- Advertisment -
HomeGovt SchemesBirth Certificate-ಹೈಕೋರ್ಟ್ ನಿಂದ ಜನನ ಪ್ರಮಾಣ ಪತ್ರದ ಕುರಿತು ಮಹತ್ವದ ತೀರ್ಪು!

Birth Certificate-ಹೈಕೋರ್ಟ್ ನಿಂದ ಜನನ ಪ್ರಮಾಣ ಪತ್ರದ ಕುರಿತು ಮಹತ್ವದ ತೀರ್ಪು!

ನಮ್ಮ ದೇಶದ ಕಾನೂನಿನ ಪ್ರಕಾರ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದು ಕಡ್ದಾಯವಾಗಿದ್ದು, ಈ ಸಾಲಿನಲ್ಲಿ ಜನನ ಪ್ರಮಾಣ ಪತ್ರವು(Birth Certificate) ಸಹ ಒಂದಾಗಿದ್ದು ಈ ಪ್ರಮಾಣ ಪತ್ರದ ಕುರಿತು ಹೈಕೋರ್ಟ್ ನಿಂದ ಮಹತ್ವದ ತೀರ್ಪನ್ನು ಪ್ರಕಟಗೊಳಿಸಲಾಗಿದೆ.

ಜನನ ಪ್ರಮಾಣ ಪತ್ರದ ಕುರಿತು ಹೈಕೋರ್ಟ್(karnataka high court) ನಿಂದ ತೆಗೆದುಕೊಂಡಿರುವ ತೀರ್ಪಿನ ಕುರಿತು ಒಂದಿಷ್ಟು ಉಪಯುಕ್ತವಾದ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ಜನನ ಪ್ರಮಾಣ ಪತ್ರದಲ್ಲಿ(Birth Certificate Karnataka High Court Order) ಮಗನ ಹೆಸರು ಬದಲಾವಣೆಗೆ ಅವಕಾಶ ನೀಡಬೇಕು ಎಂದು ಜನನ-ಮರಣ ನೋಂದಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಉಡುಪಿ ಮೂಲದ ಮಗುವಿನ ಪೋಷಕರು ಹೈಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕೋರ್ಟನಿಂದ ಮಹತ್ವದ ತೀರ್ಪನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Crop Insurance List-ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿ ಬಿಡುಗಡೆ!

Birth Certificate Court Order-ಪ್ರಕರಣದ ಹಿನ್ನೆಲೆ:

ಈ ಹಿಂದಿನ ಕಾಯ್ದೆಯ ಪ್ರಕಾರ ಒಮ್ಮೆ ಜನನ ಪ್ರಮಾಣ ಪತ್ರವನ್ನು ಪಡೆದ ಬಳಿಕ ಈ ಪ್ರಮಾಣ ಪತ್ರದಲ್ಲಿ ಯಾವುದೇ ಬಗ್ಗೆಯ ತಿದ್ದುಪಡಿ/ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ ಈ ಕಾರಣದಿಂದಾಗಿ ಉಡುಪಿ ಮೂಲದ ಮಗುವಿನ ಪೋಷಕರಿಗೆ ಜನನ ಪ್ರಮಾಣ ಪತ್ರವನ್ನು ಪಡೆದ ಬಳಿಕ ಮಗುವ ಹೆಸರನ್ನು ಬದಲಾವಣೆ ಮಾಡಿಕೊಂಡಿರುತ್ತಾರೆ ಆದರೆ ಕಾಯ್ದೆಯನ್ವಯ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ತಿದ್ದುಪಡಿ ಮಾಡಿಸಲು ಸಾಧ್ಯವಾಗುವುದಿಲ್ಲ.

ಸದರಿ ಕಾರಣದಿಂದ ಮಗುವಿನ ಪೋಷಕರು ತಮ್ಮ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಹೆಸರು ಬದಲಾವಣೆಗೆ ಅವಕಾಶ ಮಾಡಿಕೊಂಡುವಂತೆ ಜನನ-ಮರಣ ನೋಂದಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕು ಎಂದು ನಮ್ಮ ರಾಜ್ಯದ ಹೈಕೋರ್ಟ ನಲ್ಲಿ ಅರ್ಜಿಯನ್ನು ದಾಖಲಿಸಲಾಗಿರುತ್ತದೆ.

ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎನ್.ಎಸ್ ಸಂಜಯ್ ಗೌಡ ಅವರು ರಾಜ್ಯ ಸರಕಾರಕ್ಕೆ “ಜನನ-ಮರಣ ಪ್ರಮಾಣ ನೋಂದಣಿ ಕಾಯಿದೆ-1969” ತಿದ್ದುಪಡಿ ತಂದು ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ನಮೂದಿಸಿದ ಹೆಸರನ್ನು ಮತ್ತೆ ಬದಲಾವಣೆ ಮಾಡುವುದಕ್ಕೆ ಸೂಕ್ತ ನಿಯಮವನ್ನು ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Post office recruitment-ಅಂಚೆ ಇಲಾಖೆಯಲ್ಲಿ ಬರೋಬ್ಬರಿ 21,413 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ!

Birth Certificate News-ಜನನ ಪ್ರಮಾಣ ಪತ್ರದಲ್ಲಿ ಹೆಸರು ಬದಲಾವಣೆಗೆ ಅವಕಾಶ ನೀಡಲು ಸೂಚನೆ:

ಸಾರ್ವಜನಿಕರು ಒಮ್ಮೆ ತಮ್ಮ ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ದಾಖಲಿಸಿರುವ ಹೆಸರನ್ನು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮತ್ತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡುವ ರೀತಿಯಲ್ಲಿ “ಜನನ -ಮರಣ ಪ್ರಮಾಣ ನೋಂದಣಿ ಕಾಯಿದೆ-1969” ಗೆ ತಿದ್ದುಪಡಿ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಲಾಗಿದೆ.

Birth certificate (2)

ಇದನ್ನೂ ಓದಿ: Uchitha Holige Tarabeti-ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿ!

Birth Certificate Karnataka Court Order-ಹೈಕೋರ್ಟ್ ನ ಪ್ರಮುಖ ಸೂಚನೆಗಳ ವಿವರ ಹೀಗಿದೆ:

1) ಮಕ್ಕಳ ಹೆಸರನ್ನು ಬದಲಾಯಿಸಲು ಜನನ ಪ್ರಮಾಣ ಪತ್ರದಲ್ಲಿ ಅವಕಾಶ ನೀಡುವುದು.

2) ಪೋಷಕರ ಗುರುತನ್ನು ಪರಿಶೀಲಿಸಿ ಮಕ್ಕಳ ಹೆಸರನ್ನು ಪ್ರಮಾಣ ಪತ್ರದಲ್ಲಿ ಬದಲಾವಣೆ ಅಥವಾ ತಿದ್ದುಪಡಿ ಮಾಡಿಕೊಳ್ಳಲು ಸಲ್ಲಿಸುವ ಅರ್ಜಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

3) ದುರುದ್ದೇಶದ ಸಲುವಾಗಿ ಹೆಸರನ್ನು ಬದಲಿಸುತ್ತಿಲ್ಲ ಎಂದು ಖಚಿತಪಡಿಸಿಕೊಂಡು ರಿಜಿಸ್ಟರ್ ನಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸುವುದು.

4) ಮೊದಲ ಹೆಸರು ಮತ್ತು ಬದಲಾವಣೆ ಹೆಸರಿನ ವಿವರವನ್ನು ಸೂಕ್ತ ರಿಜಿಸ್ಟರ್ ನಲ್ಲಿ ಲಭ್ಯವಾಗುವಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

5) ವಯಸ್ಕರ ಹೆಸರು ಬದಲಾಣೆಗೂ ಸಹ ಇದೇ ಮಾದರಿಯಲ್ಲಿ ನಿಯಮವನ್ನು ರೂಪಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Microfinance-ರಾಜ್ಯ ಸರಕಾರದಿಂದ ಮೈಕ್ರೋ ಫೈನಾನ್ಸ್ ಕುರಿತು ಸುಗ್ರೀವಾಜ್ಞೆ!

Birth Certificate Updates-ಏಕೆ ಈ ಕ್ರಮ ಅಗತ್ಯ?

ನಮ್ಮ ರಾಜ್ಯ ಅಥವಾ ದೇಶದಲ್ಲಿ ಒಮ್ಮೆ ಜನನ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಿ ಪಡೆದ ಬಳಿಕ ಈ ಪ್ರಮಾಣ ಪತ್ರದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ ಕೇವಲ ಒಂದೇ ಹೆಸರನ್ನು ಇಟ್ಟುಕೊಳ್ಳಲು ಅವಕಾಶವಿರುತ್ತದೆ ಆದರೆ ನಮ್ಮ ದೇಶದಲ್ಲಿ ಬಹುತೇಕ ಮನೆಗಳಲ್ಲಿ ಸರ್ವೆ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚಿನ ಹೆಸರನ್ನು ಅಥವಾ ಹೆಸರನ್ನು ಬದಲಾವಣೆ ಮಾಡಿಕೊಳ್ಳುವುದು ರೂಡಿ ಇದೆ.

ಈ ಕಾರಣದಿಂದ ಆ ವ್ಯಕ್ತಿಯನ್ನು ಗುರುತಿಸುವುದಕ್ಕೆ ಕೆಲವು ಸಂದರ್ಭಗಳಲ್ಲಿ ಗೊಂದಲ ಉಂಟಾಗುವುದನ್ನು ತಪ್ಪಿಸಲು ಜನನ ಪ್ರಮಾಣ ಪತ್ರದಲ್ಲಿ ಹೆಸರು ಬದಲಾವಣೆ ಅವಕಾಶ ನೀಡುವುದು ಅತ್ಯಗತ್ಯವಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -