- Advertisment -
HomeAgricultureBele Vime Amount-2 ಲಕ್ಷ ರೈತರ ಖಾತೆಗೆ ₹76 ಕೋಟಿ ಬೆಳೆ ವಿಮೆ ಪರಿಹಾರ ಜಮಾ!

Bele Vime Amount-2 ಲಕ್ಷ ರೈತರ ಖಾತೆಗೆ ₹76 ಕೋಟಿ ಬೆಳೆ ವಿಮೆ ಪರಿಹಾರ ಜಮಾ!

ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ(Bele Vime) ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸಿರು ಅರ್ಹ 2 ಲಕ್ಷ ರೈತರ ಖಾತೆಗೆ ₹76 ಕೋಟಿ ಬೆಳೆ ವಿಮೆ ಪರಿಹಾರವನ್ನು ಜಮಾ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಮಾಹಿತಿ ತಿಳಿಸಿದ್ದಾರೆ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ(Fasal bhima yojana) ಪ್ರ‍ಿಮಿಯಂ ಮೊತ್ತವನ್ನು ಪಾವತಿ ಮಾಡಿ ತಮ್ಮ ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸಿಕೊಂಡಿರುವ ಆಯ್ದ ಅರ್ಹ ಫಲಾನುಭವಿ ರೈತರ ಖಾತೆಗೆ ವಿಮಾ ಕಂಪನಿಯಿಂದ ಬೆಳೆ ವಿಮೆ ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲೆಯ ಸಮದ್ ಪಟೇಕ್ ಜಂಟಿ ಕೃಷಿ ನಿರ್ದೇಶಕರು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಜೊತೆಗೆ ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ವಿಮಾ ಕಂಪನಿಯಿಂದ(Crop Insurance) ಪ್ರಸ್ತುತ ಜಮಾ ಮಾಡಲಾಗಿರುವ ಪರಿಹಾರದ ಹಣವು ತಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದಿಯೋ? ಇಲ್ಲವೋ ಎಂದು ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಖತರಿಪಡಿಸಿಕೊಳ್ಳಬೇಕು ಎಂದು ಸಮದ್ ಪಟೇಕ್ ಜಂಟಿ ಕೃಷಿ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Ration Card-ರೇಷನ್ ಕಾರ್ಡ ತಿದ್ದುಪಡಿ ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

Bele Vime Amount-2 ಲಕ್ಷ ರೈತರ ಖಾತೆಗೆ ₹76 ಕೋಟಿ ಬೆಳೆ ವಿಮೆ ಪರಿಹಾರ:

ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ರಾಜ್ಯ ಸರಕಾರದಿಂದ NDRF ಮಾರ್ಗಸೂಚಿ ಪ್ರಕಾರ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬೆಳೆ ಪರಿಹಾರವನ್ನು ಜಮಾ ಮಾಡಲಾಗಿದ್ದು ಈಗ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅಧಿಕ ಮಳೆಯಿಂದ ಬೆಳೆ ಹಾನಿಯಾಗಿರುವ ಅರ್ಹ 2,04,073 ರೈತರ ಖಾತೆಗೆ ₹76 ಕೋಟಿ ಬೆಳೆ ವಿಮೆ ಪರಿಹಾರವನ್ನು ವಿಮಾ ಕಂಪನಿಯಿಂದ ಪಾವತಿ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

Bele vime-ವಿಮೆ ಜಮಾ ಮಾಡಲಾದ ಪ್ರಮುಖ ಬೆಳೆಗಳು:

1) ತೊಗರಿ
2) ಹೆಸರು
3) ಉದ್ದು
4) ಸೋಯಾಬೀಲ್
5) ಹತ್ತಿ

ಇದನ್ನೂ ಓದಿ: Khata Details-ನಿಮ್ಮ ಆಸ್ತಿಗೆ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

bele vime

Cro Insurance Amount-ರೈತರು ವೈಯಕ್ತಿಕವಾಗಿ ಬೆಳೆ ವಿಮೆ ಪರಿಹಾರ ಪಡೆಯಲು ಇದೆ ಅವಕಾಶ:

ರೈತರು ಈ ಹಿಂದಿನ ಬೆಳೆ ವಿಮಾ ಯೋಜನೆಯಡಿ ವೈಯಕ್ತಿಕವಾಗಿ ಬೆಳೆ ಹಾನಿಯಾದರೆ ವಿಮಾ ಪಡೆಯಲು ಅವಕಾಶವಿರಲ್ಲಿಲ್ಲ ಅದರೆ ಪ್ರಸ್ತುತ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಯನ್ನು ಮಾಡಿಸಿರುವ ರೈತರು ಅಕಾಲಿಕ ಮಳೆಯಿಂದ ಅಥವಾ ಇನ್ನಿತರೆ ಕಾರಣಗಳಿಂದ ಬೆಳೆ ಹಾನಿಯಾದ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಿ ವೈಯಕ್ತಿಕವಾಗಿ ಬೆಳೆ ಹಾನಿಯಾದರು ಸಹ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Crop Insurance Application-ವೈಯಕ್ತಿಕ ಬೆಳೆ ಹಾನಿಗೆ ಅರ್ಜಿ ಸಲ್ಲಿಸುವುದು ಹೇಗೆ?

ರೈತರು ತಮ್ಮ ಒಬ್ಬರದೇ ಬೆಳೆ ಹಾನಿಯಾದ ಸಮಯದಲ್ಲಿ ವೈಯಕ್ತಿಕವಾಗಿ ಬೆಳೆ ವಿಮೆ ಪರಿಹಾರವನ್ನು ಪಡೆಯಲು ಅರ್ಜಿ ಸಲ್ಲಿಸಲು ಈ ಯೋಜನೆಯಡಿ ಅವಕಾಶ ಇರುವುದು ಅನೇಕ ರೈತರಿ ಮಾಹಿತಿ ತಿಳಿದಿರುವುದಿಲ್ಲ, ರೈತರು ಅರ್ಜಿಯನ್ನು ಸಲ್ಲಿಸಲು ತಾವು ಪ್ರಾರಂಭದಲ್ಲಿ ಬೆಳೆ ವಿಮೆ ಅರ್ಜಿಯನ್ನು ಸಲ್ಲಿಸುವಾಗ ಪಡೆದಿರುವ ಸ್ವೀಕೃತಿ ಪ್ರತಿಯನ್ನು ಸೇರಿಸಿ ಬೆಳೆ ಹಾನಿಯಾಗಿರುವುದರ ಕುರಿತು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Togari Kharidi-ರಾಜ್ಯ ಸರ್ಕಾರದಿಂದ ತೊಗರಿ ಖರೀದಿಗೆ ₹140 ರೂ ಕೋಟಿ!

ಅರ್ಜಿಯನ್ನು ಸಲ್ಲಿಸಿದ ಬಳಿಕ ನಿಮ್ಮ ಹಳ್ಳಿ ವ್ಯಾಪ್ತಿಯ ವಿಮಾ ಕಂಪನಿಯ ಪ್ರತಿನಿಧಿಯನ್ನು ಸಂಪರ್ಕಿಸಿ ನಿಮ್ಮ ಬೆಳೆ ಹಾನಿಯಾಗಿರುವುದರ ಕುರಿತು ಅರ್ಜಿ ಸಲ್ಲಿಸಿರುವುದರ ಕುರಿತು ದೂರವಾಣಿ ಮೂಲಕ ತಿಳಿಸಿ ಸ್ಥಳ ಭೇಟಿ ಮಾಡಿ ಸಮೀಕ್ಷೆಯನ್ನು ಮಾಡಲು ತಿಳಿಸಬೇಕು ಈ ರೀತಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ವಿಮಾ ಕಂಪನಿಯಿಂದ ಬೆಳೆ ಹಾನಿ ಪರಿಹಾರವನ್ನು ನೀಡಲಾಗುತ್ತದೆ.

Bele Vime Status check-2025: ಬೆಳೆ ವಿಮೆ ಜಮಾ ಅಗಿರುವುದನ್ನು ಮೊಬೈಲ್ ನಲ್ಲಿ ಪರಿಶೀಲನೆ ಮಾಡುವ ವಿಧಾನ:

ರೈತರು ರಾಜ್ಯ ಸರಕಾರದಿಂದ ಅಭಿವೃದ್ಧಿಪಡಿಸಿರುವ ಸಂರಕ್ಷಣೆ ಪೋರ್ಟಲ್ ಅನ್ನು ನಿಮ್ಮ ಮೊಬೈಲ್ ಬಳಕೆ ಮಾಡಿಕೊಂಡು ನೇರವಾಗಿ ಭೇಟಿ ಮಾಡಿ ಮನೆಯಲ್ಲೇ ಕುಳಿತು ಯಾವುದೇ ಸರಕಾರಿ ಕಚೇರಿಯನ್ನು ಭೇಟಿ ಮಾಡದೇ ಬೆಳೆ ವಿಮೆ ಅರ್ಜಿ ಸ್ಥಿತಿ, ಹಣ ಜಮಾ ವಿವರ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆಯಬಹುದು.

Step-1: ನೀವು ಮೊದಲಿಗೆ ಈ ವೆಬ್ಸೈಟ್ Bele Vime Satus ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸರಕಾರದ samrakshane ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Best Savings Scheme-ಅಂಚೆ ಇಲಾಖೆಯಿಂದ ಮಹಿಳೆಯರಿಗೆ ಭರ್ಜರಿ ಗಿಪ್ಟ್! ಎರಡು ವರ್ಷದಲ್ಲಿ ₹30 ಸಾವಿರ ಪಡೆಯಲು ಅವಕಾಶ!

bele vime status (5)

Step-2: ಇದಾದ ಬಳಿಕ ಈ ಪೇಜ್ ನಲ್ಲಿ “2024-25” ಎಂದು ವರ್ಷವನ್ನು ಆಯ್ಕೆ ಮಾಡಿಕೊಂಡು ಬಳಿಕ ಋತು “Kharif/ಮುಂಗಾರು” ಎಂದು ಸೆಲೆಕ್ಟ್ ಮಾಡಿಕೂಂಡು “ಮುಂದೆ/Go” ಆಯ್ಕೆಯ ಮೇಲೆ ಕ್ಲಿಕ್ ಮಾಡಿಬೇಕು.

Step-3: ಇದಾದ ಬಳಿಕ ಈ ಪುಟದಲ್ಲಿ ಕೆಳಗೆ ಕಾಣುವ “Farmers” ವಿಭಾಗದಲ್ಲಿ ಕೆಳಗೆ ಕಾಣುವ “Check Status”ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿದಾರರ ಮೊಬೈಲ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ “Search” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-4: ಇದಾದ ನಂತರ ಆ ವರ್ಷ ನೀವು ಹಾಕಿರುವ ಎಲ್ಲಾ ಬೆಳೆ ವಿಮೆ ಅರ್ಜಿಯ ಸಂಖ್ಯೆ ಸೇರಿದಂತೆ ಎಲ್ಲಾ ವಿವರ ತೋರಿಸುತ್ತದೆ. ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಮುಂದುವರೆದು ಕೆಳಗೆ “Proposal Status” ಆಯ್ಕೆಯಲ್ಲಿ ಬೆಳೆ ವಿಮೆ ಅರ್ಜಿಯ ಸ್ಥಿತಿ ಗೊಚರಿಸುತ್ತದೆ ಇದರ ಕೆಳಗೆ ಕಾಣುವ “UTR Details” ಆಯ್ಕೆಯಲ್ಲಿ ನಿಮಗೆ ಎಷ್ಟು ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿದೆ ಎಂದು ತೋರಿಸುತ್ತದೆ ಹಣ ಜಮಾ ಅಗಿಲ್ಲದಿದ್ದರೆ ಯಾವುದೇ ವಿವರ ತೋರಿಸುವುದಿಲ್ಲ.

ಇಲ್ಲಿ “View details” ಬಟನ್ ಮೇಲೆ ಕ್ಲಿಕ್ ಮಾಡಿ ಇನ್ನು ಅಧಿಕ ವಿವರವಾದ ಮಾಹಿತಿಯನ್ನು ನೋಡಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -