Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

October 22, 2024 | Siddesh
Bele parihara- ಮಳೆಯಿಂದ ಜಮೀನಿನ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
Share Now:

ರಾಜ್ಯದಲ್ಲಿ ಕಳೆದ 2 ವಾರದಿಂದ ಬಿಟ್ಟು ಬಿಡದೇ ನಿರಂತರವಾಗಿ ಮಳೆ ಬರುತ್ತಿರುವ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಅತೀಯಾದ ಮಳೆಯಿಂದ ಬೆಳೆ ನಾಶವಾಗಿದ್ದು(Bele parihara) ಅಂತಹ ರೈತರು ಬೆಳೆ ಹಾನಿಯ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದು.

ರೈತರು ತಾವು ಬೆಳೆದ ಬೆಳೆಯು ಹಾನಿಯಾದ/ನಾಶವಾದ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರವನ್ನು(Bele parihara status) ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರವನ್ನು ವೈಯಕ್ತಿಕವಾಗಿ ಪಡೆಯಲು ಯಾವ ಕ್ರಮ ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಮಳೆಯಿಂದ ಫಸಲಿಗೆ ಬಂದ ಬೆಳೆಯು ನಾಶವಾದ ಸಮಯದಲ್ಲಿ NDRF ಮತ್ತು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಈ ಎರಡು ಯೋಜನೆ ಮೂಲಕ ಅರ್ಜಿ ಸಲ್ಲಿಸಿ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು.

1) NDRP ಯೋಜನೆಯಡಿ ಬೆಳೆ ಪರಿಹಾರ ಪಡೆಯಲು ಏನು ಮಾಡಬೇಕು?

ಪ್ರಕೃತಿ ವಿಕೋಪದಿಂದ ಬೆಳೆ ಮತ್ತು ಆಸ್ತಿ ಹಾನಿಯಾದ ಸಮಯದಲ್ಲಿ ಈ ಯೋಜನೆಯಡಿ ಪರಿಹಾರವನ್ನು ನೀಡಲಾಗುತ್ತದೆ ರೈತರು ಮಳೆಯಿಂದ ತಮ್ಮ ಬೆಳೆ ಹಾನಿಯಾದರೆ ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ದಾಖಲೆಗಳು:

1) ರೈತರ ಆಧಾರ್ ಕಾರ್ಡ ಪ್ರತಿ.
2) ಬ್ಯಾಂಕ್ ಪಾಸ್ ಬುಕ್ ಪ್ರತಿ.
3) ಬೆಳೆ ಹಾನಿಯಾದ ಜಮೀನಿನ ಪಹಣಿ/ಉತಾರ್/ RTC.

ಇದನ್ನೂ ಓದಿ: sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಅರ್ಜಿ ವಿಲೇವಾರಿ ಪ್ರಕ್ರಿಯೆ:

ಒಮ್ಮೆ ಬೆಳೆ ಹಾನಿ ಅರ್ಜಿಯನ್ನು ನೀವು ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಿದ ಬಳಿಕ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹಾನಿಯಾದ ಜಮೀನನ್ನು ಜಂಟಿಯಾಗಿ ಭೇಟಿ ಮಾಡಿ ಸಮೀಕ್ಷೆ ಮಾಡಿ ನಿಮ್ಮ ಅರ್ಜಿಯನ್ನು Parihara ತಂತ್ರಾಂಶದಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ದಾಖಲು ಮಾಡಲಾಗುತ್ತದೆ.

ರಾಜ್ಯ ಸರಕಾರದಿಂದ NDRF ಮಾರ್ಗಸೂಚಿ ಪ್ರಕಾರ ಹಣ ಬಿಡುಗಡೆಯಾದ ತಕ್ಷಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ.

Bele parihara status-ಬೆಳೆ ಪರಿಹಾರ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ವೆಬ್ಸೈಟ್ ಲಿಂಕ್: Click here

ಇದನ್ನೂ ಓದಿ: Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

2) ಬೆಳೆ ವಿಮೆ ಯೋಜನೆಯಡಿ ವೈಯಕ್ತಿಕ ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ:

ರೈತರು ತಾವು ಬೆಳೆದ ಬೆಳೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಯನ್ನು ಮಾಡಿಸಿದ್ದರೆ ತಪ್ಪದೇ ನಿಮ್ಮ ಜಮೀನಿನಲ್ಲಿ ಬೆಳೆ ನಾಶವಾದ ಸಮಯದಲ್ಲಿ ಈ ಕೆಳಗೆ ತಿಳಿಸಿರುವ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸಿ ಪರಿಹಾರ ಪಡೆಯಬಹುದು.

ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಹಾನಿಯಾದ ಜಮೀನಿನ ಪಹಣಿ/RTC
4) ಬೆಳೆ ವಿಮೆ ರಶೀದಿ
5) ಮೊಬೈಲ್ ನಂಬರ್

ಮೇಲೆ ತಿಳಿಸಿರುವ ದಾಖಲೆಗಳನ್ನು ತೆಗೆದುಕೊಂಡು ಬೆಳೆ ಹಾನಿಯಾದ 48 ಗಂಟೆಗಳ ಒಳಗಾಗಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಹಳ್ಳಿಯ ವಿಮಾ ಕಂಪನಿಯ ಪ್ರತಿನಿಧಿಯ ಮೊಬೈಲ್ ನಂಬರ್ ಅನ್ನು ಪಡೆದು ನಿಮ್ಮ ಜಮೀನನ್ನು ಭೇಟಿ ಮಾಡಿ ಹಾನಿ ಸಮೀಕ್ಷೆ ಮಾಡಲು ತಿಳಿಸುವುದು.

ಇದನ್ನೂ ಓದಿ: Rabi MSP Price-ಕಡಲೆ,ಗೋಧಿ ಸೇರಿದಂತೆ ಒಟ್ಟು 6 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಮಾಡಿದ ಕೇಂದ್ರ ಸರಕಾರ!

ಅರ್ಜಿ ವಿಲೇವಾರಿ ಪ್ರಕ್ರಿಯೆ:

ಒಮ್ಮೆ ನೀವು ಕೃಷಿ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಪರೀಶಿಲನೆ ಮಾಡಿ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಕಂಪನಿ ಪ್ರತಿನಿಧಿಗಳು ಜಂಟಿಯಾಗಿ ನಿಮ್ಮ ಜಮೀನನ್ನು ಭೇಟಿ ಮಾಡಿ ಬೆಳೆ ಹಾನಿ ಸಮೀಕ್ಷೆಯನ್ನು ಮಾಡಲಾಗುತ್ತದೆ ಬೆಳೆ ಹಾನಿಯಾದ ಪ್ರದೇಶದ ಅನುಗುಣವಾಗಿ ಬೆಳೆ ವಿಮೆ ಪರಿಹಾರ ನೀಡುವ ಕುರಿತು ನಿರ್ಣಾಯ ಕೈಗೊಂಡು ಪರಿಹಾರ ವಿತರಣೆ ಮಾಡಲಾಗುತ್ತದೆ.

Bele vime status check-ಬೆಳೆ ವಿಮೆ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ವೆಬ್ಸೈಟ್ ಲಿಂಕ್: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: