ಸಾರ್ವಜನಿಕರು/ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್(Google play store) ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು(Dishank mobile app) ತಮ್ಮ ಮೊಬೈಲ್ ನಲ್ಲಿ ಹಾಕಿಕೊಂಡು ಕುಳಿತಲೇ ರಾಜ್ಯದ ಯಾವುದೇ ಜಾಗದ ಸರ್ವೆ ನಂಬರ್ ಮತ್ತು ಮಾಲೀಕರ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.
ಎಲ್ಲಾ ಓದುಗ ಮಿತ್ರರಿಗೆ ಶುಭ ಮುಂಜಾನೆ, ಅನೇಕ ಜನರಿಗೆ ತಮ್ಮ ಜಮೀನಿನ ಸರ್ವೆ ನಂಬರ್(bhoomi land records) ಸರಿಯಾಗಿ ನೆನಪಿನಲ್ಲಿ ಉಳಿದಿರುವುದಿಲ್ಲ ಅಥವಾ ನಿಖರ ಸರ್ವೆ ನಂಬರ್(Land records) ವಿವರ ಗೊತ್ತಿರುವುದಿಲ್ಲ ಇಂತಹ ಸನ್ನಿವೇಶದಲ್ಲಿ ಜೊತೆಗೆ ಹೊಸ ಜಮೀನನ್ನು ಖರೀದಿ ಮಾಡುವ ಸಮಯದಲ್ಲಿ ಆ ಜಮೀನಿನ ಸರ್ವೆ ನಂಬರ್(RTC) ಎಷ್ಟು? ಯಾರ ಹೆಸರಿಗೆ ಆ ಜಮೀನು ಇದೆ? ಜಂಟಿ ಮಾಲೀಕರ ವಿವರ ಸಂಪೂರ್ಣ ಮಾಹಿತಿಯನ್ನು ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ನೋಡಬಹುದು.
ಕಂದಾಯ ಇಲಾಖೆಯಿಂದ(Revenue Department) ಅಭಿವೃದಿಪಡಿಸಿರುವ ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ರಾಜ್ಯದ ಎಲ್ಲಾ ಜಾಗದ ಸರ್ವೆ ನಂಬರ್(Survey number) ಗಳನ್ನು ಲಿಂಕ್/ಅಳವಡಿಸಲಾಗಿದ್ದು ಸಾರ್ವಜನಿಕರು ಯಾವುದೇ ಜಾಗದಲ್ಲಿ ಕುಳಿತು ಸರ್ವೆ ನಂಬರ್ ಮತ್ತು ಮಾಲೀಕ ವಿವರ, ಜಮೀನಿನ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ: Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!
ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡುವುದು ಹೇಗೆ? ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಜಮೀನಿನ ಸರ್ವೆ ನಂಬರ್ ಮತ್ತು ಮಾಲೀಕರ ವಿವರವನ್ನು ಪಡೆದುಕೊಳ್ಳುವ ವಿಧಾನದ ಸಂಪೂರ್ಣ ವಿವರವಣೆಯನ್ನು ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಎಲ್ಲಾರಿಗೂ ಈ ಮಾಹಿತಿ ತಲುಪಿಸಲು ಸಹಕರಿಸಿ.
Dishank mobile appllication-ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:
ಕಂದಾಯ ಇಲಾಖೆಯಿಂದ ಅಬಿವೃದ್ದಿಪಡಿಸಿರುವ Dishank app ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ “Install” ಬಟನ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!
Dishank-ದಿಶಾಂಕ್ ಅಪ್ಲಿಕೇಶನ್ ನಲ್ಲಿ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯುವ ವಿಧಾನ:
Step-1: ಸಾರ್ವಜನಿಕರು/ರೈತರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಅಪ್ಲಿಕೇಶನ್ ಅನ್ನು ತೆರೆದು ಲಾಗಿನ್ ಅಗಬೇಕು ಬಳಿಕ ಮುಖಪುಟದಲ್ಲಿ ಸರ್ವೆ ನಂಬರ್ ವಾರು ಎಲ್ಲಾ ಜಿಲ್ಲೆಯ ಸರ್ವೆ ನಂಬರ್ ವಾರು ಮ್ಯಾಪ್ ತೋರಿಸುತ್ತದೆ. ಆ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ ಮಾಲೀಕರ ವಿವರ ಪಡೆಯಬಹುದು.
Step-2: ಅಥವಾ ಈ ಮೊಬೈಲ್ ಅಪ್ಲಿಕೇಶನ್ ಮುಖಪುಟದ ಕೆಳಗೆ ಬಲ ಬದಿಯಲ್ಲಿ ಕಾಣುವ “Search Survey No” ಬಟನ್ ಮೇಲೆ ಕ್ಲಿಕ್ ಮಾಡಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ/ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಹಾಕಿ ಸರ್ಚ್ ಮಾಡಿಯು ಸಹ ಹಿಸ್ಸಾ ವಾರು ಮಾಲೀಕರ ವಿವರ ಮತ್ತು ಜಮೀನಿನ ವಿಸ್ತೀರ್ಣದ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: Colgate Scholarship 2024 – ಕೋಲ್ ಗೇಟ್ ಕಂಪನಿಯಿಂದ ವಿದ್ಯಾರ್ಥಿಗಳಿಗೆ 75 ಸಾವಿರ ವಿದ್ಯಾರ್ಥಿ ವೇತನ!
