಾನ:

ರೈತರು ತಮ್ಮ ಬ್ಯಾಂಕ್ ಖಾತೆಗೆ ಮೊದಲ ಕಂತಿನ ರೂ 2,000 ಜಮಾ ಅಗಿರುವುದನ್ನು ಚೆಕ್ ಮಾಡಲು ಎರಡು ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.

ವಿಧಾನ-1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ> bank balance check  ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಬ್ಯಾಂಕ್ ನ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ರೂ 2,000 ಬರ ಪರಿಹಾರ ವರ್ಗಾವಣೆ ಅಗಿರುವುದನ್ನು ಚೆಕ್ ಮಾಡಬವುದು.

ಇದನ್ನೂ ಓದಿ: Ration card list-2023: ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ!

ವಿಧಾನ-2: ರಾಜ್ಯ ಸರಕಾರದ ವಿವಿಧ ಯೋಜನೆಗಳ ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾವಣೆಯಾದ ಹಣದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು DBT karnataka ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ರೈತರು DBT karnataka app ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಹಣ ವರ್ಗಾವಣೆ ಅಗಿರುವುದನ್ನು ಚೆಕ್ ಮಾಡಿಕೊಳ್ಳಬವುದು.

ಮೊದಲ ಕಂತಿನ ರೂ 2,000 ವರ್ಗಾವಣೆ ಕುರಿತು ವಾರ್ತಾ ಇಲಾಖೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ವಿವರ ಹೀಗಿದೆ:

ರಾಜ್ಯ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ಮೊದಲ ಕಂತಿನ ಪರಿಹಾರ ₹ 2000 ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಎನ್‌ಡಿಆರ್‌ಎಫ್‌ನಿಂದ ಬರ ಪರಿಹಾರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಶೀಘ್ರ ಪರಿಹಾರ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಬರ ಪರಿಹಾರಕ್ಕಾಗಿ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ಸೆಪ್ಟೆಂಬರ್‌ 22ರಂದು ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಆ ಬಳಿಕ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: Ayushman Bharat Yojana: ಈ ಕಾರ್ಡ ನಿಮ್ಮ ಬಳಿಯಿದ್ದಲ್ಲಿ 5 ಲಕ್ಷದವರೆಗೆ ಅರ್ಥಿಕ ನೆರವು ಪಡೆಯಬವುದು!