Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ನೀರಾವರಿ ಬೆಳೆಗಳನ್ನು ಬೆಳೆಯಲು ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರನ್ನು ಒದಗಿಸಲು ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್(Diesel pumpset subsidy) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಭಾಗ್ಯ(Krishi bhagya) ಮತ್ತು ರಾಷ್ಟ್ರಿಯ ತೋಟಗಾರಿಕೆ ಮಿಷನ್(NHM), ಕೃಷಿ ಯಂತ್ರೋಪಕರಣ(farm mechanization) ಈ ಮೂರು ಯೋಜನೆಯಡಿ ಸಹಾಯಧನದಲ್ಲಿ ಡೀಸೆಲ್ ಪಂಪ್ ಸೆಟ್ ಅನ್ನು ಪಡೆಯಲು ಅವಕಾಶವಿದ್ದು ಅರ್ಹ ರೈತರು ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿಯಲ್ಲಿ ಪಂಪ್ ಸೆಟ್ ಅನ್ನು ಪಡೆಯಬಹುದು.

ಇದನ್ನೂ ಓದಿ: Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!

ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್(Diesel pumpset) ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು? ಯಾವೆಲ್ಲ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಬೆಳೆಗಳಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರನ್ನು ಉಣಿಸಲು ಕೃಷಿ ಹೊಂಡಗಳನ್ನು(Krishi honda) ಈ ಯೋಜನೆಯಡಿಯಲ್ಲಿ ಸಬ್ಸಿಡಿಯಲ್ಲಿ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು ಇದರ ಜೊತೆಗೆ ಕೃಷಿ ಹೊಂಡಗಳಿಂದ ನೀರನ್ನು ಎತ್ತಲು ಡಿಸೇಲ್ ಪಂಪ್ ಸೆಟ್ ಗಳನ್ನು ಸಹ ಶೇ 90 ಸಹಾಯಧನದಲ್ಲಿ ಅರ್ಹ ರೈತರಿಗೆ ನೀಡಲಾಗುತ್ತದೆ.

ಇದನ್ನೂ ಓದಿ: Waqf board-ಏನಿದು ವಕ್ಫ್ ಕಾಯ್ದೆ? ಇದರಿಂದ ರೈತರಿಗೆ ಹೇಗೆ ತೊಂದರೆಯಾಗುತ್ತದೆ? ಇಲ್ಲಿದೆ ಸಂಪೂರ್ಣ ವಿವರ!

Diesel pumpset

Who can apply for Diesel pumpset subsidy yojana- ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು:

ಈಗಾಗಲೇ ಕೃಷಿ ಹೊಂಡವನ್ನು ಹೊಂದಿರುವವರು ಅಥವಾ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದವರು ಅರ್ಜಿಯನ್ನು ಸಲ್ಲಿಸಿ ಡಿಸೇಲ್ ಪಂಪ್ ಸೆಟ್ ಪಡೆಯಬಹುದು.

ಕೃಷಿ ಜಮೀನನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: NPCI mapping status-ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಲು ಅಪ್ಲಿಕೇಶನ್ ಬಿಡುಗಡೆ!

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಆಸಕ್ತ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ರೇಷನ್ ಕಾರ್ಡ
3) ಪೋಟೋ
4) ಬ್ಯಾಂಕ್ ಪಾಸ್ ಬುಕ್
5) ಪಹಣಿ/RTC
6) ನೀರಿನ ಮೂಲದ ಪ್ರಮಾಣ ಪತ್ರ

ಇದನ್ನೂ ಓದಿ: Student stipend application-ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Diesel pumpset subsidy details- ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ಕೃಷಿ ಭಾಗ್ಯ, ರಾಷ್ಟ್ರಿಯ ತೋಟಗಾರಿಕೆ ಮಿಷನ್(NHM), ಕೃಷಿ ಯಂತ್ರೋಪಕರಣ ಯೋಜನೆಯಡಿ ಒಟ್ಟು ಮೊತ್ತಕ್ಕೆ ಶೇ 90% ಸಹಾಯಧನ ನೀಡಲಾಗುತ್ತದೆ.