Crop Insurance List-ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿ ಬಿಡುಗಡೆ!

February 16, 2025 | Siddesh
Crop Insurance List-ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿ ಬಿಡುಗಡೆ!
Share Now:

ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ(Crop insurance rejected Farmers list) 2023-24 ನೇ ಸಾಲಿನಲ್ಲಿ ತಮ್ಮ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಿದ ಕೆಲವು ರೈತರ ಅರ್ಜಿಗಳು ತಾಂತ್ರಿಕ ಕಾರಣದಿಂದ ತಿರಸ್ಕೃತಗೊಂಡಿದ್ದು ಈ ಕುರಿತು ರೈತರು ಆಕ್ಷೇಪಣೆಯನ್ನು ಸಲ್ಲಿಸಲು ಕೃಷಿ ಇಲಾಖೆಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ(Crop Insurance Scheme) ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತದೆ ಈ ನಿಟ್ಟಿನಲ್ಲಿ ಕಳೆದ ವರ್ಷ ಈ ಯೋಜನೆಯಡಿ ಪ್ರೀಮಿಯಂ ಮೊತ್ತವನ್ನು ಪಾವತಿ ಮಾಡಿ ವಿಮೆಯನ್ನು ಮಾಡಿಸಿ ಕೆಲವು ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡ ರೈತರ ಅರ್ಜಿ ವಿವರವನ್ನು ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕಟಿಸಲಾಗಿದೆ.

ಬೆಳೆ ವಿಮೆ(Bele Vime Status) ತಿರಸ್ಕೃತಗೊಂಡ ರೈತರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಈ ಪಟ್ಟಿಯಲ್ಲಿ ಹೆಸರಿದ್ದರೆ ಯಾವ ಕ್ರಮವನ್ನು ಅನುಸರಿಸಬೇಕು? ಆಕ್ಷೇಪಣೆಯನ್ನು ಸಲ್ಲಿಸಲು ಒದಗಿಸಬೇಕಾದ ಕ್ರಮಗಳೇನು? ಬೆಳೆ ವಿಮೆ ಅರ್ಜಿಗಳು ತಿರಸ್ಕೃತಗೊಳ್ಳಲು ಕಾರಣವೇನು? ಇನ್ನಿತರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Post office recruitment-ಅಂಚೆ ಇಲಾಖೆಯಲ್ಲಿ ಬರೋಬ್ಬರಿ 21,413 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ!

Crop insurance rejected Farmers list-2025-ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿ ಬಿಡುಗಡೆ:

ಬೆಳೆ ವಿಮೆಯನ್ನು ಮಾಡಿಸಲು ಪ್ರೀಮಿಯಂ ಮೊತ್ತವನ್ನು ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಿ ಕೆಲವು ತಾಂತ್ರಿಕ ಕಾರಣಗಳಿಂದ ನಿಮ್ಮ ಅರ್ಜಿ ತಿರಸ್ಕೃತ ಅಗಿರುವುದನ್ನು ಚೆಕ್ ಮಾಡಿಕೊಳ್ಳಲು ಅಥವಾ ತಿರಸ್ಕೃತ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಲು ರೈತರು ನಿಮ್ಮ ಹೋಬಳಿಯ ಕೃಷಿ ಇಲಾಖೆಯಡಿ ಕಾರ್ಯನಿರ್ವಹಿಸುವ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಬಹುದು.

How to Check Rejected Crop insurance Farmers list-ನಿಮ್ಮ ಮೊಬೈಲ್ ನಲ್ಲೇ ತಿರಸ್ಕೃತಗೊಂಡ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಚೆಕ್ ಮಾಡಿಕೊಳ್ಳವ ವಿಧಾನ:

ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಯೋಜನೆಯ ಅರ್ಜಿಯ ವಿಲೇವಾರಿಯನ್ನು ಮಾಡಲು ರಾಜ್ಯ ಸರಕಾರದಿಂದ ಅಭಿವೃದ್ದಿಪಡಿಸಿರುವ samrakshane.gov.in ಪೋರ್ಟಲ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಿರಸ್ಕೃತಗೊಂಡ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Uchitha Holige Tarabeti-ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿ!

Crop Insurance

Step-1: ಮೊದಲಿಗೆ ಈ Crop insurance rejected list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ವರ್ಷದ ಆಯ್ಕೆ / Select Insurance Year" ಆಯ್ಕೆಯಲ್ಲಿ "2023-24" ಎಂದು ಆಯ್ಕೆ ಮಾಡಿಕೊಂಡು "ಋತು ಆಯ್ಕೆ / Select Insurance Season" ಆಯ್ಕೆಯಲ್ಲಿ Kharif/Rabi ಎಂದು ಆಯ್ಕೆ ಮಾಡಿಕೊಂಡು "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಿ ಮಾಡಬೇಕು.

Step-3: ಈ ಪೇಜ್ ನಲ್ಲಿ ಕೆಳಗೆ "Farmers" ಕಾಲಂ ನಲ್ಲಿ "Check status" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರ ರೈತರ ಆಧಾರ್ ಕಾರ್ಡ/ಮೊಬೈಲ್ ನಂಬರ್ ಹಾಕಿ "Captcha" ಕೋಡ್ ಅನ್ನು ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಿದಾದ ಈ ಕೆಳಗಿನ ಚಿತ್ರದಲ್ಲಿ ತೋರಿಸಿದ ಹಾಗೇ ನಿಮ್ಮ ಅರ್ಜಿಯ ಸ್ಥಿತಿಯು "ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತಿಯಾಗಿದೆ/Application Acknowledge by Insurance Co" ಈ ರೀತಿ ತೋರಿಸಿದರೆ ನಿಮ್ಮ ಅರ್ಜಿ ಸರಿಯಾಗಿದೆ ಎಂದು ಅರ್ಥ ಒಂದೊಮ್ಮೆ "ನಿಮ್ಮ ಅರ್ಜಿ ತಿರಸ್ಕೃತಗೊಂಡಿದೆ ಕೃಷಿ ಇಲಾಖೆಯನ್ನು ಸಂಪರ್ಕಿಸಿ" ಎಂದು ತೋರಿಸಿದರೆ ಕೃಷಿ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ.

Bele vime arji

ಇದನ್ನೂ ಓದಿ: Microfinance-ರಾಜ್ಯ ಸರಕಾರದಿಂದ ಮೈಕ್ರೋ ಫೈನಾನ್ಸ್ ಕುರಿತು ಸುಗ್ರೀವಾಜ್ಞೆ!

Bele vime-ರೈತರಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ:

ಒಂದೊಮ್ಮೆ ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಲು ಕೃಷಿ ಇಲಾಖೆಯಿಂದ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು ಆಕ್ಷೇಪಣೆಯನ್ನು ಸಲ್ಲಿಸಲು ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Ration card application-ಷರತ್ತಿನ ಅನ್ವಯ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Reason For Crop insurance Application Rejection-ಬೆಳೆ ವಿಮೆ ಅರ್ಜಿಗಳು ತಿರಸ್ಕೃತಗೊಳ್ಳಲು ಪ್ರಮುಖ ಕಾರಣಗಳು:

ಬೆಳೆ ವಿಮೆ ಅರ್ಜಿಯ ಬೆಳೆ ಮಾಹಿತಿಯು ನಿಮ್ಮ ಜಮೀನಿನ ಬೆಳೆ ಸಮೀಕ್ಷೆಗೆ ತಾಳೆಯಾಗದೇ ಇದ್ದಲ್ಲಿ ಬೆಳೆ ವಿಮೆ ಅರ್ಜಿಗಳು ತಿರಸ್ಕೃತಗೊಳ್ಳಲುತ್ತವೆ.

ಬೆಳೆ ವಿಮೆ ಅರ್ಜಿಯ ಹೆಸರು ಮತ್ತು ಅರ್ಜಿದಾರರ ಆಧಾರ್ ಕಾರ್ಡ ಹೆಸರು ತಾಳೆಯಾಗದೇ ಇದ್ದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳಲುತ್ತವೆ.

ಜಮೀನಿನ ಪಹಣಿ ಮಾಲೀಕರ ಹೆಸರು ಮತ್ತು ಅರ್ಜಿದಾರರ ಹೆಸರು ತಾಳೆಯಾಗದೇ ಇದ್ದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳಲುತ್ತವೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: