Cibil Score-ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ?

February 13, 2025 | Siddesh
Cibil Score-ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ?
Share Now:

ಯಾವುದೇ ಬ್ಯಾಂಕ್ ಮೂಲಕ ನಾಗರಿಕರು ಸಾಲವನ್ನು(Loan) ಪಡೆಯಲು ಅತೀ ಮುಖ್ಯವಾಗಿ ಬೇಕಿರುವ ಸಿಬಿಲ್ ಸ್ಕೋರ್(Cibil score), ಏನಿದು ಸಿಬಿಲ್ ಸ್ಕೋರ್? ಸಿಬಿಲ್ ಸ್ಕೋರ್ ಎಷ್ಟು ಇದ್ದರೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬಹುದು? ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

Simple tips to Increase Cibil Score-ಈಗಿನ ದಿನದಲ್ಲಿ ಯಾವುದೇ ಬ್ಯಾಂಕಿನಲ್ಲಿ ಅಥವಾ ಫೈನಾನ್ಸ್ ಗಳಲ್ಲಿ ವೈಯಕ್ತಿಕ ಸಾಲ, ಗೃಹ ಸಾಲ ಸೇರಿದಂತೆ ಹಲವು ರೀತಿಯ ಲೋನ್ ಗಳನ್ನು ಪಡೆಯಬೇಕೆಂದರೆ ನಿಮ್ಮ ಸಿಬಿಲ್ ಸ್ಕೋರ್ ಅತೀ ಪ್ರಮುಖ ಪಾತ್ರ ವಹಿಸುತ್ತದೆ.

ನಮ್ಮ ಹಳೆಯ ಸಾಲದ ಮರುಪಾವತಿಯನ್ನು ನಾವು ಸರಿಯಾಗಿ ಮಾಡದೆ ಇದ್ದಲ್ಲಿ ಸರ್ವೇ ಸಾಮಾನ್ಯವಾಗಿ ನಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. ಸಾಲ ಎಂದರೆ ಕೇವಲ ವೈಯಕ್ತಿಕ ಸಾಲ, ಗೃಹ ಸಾಲಕ್ಕಾಗಿ ನಗದು ರೂಪದಲ್ಲಿ ಪಡೆಯುವುದು ಅಲ್ಲ. ಬದಲಾಗಿ ನೀವು ಯಾವುದೇ ಹೊಸ ವಾಹನ ಖರೀದಿಸಲು, ಹೊಸ ಮೊಬೈಲ್ ತೆಗೆದುಕೊಳ್ಳಲು ನೀವು EMI ಆಯ್ಕೆ ಬಳಸಲು ಬಯಸಿದಲ್ಲಿಯೂ ಕೂಡ ನಿಮ್ಮ ಸಿಬಿಲ್ ಸ್ಕೋರ್ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: Shop registration-ರಾಜ್ಯ ಸರಕಾರದಿಂದ ಎಲ್ಲಾ ಅಂಗಡಿಗಳ ನೋಂದಣಿಗೆ ನೂತನ ನಿಯಮ ಜಾರಿ!

ಈಗಾಗಲೇ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗಿದ್ದಲ್ಲಿ ಅದನ್ನು ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಸರಳ ವಿಧಾನಗಳು(How to increase cibil score) ಯಾವುವು? ನಿಮ್ಮ ಸಿಬಿಲ್ ಸ್ಕೋರ್ ಎಷ್ಟು ಇದ್ದರೆ ಉತ್ತಮ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

What is cibil score-ಸಿಬಿಲ್ ಸ್ಕೋರ್ ಎಂದರೇನು?

ಯಾವುದೇ ವ್ಯಕ್ತಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿದಾಗ ಆ ವ್ಯಕ್ತಿಗೆ ಸಾಲವನ್ನು ನೀಡಬೇಕೇ? ಇಲ್ಲವೇ? ಎಂದು ನಿರ್ಧರಿಸಲು ಈ ಸಿಬಿಲ್ ಸ್ಕೋರ್ ಅಂಕಿ-ಅಂಶವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಈ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ಬ್ಯಾಂಕ್ ಮೂಲಕ ಸಾಲವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Aadhar card-ಆಧಾರ್ ಕಾರ್ಡನಲ್ಲಿ ಪತಿ ಹೆಸರನ್ನು ಸೇರಿಸಲು ಈ ದಾಖಲೆ ಕಡ್ಡಾಯ!

Cibil Score

ಇದನ್ನೂ ಓದಿ: Togari MSP-ರಾಜ್ಯ ಸರಕಾರದಿಂದ ತೊಗರಿಗೆ ಹೆಚ್ಚುವರಿಯಾಗಿ ₹450 ರೂ ಪ್ರೋತ್ಸಾಹಧನ!

What is the best cibil score-ಸಿಬಿಲ್ ಸ್ಕೋರ್ ಎಷ್ಟು ಇದ್ದರೆ ಉತ್ತಮ?

ಸಿಬಿಲ್ ಸ್ಕೋರ್ ಎಂಬುದು 300 ರಿಂದ 900 ರವರೆಗೆ ಇರುತ್ತದೆ. ನಿಮ್ಮ ಹಣಕಾಸು ವ್ಯವಹಾರದ ಮೇಲೆ ನಿಮ್ಮ ಸ್ಕೋರ್ ಡಿಸೈಡ್ ಆಗುತ್ತದೆ.

ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಅದನ್ನು ಅತ್ಯುತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.

650 ರಿಂದ 749 ನಡುವಿನ ಸ್ಕೋರ್ ನಿಮ್ಮದಾಗಿದ್ದರೆ ಅದನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.

500 ರಿಂದ 649 ಅಂತರ ಸ್ಕೋರ್ ನಿಮ್ಮದಾಗಿದ್ದರೆ ಅದನ್ನು ಸರಾಸರಿ ಎಂದು ಪರಿಗಣಿಸಲಾಗುತ್ತದೆ.

ಅದೇ ಒಂದು ವೇಳೆ 499ಕ್ಕಿಂತ ಕಡಿಮೆ ಇದ್ದರೆ ಅದನ್ನು ಕಳಪೆ ಎಂದು ಪರಿಗಣಿಸಲಾಗುವುದು.

ಇದನ್ನೂ ಓದಿ: Health insurance-ಕೇಂದ್ರ ಸರಕಾರದಿಂದ ಕೇವಲ ₹456 ರೂ ಗೆ ₹4 ಲಕ್ಷ ವಿಮೆ ಪಡೆಯಲು ಅವಕಾಶ!

How to increase cibil score-ಈಗಾಗಲೇ ನಿಮ್ಮ ಸಿಬಿಲ್ ಸ್ಕೋರ್ ಬಹಳ ಕಡಿಮೆ ಇದ್ದರೆ ಅದನ್ನು ಹೆಚ್ಚಿಸಲು ಈ ಸರಳ ಟಿಪ್ಸ್ ಗಳನ್ನು ಅನುಸರಿಸಿ:

ಸದ್ಯಕ್ಕೆ ನಿಮ್ಮ ಸಾಲದ ಬಾಕಿ ಮೊತ್ತವನ್ನು ಸರಿಯಾದ ಸಮಯಕ್ಕೆ ಪಾವತಿಸಿ. ಅದೇ ರೀತಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಗಳ ಕಂತುಗಳನ್ನು ಸರಿಯಾದ ಸಮಯಕ್ಕೆ ಪಾವತಿಸಿದರೆ ಅದು ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಲು ಸಹಾಯ ಮಾಡುವುದು.

ನಿಮ್ಮ ಕ್ರೆಡಿಟ್ ಕಾರ್ಡ್ ನ ಮಿತಿಯ 30% ಕ್ಕಿಂತಲೂ ಕಡಿಮೆ ಬಳಸುವುದು ಉತ್ತಮ. ನಿಮಗೆ ಅತಿಯಾದ ಹಣದ ಅವಶ್ಯಕತೆ ಇದ್ದರೆ ಮಾತ್ರ ನೀವು ದೊಡ್ಡ ಮೊತ್ತವನ್ನು ಸಾಲ ತೆಗೆದುಕೊಳ್ಳಿ. ಒಮ್ಮೆಲೇ ಮರುಪಾವತಿ ಸಾಧ್ಯವಾಗದಿದ್ದಲ್ಲಿ ಅದನ್ನು ಕಂತಿನಲ್ಲಿ ಪರಿವರ್ತಿಸಿಕೊಳ್ಳಿ. ಪ್ರತಿ ತಿಂಗಳು ಕಂತು ಪಾವತಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ಮುಂಚಿತವಾಗಿಯೇ ಹಣ ಮರುಪಾವತಿಸಿ. ಇದರಿಂದ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬಹುದು.

ಕಡಿಮೆ ಮರುಪಾವತಿ ಅವಧಿ ಆಯ್ಕೆ ಮಾಡಿಕೊಳ್ಳುವುದು: ಕೆಲವರು ಕಡಿಮೆ ಸಾಲವನ್ನು ತೆಗೆದುಕೊಂಡು, ಅಧಿಕ ಮರುಪಾವತಿ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ. ಇದೆ ಕಾರಣದಿಂದಾಗಿ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗಬಹುದು. ಆದ್ದರಿಂದ ನಿಮ್ಮ ಸಣ್ಣ ಮೊತ್ತದ ಸಾಲಗಳಿಗಾಗಿ ಕಡಿಮೆ ಅವಧಿಯ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ.

ಈ ರೀತಿ ಮಾಡುವುದರಿಂದ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಕೊಳ್ಳಬಹುದು. ಈ ಲೇಖನ ಕೇವಲ ಮಾಹಿತಿ ನೀಡಲು ಆಗಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಆರ್ಥಿಕ ತಜ್ಞರ ಸಲಹೆ ತೆಗೆದುಕೊಳ್ಳಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: