ರೈತರು ಬೆಳೆ ವಿಮೆ ಅರ್ಜಿ ಸ್ಥಿತಿ(Bele vime Claim enquiry) ಮತ್ತು ಪರಿಹಾರದ ಹಣ ವರ್ಗಾವಣೆ ಕುರಿತು ಯಾರ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ
ಹಲವು ರೈತರಿಗೆ ಈ ಮಾಹಿತಿ ತಿಳಿದಿರುವುದಿಲ್ಲ ಏನೆಂದರೆ ಒಮ್ಮೆ ತಾವು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಬಳಿಕ ತಮ್ಮ ಅರ್ಜಿ ಯಾವ ಹಂತದಲ್ಲಿದೆ ಆ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣ ಜಮಾ ಕುರಿತು ಯಾರಲ್ಲಿ ವಿಚಾರಿಸಬೇಕು? ಎಂದು ಈ ಕುರಿತು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ 2023 ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ವರ್ಗಾವಣೆಯಾಗುತ್ತಿದ್ದು ಪರಿಹಾರದ ಹಣ ಪಡೆಯದ ರೈತರು ತಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ತಿಳಿದುಕೊಳ್ಳಲು ಯಾವೆಲ್ಲ ವಿಧಾನಗಳಿವೆ ಎನ್ನುವ ಮಾಹಿತಿ ತಿಳಿಸಲಾಗಿದೆ.
ಇದನ್ನೂ ಓದಿ: Bele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ!
Bele vime Claim enquiry-2024: ವಿಧಾನ-1: samrakshane.karnataka.gov.in ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ತಿಳಿದುಕೊಳ್ಳಬಹುದು:
ರೈತರು ತಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣ ಜಮಾ(UTR details) ವಿವರವನ್ನು ತಿಳಿದುಕೊಳ್ಳಲು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನೇರವಾಗಿ samrakshane.karnataka.gov.in ಈ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು.
ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಿ ಬೆಳೆ ವಿಮೆ ಕುರಿತು ಮಾಹಿತಿ ಪಡೆಯುವ ವಿಧಾನವನ್ನು ತಿಳಿಯಲು ಇಲ್ಲಿ ಕ್ಲಿಕ್> Bele vime Status check ಮಾಡಿ ನಮ್ಮ ಪುಟದ ಅಂಕಣ ಭೇಟಿ ಮಾಡಿ ಮಾಹಿತಿ ತಿಳಿಯಿರಿ.
ಇದನ್ನೂ ಓದಿ: Crop insurance amount-2024: ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.
Crop insurance Claim enquiry- ವಿಧಾನ-2: ನಿಮ್ಮ ಜಿಲ್ಲೆಯ ಇನ್ಶೂರೆನ್ಸ್ ಕಂಪನಿ ಪ್ರತಿನಿಧಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು:
ರೈತರು ತಮ್ಮ ಬೆಳೆ ವಿಮೆ ಅರ್ಜಿ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮ್ಮ ಜಿಲ್ಲೆಗೆ ವಿಮಾ ಕಂಪನಿಯಿಂದ ನೇಮಕ ಮಾಡಿರುವ ಇನ್ಶೂರೆನ್ಸ್ ಕಂಪನಿ ಪ್ರತಿನಿಧಿಯನ್ನು ಸಂಪರ್ಕಿಸಿಯು ಸಹ ಈ ಕುರಿತು ಮಾಹಿತಿ ಪಡೆಯಬಹುದು.
Insurance companies- ನಿಮ್ಮ ಜಿಲ್ಲೆಯ ಇನ್ಶೂರೆನ್ಸ್ ಕಂಪನಿ ಪ್ರತಿನಿಧಿ ವಿವರ ಪಡೆಯುವುದು ಹೇಗೆ?
ಎರಡು ವಿಧಾನ ಅನುಸರಿಸಿ ಇನ್ಶೂರೆನ್ಸ್ ಕಂಪನಿ ಪ್ರತಿನಿಧಿ ವಿವರ ಪಡೆಯಬಹುದು ಮೊದಲನೆಯದು Insurance companies toll free numbers ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂರಕ್ಷಣೆ ವೆಬ್ಸೈಟ್ ಅನ್ನು ಭೇಟಿ ಮಾಡಿ ಮುಂದೆ/Go ಬಟನ್ ಮೇಲೆ ಕ್ಲಿಕ್ ಮಾಡಿ Home ಪೇಜ್ ನಲ್ಲಿ ಕಾಣುವ Contact us ಬಟನ್ ಮೇಲೆ ಕ್ಲಿಕ್ ಮಾಡಿ ಇನ್ಶೂರೆನ್ಸ್ ಕಂಪನಿಯ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಅಥವಾ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಇನ್ಶೂರೆನ್ಸ್ ಕಂಪನಿ ಪ್ರತಿನಿಧಿ ವಿವರ ಪಡೆದುಕೊಳ್ಳಬಹುದು.
ಇದನ್ನೂ ಓದಿ: Krishi Honda subsidy- ಶೇ 90 ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡವನ್ನು ಹೇಗೆ ಮಾಡಿಕೊಳ್ಳಬಹುದು?
Karnataka agriculture department- ವಿಧಾನ-3: ನಿಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಭೇಟಿ ಮಾಡಿ ಮಾಹಿತಿ ಪಡೆಯಬಹುದು.
ರೈತರು ಬೆಳೆ ವಿಮೆ ಅರ್ಜಿ ಇತರೆ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಕಚೇರಿ ಸಮಯದಲ್ಲಿ ನೇರವಾಗಿ ಭೇಟಿ ಮಾಡಿ ಈ ಕಚೇರಿಯಲ್ಲಿ ಕೃಷಿ ಅಧಿಕಾರಿ(ತಾಂತ್ರಿಕ/TO) ಇವರವನ್ನು ಖುದ್ದು ಭೇಟಿ ಮಾಡಿ ನಿಮ್ಮ ಬೆಳೆ ವಿಮೆ ಅರ್ಜಿ ಕುರಿತು ಪೂರ್ಣ ಮಾಹಿತಿಯನ್ನು ತಿಳಿಯಬಹುದು.
ಬೆಳೆ ವಿಮೆ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here
Crop insurance Samprakshane portal: Click here
ಇದನ್ನೂ ಓದಿ: High Court Recruitment- ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪದವೀಧರರಿಗೆ ಉದ್ಯೋಗವಕಾಶ!