- Advertisment -
HomeGovt SchemesBond Paper-ಇನ್ನು ಮುಂದೆ ಬಾಂಡ್ ಪೇಪರ್ ಪಡೆಯುವುದು ಬಾರೀ ಸುಲಭ! ಇಲ್ಲಿದೆ ಸಂಪೂರ್ಣ ವಿವರ!

Bond Paper-ಇನ್ನು ಮುಂದೆ ಬಾಂಡ್ ಪೇಪರ್ ಪಡೆಯುವುದು ಬಾರೀ ಸುಲಭ! ಇಲ್ಲಿದೆ ಸಂಪೂರ್ಣ ವಿವರ!

ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಹಾಗೂ ಇನ್ನಿತರ ಒಪ್ಪಂದಗಳನ್ನು ಮಾಡಿಕೊಳ್ಳಲು ಬಾಂಡ್ ಪೇಪರ್ ಗಳನ್ನು(Buy Bond Paper Online) ಪಡೆಯುವುದು ಇನ್ನು ಮುಂದೆ ಬಾರೀ ಸುಲಭ! ಸರಳ ಮತ್ತು ಅತೀ ಕಡಿಮೆ ಮೊತ್ತವನ್ನು ಪಾವತಿ ಮಾಡಿ ನಗರ ಪ್ರದೇಶಕ್ಕೆ ಹೋಗದೆಯೇ ಹಳ್ಳಿಯಲ್ಲಿ ಬಾಂಡ್ ಪೇಪರ್ ಅನ್ನು ಹೇಗೆ ಪಡೆಯುವುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಉದಾಹರಣೆಗೆ ಹೇಳುವುದಾದರೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನದಲ್ಲಿ ಯಂತ್ರಗಳನ್ನು ಖರೀದಿ ಮಾಡಲು, ಕಂದಾಯ ಇಲಾಖೆಯಿಂದ ವಂಶವೃಕ್ಷ ಮಾಡಿಸಲು, ಯಾವುದೇ ಬಗ್ಗೆಯ ವ್ಯವಹಾರಕ್ಕೆ ಸಂಬಂಧಪಟ್ಟ ಒಪ್ಪಂದಗಳನ್ನು ಮಾಡಿಸಲು ಬಾಂಡ್ ಪೇಪರ್(Bond Paper) ಒದಗಿಸುವುದು ಕಡ್ಡಾಯವಾಗಿರುವುದರಿಂದ ಇವುಗಳ ಖರೀದಿ ಕುರಿತು ಹೊಸ ವಿಧಾನದ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: E-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!

ಡಿಜಿಟಲ್ ಬಾಂಡ್ ಪೇಪರ್ ಗಳನ್ನು(Digital Bond Paper) ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಹಳ್ಳಿಯ ಮಟ್ಟದಲ್ಲಿ ಈ ಸೌಲಭ್ಯವನ್ನು ಸಾರ್ವಜನಿಕರಿಗೆ ನೀಡಲು ಗ್ರಾಮ ಒನ್ ಕೇಂದ್ರಗಳಲ್ಲಿ ಇ-ಬಾಂಡ್ ಪೇಪರ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಸಾರ್ವಜನಿಕರು ಈ ಪ್ರಯೋಜನವನ್ನು ಪಡೆಯಬಹುದು.

Gram One Center-ಗ್ರಾಮ ಒನ್ ಕೇಂದ್ರದಲ್ಲೇ ಬಾಂಡ್ ಪೇಪರ್ ಪಡೆಯಬಹುದು:

ಈ ಮಾಹಿತಿ ಬಹಳಷ್ಟು ಜನರಿಗೆ ತಿಳಿದಿಲ್ಲ ಸರಕಾರಿ ಕಚೇರಿಗಳಿಂದ ಸೌಲಭ್ಯವನ್ನು ಪಡೆಯಲು ಹಾಗೂ ಯಾವುದೇ ಬಗ್ಗೆಯ ಕೆಲಸಕ್ಕೆ ಬಾಂಡ್ ಪೇಪರ್ ಪಡೆಯಲು ನಗರ ಪ್ರದೇಶ ಭೇಟಿ ಮಾಡದೇ ಹಳ್ಳಿಯ ಮಟ್ಟದಲ್ಲಿ ಸಾರ್ವಜನಿಕರು ಗ್ರಾಮ ಒನ್ ಕೇಂದ್ರಗಳನ್ನು ಭೇಟಿ ಮಾಡಿ ಅಗತ್ಯ ವಿವರ ಒದಗಿಸಿ ಇ-ಬಾಂಡ್ ಪೇಪರ್ ಅನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Kharif Bele Parihara-ಮುಂಗಾರು ಹಂಗಾಮಿನಿ ಬೆಳೆ ಪರಿಹಾರ ಹಣ ಜಮಾ ಅದ ರೈತರ ಪಟ್ಟಿ ಬಿಡುಗಡೆ!

E-stamp paper

ಇದನ್ನೂ ಓದಿ: Drip Irrigation-ರಾಜ್ಯ ಸರಕಾರದಿಂದ ಹನಿ ಮತ್ತು ತುಂತುರು ನೀರಾವರಿ ಘಟಕಕ್ಕೆ ₹255 ಕೋಟಿ ಅನುದಾನ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

Digital Bond Paper Benefits-ಡಿಜಿಟಲ್ ಇ-ಸ್ಟಾಂಪ್/ಬಾಂಡ್ ಪೇಪರ್ ಪ್ರಯೋಜನಗಳೇನು?

ಬಾಂಡ್ ಪೇಪರ್ ಅನ್ನು ಪಡೆಯಲು ಗ್ರಾಮೀಣ ಭಾಗದ ಜನರು ನಗರ ಪ್ರದೇಶಕ್ಕೆ ಹೋಗುವುದರ ಬದಲು ತಮ್ಮ ಹಳ್ಳಿಯ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲೇ ಬಾಂಡ್ ಪೇಪರ್ ಪಡೆಯುವುದರಿಂದ ಪ್ರಯಾಣ ವೆಚ್ಚ ಮತ್ತು ಅನಗತ್ಯ ಸಮಯ ವ್ಯರ್ಥಕ್ಕೆ ಕಡಿವಾಣ ಹಾಕಬಹುದು.

ಡಿಜಿಟಲ್ ಇ-ಸ್ಟಾಂಪ್ ಗೆ ಯಾವುದೇ ನೋಟರಿ ಮಾಡಿಸುವ ಅಗತ್ಯತೆ ಇರುವುದಿಲ್ಲ ಈ ಹಿಂದೆ ಬಾಂಡ್ ಪೇಪರ್ ಪಡೆದು ಲಾಯರ್ ಅವರನ್ನು ಭೇಟಿ ಮಾಡಿ ನೋಟರಿ ಮಾಡಿಸಬೇಕಾಗಿತ್ತು ಅದರೆ ಈಗ ಗ್ರಾಮ ಒನ್ ಕೇಂದ್ರಗಳಿಂದ ಪಡೆಯುವ ಡಿಜಿಟಲ್ ಇ-ಸ್ಟಾಂಪ್ ಗೆ ನೋಟರಿ ಮಾಡಿಸುವ ಅಗತ್ಯತೆ ಇರುವುದಿಲ್ಲ.

What is E-stamp paper-ಏನಿದು ಇ-ಸ್ಟಾಂಪಿಂಗ್?

ಇ-ಸ್ಟಾಂಪಿಂಗ್ ಎನ್ನುವುದು ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್ ಮತ್ತು ಸರಕಾರಕ್ಕೆ ಸ್ಟಾಂಪ್ ಸುಂಕವನ್ನು ಪಾವತಿಸುವ ಸುರಕ್ಷಿತ ಮಾರ್ಗವಾಗಿದೆ.

ಇದನ್ನೂ ಓದಿ: PMAY 2.0 Yojana-2024: ಸ್ವಂತ ಮನೆ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! PMAY 2.0 ಯೋಜನೆಯಡಿ ₹ 2.50 ಲಕ್ಷ ಸಬ್ಸಿಡಿ!

grama one

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

E-stamp paper Details-ಇ-ಸ್ಟಾಂಪಿಂಗ್ ವಿಶೇಷತೆಗಳು:

(1) ಸುಲಭ ಪ್ರವೇಶ ಮತ್ತು ವೇಗದ ಪ್ರಕ್ರಿಯೆ

(2) ಹೆಚ್ಚು ಭದ್ರತೆ ಮತ್ತು ವೆಚ್ಚದಲ್ಲಿ ಉಳಿತಾಯ

(3) ಬಳಕೆದಾರ ಸ್ನೇಹಿಯಾಗಿದೆ.

(4) ನೋಟರಿ ಮತ್ತು ಪ್ರಮಾಣ ಪತ್ರದ ವಿಷಯವು ಸೇರಿದಂತೆ ಸಂಪೂರ್ಣ ಕರಾರಿನ ಮಾಹಿತಿಯು ಇ-ಅಸ್ತಕ್ಷರದೊಂದಿಗೆ ಮುದ್ರಿತವಾಗುತ್ತದೆ.

E-stamp paper-2024: ಇ-ಬಾಂಡ್ ಪೇಪರ್ ವಿನ್ಯಾಸ:

E-stamp paper photo

E-stamp paper Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಸರಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮತ್ತು ವಿವಿಧ ಒಪ್ಪಂದಗಳಿಗೆ ಅಫಿಡವಿಟ್, ಅಗ್ರಿಮೆಂಟ್ ಗಾಗಿ ಬಾಂಡ್ ಪೇಪರ್ ಪಡೆದು ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೆಲವೆ ನಿಮಿಷಗಳಲ್ಲಿ ಇ-ಸ್ಟಾಂಪ್/ಬಾಂಡ್ ಪೇಪರ್ ಅನ್ನು ಪಡೆದುಕೊಳ್ಳಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -