ಕೇಂದ್ರ ಸರಕಾರವು ಹೊಸ ವರ್ಷಕ್ಕೆ ತೆಂಗು ಬೆಳೆಗಾರಿಗೆ ಉಡುಗೊರೆಯನ್ನು ನೀಡಿದ್ದು ಕೊಬ್ಬರಿ ಬೆಂಬಲ ಬೆಲೆಯನ್ನು(Copra MSP) ಹೆಚ್ಚಳ ಮಾಡಿ ನೂತನ ಆದೇಶವನ್ನು ಪ್ರಕಟಿಸಲಾಗಿದೆ.
ನಮ್ಮ ದೇಶದಲ್ಲಿ ಅತೀ ಹೆಚ್ಚು ತೆಂಗು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಪ್ರಮುಖ ಸ್ಥಾನದಲ್ಲಿದ್ದು ರಾಜ್ಯದಲ್ಲಿ ಅತೀ ಹೆಚ್ಚು ರೈತರು ತೆಂಗು ಬೆಳೆಯನ್ನು ಬೆಳೆಯುತ್ತಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೊಬ್ಬರಿ ಬೆಂಬಲ ಬೆಲೆ(Copra MSP price hike) ಏರಿಕೆಗೆ ಅಧಿಕೃತವಾಗಿ ಅನುಮೋದನೆಯನ್ನು ನೀಡಲಾಗಿದ್ದು ಇದರ ವಿವರವನ್ನು ಇಲ್ಲಿ ವಿವರಿಸಲಾಗಿದೆ.
Copra MSP Details-ಪ್ರತಿ ಕ್ವಿಂಟಾಲ್ ಗೆ ರೂ ₹422 ಹೆಚ್ಚಳ ಮಾಡಲಾಗಿದೆ:
ಕೇಂದ್ರ ಸಂಪುಟ ಸಭೆತ ಬಳಿಕ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಆಶ್ವಿನಿ ವೈಷ್ಣವ್ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ ರೂ ₹100/- , ಮಿಲ್ಲಿಂಗ್(ಹೋಳಾದ) ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ ರೂ ₹122/- ದರ ಹೆಚ್ಚಳ ಮಾಡಲಾಗಿದ್ದು ಇದರಂತೆ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ ರೂ ₹12,100/- ಮತ್ತು ಹೋಳಾದ/ಮಿಲ್ಲಿಂಗ್ ಕೊಬ್ಬರಿಗೆ ರೂ ₹11,582/- ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!
Copra MSP Price-ಕೊಬ್ಬರಿಗೆ ಬೆಂಬಲ ಬೆಲೆ ಒದಗಿಸಲು ₹855 ಕೋಟಿ ಅನುದಾನ:
ಕೇಂದ್ರ ಸರಕಾರಕ್ಕೆ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ(CACP) ಸಮಿತಿಯ ಸೂಚನೆಯ ಪ್ರಕಾರ ಕೊಬ್ಬರಿಗೆ ಈ ದರವನ್ನು ನಿಗದಿಪಡಿಸಲಾಗಿದ್ದು ರೈತರಿಗೆ ಈ ದರವನ್ನು ಒದಗಿಸಲು ಕೇಂದ್ರದಿಂದ ₹855 ಕೋಟಿ ಅನುದಾನವನ್ನು ಭರಿಸಲು ಅವಶ್ಯವಿರುವುದರಿಂದ ಇಷ್ಟು ಅನುದಾನವನ್ನು ಕೇಂದ್ರದಿಂದ ಈ ಯೋಜನೆಗೆ ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವರು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
State wise Copra producation-ರಾಜ್ಯವಾರು ಕೊಬ್ಬರಿ ಉತ್ಪಾದನೆ:
ದೇಶದಲ್ಲಿ ಒಟ್ಟು ಕೊಬ್ಬರಿ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಆಗ್ರಸ್ಥಾನದಲ್ಲಿ ಬಂದರೆ ಉಳಿದಂತೆ ಎರಡನೇ ಸ್ಥಾನದಲ್ಲಿ ತಮಿಳುನಾಡು ಹಾಗೂ ಮೂರನೇ ಸ್ಥಾನದಲ್ಲಿ ಕೇರಳ ರಾಜ್ಯ ಬರುತ್ತದೆ ಶೇಕಡವಾರು ಉತ್ಪಾದನೆ ವಿವರ ಈ ಕೆಳಗಿನಂತಿದೆ.
(1) ಕರ್ನಾಟಕ- ಶೇ 32.7%
(2) ತಮಿಳುನಾಡು- ಶೇ 25.7%
(3) ಕೇರಳ- ಶೇ 25.4%
(4) ಆಂದ್ರಪ್ರದೇಶ- ಶೇ 7.7%
ಇದನ್ನೂ ಓದಿ: KMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?