Land records-ಮಾಲೀಕ ವಿವರದ ಜೊತೆ ಜಮೀನಿನ ವಿಸ್ತೀರ್ಣದ ಮಾಹಿತಿಯು ಲಭ್ಯ:
ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮ್ಯಾಪ್ ಮೇಲೆ ಕಾಣುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “Surnoc no” ಮತ್ತು “Hissa no” ಅನ್ನು ಆಯ್ಕೆ ಮಾಡಿಕೊಂಡು Owners ಬಟನ್ ಮೇಲೆ ಕ್ಲಿಕ್ ಮಾಡಿದರೆ ಜಮೀನಿನ ಮಾಲೀಕರ ವಿವರ ಮತ್ತು ಹೆಸರಿನ ಕೆಳಗೆ ಜಮೀನಿನ ವಿಸ್ತೀರ್ಣದ ಮಾಹಿತಿಯನ್ನು ಸಹ ನೋಡಬಹುದು.
ಇದಲ್ಲದೇ RTC ಬಟನ್ ಮೇಲೆ ಕ್ಲಿಕ್ ಮಾಡಿ ಆ ಜಮೀನಿನ ಅಧಿಕೃತ ಪಹಣಿ/ಉತಾರ್/RTC ಅನ್ನು ಸಹ ನೋಡಬಹುದು.
Map-ವಿವಿಧ ಬಗ್ಗೆ ಮ್ಯಾಪ್ ಲಭ್ಯ:
ಈ ಕೆಳಗಿನ ಚಿತ್ರದಲ್ಲಿ ತೋರಿಸಿದ ಹಾಗೆ ಮ್ಯಾಲ್ ಸಿಂಬಲ್ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ ವಿವಿಧ ಬಗ್ಗೆಯ ಮ್ಯಾಪ್ ಆಯ್ಕೆಯನ್ನು ಸಹ ಮಾಡಿಕೊಂಡು ಜಮೀನಿನ ವಿವರವನ್ನು ನೋಡಬಹುದು ಉದಾಹರಣೆಗೆ: K-GIS Topo map, Satellite map, ESRI Topo map ಇತ್ಯಾದಿ.
Village map-ಹಳ್ಳಿಯ ಮ್ಯಾಪ್ ಅನ್ನು ಮುಂಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು:
ಒಂದೊಮ್ಮೆ ನೀವು ಹೋಗುವ/ಇರುವ ಹಳ್ಳಿಯಲ್ಲಿ ಇಂಟರ್ ನೆಟ್ ಸಂಪರ್ಕ ಸರಿಯಾಗಿ ಇಲ್ಲದಿದ್ದಲ್ಲಿ ಇಂತಹ ಸನ್ನಿವೇಶದಲ್ಲಿ ಒಂದು ಸ್ಥಳವನ್ನು ನೇರವಾಗಿ ಭೇಟಿ ಮಾಡಿ ಆ ಜಾಗದ ಸರ್ವೆ ನಂಬರ್ ಮತ್ತು ಮಾಲೀಕರ ವಿವರವನ್ನು ಪಡೆಯಲು ಮುಂಚಿತವಾಗಿ ನೆಟ್ ವರ್ಕ್ ಇರುವ ಜಾಗದಲ್ಲೇ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಆ ಹಳ್ಳಿಯ ಮ್ಯಾಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Gruhalakshmi Status-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!
Land owner detail-ನೇರವಾಗಿ ಒಂದು ಸ್ಥಳವನ್ನು ಭೇಟಿ ಮಾಡಿ ಲೋಕೇಶನ್ ಮೂಲಕ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯಬಹುದು:
ನಿಮ್ಮ ಮೊಬೈಲ್ ನಲ್ಲಿ ಲೋಕೇಶನ್ ಅನ್ ಮಾಡಿಕೊಂಡು ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆದುಕೊಂಡು ಲೋಕೇಶನ್ ಐಕಾನ್ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಪ್ರಸ್ತುತ ನಿತ್ತಿರುವ ಜಾಗದ ಸರ್ವೆ ನಂಬರ್ ಯಾವುದು? ಮತ್ತು ಆ ಜಮೀನ ಮಾಲೀಕರ ವಿವರ, ಜಮೀನಿನ ವಿಸ್ತೀರ್ಣದ ಮಾಹಿತಿಯನ್ನು ಸಹ ಪಡೆಯಬಹುದು.
Dishank app Download link-ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಲಿಂಕ್: Download Now