ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಹ ನಾಗರಿಕರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ(Scooty subsidy) ಮತ್ತು ಉಚಿತ ಹೊಲಿಗೆ ಯಂತ್ರ(sewing machine subsidy) ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಿಂದ(BBPM Subsidy Schemes Application) 2024-25ನೇ ಸಾಲಿನ ಕಲ್ಯಾಣ ವಿಭಾಗದ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿವಿಧ ಘಟಕದಡಿಯಲ್ಲಿ ಸಬ್ಸಿಡಿಯನ್ನು ನೀಡಲು ಅರ್ಹರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Gig Workers Bill-ಗಿಗ್ ಕಾರ್ಮಿಕರಿಗೆ ಭರ್ಜರಿ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ವಿವರ!
ಪ್ರಸ್ತುತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ(Scooty subsidy Application) ಮತ್ತು ಉಚಿತ ಹೊಲಿಗೆ ಯಂತ್ರ(Uchita holige yantra) ಸೇರಿದಂತೆ ವಿವಿಧ ಬಗ್ಗೆಯ ಘಟಕಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಅಂಕಣದಲ್ಲಿ ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಧಿಕೃತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಮತ್ತು ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳು ಯಾವುವು? ಇನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.
BBPM Subsidy Schemes-ಯಾವೆಲ್ಲ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
- ಹೊಲಿಗೆ ತರಬೇತಿಯನ್ನು ಪಡೆದಿರುವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಒಂಟಿ ಮನೆ ನಿರ್ಮಾಣ ಮತ್ತು ಅಮೃತ ಮಹೋತ್ಸವ ಯೋಜನೆಯಡಿ ಫ್ಲಾಟ್ ಖರೀದಿಗೆ ಸಹಾಯಧನ.
- ಪೌರ ಕಾರ್ಮಿಕರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿತರಣೆ ಮಾಡಲು ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.(ಗಾರ್ಮೇಂಟ್ಸ್ ಉದ್ಯೋಗಿಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ)
- ವಿಶೇಷ ಚೇತನರಿಗೆ ಹೆಚ್ಚುವರಿ ಚಕ್ರ ಅಳವಡಿಸಿದ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮತ್ತು ವೀಲ್ ಚೇರ್ ವಿತರಣೆ ಸೌಲಭ್ಯ.
- ಬೀದಿಬದಿ ವ್ಯಾಪಾರಸ್ಥರಿಗೆ ಎಲೆಕ್ಟ್ರಿಕ್ ವೆಂಡಿಂಗ್ ಮೆಷಿನ್ ವಿತರಣೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಸಂಗೀತ ಸಾಧನ ಖರೀದಿ, ಕ್ರೀಡಾಪಟುಗಳಿಗೆ ಸಹಾಯಧನ, ಸ್ವಯಂ ಉದ್ಯೋಗ, ವಿಶೇಷ ಚೇತನರಿಗೆ ಔಷಧಿ ಅಂಗಡಿ ಪ್ರಾರಂಭಿಸಲು ಹಾಗೂ ಆಟೋ/ಕಾರು ಖರೀದಿಗೆ ಸಬ್ಸಿಡಿ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
- ಪದವಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ.
- ಶಾಲಾ ಶುಲ್ಕ ಮರುಪಾವತಿ, ಉನ್ನತ/ ವಿದೇಶ ವ್ಯಾಸಂಗಕ್ಕೆ ಸಹಾಯಧನ.
ಇದನ್ನೂ ಓದಿ: Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಇದನ್ನೂ ಓದಿ: Gas Dealership-ಗ್ಯಾಸ್ ವಿತರಣಾ ಡೀಲರ್ ಶಿಪ್ ಪಡೆಯಲು ಅರ್ಜಿ ಆಹ್ವಾನ!
Documents For BBPM Subsidy Yojana-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2)ಬ್ಯಾಂಕ್ ಪಾಸ್ ಬುಕ್ ಪ್ರತಿ
3)ಪೋಟೋ
4)ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5)ರೇಶನ್ ಕಾರ್ಡ ಪ್ರತಿ
6)ವಾಸ ದೃಡೀಕರಣ ದಾಖಲೆ
7)ವಯಸ್ಸು ದೃಡೀಕರಿಸುವ ದಾಖಲೆ
ಇದನ್ನೂ ಓದಿ: Survey Abhiyana-2025: ಪ್ರಪ್ರಥಮ ಬಾರಿಗೆ ಗ್ರಾಮಠಾಣ ಪ್ರದೇಶದಲ್ಲಿ ಸರ್ವೆ ಕಾರ್ಯ!
Last Date For BBPM Subsidy Scheme Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮೇ 2025
How To Apply For BBPM Subsidy Schemes-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಅರ್ಹ ಅರ್ಜಿದಾರರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP)ಸಹಾಯಕ ಕಂದಾಯ ಅಧಿಕಾರಿ(ಕಲ್ಯಾಣ) ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಸ್ವಯಂ ದೃಡೀಕರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
Application Form-ಅರ್ಜಿ ನಮೂನೆ- Download Now
ಇದನ್ನೂ ಓದಿ: Male munsuchane-ರಾಜ್ಯ ಮಳೆ ಮುನ್ಸೂಚನೆ! ಇಲ್ಲಿದೆ ಜಿಲ್ಲಾವಾರು ಮಳೆ ಮಾಹಿತಿ!
BBPM Subsidy Scheme Eligibility Criteria-ಅರ್ಜಿ ಸಲ್ಲಿಸಲು ಅರ್ಹತೆಗಳು:
ಅರ್ಜಿದಾರರು ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು ಜೊತೆಗೆ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ವಾಸವಾಗಿರುವುದಕ್ಕೆ ಆಧಾರ್ ಕಾರ್ಡನಲ್ಲಿ ವಿಳಾಸವನ್ನು ಹೊಂದಿರಬೇಕು.
ಅರ್ಜಿದಾರ ಅಭ್ಯರ್ಥಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
ಈ ಹಿಂದೆ ಈಗಾಗಲೇ ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆದಿರಬಾರದು.
For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:
BBPM Office Address-ಕಚೇರಿ ವಿಳಾಸ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್. ಆರ್ ಚೌಕ, ಬೆಂಗಳೂರು-560002
BBPM Official Website-ಅಧಿಕೃತ ವೆಬ್ಸೈಟ್- Click here