2023-24ನೇ ಸಾಲಿನಲ್ಲಿ ಫಸಲ್ ಬೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ರೈತರಿಗೆ ಇಲ್ಲಿಯವರೆಗೆ 2,021.71 ಕೋಟಿ ಬೆಳೆ ವಿಮೆ(Bele vime ) ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ರೈತರ ಬೆಳೆಗಳಿಗೆ ಬೆಳೆ ವಿಮೆ ಸೌಲಭ್ಯವನ್ನು ಒದಗಿಸಲು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು(Crop Insurance) ಜಾರಿಗೆ ತರಲಾಗಿದ್ದು ಈ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ 17.61 ಲಕ್ಷ ಅರ್ಹ ರೈತರಿಗೆ 2,021.71 ಕೋಟಿ ಬೆಳೆ ವಿಮೆ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: BPL Card news-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಅಂಕಣದಲ್ಲಿ ಕಳೆದ ಹಿಂದಿನ ವರ್ಷಗಳಲ್ಲಿ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಸಹ ತಿಳಿಸಲಾಗಿದೆ, ಇದಲ್ಲದೇ ಬೆಳೆ ವಿಮೆ ಕುರಿತು ಪ್ರಸ್ತುತ ವರ್ಷದ ಮಾಹಿತಿ ಇತರೆ ಅಗತ್ಯ ಮಾಹಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ತಿಳಿಯಬಹುದು ಎಂದು ಸಹ ವಿವರಿಸಲಾಗಿದೆ.
Bele vime amount- 17.61 ಲಕ್ಷ ರೈತರಿಗೆ 2,021 ಕೋಟಿ ಬೆಳೆ ವಿಮೆ ಕೃಷಿ ಸಚಿವ ಚಲುವರಾಯಸ್ವಾಮಿ:
19 ನವೆಂಬರ್ 2024 ರಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು 2023-24ನೇ ಸಾಲಿನಲ್ಲಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ ಎಲ್ಲಾ ಜಿಲ್ಲೆಯ ಅರ್ಹ 17.61 ಲಕ್ಷ ರೈತರ ಬ್ಯಾಂಕ್ ಖಾತೆಗೆ ಇಲ್ಲಿಯವರೆಗೆ 2,021.71 ಕೋಟಿ ಬೆಳೆ ವಿಮೆ ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ(DBT) ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.
Crop Insurance applicattion status – 2023-24ನೇ ಸಾಲಿನ ನಿಮ್ಮ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವ ವಿಧಾನ:
ಕೃಷಿ ಇಲಾಖೆಯಿಂದ ರೈತರ ಬೆಳೆ ವಿಮೆ ಅರ್ಜಿಗಳ ವಿಲೇವಾರಿಯನ್ನು ಮಾಡಲು https://www.samrakshane.karnataka.gov.in/ ಡಿಜಿಟಲ್ ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದು ರೈತರು ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ 2023-24ನೇ ಸಾಲಿನ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: e-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!
Step-1: ಮೊದಲಿಗೆ Crop Insurance applicattion status ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ www.samrakshane.karnataka.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ಇದಾದ ನಂತರ ಈ ಪೇಜ್ ನಲ್ಲಿ “2023-24” ಎಂದು ವರ್ಷವನ್ನು ಆಯ್ಕೆ ಮಾಡಿಕೊಂಡು ಬಳಿಕ ಋತು “Kharif/ಮುಂಗಾರು” ಎಂದು ಆಯ್ಕೆ ಮಾಡಿಕೂಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಿಬೇಕು.
Step-3: ಈ ಪೇಜ್ ನಲ್ಲಿ “Farmers” ಕಾಲಂ ವಿಭಾಗದಲ್ಲಿ ಕೆಳಗೆ ಕಾಣುವ “Check Status”ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ www.samrakshane.karnataka.gov.in 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಬೇಕು
Step-4: ಅಗ ಆ ವರ್ಷ ನೀವು ಸಲ್ಲಿಸಿದ ಎಲ್ಲಾ ಬೆಳೆ ವಿಮೆ ಅರ್ಜಿಯ ವಿವರ ತೆರೆದುಕೊಳ್ಳುತ್ತದೆ ಒಂದು ಅರ್ಜಿಯ ಸಂಖ್ಯೆಯ ಮುಂದೆ ಇರುವ “Select” ಬಟನ್ ಮೇಲೆ ಕ್ಲಿಕ್ ಮಾಡಿದರೆ Proposal Status ಆಯ್ಕೆಯಲ್ಲಿ ಬೆಳೆ ವಿಮೆ ಅರ್ಜಿಯ ಸ್ಥಿತಿ ತೋರಿಸುತ್ತದೆ ಇದರ ಕೆಳಗೆ ಕಾಣುವ “UTR Details” ಆಯ್ಕೆಯಲ್ಲಿ ನಿಮಗೆ ಎಷ್ಟು ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ತೋರಿಸುತ್ತದೆ.
ಇದನ್ನೂ ಓದಿ: New ration card- ನವ ದಂಪತಿಗಳಿಗೆ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
ಇಲ್ಲಿ “View details” ಬಟನ್ ಮೇಲೆ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಇದೆ ಪೇಜ್ ನಲ್ಲಿ “farmers” ಕಾಲಂ ನಲ್ಲಿ ಕಾಣುವ “Crop Insrance details on survey no” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರ ಅರ್ಜಿ ಸ್ಥಿತಿಯ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ: WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!
Farm mechanization subsidy- 1.16 ಲಕ್ಷಕ್ಕೂ ಅಧಿಕ ರೈತರಿಗೆ ಕೃಷಿ ಯಂತ್ರೋಪಕರಣ ಯೋಜನೆಯಡಿ 433.92 ಕೋಟಿ ಸಬ್ಸಿಡಿ ವಿತರಣೆ:
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ 2023-24ನೇ ವರ್ಷದಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ 1,16,181 ರೈತರಿಗೆ ವಿವಿಧ ಬಗ್ಗೆಯ ಕೃಷಿ ಯಂತ್ರಗಳನ್ನು ವಿತರಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ವರ್ಷ ಇಲ್ಲಿಯವರೆಗೆ 20,301 ರೈತರಿಗೆ ಕೃಷಿ ಯಂತ್ರೀಕರಣ ಯೋಜನೆಯಡಿ ಸಬ್ಸಿಡಿಯಲ್ಲಿ ಯಂತ್ರ ವಿತರಣೆ ಮಾಡಲಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ 2023-24ನೇ ಸಾಲಿನಲ್ಲಿ 104 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ 41.39 ಕೋಟಿ ರೂ.ಗಳ ಸಹಾಯಧನ ನೀಡಲಾಗಿದ್ದು, 2024-25ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು 45 ಕೋಟಿ ರೂ. ಅನುದಾನದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.