Best life insurance plan- ವರ್ಷಕ್ಕೆ ಕೇವಲ ರೂ 20 ಪಾವತಿ ಮಾಡಿ 2 ಲಕ್ಷ ವಿಮೆ ಪಡೆಯಿರಿ!

ಒಂದು ವರ್ಷಕ್ಕೆ ಕೇವಲ ರೂ 20 ಪಾವತಿ ಮಾಡಿ 2 ಲಕ್ಷ ಅಪಘಾತ ವಿಮೆ ಪಡೆಯುವ ಯೋಜನೆಯ(PMJJBY Yojana) ಕುರಿತು ಇಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇಂದಿನ ಜೀವನ ಶೈಲಿಯಲ್ಲಿ ಯಾರಿಗೆ ಯಾವಾಗ ಏನು ಅಗುತ್ತದೆ ಅರಿಯುವುದು ಬಹಳ ಕಷ್ಟ ನಿನ್ನೆ ಚೆನ್ನಾಗಿರುವವರು ಇಂದು ಒಂದೇ ಬಾರಿಗೆ ಆರೋಗ್ಯದಲ್ಲಿ ಏರುಪೇರಾಗಿ ಬಿಡುತ್ತದೆ ಇಂತಹ ಸನ್ನಿವೇಶಗಳಲ್ಲಿ ಅರ್ಥಿಕವಾಗಿ ಸಬಲರಾಗುವುದು ಬಹು ಮುಖ್ಯವಾಗಿದೆ.

ಬಡ ಜನರಿಗೆ ಆರೋಗ್ಯ ವಿಮೆಯನ್ನು ಕಡಿಮೆ ಬೆಲೆಯಲ್ಲಿ ಮಾಡಿಸಿಕೊಳ್ಳಲು ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು(PMJJBY) ಚಾಲ್ತಿಯಲ್ಲಿದ್ದು ಈ ಯೋಜನೆಯ ಮೂಲಕ ಅತೀ ಕಡಿಮೆ ಪ್ರಿಮೀಯಂ ಅನ್ನು ಪಾವತಿ ಮಾಡಿ ನಾಗರಿಕರು ಆರೋಗ್ಯ ವಿಮೆಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Best Farmer award- ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪಡೆಯಲು ಅರ್ಜಿ!

PMJJBY Scheme-ಪ್ರಧಾನ ಮಂತ್ರಿ ಜನ್ ಸುರಕ್ಷಾ ಬಿಮಾ ಯೋಜನೆ:

ಪ್ರಧಾನ ಮಂತ್ರಿ ಜನ್ ಸುರಕ್ಷಾ ಬಿಮಾ ಯೋಜನೆ(PMJJBY)ಯನ್ನು ಕೇಂದ್ರ ಸರಕಾರದಿಂದ 2015 ರಿಂದ ಜಾರಿಗೆ ತರಲಾಗಿದ್ದು ಈ ಯೋಜನೆಯಡಿ ಅರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ಅಲ್ಪ ಮೊತ್ತದ ಪ್ರೀಮಿಯಂ ಅನ್ನು ಪಾವತಿ ಮಾಡಿಕೊಂಡು ಅಪಘಾತ ವಿಮೆಯನ್ನು ಒದಗಿಸಲಾಗುತ್ತದೆ.

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿದಾರರು ತಮ್ಮ ಹೆಸರಿನಲ್ಲಿ ಯಾವ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುತ್ತಾರೋ ಆ ಬ್ಯಾಂಕ್ ಶಾಖೆಯನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ರೂ 20 ಪ್ರೀಮಿಯಂ ಅನ್ನು ಪಾವತಿ ಮಾಡಿ ವಿಮೆ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್!

Life Insurance scheme

Required Documents for application-ಅಗತ್ಯ ದಾಖಲಾತಿಗಳು:

  • ಅರ್ಜಿದಾರರ ಅಧಾರ್ ಕಾರ್ಡ್
  • ಪೋಟೋ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್

Who can apply life insurance -ಯಾರೆಲ್ಲ ಈ ಯೋಜನೆಯಡಿ ವಿಮೆಯನ್ನು ಮಾಡಿಕೊಳ್ಳಬಹುದು?

18 ವರ್ಷದಿಂದ 50 ವರ್ಷದ ಎಲ್ಲಾ ವರ್ಗದ ಜನರು ಈ ಯೋಜನೆಯಡಿ ವಿಮೆಯನ್ನು ಮಾಡಿಕೊಳ್ಳಬಹುದು.

ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.

ಬ್ಯಾಂಕ್ ಶಾಖೆಯಲ್ಲಿ ಅಥವಾ ಪೋಸ್ಟ್ ಅಪೀಸ್ ನಲ್ಲಿ ಖಾತೆಯನ್ನು ಹೊಂದಿರಬೇಕು.

ಇದನ್ನೂ ಓದಿ: Motor repair- ಉಚಿತ 30 ದಿನದ ಮೋಟಾರ್ ರಿಪೇರಿ ಮತ್ತು ರೀವೈಂಡಿಗ್ ಟ್ರೈನಿಂಗ್ ಪಡೆಯಲು ಅರ್ಜಿ ಆಹ್ವಾನ!

life insurance renewal- ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು:

ಒಮ್ಮೆ ನೀವು ರೂ 20 ಅನ್ನು ಪಾವತಿ ಮಾಡಿ ಈ ಯೋಜನೆಯಡಿ ವಿಮೆಯನ್ನು ಮಾಡಿಕೊಂಡ ಬಳಿಕ ಪ್ರತಿ ವರ್ಷ ಜೂನ್ ತಿಂಗಳಲ್ಲಿ ರೂ 20 ಅನ್ನು ನಿಮ್ಮ ಬ್ಯಾಂಕ್ ಶಾಖೆ ಭೇಟಿ ಮಾಡಿ ನಿಮ್ಮ ಅರ್ಜಿಯನ್ನು ರೀನಿವಲ್/ನವೀಕರಣ ಮಾಡಿಕೊಳ್ಳಬೇಕು.

ಯಾವೆಲ್ಲ ಸಮಯದಲ್ಲಿ ವಿಮೆ ಹಣ ಪಡೆಯಬಹುದು?

ಒಮ್ಮೆ ಈ ಯೋಜನೆಯಡಿ ನೀವು ಒಂದು ವರ್ಷಕ್ಕೆ ರೂ 20 ಪ್ರಿಮೀಯಂ ಅನ್ನು ಪಾವತಿ ಮಾಡಿ ವಿಮೆಯನ್ನು ಮಾಡಿಸಿದ ಬಳಿಕ ಅರ್ಜಿದಾರರಿಗೆ ಅಪಘಾರವಾಗಿ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ 2.0 ಲಕ್ಷ ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ 1.0 ಲಕ್ಷ ಮತ್ತು ಅಪಘತಾವಾಗಿ ಮೃತ ಪಟ್ಟರೆ ರೂ 2.0 ಲಕ್ಷ ವಿಮೆ ಪರಿಹಾರವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: ATM Cash-ಎಟಿಎಂನಲ್ಲಿ ಹರಿದ ನೋಟ್ ಬಂದರೆ ಏನು ಮಾಡಬೇಕು?

Life insurance claim process- ವಿಮೆಯನ್ನು ಕ್ಲೈಮ್ ಮಾಡುವ ವಿಧಾನ:

ಈ ಯೋಜನೆಯಡಿ ವಿಮೆಯನ್ನು ಕ್ಲೈಮ್ ಮಾಡಲು ಅರ್ಜಿದಾರ ಮರಣ ಹೊಂದಿದ 30 ದಿನದ ಒಳಗಾಗಿ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ಸುತ್ತಾದಾಗ ಈ ಕೆಳಗೆ ತಿಳಿಸಿರುವ ದಾಖಲೆಗಳ ಸಮೇತ ನೀವು ವಿಮೆ ಮಾಡಿಸಿದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ದಾಖಲೆಗಳು:

1) ಅಪಘಾತವಾಗಿ ಮರಣ ಹೊಂದಿದ್ದಕ್ಕೆ FIR ಪ್ರತಿ.
2) ಮೃತರ ಪಾನ್ ನಂಬರ್
3) ನಾಮಿನಿ ವಿವರ.
4) ಮರಣ ಪ್ರಮಾಣ ಪತ್ರ
6) ಬ್ಯಾಂಕ್ ಪಾಸ್ ಬುಕ್ ಪ್ರತಿ

Insurance claim application- ವಿಮೆ ಕ್ಲಿಮ್ ಮಾಡಿಕೊಳ್ಳಲು ಅರ್ಜಿ ನಮೂನೆ: Download Now

Helpline number- ರಾಷ್ಟ್ರೀಯ ಟೋಲ್ ಫ್ರೀ ಸಹಾಯವಾಣಿ: 1800-180-1111 / 1800-110-001