ಬೆಳೆ ವಿಮೆ ಯೋಜನೆಯಡಿ ಬೆಳೆ ವಿಮೆ(bele vime) ಪರಿಹಾರ ಪಡೆಯಲು ಮತ್ತು ಬೆಂಬಲ ಬೆಲೆ(msp yojana) ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಈ ಲೇಖನದಲ್ಲಿ ವಿವರಿಸಿರುವ ಅಂಶಗಳನ್ನು ಪಾಲನೆ ಮಾಡುವುದು ಅತ್ಯಗತ್ಯವಾಗಿದೆ.
ಪ್ರಸ್ತುತ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳನ್ನು ರೈತರಿಂದ ಖರೀದಿ ಮಾಡಲು ಅಧಿಕೃತ ಆದೇಶವನ್ನು ಸರಕಾರದಿಂದ ಹೊರಡಿಸಲಾಗಿದ್ದು, ರೈತರು ಈ ಯೋಜನೆಯಡಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬೆಳೆ ಸಮೀಕ್ಷೆ ವಿವರಕ್ಕೆ ಸಂಬಧಪಟ್ಟ ಮಾಹಿತಿಗಳು ಸರಿಯಾಗಿರುವುದು ಕಡ್ಡಾಯವಾಗಿದೆ.
ಇದಲ್ಲದೇ ಬೆಳೆ ನಷ್ಟವಾದ ಸಮಯದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ(fasal bhima yojane) ಬೆಳೆ ವಿಮೆ ಪರಿಹಾರವನ್ನು ಪಡೆಯಲು ಬೆಳೆ ಸಮೀಕ್ಷೆಯಲ್ಲಿ ಬೆಳೆ ಮಾಹಿತಿ ಸೇರಿದಂತೆ ಇತ್ಯಾದಿ ವಿವರವು ಸರಿಯಾಗಿರುವುದು ಮುಖ್ಯವಾಗಿದೆ.
ಇದನ್ನೂ ಓದಿ: Pumpset adhar link-10 HP ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಜೋಡಣೆ! ಇಲ್ಲಿದೆ ಮಹತ್ವದ ಮಾಹಿತಿ!
Bele samikshe varadi-ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಬೆಳೆ ವಿವರ ಸರಿಯಾಗಿದ್ದರೆ ಮಾತ್ರ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಬೆಳೆ ಪರಿಹಾರದ ಅರ್ಥಿಕ ನೆರವು ಪಡೆಯಬಹುದು:
ಪ್ರತಿ ವರ್ಷ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಗಳ ಸಹಯೋಗದಲ್ಲಿ ರಾಜ್ಯದ ಎಲ್ಲಾ ಜಮೀನಿನ ಬೆಳೆ ಮಾಹಿತಿಯನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲು “Crop survey mobile app” ಮೂಲಕ ಸಮೀಕ್ಷೆ ಮಾಡಿ ಎಲ್ಲಾ ರೈತರು ತಮ್ಮ ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದಾರೆ ಎನ್ನುವ ಮಾಹಿತಿಯನ್ನು ಕಲೆಹಾಕಿ ಈ ವರದಿಯ ಆಧಾರ ಮೇಲೆಯೇ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಬೆಳೆ ಪರಿಹಾರದ ಅರ್ಥಿಕ ನೆರವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಈ ಕಾರಣದಿಂದಾಗಿ ಬೆಳೆ ಸಮೀಕ್ಷೆಯನ್ನು ಮಾಡಲು ಖಾಸಗಿ ನಿವಾಸಿಗಳು ಜಮೀನನ್ನು ಭೇಟಿ ಮಾಡಿದಾಗ ರೈತರು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಸರಿಯಾಗಿ ದಾಖಲೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
crop survey-2024: ಬೆಳೆ ಸಮೀಕ್ಷೆ ಹೇಗೆ ಮಾಡಲಾಗುತ್ತದೆ?
ಜಿ.ಪಿ.ಎಸ್ ಆಧಾರಿತ Crop survey ಮೊಬೈಲ್ ಅಪ್ಲಿಕೇಶನ್ ಮೂಲಕ ಖಾಸಗಿ ನಿವಾಸಿಗಳು(PR) ರೈತರ ಜಮೀನನ್ನು/ಸರ್ವೆ ನಂಬರ್ ಅನ್ನು ಭೇಟಿ ಮಾಡಿ GPS ಪೋಟೋ ತೆಗೆದು ಆ ಜಮೀನಿನಲ್ಲಿ ಬೆಳೆದಿರುವ ಬೆಳೆ ವಿವರವನ್ನು ನಮೂದಿಸಿ ಅಪ್ಲೋಡ್ ಮಾಡಲಾಗುತ್ತದೆ. ಇದೆ ಬೆಳೆ ವಿವರ ರೈತರ ಸರ್ವೆ ನಂಬರ್/ಪಹಣಿ/RTC ಅಲ್ಲಿ ತೋರಿಸುತ್ತದೆ.
ಇದನ್ನೂ ಓದಿ: Uppara nigama yojane-2024: ಉಪ್ಪಾರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ!
importance of crop survey- ಬೆಳೆ ಸಮೀಕ್ಷೆ ವಿವರಕ್ಕೆ ಏಕೆ ಇಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ?
1) ಬೆಂಬಲ ಬೆಲೆಯಲ್ಲಿ ಯಾವುದೇ ಕೃಷಿ ಉತ್ಪನ್ನ ಮಾರಾಟ ಮಾಡಲು ಇದೆ ಬೆಳೆ ಸಮೀಕ್ಷೆ ಬೆಳೆ ವಿವರವನ್ನು ಪರಿಗಣಿಸಲಾಗುತ್ತದೆ ಆದ್ದರಿಂದ.
2) ಬೆಳೆ ವಿಮೆ ಯೋಜನೆಯಡಿ ಬೆಳೆ ಪರಿಹಾರವನ್ನು ರೈತರಿಗೆ ವಿತರಣೆ ಮಾಡಲು ಬೆಳೆ ಸಮೀಕ್ಷೆಯ ಮತ್ತು ಬೆಳೆ ವಿಮೆ ಅರ್ಜಿ ಬೆಳೆ ತಾಳೆಯಾದರೆ ಮಾತ್ರ ಪರಿಹಾರವನ್ನು ರೈತರಿಗೆ ನೀಡಲಾಗುತ್ತದೆ.
3) ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಇಂತಹ ಸಮಯದಲ್ಲಿ ಬೆಳೆ ನಷ್ಟವಾದ ಅರ್ಹ ರೈತರನ್ನು ಬೆಳೆ ಸಮೀಕ್ಷೆಯ ಬೆಳೆ ವಿವರದ ಆಧಾರದ ಮೇಲೆಯೇ ಗುರುತಿಸಿ NDRF ಮಾರ್ಗಸೂಚಿ ಪ್ರಕಾರ ಬೆಳೆ ಪರಿಹಾರವನ್ನು ನೀಡಲಾಗುತ್ತದೆ.
4) ಇದೇ ರೀತಿ ಬೆಳೆ ಆಧಾರಿತ ವಿವಿಧ ಇಲಾಖೆಯ ಸಬ್ಸಿಡಿ ಯೋಜನೆಯ ಸೌಲಭ್ಯವನ್ನು ಪಡೆಯಲು ಬೆಳೆ ಸಮೀಕ್ಷೆ ವಿವರ ಅತೀ ಮುಖ್ಯವಾಗಿದೆ.
Bele samikshe status-ಈ ವರ್ಷದ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ವಿವರವನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ:
ರಾಜ್ಯ ಸರಕಾರದ ಅಧಿಕೃತ Crop Survey ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಈ ವರ್ಷ ಖಾಸಗಿ ನಿವಾಸಿಗಳು “Crop survey mobile app” ನಲ್ಲಿ ದಾಖಲಿಸಿರುವ ಬೆಳೆ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Greengram msp price-2024: ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ ರೂ 8,682 ರಂತೆ ಹೆಸರುಕಾಳು ಖರೀದಿಗೆ ಆದೇಶ!
Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Crop survey status ಅಧಿಕೃತ ಬೆಳೆ ಸಮೀಕ್ಷೆ ಜಾಲತಾಣವನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: krishi diploma- ಡಿಪ್ಲೊಮಾ (ಕೃಷಿ) ಕೋರ್ಸ್‌ಗೆ ಅರ್ಜಿ ಆಹ್ವಾನ!
Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ/ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ “Get Crop Survey Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ತದನಂತರ ಇದೆ ಪುಟದ ಕೆಳಗೆ ನಿಮ್ಮ ಸರ್ವೆ ನಂಬರ್ ನಲ್ಲಿ ಎಷ್ಟು ಜನ ರೈತರು ಇರುತ್ತಿರೋ ಅದರ ಲಿಸ್ಟ್ ತೋರಿಸುತ್ತದೆ ಇಲ್ಲಿ ನಿಮ್ಮ ಹೆಸರು ಇರುವ ಸರ್ವೆ ನಂಬರ್ ಹಿಸ್ಸಾ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: CISF Constable Jobs – ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1,130 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ!
Step-4: ಸರ್ವೆ ನಂಬರ್ ಹಿಸ್ಸಾ ಮೇಲೆ ಕ್ಲಿಕ್ ಮಾಡದ ಬಳಿಕ ಕೆಳಗಡೆ “Crop Information” ವಿಭಾಗದಲ್ಲಿ ನಿಮ್ಮ ಸರ್ವೆ ನಂಬರ್ ನಲ್ಲಿ ಈ ವರ್ಷದ ಬೆಳೆ ಸಮೀಕ್ಷೆಯಲ್ಲಿ ದಾಖಲಿಸಿರುವ ಬೆಳೆಯ ವಿವರ ತೋರಿಸುತ್ತದೆ.
Step-5: “Crop Information” ವಿಭಾಗದ ಕೊನೆಯ ಕಾಲಂ ನಲ್ಲಿ ತೋರಿಸುವ “View Photos” ಬಟನ್ ಮೇಲೆ ಕ್ಲಿಕ್ ಮಾಡಿದರೆ ಜಮೀನಿನ ಬೆಳೆಯ GPS ಪೋಟೋ ತೋರಿಸುತ್ತದೆ