Bele sala-ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂದು ತಿಳಿಯಲು ವೆಬ್ಸೈಟ್ ಲಿಂಕ್!

ರೈತರು ತಮ್ಮ ಮೊಬೈಲ್ ನಲ್ಲೇ ಜಮೀನಿನ ಮೇಲೆ ಬ್ಯಾಂಕ್ ಮೂಲಕ ಎಷ್ಟು ಸಾಲ(Crop loan) ಪಡೆಯಲಾಗಿದೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ಸರಳ ವಿಧಾನವನ್ನು ಅನುಸರಿಸಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ತಿಳಿಯಬಹುದಾಗಿದೆ.

ರೈತರು ಬೆಳೆ ಸಾಲವನ್ನು ಸಹಕಾರಿ ಮತ್ತು ರಾಷ್ಟ್ರಿಯ ಬ್ಯಾಂಕ್ ಮೂಲಕ ಪ್ರತಿ ವರ್ಷ ಪಡೆದುಕೊಳ್ಳುತ್ತಾರೆ ಯಾವ ಯಾವ ಬ್ಯಾಂಕ್ ನಲ್ಲಿ ಸಾಲವನ್ನು(Bele sala) ತೆಗೆದುಕೊಳ್ಳಲಾಗಿದೆ? ಎಷ್ಟು ಮೊತ್ತದ ಸಾಲವನ್ನು ಪಡೆಯಲಾಗಿದೆ ಎನ್ನುವ ಮಾಹಿತಿಯನ್ನು ಪಹಣಿಯಲ್ಲಿ 11 ನೇ ಕಾಲಂ ನಲ್ಲಿ ತೋರಿಸಲಾಗುತ್ತದೆ.

ಇದನ್ನೂ ಓದಿ: PM Kisan E-kyc list- ಪಿಎಂ ಕಿಸಾನ್ ಇ-ಕೆವೈಸಿ ಆಗದ 4.7 ಲಕ್ಷ ರೈತರ ಪಟ್ಟಿ ಬಿಡುಗಡೆ!

ಕೆಲವೊಮ್ಮೆ ರೈತರು ಬ್ಯಾಂಕ್ ಮೂಲಕ ಸಾಲವನ್ನು ಪಡೆದು ಮರು ಪಾವತಿ ಮಾಡಿದ್ದರು ಸಹ ಪಹಣಿಯಲ್ಲಿ ಸಾಲದ ಮೊತ್ತ ತೆಗೆದು ಹಾಕಿರುವುದಿಲ್ಲ ಇಂತಹ ಸನ್ನಿವೇಶದಲ್ಲಿ ಯಾವ ಕ್ರಮವನ್ನು ಅನುಸರಿಸಿ ಸಾಲದ ಮೊತ್ತವನ್ನು ತೆಗೆದು ಹಾಕಬೇಕು ಎನ್ನುವ ಮಾಹಿತಿಯನ್ನು ಸಹ ಈ ಕೆಳಗೆ ತಿಳಿಸಲಾಗಿದೆ.

Crop Loan

Bele sala-ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂದು ತಿಳಿಯಲು ವೆಬ್ಸೈಟ್ ಲಿಂಕ್:

ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರೈತರು ಯಾವುದೇ ಕಚೇರಿಯನ್ನು ಭೇಟಿ ಮಾಡದೇ ಬ್ಯಾಂಕ್ ಮೂಲಕ ಪಡೆದಿರುವ ಸಾಲದ ವಿವರವನ್ನು ಪಡೆಯಬಹುದಾಗಿದೆ.

Step-1: ಮೊದಲು RTC Crop Loan details check ಇಲ್ಲಿ ಕ್ಲಿಕ್ ಮಾಡಿ ಭೂಮಿ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿ ಸರ್ವೆ ನಂಬರ್ ಅನ್ನು ಹಾಕಿ “Go” ಬಟನ್ ಮೇಲೆ ಕ್ಲಿಕ್ ಮಾಡಿ Surnoc, hissa no, Period ಅನ್ನು ಆಯ್ಕೆ ಮಾಡಿಕೊಂಡು “Fetch details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Krishi Mela Bengalore- ನಾಳೆಯಿಂದ ಬೆಂಗಳೂರು ಕೃಷಿ ಮೇಳ! ಈ ಬಾರಿಯ ಮೇಳದ ವಿಶೇಷತೆಗಳೇನು?

Step-3: “Fetch Details” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಳಗಡೆ “View” ಬಟನ್ ತೋರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಅಧಿಕೃತ ಪಹಣಿ/ಊತಾರ್/RTC ತೆರೆದುಕೊಳ್ಳುತ್ತದೆ ಇಲ್ಲಿ ಪಹಣಿಯ 11 ಕಾಲಂ ನಲ್ಲಿ ಋಣಗಳು ಕಾಲಂ ಕೆಳಗೆ ಯಾವ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಪಡೆಯಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ ತೋರಿಸುತ್ತದೆ.

Crop Loan details

Crop loan details on RTC-ಒಂದೊಮ್ಮೆ ಸಾಲ ಮರುಪಾವತಿ ಮಾಡಿದ್ದರು ಸಾಲದ ಮೊತ್ತ ಪಹಣಿಯಲ್ಲಿ ತೋರಿಸುತ್ತಿದರೆ ಹೀಗೆ ಮಾಡಿ:

ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎನ್ನುವ ಮಾಹಿತಿಯನ್ನು ಚೆಕ್ ಮಾಡಿದಾಗ ನೀವು ಸಾಲವನ್ನು ಬ್ಯಾಂಕ್ ನಲ್ಲಿ ಮರು ಪಾವತಿ ಮಾಡಿದ್ದರು ಇಲ್ಲಿ ಸಾಲದ ವಿವರ ತೋರಿಸಿದರೆ ಆಗ ಸಾಲದ ವಿವರವನ್ನು ಪಹಣಿಯಿಂದ ತೆಗೆದು ಹಾಕಲು ಹೀಗಿ ಮಾಡಿ.

ಇದನ್ನೂ ಓದಿ: Rice MSP- ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ! ಬೆಲೆ ಎಷ್ಟು ನಿಗದಿ ಮಾಡಲಾಗಿದೆ?

ಮೊದಲು ನೀವು ಸಾಲ ತೆಗೆದುಕೊಂಡು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಸಾಲ ಮರು ಪಾವತಿ ಮಾಡಿರುವ ಬಗ್ಗೆ NOC ಪ್ರಮಾಣ ಪತ್ರವನ್ನು ಪಡೆದುಕೊಂಡು ನಿಮ್ಮ ಹತ್ತಿರದ ನೆಮ್ಮದಿ ಕೇಂದ್ರ/ನಾಡ ಕಚೇರಿಯನ್ನು ಭೇಟಿ ಮಾಡಿ ಪಹಣಿಯಲ್ಲಿ ನಮೂದಿರುವ ಸಾಲದ ಮೊತ್ತವನ್ನು ವಜಾ ಮಾಡಲು ಅರ್ಜಿ ಸಲ್ಲಿಸಿ ಸಾಲದ ವಿವರವನ್ನು ತೆಗೆದು ಹಾಕಬೇಕು.