Bele vime amount- 2ನೇ ಹಂತದಲ್ಲಿ ಎಕರೆಗೆ 18,000 ರೂ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆ!

June 7, 2024 | Siddesh
Bele vime amount- 2ನೇ ಹಂತದಲ್ಲಿ ಎಕರೆಗೆ 18,000 ರೂ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆ!
Share Now:

ರೈತರಿಗೆ ಸರಕಾರ ಮತ್ತು ಬೆಳೆ ವಿಮೆ ಕಂಪನಿಯಿಂದ  ಸಿಹಿ ಸುದ್ದಿ ನೀಡಿದ್ದು, ಎರಡನೇ ಹಂತದಲ್ಲಿ ಪ್ರತಿ ಎಕರೆಗೆ ರೂ 18,000/-  ಬೆಳೆ ವಿಮೆ(Bele vime amount) ವರ್ಗಾವಣೆ ಮಾಡಲಾಗಿದೆ.

ಯಾವೆಲ್ಲ ರೈತರಿಗೆ ಈ ಎರಡನೇ ಹಂತದ ಬೆಳೆ ವಿಮೆ ಜಮಾ ಅಗಿದೆ? ಮನೆಯಲ್ಲೇ ಕುಳಿತು ರೈತರು ತಮ್ಮ ಮೊಬೈಲ್ ನಲ್ಲಿ ತಮಗೆ ಬೆಳೆ ವಿಮೆ(Bele vime status) ಜಮಾ ಅಗಿದಿಯಾ? ಇಲ್ಲವಾ ಎಂದು ಹೇಗೆ ಚೆಕ್ ಮಾಡುವುದು ಮತ್ತು ಬೆಳೆ ವಿಮೆ ಕಟ್ಟಿಯು ಜಮಾ ಅಗದ ರೈತರು ಯಾವ ಕ್ರಮ ಅನುಸರಿಸಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

2023ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉಂಟಾದ ತೀರ್ವ ಮಳೆ ಕೊರತೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಬೆಳೆ ವಿಮೆ(kharif crop insurance amount) ಮಾಡಿಸಿದ ರೈತರ ಖಾತೆಗೆ ಪ್ರತಿ ಎಕರೆಗೆ ರೂ 18,000/- ಸಾವಿರದ ವರೆಗೆ ಎರಡನೇ ಹಂತದಲ್ಲಿ ಬೆಳೆ ವಿಮೆ ಜಮಾ ಮಾಡಲಾಗಿದೆ. ದಾವಣಗೆರೆ,ಚಿತ್ರದುರ್ಗ,ಹಾವೇರಿ ಸೇರಿದಂತೆ ಇತರೆ ಜಿಲ್ಲೆಯ ರೈತರಿಗೆ ಹಾಗೂ  ಮೆಕ್ಕೆಜೋಳ ಇತರೆ ಬೆಳೆ ಬೆಳೆದಿರುವವರಿಗೆ ಬೆಳೆ ವಿಮೆ ಪರಿಹಾರವನ್ನು ಡಿಬಿಟಿ ಮೂಲಕ ರೈತರ ಖಾತೆಗೆ ನಗದು ವರ್ಗಾವಣೆ(DBT) ಮಾಡಲಾಗಿದೆ.

ಇದನ್ನೂ ಓದಿ: BNPM Job- ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ನಿಗಮದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ!

Bele vime status-ಬೆಳೆ ವಿಮೆ ಬಂದಿರುವುದನ್ನು ಚೆಕ್ ಮಾಡುವ ವಿಧಾನ:

ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಮೊಬೈಲ್ ನಲ್ಲಿ ಪ್ರವೇಶ ಮಾಡಿ ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಬೆರಳ ತುದಿಯಲ್ಲಿ ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಬಹುದು.

Step-1: ಪ್ರಥಮದಲ್ಲಿ Crop insurance status check-2024 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂರಕ್ಷಣೆ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ "ವರ್ಷ: 2023-24" "ಹಂಗಾಮು/ಋತು: "ಮುಂಗಾರು/Kharif" ಎಂದು ಆಯ್ಕೆ ಮಾಡಿಕೊಂಡು "ಮುಂದೆ/Go" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ ಈ ಪೇಜ್ ನಲ್ಲಿ ಕೆಳಗೆ "Farmers" ಕಾಲಂ ನಲ್ಲಿ ಕಾಣುವ "Crop Insurance Details On Survey No"  ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Crop insurance guideline-2024ರ ಮುಂಗಾರು ಬೆಳೆ ವಿಮೆ ಯೋಜನೆಯ ಅಧಿಕೃತ ಮಾರ್ಗಸೂಚಿ ಬಿಡುಗಡೆ!

Step-4: ನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಆ ಸರ್ವೆ ನಂಬರ್ ನಲ್ಲಿರುವ ಎಲ್ಲ ರೈತರ ವಿವರ ತೋರಿಸುತ್ತದೆ.

ಇಲ್ಲಿ ನಿಮ್ಮ ಹೆಸರಿರುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಅರ್ಜಿಯ ಸಂಖ್ಯೆ ತೋರಿಸುತ್ತದೆ ಅದನ್ನು ಒಂದು ಕಡೆ ಬರೆದುಕೊಂಡು ಮುಂದುವರೆಯಬೇಕು.


 
Step-5: ತದನಂತರ Back ಬಟನ್ ಮೇಲೆ ಕ್ಲಿಕ್ ಮಾಡಿ ಮುಖಪುಟ ಭೇಟಿ ಮಾಡಿ ಇಲ್ಲಿ Farmers ಕಾಲಂ ನಲ್ಲಿ  "Check Status" ಬಟನ್ ಮೇಲೆ ಕ್ಲಿಕ್ ಮಾಡಿ ಬೆಳೆ ವಿಮೆ "ಅರ್ಜಿಯ ಸಂಖ್ಯೆಯನ್ನು/Application no" ಅನ್ನು ಹಾಕಿ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ.

ಅಗ ಈ ಕೆಳಗಿನ ಪೋಟೋ ದಲ್ಲಿ ತೋರಿಸಿದ ರೀತಿಯಲ್ಲಿ ನಿಮಗೆ ಬೆಳೆ ವಿಮೆ ಎಷ್ಟು ಜಮಾ? UTR no, ಪಾವತಿ ಮಾಡಿದ ದಿನಾಂಕ, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳ ವಿವರ ತೋರಿಸುತ್ತದೆ. 

ಇದನ್ನೂ ಓದಿ: SSLC ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ : MTS, Clerks ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ!

Kharif Insurance amount-2023: ಇಂತಹ ರೈತರಿಗೆ ಸಂದಾಯವಾಗಿಲ್ಲ ಬೆಳೆ ವಿಮೆ ಪರಿಹಾರ:

1) ಅನೇಕ ರೈತರು ನಾವು ಬೆಳೆ ವಿಮೆ ಮಾಡಿಸಿದ್ದೇವೆ ಅದರೆ ನನಗೆ ಬೆಳೆ ವಿಮೆ ಪರಿಹಾರ ಜಮಾ ಅಗಿರುವುದಿಲ್ಲ ಎಂದು ದೂರುತಿದ್ದು ಇದಕ್ಕೆ ಮುಖ್ಯ ಕಾರಣ ಬೆಳೆ ಸಮೀಕ್ಷೆಯ ಬೆಳೆ ವರದಿ ಮತ್ತು ಬೆಳೆ ವಿಮೆ ಮಾಡಿಸುವಾಗ ನೀವು ನಮೂದಿಸಿರುವ ಬೆಳೆ ಮಾಹಿತಿ ತಾಳೆ ಅಗದಿರುವುದು. ಅದ್ದರಿಂದ ಪ್ರತಿ ವರ್ಷ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ತಪ್ಪದೇ ಸರಿಯಾಗಿ ಮಾಡಿಸಬೇಕು.

ನೀವು ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದಿರೋ ಆ ಬೆಳೆ ನೀವು ಬೆಳೆದಿದ್ದಿರೆ ಎಂದು ಬೆಳೆ ಸಮೀಕ್ಷೆಯ ಮೂಲಕ ದೃಡೀಕರಿಸಿದಲ್ಲಿ ಮಾತ್ರ ಬೆಳೆ ವಿಮೆ ಪಡೆಯಲು ನೀವು ಅರ್ಹ.

2) ಎರಡನೇ ಮುಖ್ಯ ಕಾರಣ ರೈತರ ಹೆಸರುಗಳು ತಾಳೆ ಅಗದಿರುವುದು ಪಹಣಿ/RTC ಅಲ್ಲಿನ ಹೆಸರು ಮತ್ತು ಆಧಾರ್ ನಲ್ಲಿರುವಂತೆಯೆ ಬ್ಯಾಂಕ್ ಖಾತೆಯಲ್ಲಿ ಹೆಸರು ದಾಖಲಿಸಬೇಕು ಇಲ್ಲವಾದಲ್ಲಿ ಪರಿಹಾರದ ಹಣ ಜಮಾ ಮಾಡುವಾಗ ಹೆಸರು ತಾಳೆ ಅಗದೆ ಹಣ ಸಂದಾಯ ವಿಫಲವಾಗುತ್ತದೆ.

Crop insurance application-ಬೆಳೆ ವಿಮೆ ಅರ್ಜಿ ಕುರಿತು ಎಲ್ಲಿ ವಿಚಾರಿಸಬೇಕು?

ರೈತರು ತಾವು ಸಲ್ಲಿಸಿರುವ ಬೆಳೆ ವಿಮೆ ಅರ್ಜಿ ಮತ್ತು ಪರಿಹಾರ ಹಣ ಪಾವತಿ ಕುರಿತು ಕೃಷಿ ಬೆಳೆಗಳು ಅಗಿದ್ದರೆ ಕೃಷಿ ಇಲಾಖೆಯಲ್ಲಿ ವಿಚಾರಣೆ ಮಾಡಬೇಕು ತೋಟಗಾರಿಕೆ ಬೆಳೆಗಳು ಅಗಿದ್ದರೆ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಮಾಹಿತಿ ಪಡೆಯಬೇಕು. ಅಥವಾ https://samrakshane.karnataka.gov.in ಪೋರ್ಟಲ್ ಅನ್ನು ಪ್ರವೇಶ ಮಾಡಿ ಬೆಳೆ ವಿಮೆ ಕಂಪನಿಯ ಸಹಾಯವಾಣಿ ನಂಬರ್ ತೆಗೆದುಕೊಂಡು ಕರೆ ಮಾಡಿಯು ಸಹ ಅರ್ಜಿಯ ಕುರಿತು ಮಾಹಿತಿ ತಿಳಿಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: