Bele Darshak app- ನಿಮ್ಮ ಜಮೀನಿನ ಬೆಳೆ ವಿವರ ಸರಿಯಾಗಿ ದಾಖಲಿಸಲಾಗಿದಿಯೇ? ಎಂದು ಚೆಕ್ ಮಾಡಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

ಎಲ್ಲಾ ಕೃಷಿಕ ಮಿತ್ರ ಓದುಗ ಮಿತ್ರರಿಗೆ ಶುಭ ಮುಂಜಾನೆ, ಕೃಷಿ ಇಲಾಖೆಯಿಂದ ಮುಂಗಾರು ಬೆಳೆ ಸಮೀಕ್ಷೆ(Bele Darshak app) ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದ್ದು ಸರ್ವ ನಂಬರ್ ವಾರು ದಾಖಲಿಸಲಾದ ಬೆಳೆ ವಿವರದ(crop survey crop information) ಮಾಹಿತಿಯನ್ನು ರೈತರು ಚೆಕ್ ಮಾಡಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ರೈತರು Bele Darshak app ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನ ಸರ್ವೆ ನಂಬರಿನ ಪಹಣಿ/RTC ಅಲ್ಲಿ ಯಾವ ಬೆಳೆಯನ್ನು ದಾಖಲಿಸಲಾಗಿದೆ ಎಂದು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: E-kyc status- ಇ-ಕೆವೈಸಿ ಆದವರಿಗೆ ಮಾತ್ರ ಸಿಗಲಿದೆ ಪಿಎಂ ಕಿಸಾನ್ ಹಣ! ಇ-ಕೆವೈಸಿ ಆಗಿದಿಯಾ? ಚೆಕ್ ಮಾಡಿಕೊಳ್ಳಿ!

ಒಂದೊಮ್ಮೆ ಬೆಳೆ ಸಮೀಕ್ಷೆ ಮೂಲಕ ದಾಖಲಿಸಲಾದ ಬೆಳೆ ಮಾಹಿತಿ ತಪ್ಪಾಗಿದ್ದರೆ ಇದೇ ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಆಕ್ಷೇಪಣೆ ಸಹ ಸಲ್ಲಿಸಬಹುದು.

ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ವಿಧಾನ ಮತ್ತು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಹೇಗೆ ಬಳಕೆ ಮಾಡಬೇಕು? ಜೊತೆಯಲ್ಲಿ ನಿಮ್ಮ ಸರ್ವೆ ನಂಬರ್ ನಲ್ಲಿ ದಾಖಲಾಗಿರುವ ಬೆಳೆ ಮಾಹಿತಿ ಸರಿಯಾಗಿದಿಯೇ? ಎಂದು ಚೆಕ್ ಮಾಡುವ ವಿಧಾನದ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

RTC Crop informatiom-ನಿಮ್ಮ ಜಮೀನಿನ ಬೆಳೆ ವಿವರ ಸರಿಯಾಗಿ ದಾಖಲಿಸಲಾಗಿದಿಯೇ? ಎಂದು ಚೆಕ್ ಮಾಡುವ ವಿಧಾನ:

ರೈತರು ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೇ ಸ್ಟೋರ್ ಅನ್ನು ಪ್ರವೇಶ ಮಾಡಿ Bele darshank ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಜಮೀನಿನ ಪಹಣಿಯಲ್ಲಿ ಬೆಳೆ ವಿವರ ಸರಿಯಾಗಿ ದಾಖಲಿಸಲಾಗಿದಿಯೇ? ಎಂದು ಖಚಿತಪಡಿಸಿಕೊಳ್ಳಬಹುದು.

Step-1: ಮೊಟ್ಟ ಮೊದಲು Bele Darshak App Download ಇಲ್ಲಿ ಒತ್ತಿ ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!

Step-2: ಇದಾದ ಬಳಿಕ ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತದೆ ಸರ್ಕಾರಿ “ಸಿಬ್ಬಂದಿ/ಪ್ರೈವೇಟ್ ರೆಸಿಡೆಂಟ್ಸ್” ಮತ್ತು “ರೈತ” ಇಲ್ಲಿ ರೈತ ಎಂದು ಕ್ಲಿಕ್ ಮಾಡಿಕೊಂಡು ಮುಂದುವರೆಯಬೇಕು.

Step-3: ನಂತರ ಇಲ್ಲಿ ವರ್ಷ: “2024-25” ಋತು: “ಮುಂಗಾರು” ಎಂದು ಕ್ಲಿಕ್ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಾಕಿ ವಿವರ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

Step-4: ಅಗ ನಿಮ್ಮ ಹೋಬಳಿಯ ಸರ್ವೆ ನಂಬರ್ ವಿವರ ಲೋದ್ ಅಗುತ್ತದೆ ನಂತರ ಹಿಸ್ಸಾ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ “ಸರ್ವೆ ನಂಬರ್ ನ ಹಿಸ್ಸಾ” ಮೇಲೆ ಕ್ಲಿಕ್ ಮಾಡಿಕೊಂಡು “ಮಾಲೀಕರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರಿರುವ ಆಯ್ಕೆಯನ್ನು ಕ್ಲಿಕ್ ಮಾಡಿ “ಸಮೀಕ್ಷೆ ವಿವರಗಳನ್ನು ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಮೀಕ್ಷೆ ಮಾಡಿದ ಖಾಸಗಿ ವ್ಯಕ್ತಿಯ ಹೆಸರು ಮೊಬೈಲ್ ನಂಬರ್ ತೋರಿಸುತ್ತದೆ ಇದರೆ ಮೇಲೆ ಕ್ಲಿಕ್ ಮಾಡಿ “ಬೆಳೆ ವಿವರ ವೀಕ್ಷಿಸಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ “ಬೆಳೆ ವಿವರ” ತೋರಿಸುತ್ತದೆ.

ಒಂದೊಮ್ಮೆ ಇಲ್ಲಿ ತೋರಿಸುವ ಬೆಳೆ ವಿವರ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ವಿವರಕ್ಕೆ ತಾಳೆ ಅಗದಿದ್ದಲ್ಲಿ “ಆಕ್ಷೇಪಣೆ ಇದೆ” ಎಂದು ಕೆಳಗೆ ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಆಕ್ಷೇಪಣೆ ಸಲ್ಲಿಸಬಹುದು.

ಇದನ್ನೂ ಓದಿ: Anganawadi job notification-2024: ಅಂಗನವಾಡಿ ಕೇಂದ್ರಗಳಲ್ಲಿ 552 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕಾತಿ!

ಆಕ್ಷೇಪಣೆ ಸಲ್ಲಿಸದ ನಂತರದ ಪ್ರಕ್ರಿಯೆ ಹೇಗಿರುತ್ತದೆ?

ಜಮೀನಲ್ಲಿ ಬೆಳೆದಿರುವ ಬೆಳೆಗೂ ಮತ್ತು ಸಮೀಕ್ಷೆಯಲ್ಲಿ ದಾಖಲಿಸಿದ ಬೆಳೆ ವಿವರಕ್ಕೂ ತಾಳೆ ಅಗದಿದ್ದರೆ ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಮೂಲಕ ಆಕ್ಷೇಪಣೆ ಸಲ್ಲಿಸಿದ ಬಳಿಕ ಈ ಅರ್ಜಿಯು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಲಾಗಿನ್ ಹೋಗುತ್ತದೆ ಇದನ್ನೊ ಪರೀಶಿಲಿಸಿ ನಿಮ್ಮ ಜಮೀನಿನ ಮರು ಸಮೀಕ್ಷೆಗೆ ಖಾಸಗಿ ನಿವಾಸಿಗಳನ್ನು ಮತ್ತೊಮ್ಮೆ ಕಳುಹಿಸಲಾಗುತ್ತದೆ.

ಮರು ಸಮೀಕ್ಷೆಯನ್ನು ಪುನಃ ಅಂದರೆ ಖಾಸಗಿ ನಿವಾಸಿಗಳು ಪುನಃ ನಿಮ್ಮ ಜಮೀನನ್ನು ಭೇಟಿ ಮಾಡಿ ಮತ್ತೊಮ್ಮೆ ಜಿಪಿಎಸ್ ಆಧಾರಿತ ಬೆಳೆ ಪೋಟೋ ವನ್ನು ತೆಗೆದು ಸರಿಯಾದ ಬೆಳೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.