ಬೆಳೆ ರಕ್ಷಣೆಗೆ ಬಿಯರ್ ಬಾಟಲ್ ಮೊರೆ ಹೋದ ರೈತರು!

ಫಸಲಿಗೆ ಬಂದ ಬೆಳೆ ಸಂರಕ್ಷಣೆಯನ್ನು ಯಾವೆಲ್ಲ ವಿಧಾನ ಅನುಸರಿಸಬವುದು ಎಂದು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಧಾನ-1: ಬೆಳೆ ರಕ್ಷಣೆಗೆ ಬಿಯರ್ ಬಾಟಲ್ ವಿಧಾನ-2: ಬ್ರಹ್ಮಾವರ ಕೃಷಿ ವಿಜ್ಞಾನಿ ಕೇಂದ್ರದ, ವಿನೂತನ ಯಂತ್ರ.

ರೈತರು ಫಸಲಿಗೆ ಬಂದ ಬೆಳೆಯನ್ನು ಜಿಂಕೆ, ಹಕ್ಕಿಗಳಿಂದ ರಕ್ಷಣೆ ಮಾಡಿಕೊಳ್ಳಲು ಬಿಯರ್ ಬಾಟಲ್ ಮೊರೆ ಹೋಗಿದ್ದಾರೆ. ಈ ಹಿಂದೆ ಜೋಳ , ಸೂರ್ಯಕಾಂತಿ ಇತ್ಯಾದಿ ಕಾಳುಬೆಳೆಗಳನ್ನು ಹಕ್ಕಿ-ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ಹಗಲು-ರಾತ್ರಿ ನಿದ್ದೆಗಟ್ಟಿ ಕಾಯಬೇಕಿತ್ತು ಈಗ ಅನೇಕ ರೈತರು ತಮ್ಮ ಜಮೀನಿನಲ್ಲಿ ಈ ಖಾಲಿ ಬಿಯರ್ ಬಾಟಲ್ ಗಳನ್ನು ಅಲ್ಲಲ್ಲಿ ನೇತು ಹಾಕಿ ಬೆಳೆ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ವರ್ಷದ 12 ತಿಂಗಳು ಜಮೀನಿನಲ್ಲಿ ದುಡಿಮೆ ಮಾಡಿ ದೇಶಕ್ಕೆ ಅನ್ನ ನೀಡುವ ರೈತನಿಗೆ ಹತ್ತಾರು ತೊಂದರೆಗಳು ಕಾಡುತ್ತಲೇ ಇರುತ್ತದೆ. ಅಕಾಲಿಕ ಮಳೆ, ಬೆಳೆಗಳಿಗೆ ಬರುವ ವಿವಿಧ ರೋಗ ಬಾಧೆಗಳು, ಕೂಲಿಕಾರರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ಮಧ್ಯೆ ಇದೀಗ ಬೆಳೆದು ನಿಂತಿರುವ ಬೆಳೆಗಳಿಗೆ ಹಕ್ಕಿಗಳ ಕಾಟ ಶುರುವಾಗಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಎರಡು ತಿಂಗಳ ಹಿಂದೆ ರೈತರು ಸಜ್ಜೆ ಬಿತ್ತನೆ ಮಾಡಿದ್ದರು. ಸ್ವಲ್ಪ ಉತ್ತಮ ತೇವಾಂಶ ಇದ್ದ ಕಾರಣ ಬೆಳೆದು ನಿಂತ ಸಜ್ಜೆ ಬೆಳೆಸಿ ಕಾಳು ಇರುವುದರಿಂದ ಹಕ್ಕಿಗಳು ಹಿಂಡುಗಳು ಬೆಳೆಯನ್ನು ತಿನ್ನುತ್ತಿವೆ. ಇದರಿಂದಾಗಿ ಕಷ್ಟಪಟ್ಟ ರೈತ ಕಂಗಾಲಾಗಿದ್ದಾರೆ. 

ಈ ವರ್ಷ ತಡವಾಗಿ ಮಳೆ ಆಗಿದ್ದರಿಂದ ಹಕ್ಕಿಗಳು ವೈರಿಯಾಗಿ ಕಾಡುತ್ತಿವೆ ಹೊಲವನ್ನು ಕಾಯುವ ಪರಿಸ್ಥಿತಿ ರೈತರ ಪಾಲಿಗೆ ಬಂದಿದೆ. ಕೆಲ ರೈತರು ಹಕ್ಕಿಗಳನ್ನು ಹೊಲಗಳಿಂದ ಓಡಿಸಲು ಖಾಲಿ ಬೀರ್ ಬಾಟಲ್ ಗಳ ಮೊರೆ ಹೋಗಿದ್ದಾರೆ ಹೊಲದಲ್ಲಿ ಅಲ್ಲಲ್ಲಿ ಎರಡು ದೊಡ್ಡ ದೊಡ್ಡ ಕೋಲುಗಳನ್ನು ನಿಲ್ಲಿಸಿ ಅದಕ್ಕೆ ಅಡ್ಡಕ್ಕೆ ದಂಬು ಕಟ್ಟುತ್ತಾರೆ ಹೀಗೆ ಕಟ್ಟಿದ ದಂಬಿಗೆ ಖಾಲಿ ಬೀರ್ ಬಾಟಲ್ ಗಳನ್ನು ಜೋತು ಬಿಡುತ್ತಾರೆ ಗಾಳಿ ಬಿಟ್ಟಾಗ ಹೀಗೆ ಸಪ್ಪಳ ಆಗುವುದರಿಂದ ಹಕ್ಕಿಗಳು ಹೆದರಿ ಹೊಲಗಳಿಗೆ ಬರುವುದಿಲ್ಲ ಎಂಬುದು ರೈತನ ಹೇಳಿಕೆ ತಾಲೂಕಿನ ಕಡೆಕೊಪ್ಪ ಗ್ರಾಮದ ರೈತ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ ಕಾರಣ ಈಗ ಖಾಲಿ ಬೀರ್ ಬಾಟಲ್ ಗಳು ಡಿಮ್ಯಾಂಡ್ ಬಂದಿದೆ ಹಗಲು ವೇಳೆಯಲ್ಲಿ ರೈತರು ಹೊಲ ಕಾದರೆ ರಾತ್ರಿ ಖಾಲಿ ಬಾಟಲಿಗಳು ಹೊಲವನ್ನು ರಕ್ಷಿಸುತ್ತವೆ.

ಬಾಟಲಿಗಳು ಒಂದಕ್ಕೊಂದು ಬಡಿದಾಗ ಸಪ್ಪಳ ಬರುತ್ತದೆ ಈ ಸಪ್ಪಳಕ್ಕೆ ಹೆದರಿ ಹಕ್ಕಿಗಳು ಹೊಲಕ್ಕೆ ಬರುವುದಿಲ್ಲ ಎನ್ನುತ್ತಾರೆ ರೈತರು.

https://youtu.be/QfaAJtmVVu8

ಇದನ್ನೂ ಓದಿ: Electric bill name change: ಮೊಬೈಲ್ ನಲ್ಲೇ ವಿದ್ಯುತ್ ಬಿಲ್ ಹೆಸರು ಬದಲಾಯಿಸಲು ಅವಕಾಶ? ಇಲ್ಲಿದೆ ವೆಬ್ಸೈಟ್ ಲಿಂಕ್.

ಇತರೆ ಬೆಳೆಗಳಲು ಬಳಕೆ:

ಮಧ್ಯ ಕರ್ನಾಟಕ ಭಾಗದ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಯಲ್ಲಿ ಅಡಿಕೆ ತೋಟಗಳಲ್ಲಿ ಆಳಿಲು ಕಾಟ ಕಡಿಮೆ ಮಾಡಲು ಈ ತಂತ್ರವನ್ನು ಬಳಸುತ್ತಾರೆ ಅದರೆ ಪ್ರಾರಂಭದ ಕೆಲವು ದಿನದ ವರೆಗೆ ಮಾತ್ರ ಹೆದರುವ ಇವು ನಂತರ ರೂಡಿಯಾಗುತ್ತದೆ ಎಂದು ಕೇಲವು ರೈತರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಬ್ರಹ್ಮಾವರ ಕೃಷಿ ವಿಜ್ಞಾನಿ ಕೇಂದ್ರದ, ವಿನೂತನ ಅವಿಷ್ಕಾರ:

ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಫಸಲಿಗೆ ಬಂದ ಬೆಳೆಯನ್ನು ರಕ್ಷಣೆ ಸವಾಲಿನ ಕೆಲಸವಾಗಿದೆ, ಮಂಗಗಳು, ನವಿಲು, ಕಾಡುಕೋಣ, ನರಿ, ಜಿಂಕೆ, ಹಂದಿ ಇತ್ಯಾದಿ ಪ್ರಾಣಿಗಳು ರೈತನಿಗೆ ಹೆಚ್ಚು ತೊಂದರೆ ಕೊಡುತ್ತಿವೆ.

ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ವಿಜ್ನಾನ ಕೇಂದ್ರದ ಎಂಜಿನಿಯರಿಗ್ ವಿಭಾಗದಿಂದ 2021ರಲ್ಲಿ ವಿನೂತನ ಮಾನವನ ರೀತಿಯ ಯಂತ್ರವನ್ನು ಅವಿಷ್ಕಾರ ಮಾಡಲಾಗಿತ್ತು.

ಈ ಯಂತ್ರದ ಮಾಹಿತಿ ಹೀಗಿದೆ:

360 ಡಿಗ್ರಿಯಲ್ಲಿ ತಿರುಗುವ ಮಾನವನ ರೀತಿಯ ಈ ಯಂತ್ರವು ಇದರಲ್ಲಿ ಅಳವಡಿಕೆ ಮಾಡಿರುವ ಕ್ಯಾಮೆರಾ ಮೂಲಕ ತೋಟದ/ಜಮೀನಿನ ಚಟುವಟಿಗಳನ್ನು ಸೆರೆ ಹಿಡಿಯುತ್ತದೆ. ಕ್ಯಾಮೆರಾದಲ್ಲಿ ಯಾವುದಾದರು ಪ್ರಾಣಿ, ಪಕ್ಷಿ, ಮನುಷ್ಯ ಚಲನವಲನ ಕಂಡುಬಂದರೆ ತಕ್ಷಣ ಈ ರೋಬೋಟ್ ಜಾಗೃತ್ತವಾಗಿ.

ಯಾವ ಪ್ರಾಣಿಯೆಂದು ತನ್ನಲ್ಲಿ ಅಳವಡಿಸಿದ ತಂತ್ರಾಂಶದ ಮೂಲಕ ಗುರುತಿಸಿ, ಆ ಪ್ರಾಣಿಯ ವೈರಿಯ ಪ್ರಾಣಿಯ ಧ್ವನಿಯನ್ನು ಈ ಯಂತ್ರವು ಕೋಗುತ್ತದೆ.

ಉದಾಹರಣೆಗೆ ಮಂಗಗಳು ತೋಟಕ್ಕೆ ಬಂದರೆ ಈ ಪ್ರಾಣಿಯ ವೈರಿ ಪ್ರಾಣಿ ನಾಯಿ ಮತ್ತು ಹುಲಿಯ ಧ್ವನಿಯಲ್ಲಿ ಕೂಗುತ್ತದೆ. ಕಾಡು ಕೋಣಗಳಿಗೆ ಸಿಂಹದ ಧ್ವನಿ. ರಾತ್ರಿ ವೇಳೆ ಇದರಲ್ಲಿ ಅಳವಡಿಕೆ ಮಾಡಿರುವ ಫ್ಲ್ಯಾಶ್ ಲೈಟ್ ಮುಖಾಂತರ ಬೆದರಿಸಲಾಗುತ್ತದೆ.

ಸೌರಶಕ್ತಿಯಿಂದ ಈ ಯಂತ್ರವು ಕಾರ್ಯನಿರ್ವಹಿಸುತ್ತದೆ, 4 ಸಾವಿರ ಚದರ ಅಡಿ ವಿಸ್ತೀರ್ಣದವರೆಗೆ ಇದು ಪ್ರಾಣಿ-ಪಕ್ಷಿಗಳ ಚಟುವಟಿಕೆಯನ್ನು ಗ್ರಹಿಸಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್