Bilijola MSP-ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ಯಾವೆಲ್ಲ ಜಿಲ್ಲೆಯಲ್ಲಿ ಅವಕಾಶ!

February 25, 2025 | Siddesh
Bilijola MSP-ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ಯಾವೆಲ್ಲ ಜಿಲ್ಲೆಯಲ್ಲಿ ಅವಕಾಶ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸಹಯೋಗದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಬಿಳಿಜೋಳವನ್ನು(Bilijola MSP) ರೈತರಿಂದ ನೇರವಾಗಿ ಖರೀದಿ ಮಾಡಲು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಕೇಂದ್ರ ಸರಕಾರವು ಆಹಾರ ಉತ್ಪನ್ನಗಳಿಗೆ ಉತ್ತಮ ದರವನ್ನು ನೀಡಿ ರೈತಾಪಿ ವರ್ಗಕ್ಕೆ ಆರ್ಥಿಕವಾಗಿ ಬೆಂಬಲವನ್ನು ನೀಡಲು ಕಳೆದ ಅನೇಕ ವರ್ಷಗಳಿಂದ ಕನಿಷ್ಟ ಬೆಂಬಲ ಯೋಜನೆಯನ್ನು(minimum support price) ಅನುಷ್ಥಾನ ಮಾಡಿಕೊಂಡು ಬರಲಾಗುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಈಗಾಗಲೇ ರಾಗಿ,ತೊಗರಿ ಇನ್ನಿತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿ ಮಾಡಲು ತಾಲ್ಲೂಕು ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ಈ ನಿಟ್ಟಿನಲ್ಲಿ ಬಿಳಿಜೋಳವನ್ನು ಸಹ ಖರೀದಿ ಮಾಡಲು ಸರಕಾರ ಮುಂದಾಗಿದೆ.

ಬಿಳಿಜೋಳ ಉತ್ಪನ್ನಕ್ಕೆ ಕೇಂದ್ರದಿಂದ ಎಷ್ಟು? ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ, ಬೆಂಬಲ ಬೆಲೆಯಲ್ಲಿ ಬಿಳಿಜೋಳವನ್ನು ರೈತರು ಮಾರಾಟ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: PM-Kisan 2025: ಕೇಂದ್ರದಿಂದ ಪಿ ಎಂ ಕಿಸಾನ್ 19 ನೇ ಕಂತಿ ಹಣ ವರ್ಗಾವಣೆ! ನಿಮಗೆ ಬಂತಾ ಚೆಕ್ ಮಾಡಿ!

Bilijola Kharidi Kendra-ಯಾವೆಲ್ಲ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ:

ರೈತ ಬಾಂಧವರೇ, ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಬಿಳಿಜೋಳ ಖರೀದಿಸಲು ಆದೇಶ ಮಾಡಿದೆ. ಜಿಲ್ಲಾ ಟಾಸ್ಕ್‌ಪೋರ್ಸ್‌ಗಳ ಶಿಫಾರಸ್ಸಿನಂತೆ ವಿಜಯಪುರ, ಕಲಬುರಗಿ, ಬಾಗಲಕೋಟೆ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಬೆಳಗಾವಿ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ರೈತಬಾಂಧವರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಬಿಳಿಜೋಳವನ್ನು ಮಾರಾಟ ಮಾಡದೇ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Bank loans-ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಹೊರೆಯಿಂದ ಪಾರಾಗಲು ಈ ಕ್ರಮ ಅನುಸರಿಸಿ!

Bilijola Kharidi Kendra

ಇದನ್ನೂ ಓದಿ: Gruhalakshmi Yojane-2025: ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ಪ್ರಮುಖ ಬದಲಾವಣೆ!

Bilijola Bembala Bele-ಬೆಂಬಲ ಬೆಲೆ ಎಷ್ಟು?

ಹೈಬ್ರಿಡ್ ಜೋಳ ರೂ.3,371/- (ಪ್ರತಿ ಕ್ವಿಂಟಾಲ್‌ಗೆ)

ಮಾಲ್ದಂಡಿ ಜೋಳ ರೂ.3,421/- (ಪ್ರತಿ ಕ್ವಿಂಟಾಲ್‌ಗೆ)

ಪ್ರತಿ ಎಕರೆಗೆ ನಿಗದಿಪಡಿಸಿರುವ ಪ್ರಮಾಣ: 20 ಕ್ವಿಂಟಾಲ್

ಪ್ರತಿ ರೈತರಿಂದ ಖರೀದಿ ಪ್ರಮಾಣ: 150 ಕ್ವಿಂಟಾಲ್

Bilijola Kharidi Kendra-ಬೆಂಬಲ ಬೆಲೆಯಲ್ಲಿ ಬಿಳಿಜೋಳವನ್ನು ಮಾರಾಟ ಮಾಡುವುದು ಹೇಗೆ?

ರೈತರು ತಮ್ಮ ಆಧಾರ್ ಕಾರ್ಡ ಅಥವಾ ಫೂಟ್ಸ್ ಐ.ಡಿ. ಯೊಂದಿಗೆ ಬಯೋಮೆಟ್ರಿಕ್ ನೀಡಿ ಖರೀದಿ ಕೇಂದ್ರದಲ್ಲಿ ಮೊದಲು ನೋಂದಣಿಯನ್ನು ಮಾಡಿ ಆಧಾರ್ ಜೋಡಣೆಯಾದ ಎನ್.ಸಿ.ಪಿ.ಐ. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಖಾತರಿಪಡಿಸಿ. ಎಫ್‌.ಎ.ಕ್ಯೂ ಗುಣಮಟ್ಟದ ಬಗ್ಗೆ ಗ್ರೇಡರ್ ಪರಿಶೀಲಿಸಿ ದೃಢೀಕರಿಸಿದ ನಂತರ ತಮ್ಮ ಉತ್ಪನ್ನವನ್ನು ನಿಗದಿಪಡಿಸಿ ದಿನಾಂಕದಂದು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು.

ಮದ್ಯವರ್ತಿಗಳು ಖರೀದಿ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!

Documents For MSP Scheme Farmer Registration-ನೋಂದಣಿ ಮಾಡಿಕೊಳ್ಳಲು ಅವಶ್ಯಕ ದಾಖಲೆಗಳು:

ಬಿಳಿಜೋಳ ಖರೀದಿ ಕೇಂದ್ರದಲ್ಲಿ ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಲು ಈ ಕೆಳಗೆ ತಿಳಿಸಿರುವ ದಾಖಲಾತಿಗಳೊಂದಿಗೆ ಖುದ್ದು ಭೇಟಿ ಮಾಡಿ ಬಯೋಮೆಟ್ರಿಕ್ ನೀಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.

1) ಅರ್ಜಿದಾರ ರೈತರ ಆಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಬಿಳಿಜೋಳ ಬೆಳೆದ ಜಮೀನಿನ ಪಹಣಿ/ಊತಾರ್/RTC
4) ಮೊಬೈಲ್ ನಂಬರ್

ಇದನ್ನೂ ಓದಿ: Land Survey-ನಿಮ್ಮ ಜಮೀನಿನ ಸರ್ವೇ ಇನ್ನೂ ಮುಂದೆ ಕೇವಲ 10 ನಿಮಿಷದಲ್ಲಿ ಮಾಡಿಸಬಹುದು!

DBT Method-ರೈತರಿಗೆ ಹಣ ಪಾವತಿ ಹೇಗೆ ಮಾಡಲಾಗುತ್ತದೆ?

ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರೈತರು ಮಾರಾಟ ಮಾಡಿದ ಉತ್ಪನ್ನದ ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತದೆ.

APMC Helpline-ರು ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಉಚಿತ ದೂರವಾಣಿ ಸಂಖ್ಯೆಗೆ 1800 425 1552 ಕರೆ ಮಾಡಿ ಈ ಕುರಿತು ವಿವರವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: