BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!

November 24, 2024 | Siddesh
BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!
Share Now:

ರಾಜ್ಯದಲ್ಲಿ ಕಳೆದ 2 ವಾರದಿಂದ ಅನರ್ಹ ಬಿಪಿಎಲ್ ಕಾರ್ಡ ರದ್ದು(BPL card cancellation order) ಮತ್ತು ಬಿಪಿಎಲ್ ನಿಂದ ಎಪಿಎಲ್ ಕಾರ್ಡ ಅಗಿ ಬದಲಾವಣೆ ಮಾಡುವುದರ ಕುರಿತು ಸಾರ್ವಜನಿಕ ವಲಯದಲ್ಲಿ ಆನೇಕ ವದಂತಿಗಳು ಹರಡುತ್ತಿರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಆಹಾರ ಇಲಾಖೆಯಿಂದ ಸೂಕ್ತ ನಿರ್ದೇಶನದ ಆದೇಶವನ್ನು ಪ್ರಕಟಿಸಲಾಗಿದೆ.

ಇಲಾಖೆಯಿಂದ ಆದ್ಯತಾ ಪಡಿತರ ಚೀಟಿಯನ್ನು(BPL) ಗ್ರಾಹಕರಿಗೆ ನೀಡಲು ಸರ್ಕಾರದಿಂದ ನಿಗದಿಪಡಿಸಿರುವ ಮಾನದಂಡಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ರದ್ದುಕೊಳಿಸುವ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದ್ದು. ಆಹಾರ ಇಲಾಖೆಯ ಪ್ರಕಟಣೆಯಲ್ಲಿ ಯಾವೆಲ್ಲ ಅಂಶಗಳನ್ನು ತಿಳಿಸಲಾಗಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Power tiller subsidy- ಶೇ.90ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ!

BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶದ ವಿವರ ಹೀಗಿದೆ:

ಆಹಾರ ಇಲಾಖೆಯ ಮಾರ್ಗಸೂಚಿಯನ್ವಯ ಬಿಪಿಎಲ್ ಕಾರ್ಡ ಪಡೆಯಲು ಅನರ್ಹರಿರುವ ಕಾರ್ಡಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡಗಳಾಗಿ ಬದಲಾವಣೆ ಮಾಡುವ ಕ್ರಮವನ್ನು ಇಲಾಖೆಯ ಅಧಿಕಾರಿಗಳು ಕೈಗೊಳ್ಳುತ್ತಿದ್ದು ಈ ಸಂಬಂಧ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಈ ಕೆಳಗಿನಂತೆ ಆದೇಶ ಹೊರಡಿಸಿದ್ದಾರೆ.

1) ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಯಾವುದೇ ಗ್ರಾಹಕರ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡದಂತೆ ಸೂಚಿಸಲಾಗಿದೆ.

2) ಕುಟುಂಬ ತಂತ್ರಾಂಶದಿಂದ ಬಂದಿರುವ ಆದಾಯ ತೆರಿಗೆ ಪಾವತಿದಾರರು ಪಡಿತರ ಚೀಟಿಗಳ ರದ್ದತಿಯಲ್ಲಿ ಕೇವಲ ಆದಾಯ ತೆರಿಗೆ ಪಾವತಿದಾರರ ಪಡಿತರ ಚೀಟಿಗಳನ್ನು ಮಾತ್ರವೇ ರದ್ದು/ಅಮಾನತ್ತು/ಪರಿವರ್ತನೆ ಆಗುವಂತೆ ಆಯಾ ಜಂಟಿ/ಉಪ ನಿರ್ದೇಶಕರು ರವರು ಕ್ರಮವಹಿಸತಕ್ಕದ್ದು, ಇದಕ್ಕೆ ತಕ್ಕಂತೆ ಪೂರಕ ದಾಖಲೆಗಳನ್ನು ಪಡೆದು ಪ್ರತಿಯೊಂದು ಪಡಿತರ ಚೀಟಿದಾರರ ದಾಖಲೆಗಳನ್ನು ಕಡತಗಳಲ್ಲಿ ಇರಿಸುವುದ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Vidyasiri scholarship-ವಿದ್ಯಾಸಿರಿ ವಿದ್ಯಾರ್ಥಿವೇತನ ಪ್ರತಿ ತಿಂಗಳಿಗೆ ರೂ 2,000 ಕ್ಕೆ ಏರಿಕೆ!

3) ಈ ಎಲ್ಲಾ ಕಾರ್ಯಗಳನ್ನು ಜಾಗೃತಿ ವಹಿಸಿ ಯಾವುದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯ ವಾಗದಂತೆ ಕ್ರಮ ವಹಿಸುವುದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

4) ನೋಡಲ್ ಅಧಿಕಾರಿ ರವರು ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಪ್ರಗತಿಯನ್ನು ಖುದು, ಮೇಲ್ವಿಚಾರಣೆಯನ್ನು ಮಾಡುವುದು ಎಂದು ನಿರ್ದೇಶನ ನೀಡಲಾಗಿದೆ.

5) ಈ ಎಲ್ಲಾ ಕ್ರಮಗಳನ್ನು ಶೀಘ್ರವಾಗಿ ಮುಗಿಸಿ ದಿನಾಂಕ 25 ನವೆಂಬರ್ 2024 ರ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Mobile addiction- ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಮಾಡಿ! ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸಿ!

BPL card cancellation order copy- ಅಧಿಕೃತ ಆದೇಶದ ಪ್ರತಿ:

BPL card cancellation order

ಇದನ್ನೂ ಓದಿ: Yuvanidhi application-2024: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ!

Ration Card Status- ನಿಮ್ಮ ರೇಷನ್ ಕಾರ್ಡ ಕುರಿತು ಸಂಪೂರ್ಣ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು:

ಗ್ರಾಹಕರು ಕೆಳಗೆ ತಿಳಿಸಿರುವ ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ರೇಷನ್ ಕಾರ್ಡ ಕುರಿತು ಸಂಪೂರ್ಣ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು.

ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ನಿಮ್ಮ ರೇಷನ್ ಕಾರ್ಡ ನೈಜ ಸ್ಥಿತಿ, ರೇಶನ್ ಕಾರ್ಡ ಇ-ಕೆವೈಸಿ ಸ್ಥಿತಿ, ಅನ್ನಭಾಗ್ಯ DBT ಹಣ ಪಾವತಿ ಸ್ಥಿತಿ, ಹಳ್ಳಿವಾರು ರೇಷನ್ ಕಾರ್ಡ ಅರ್ಹ ಮತ್ತು ಅನರ್ಹ ರೇಷನ್ ಕಾರ್ಡ ಪಟ್ಟಿ, ಹೊಸ ರೇಶನ್ ಕಾರ್ಡ ಅರ್ಜಿ ಸ್ಥಿತಿಯನ್ನು ಸಹ ಚೆಕ್ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: