ಜಾಗತಿಕವಾಗಿ ದಿನೇ ದಿನೇ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು ಇದರ ಜೊತೆಗೆ ಡಿಜಿಟಲ್ ಮಾಧ್ಯಮಗಳನ್ನು(Digital media) ಬಳಕೆ ಮಾಡಿಕೊಂಡು ಬ್ಯಾಂಕ್ ಅಕೌಂಟ್(Bank account) ನಲ್ಲಿರುವ ಹಣವನ್ನು ಕಳ್ಳತನ ಮಾಡುವವರ ಸಂಖ್ಯೆಯು ಸಹ ಹೆಚ್ಚುತ್ತಿದೆ ಅದ್ದರಿಂದ ಮೊಬೈಲ್ ಬಳಕೆದಾರರು ಈ ಕುರಿತು ಜಾಗ್ರತೆವಹಿಸುವುದು ಅತ್ಯಗತ್ಯ.
ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಯಾವುದನ್ನು ಮಾಡಬೇಕು? ಯಾವ ಕೆಲಸವನ್ನು ಮಾಡಬಾರದು ಎಂದು ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಆನ್ಲೈನ್ ವಂಚಕರು(Online) ವಿವಿಧ ಬಗ್ಗೆಯ ವಿಧಾನವನ್ನು ಅನುಸರಿಸಿ ಜಗತ್ತಿನಾದ್ಯಂತ್ಯ ಪ್ರತಿ ದಿನ ಅನೇಕ ಜನರಿಗೆ ವಂಚನೆಯನ್ನು ಮಾಡುತ್ತಾರೆ.
ಇದನ್ನೂ ಓದಿ: Money saving tips- ನಿಮ್ಮ ಬಳಿ ಹಣ ಉಳಿಯುತ್ತಿಲ್ಲವೇ? ಇಲ್ಲಿದೆ ಹಣ ಉಳಿತಾಯಕ್ಕೆ ಸೂಕ್ತ ಸಲಹೆಗಳು!
ನಿಮ್ಮ ಮೊಬೈಲ್ ಗೆ ಈ ಅಂಕಣದಲ್ಲಿ ತಿಳಿಸಿರುವ ಮೊಬೈಲ್ ಸಂಖ್ಯೆಯಿಂದ ಕರೆ ಬಂದರೆ ಯಾವುದೇ ಕಾರಣಕ್ಕೂ ಸ್ಪಂದನೆ ಮಾಡದಿರಿ ಒಂದೊಮ್ಮೆ ಸ್ಪಂದಿಸಿದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಕನ್ನ ಬೀಳುವ ಸಾಧ್ಯತೆ ಹೆಚ್ಚು.
Call Scam alert- ಈ ಎರಡು ಮೊಬೈಲ್ ಸಂಖ್ಯೆಯಿಂದ ಕರೆ ಬಂದರೆ ಸ್ವೀಕರಿಸಬೇಡಿ:
ಇಂದಿನ ಅಧುನಿಕ ಜಗತ್ತಿನಲ್ಲಿ ಸೈಬರ್ ಕ್ರೈಂ( ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಾ ಸಾಗುತ್ತಿವೆ. ಪ್ರತಿ ನಿತ್ಯ ಈ ಕುರಿತು ಅಪರಾಧಗಳ ದೂರು ಪೋಲೀಸ್ ಇಲಾಖೆಯಲ್ಲಿ ದಾಖಲಾಗುತ್ತಿವೆ. ಸೈಬರ್ ಖದೀಮರು ಕೆಲ ನಂಬರ್ ಮೂಲಕ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಈ ರೀತಿಯ ಕೆಲ ಘಟನೆಗಳು ಬೆಳಕಿಗೆ ಬಂದಿದೆ. ಈ ಎರಡು ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುವುದರಿಂದ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣ ಕಳ್ಳತನಕ್ಕೆ ಕಾರಣವಾಗಬಹುದು. ಎಚ್ಚರ ವಹಿಸಿ, ಯಾವುವು ಆ ನಂಬರ್ ಎಂದು ತಿಳಿಯೋಣ
+697 ಅಥವಾ +698 ಈ ಮೊಬೈಲ್ ನಂಬರ್ ನಿಂದ ಬರುವ ಕರೆಯನ್ನು ಸ್ವೀಕರಿಸಿದರೆ, ಅದು ಖಂಡಿತವಾಗಿಯೂ ಹಗರಣ. ಈ ಸ್ಕ್ಯಾಮರ್‌ಗಳು VPN ಗಳನ್ನು ಬಳಸಿಕೊಂಡು ತಮ್ಮ ಸ್ಥಳ, ಗುರುತು ಕಾಣದೇ ಇರುವ ಹಾಗೆ ಮಾಡಿರುತ್ತಾರೆ. ಹೀಗಾಗಿ ಕರೆ ಮಾಡಿದ ಸ್ಥಳ, ಕರೆ ಮಾಡಿರುವ ವ್ಯಕ್ತಿ ವಿವರ ಸೇರಿದಂತೆ ಇತರೆ ಯಾವುದೇ ವಿವರವನ್ನು ಪತ್ತೆ ಮಾಡುವುದು ಬಾರೀ ಕಷ್ಟಕರವಾಗಿರುತ್ತದೆ.
+91 ಕರೆಗೂ ಇತರೆ + 697, +698 ಕರೆಗಳಿಗಿರುವ ವ್ಯಾತ್ಯಾಸವೇನು?
ಬಾರತ ದೇಶದಿಂದ ಬರುವ ಪ್ರತಿಯೊಂದು ಮೊಬೈಲ್ ಸಂಖ್ಯೆಯ ಮುಂದೆ +91 ನಂಬರ್ ಬರುತ್ತದೆ ಇದು ನಮ್ಮ ದೇಶದ ಮೊಬೈಲ್ ಸಂಖ್ಯೆಯ STD ನಂಬರ್ ಇದಂತೆ ಇದು ನಮ್ಮ ದೇಶವನ್ನು ಗುರುತಿಸುತ್ತದೆ ಇದೇ ರೀತಿ +91 ಜಾಗದಲ್ಲಿ ಇತರೆ ನಂಬರ್ ಬಂದರೆ ಅದು ಬೇರೆ ದೇಶದಿಂದ ಬಂದಿರುವ ಕರೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು ಒಂದೊಮ್ಮೆ ನಿಮ್ಮ ಸ್ನೇಹಿತರು/ಕುಟುಂಬ ಸದಸ್ಯರು ಬೇರೆ ದೇಶದಲ್ಲಿದ್ದು ಆ ದೇಶದಿಂದ ಕರೆ ಬಂದರೆ ಮಾತ್ರ ಸ್ವೀಕರಿಸಿ ಇಲ್ಲವಾದಲ್ಲಿ ಯಾವುದೇ ಬಗ್ಗೆ ಅಂತರಾಷ್ಟ್ರಿಯ ಕರೆಗಳನ್ನು ಸ್ವೀಕರಿಸದೇ ಇರುವುದು ಉತ್ತಮ ಆಯ್ಕೆ.
+697 ಅಥವಾ +698 ನಂಬರ್ ನಿಂದ ಕರೆ ಬಂದರೆ ಹೀಗೆ ಮಾಡಿ:
+697 ಅಥವಾ +698 ರಿಂದ ಅಂತರರಾಷ್ಟ್ರೀಯ ಕರೆಗಳಿಗೆ ಎಂದಿಗೂ ಸ್ಪಂದಿಸಬೇಡಿ ಒಂದೊಮ್ಮ ನೀವು ಆಕಸ್ಮಿಕವಾಗಿ ಉತ್ತರಿಸಿದರೆ, ಯಾವುದೇ ಬಗ್ಗೆಯ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ತಕ್ಷಣದಲ್ಲಿ ಫೋನ್ ಸ್ವೀಕರಿಸಿದರೆ ಕಟ್ ಮಾಡಿ. ಅಥವಾ ಯಾವುದೇ ಉತ್ತರ ನೀಡಬೇಡಿ. ಹಲವು ಸೋಗಿನಲ್ಲಿ ಈ ಕರಗಳು ಬರಲಿದೆ. ನಿಮ್ಮ ವೈಯುಕ್ತಿ ಮಾಹಿತಿ ಹೇಳಿ ಮಾತುಕತೆ ಪ್ರಾರಂಭಗೊಳ್ಳುತ್ತದೆ. ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸೇರಿದಂತೆ ಇತರೆ ಸೋಗಿನಲ್ಲಿ ಮೋಸಗಾರರು ಕರೆ ಮಾಡಿ ನಿಮಗೆ ಮೋಸ ಮಾಡುತ್ತಾರೆ.
ಇದನ್ನೂ ಓದಿ: Land Mutation-ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಲು ವೆಬ್ಸೈಟ್ ಬಿಡುಗಡೆ!
Report Suspected Fraud Communication- ನಿಮ್ಮ ಮೊಬೈಲ್ ಗೆ ಈ ರೀತಿಯ ಅನಧಿಕೃತ ಕರೆ/ಸಂದೇಶ ಬಂದರೆ ಈ ಕೆಳಗಿನ ವಿಧಾವನ್ನು ಅನುಸರಿಸಿ ವರದಿ ಮಾಡಿ:
ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆಗೆ ವಂಚಕರಿಂದ ಕರೆ ಬಂದರೆ ಇದನ್ನು ತಪ್ಪದೇ ಈ ಕೆಳಗೆ ನೀಡಿರುವ ವೆಬ್ಸೈಟ್(cyber security) ಭೇಟಿ ಮಾಡಿ ಆ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ದೂರನ್ನು ಸಲ್ಲಿಸಬಹುದು.
Step-1: ಮೊದಲಿಗೆ ಈ Call Scam report ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: Ration card list-2024: 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ! ಇಲ್ಲಿದೆ ರದ್ದಾದ ರೇಷನ್ ಕಾರ್ಡ ಪಟ್ಟಿ!
Step-2: ತದನಂತರ ಇಲ್ಲಿ “Report Suspected Fraud Communication” ಆಯ್ಕೆಯ ಕೆಳಗೆ ಕಾಣುವ “Continue reporting” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-3: ಈ ಪೇಜ್ ನಲ್ಲಿ ಕೇಳಿರುವ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣುವ “Verify Mobile via OTP” ಬಟನ್ ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ Submit ಬಟನ್ ಮೇಲೆ ಕ್ಲಿಕ್ ಮಾಡಿ ದೂರು ಸಲ್ಲಿಸಬೇಕು.