ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಬರಗಾಲ ಘೋಷಣೆ ಕೇಂದ್ರಕ್ಕೆ ಪತ್ರ! ಅರ್ಹ ತಾಲ್ಲೂಕು ಯಾವುವು?

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳನ್ನು ಹೊರತುಪಡಿಸಿ ಉಳಿದೆಲ್ಲ ತಿಂಗಳಲ್ಲಿ ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುತ್ತದೆ ರಾಜ್ಯ ಸರಕಾರವು ಬರಗಾಲ  ಘೋಷಣೆಗೆ ಮಾನದಂಡ ಸಡಿಲಿಕೆಗೆ ಪತ್ರ ಪರೆದಿದ್ದು ಇನ್ನು ಕೆಲವೆ ದಿನಗಳಲ್ಲಿ ಬರಗಾಲ ಪೀಡಿತ ಪ್ರದೇಶ ಘೋಷಣೆ ಮಾಡಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಥಿಯಲ್ಲಿ ಕೃಷಿ ಸಚಿವರು ತಿಳಿಸಿದ್ದಾರೆ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳನ್ನು ಹೊರತುಪಡಿಸಿ ಉಳಿದೆಲ್ಲ ತಿಂಗಳಲ್ಲಿ ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುತ್ತದೆ ರಾಜ್ಯ ಸರಕಾರವು ಬರಗಾಲ  ಘೋಷಣೆಗೆ ಮಾನದಂಡ ಸಡಿಲಿಕೆಗೆ ಪತ್ರ ಪರೆದಿದ್ದು ಇನ್ನು ಕೆಲವೆ ದಿನಗಳಲ್ಲಿ ಬರಗಾಲ ಪೀಡಿತ ಪ್ರದೇಶ ಘೋಷಣೆ ಮಾಡಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಥಿಯಲ್ಲಿ ಕೃಷಿ ಸಚಿವರು ತಿಳಿಸಿದ್ದಾರೆ.

ಬರಗಾಲ ಘೋಷಣೆ ಮತ್ತು ತಾಲ್ಲೂಕುಗಳ ಆಯ್ಕೆ ಹೇಗೆ ಮಾಡಲಾಗುತ್ತದೆ? ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ? ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದರಿಂದ ಆ ಭಾಗದ ರೈತರಿಗೆ ಯಾವೆಲ್ಲ ಅರ್ಥಿಕ ನೆರವು ದೊರೆಯಲಿದೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. 

ಬರಗಾಲ ಘೋಷಣೆಗೆ ಪ್ರದೇಶಗಳ ಆಯ್ಕೆಗೆ ಮಾನದಂಡಗಳೇನು? 

ಬರಗಾಲ ಘೋಷಣೆ ಮಾಡುವಾಗ ನಿರ್ಧಿಷ್ಟ ಪ್ರದೇಶ/ತಾಲ್ಲೂಕಿನಲ್ಲಿ ಹವಾಮಾನದ ಬರಗಾಲವನ್ನು ನಿರೀಕ್ಷಿತ ಅಥವಾ ಸಾಮಾನ್ಯ ಮಟ್ಟದಿಂದ ದೀರ್ಘಾವಧಿಯ ಅವಧಿಯಲ್ಲಿ ಮಳೆಯ ಕೊರತೆ ಎಂದು ಉಲ್ಲೇಖಿಸಲಾಗುತ್ತದೆ. ಹವಾಮಾನದ ಬರವು ಸಾಮಾನ್ಯವಾಗಿ ಇತರ ರೀತಿಯ ಬರಗಾಲಕ್ಕೆ ಮುಂಚಿತವಾಗಿರುತ್ತದೆ ಮತ್ತು ಒಂದು ಪ್ರದೇಶದಲ್ಲಿ ಪಡೆದ ಮಳೆಯು ಮತ್ತು ದೀರ್ಘಾವಧಿಯ ಸರಾಸರಿ ಮೌಲ್ಯವು 25% ಕ್ಕಿಂತ ಕಡಿಮೆಯಿರುವಾಗ ಬರಗಾಲಕ್ಕೆ ಒಳಪಡುವುದಿಲ್ಲ ಎಂದು ಹೇಳಲಾಗುತ್ತದೆ.

ನಿಗದಿತ ಪ್ರದೇಶದಲ್ಲಿ ಶೇ.26-50ರಷ್ಟು ಮಳೆ ಕೊರತೆಯಾದರೆ ಮಧ್ಯಮ ಬರ ಮತ್ತು ಸಾಮಾನ್ಯಕ್ಕಿಂತ ಶೇ.50ರಷ್ಟು ಕೊರತೆ ಅದರೆ ತೀವ್ರ ಬರ ಎಂದು ಆಯ್ಕೆಗೆ ತೆಗೆದುಕೊಳ್ಳಲಾಗುತ್ತದೆ. 

ಇದನ್ನೂ ಓದಿ: Ration card correction guidelines- ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಯಾವೆಲ್ಲ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿ ಬಿಡುಗಡೆ!

ಒಂದು ವಾರ ಮಳೆ ಬಾರದಿದ್ದರೆ ಬರ ಘೋಷಣೆಗೆ ಚಿಂತನೆ:

ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಸರಿಯಾಗಿ ಮಳೆ ಬಂದಿರುವುದಿಲ್ಲ ಜುಲೈನಲ್ಲಿ ಮುಂಗಾರು ಸ್ವಲ್ಪ ಚೇತರಿಕೆ ಕಂಡಿತ್ತು ನಂತರ ಮತ್ತೆ ತೀವ್ರ ಮಳೆ ಕೊರತೆ ಉಂಟಾಗಿದ್ದು, ಇನ್ನು ಒಂದು ವಾರ ಮಳೆ ಬಾರದೇ ಇದ್ದರೆ ಬರಗಾಲ ಘೋಷಣೆ ಚಿಂತನೆ ಮಾಡಲಾಗುವುದು ಎಂದು ಕೃಷಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. 

ಈ ಕುರಿತು  ಕೃಷಿ ಆಯುಕ್ತರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವರು "ಕೇಂದ್ರದ ನಿಯಮಗಳ ಪ್ರಕಾರ ಸತತ ಮೂರು ವಾರ ಶೇ. 60ಕ್ಕಿಂತ ಕಡಿಮೆ ಮಳೆಯಾದ ಪ್ರದೇಶವನ್ನು ಮಾತ್ರ ಬರಗಾಲದ ಪ್ರದೇಶ ಎಂದು ಘೋಷಣೆ ಮಾಡಬಹುದು. ಈ ಒಂದು ನಿಯಮದಿಂದ ಹೆಚ್ಚಿನ ರೈತರಿಗೆ ಅನುಕೂಲವಾಗುವುದಿಲ್ಲ. ಈ ಎಲ್ಲಾ ಕಾರಣದಿಂದ ಮಾರ್ಗಸೂಚಿಯಲ್ಲಿ ಶೇಕಡಾ ಮಳೆಯ ಪ್ರಮಾಣವನ್ನು 30ಕ್ಕೆ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಉತ್ತರದ ನಿರೀಕ್ಷೆಯಲ್ಲಿದ್ದೇವೆ. ಉತ್ತರ ಬಾರದೇ ಇದ್ದರೆ ಮುಂದೆ ಹಳೆ ನಿಯಮದಂತೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಪ್ರಸುತ್ತ 2009 ರ ಬರಗಾಲದ ಮಾರ್ಗಸೂಚಿಯನ್ವಯ ಬರಗಾಲದ ಆರಂಭಿಕ ನಿರ್ಣಯದಲ್ಲಿ ಬಳಸಬಹುದಾದ ವಿವಿಧ ಸೂಚ್ಯಂಕಗಳು ಹೀಗಿವೆ ಶುಷ್ಕತೆ ಅಸಂಗತತೆ ಸೂಚ್ಯಂಕ (AAI) / ಮಳೆಯ ವಿಚಲನ ಸೂಚ್ಯಂಕ ಪ್ರಮಾಣಿತ ಮಳೆ ಸೂಚ್ಯಂಕ (SPI), ಪಾಮರ್ ತೀವ್ರತೆಯ ಸೂಚ್ಯಂಕ (PDSI) ಬೆಳೆ ತೇವಾಂಶ ಸೂಚ್ಯಂಕ (CMI), ಮೇ ನೀರು ಸರಬರಾಜು ಸೂಚ್ಯಂಕ (SWSI) , ಸಾಧಾರಣಗೊಳಿಸಿದ ವ್ಯತ್ಯಾಸ ಸಸ್ಯವರ್ಗ ಸೂಚ್ಯಂಕ (NDVI), ತೇವಾಂಶ ಲಭ್ಯತೆ ಸೂಚ್ಯಂಕ (MAI), ಪರಿಣಾಮಕಾರಿ ಬರ ಸೂಚ್ಯಂಕ (EDI) ,ಈ ಮೇಲೆ ಕಾಣಿಸಿದ ಸೂಚ್ಯಂಕದ ಆಧಾರ ಮೇಲೆ ಬರ ಪರಿಸ್ಥಿಯನ್ನು ನಿರ್ಣಯಿಸಲಾಗುತ್ತದೆ.

ಬರಗಾಲ ಘೋಷಣೆಯಿಂದ ಅಗುವ ಅನುಕೂಲಗಳೇನು?

ರಾಜ್ಯ ಸರಕಾರದಿಂದ ಬರಗಾಲ ಘೋಷಣೆ  ಮಾಡುವುದರಿಂದ ಬರ ಪೀಡಿತ ಪ್ರದೇಶ ಎಂದು ಘೋಷಿಸಿದ ತಾಲ್ಲೂಕಿನ ವ್ಯಾಪ್ತಿಯ ರೈತರಿಗೆ ಬೆಳೆ ಪರಿಹಾರ ಸೇರಿದಂತೆ ಹಲವು ಬಗ್ಗೆಯ ಅರ್ಥಿಕ ನೆರವನ್ನು ಒದಗಿಸಲಾಗುತ್ತದೆ ಒಟ್ಟಿನಲ್ಲಿ ಮಳೆಯ ಕೊರತೆಯಿಂದ ತತ್ತರಿಸಿ ಹೋಗಿರುವ ರಾಜ್ಯದ ರೈತಾಪಿ ವರ್ಗಕ್ಕೆ ಸರಕಾರದಿಂದ ಅದಷ್ಟು ಬೇಗ ಅರ್ಥಿಕ ನೆರವು ಬೆಳೆ  ಸಾಲದ ಬಡ್ದಿ ರಿಯಾಯಿತಿ ಇತರೆ ಹಲವು ಕಾರ್ಯಕ್ರಮ ಜಾರಿಗೊಳಿಸಿ ರೈತರ ಬೆಂಬಲಕ್ಕೆ ನಿಲ್ಲಬೇಕಾಗಿದೆ.  

ಕೃಷಿಕರಿಗೆ ಸಂಬಧಿಸಿದ ಇತರೆ ಅಂಕಣಗಳು:

ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!