Bele samikshe app-2023: ಕೃಷಿ ಇಲಾಖೆಯಿಂದ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸಲು ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಿಡುಗಡೆ!

ರಾಜ್ಯದಲ್ಲಿ ಕೃಷಿ ಇಲಾಖೆಯಿಂದ ರೈತರೇ ಸ್ವಂತ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು ದಾಖಲಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ರೈತರು ತಮ್ಮ ಮೊಬೈಲ್ ಬಳಸಿ ಹೇಗೆ ಬೆಳೆ ಸಮೀಕ್ಷೆ(crop survey) ಮಾಡಬವುದು ಮತ್ತು  ಬೆಳೆ ಸಮೀಕ್ಷೆ ಮಾಡುವುದರಿಂದಾಗುವ ಪ್ರಯೋಜನಗಳೇನು ಎಂದು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. 

ಪ್ರತಿ ವರ್ಷ ಇಲಾಖೆಯಿಂದ ರಾಜ್ಯದ್ಯಂತ ರೈತರು ಬೆಳೆದ ಬೆಳೆ ಮಾಹಿತಿಯನ್ನು  ಸಂಗ್ರಹಿಸಲಾಗುತ್ತದೆ ಅದೇ ಮಾದರಿಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು(crop survey) ಮಾಡಲು “ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್” ಅನ್ನು ಬಿಡುಗಡೆ ಮಾಡಲಾಗಿದೆ.

Bele samikshe app- ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡುವ ವಿಧಾನ ಹೇಗೆ: 

Step-1: ರೈತರ ತಮ್ಮ ಮೊಬೈಲ್ ಮೂಲಕ ಮುಂಗಾರು ಬೆಳೆ ಸಮೀಕ್ಷೆ 2023-24 ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ “ರೈತರ ಬೆಳೆ ಸಮೀಕ್ಷೆ 2023-24″ ಎಂದು ಸರ್ಚ್ ಮಾಡಿ ಅಥವಾ ಈ  https://play.google.com/store/apps ಲಿಂಕ್ ಮೇಲೆ ಡೌನ್ ಲೋಡ್ ಮಾಡಿಕೊಳ್ಳಬೇಕು. 

Step-2: ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ತಮ್ಮ ಆಧಾರ್ ಕಾರ್ಡ್ ನ ಮೂಲಕ E-KYC ಪ್ರಕ್ರಿಯೆ ಮಾಡಿಕೊಂಡು ನೊಂದಾವಣೆ ಮಾಡಿಕೊಳ್ಳಬೇಕು ತದನಂತರದಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್ ಮಾಹಿತಿಯ ವಿವರಗಳನ್ನು ಡೌನ್ ಲೋಡ್ ಮಾಡಬೇಕು.

Step-3: ಈ ಪ್ರಕ್ರಿಯೆ ಮುಗಿಸಿದ ಬಳಿಕ ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್ ನಲ್ಲಿ ಬಿತ್ತನೆ ಮಾಡಿರುವ ಸರ್ವೆ ನಂಬರ್ ವಾರು ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಈ ಅಪ್ಲಿಕೇಶನ್ ನಲ್ಲಿ ಸೇವ್ ಮಾಡಿಕೊಳ್ಳಬೇಕು.

Step-4: ನಿಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ಗಳ ಪೋಟೋ ತೆಗೆದು ಈ ಅಪ್ಲಿಕೇಶನ್ ಅಲ್ಲಿ ಸೇವ್ ಮಾಡಿದ ಬಳಿಕ “ಅಪ್ಲೋಡ್ ಮಾಡಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನೀವು ದಾಖಲಿಸಿರುವ ಬೆಳೆ ಸಮೀಕ್ಷೆ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.

ಇದನ್ನೂ ಓದಿ: Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

ಬೆಳೆ ಸಮೀಕ್ಷೆ ಮಾಡುವುದರಿಂದ ರೈತರಿಗೆ ಆಗುವ ಪ್ರಯೋಜನಗಳೇನು?

1) ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ತಮ್ಮ ಜಮೀನಿನ ದಾಖಲೆಯಲ್ಲಿ(ಪಹಣಿ/ಉತಾರ್/RTC) ದಾಖಲಿಸಬಹುದು.

2) ನೀವು ಅಪ್ಲೋಡ್ ಮಾಡಿದ ಬೆಳ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ, ಕೃಷಿ ಸಾಲ ವಿತರಿಸಲು ಮತ್ತು ಸರ್ಕಾರದ ವಿವಿಧ ಇಲಾಖೆಯಿಂದ  ಸವಲತ್ತುಗಳನ್ನು ರೈತರಿಗೆ ನೀಡಲು ಇದೆ ಬೆಳೆ ಮಾಹಿತಿಯನ್ನು ಪರಿಗಣಿಸಲಾಗುತ್ತದೆ.

Bele darshak app- ಬೆಳೆ ಸಮೀಕ್ಷೆ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಒಮ್ಮೆ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮಾಡಿದ ಬಳಿಕ ನೀವು ಅಪ್ಲೋಡ್ ಮಾಡಿರುವ ಬೆಳೆ ಮಾಹಿತಿ ಯಶಸ್ವಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳುದು ಹೇಗೆಂದರೆ ಈ https://play.google.com/store/apps/details?id ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೂರ್ ನಲ್ಲಿ “ಬೆಳೆ ದರ್ಶಕ” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು.

ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು ನೀವು ಸಮೀಕ್ಷೆ ಮಾಡಿರುವ ಸರ್ವೆ ನಂಬರ್ ಅನ್ನು ಹಾಕಿ “ಬೆಳೆ ವಿವರ ಪಡೆಯಿರಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು.

ಅಥವಾ 

https://cropsurvey.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಬೆಳೆ ಸಮೀಕ್ಷೆ ವೆಬ್ಸೈಟ್ ಭೇಟಿ ನಿಮ್ಮ ಜಿಲ್ಲೆ , ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಹಾಕಿ “Get crop survey details” ಬಟನ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ನೀವು ದಾಖಲಿಸಿದ ಬೆಳೆ ಸಮೀಕ್ಷೆ ಮಾಹಿತಿಯನ್ನು ನೋಡಬವುದು.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ(Bele samikshe helpline number):- 8448447715

ಬೆಳೆ ಸಮೀಕ್ಷೆ ವೆಬ್ಸೈಟ್:- https://cropsurvey.karnataka.gov.in

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

ಇದನ್ನೂ ಓದಿ: Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಇದನ್ನೂ ಓದಿ: Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಇದನ್ನೂ ಓದಿ: ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!