E-Khata-ಈ ದಿನಾಂಕದ ಒಳಗಾಗಿ ಆಸ್ತಿಗಳಿಗೆ ಇ-ಖಾತಾ ವಿತರಣೆ ಕಡ್ಡಾಯ: ಸಿ ಎಂ ಸಿದ್ದರಾಮಯ್ಯ ಸೂಚನೆ!

January 10, 2025 | Siddesh
E-Khata-ಈ ದಿನಾಂಕದ ಒಳಗಾಗಿ ಆಸ್ತಿಗಳಿಗೆ ಇ-ಖಾತಾ ವಿತರಣೆ ಕಡ್ಡಾಯ: ಸಿ ಎಂ ಸಿದ್ದರಾಮಯ್ಯ ಸೂಚನೆ!
Share Now:

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಮತ್ತು ಗ್ರಾಮೀಣ ಭಾಗದ ಆಸ್ತಿಗಳಿಗೆ ಡಿಜಿಟಲ್ ಇ-ಖಾತಾ(E-Khata) ವಿತರಣೆ ಕುರಿತಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದ್ದು, ಈ ಕುರಿತು ಸಭೆಯಲ್ಲಿ ತೆಗೆದುಕೊಂಡು ಪ್ರಮುಖ ನಿರ್ಣಯಗಳ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಯಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಇ-ಖಾತಾ ವಿತರಣೆ ಕುರಿತಂತೆ ಅಧಿಕಾರಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.

ಇ-ಖಾತಾವನ್ನು ವಿತರಣೆ ಮಾಡಲು ನಿಗದಿಪಡಿಸಿರುವ ಗಡುವು ಎಲ್ಲಿಯವರೆಗೆ? ಇ-ಖಾತಾವನ್ನು ಪಡೆಯಲ್ಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಆಸ್ತಿಗಳಿಗೆ ಇ-ಖಾತಾ ಏಕೆ ಮುಖ್ಯ? ಇತ್ಯಾದಿ ಪೂರಕ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Gruhalakshmi 16th installment-ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ!

Last Date For E-Khata: ಇ-ಖಾತಾವನ್ನು ವಿತರಣೆ ಮಾಡಲು ನಿಗದಿಪಡಿಸಿರುವ ಗಡುವು:

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಇಲಾಖೆ ಅಧಿಕಾರಿಗಳಿಗೆ ಗ್ರಾಮೀಣ ಮತ್ತು ನಗರ ಭಾಗದ ಸಾರ್ವಜನಿಕರಿಗೆ ತಪ್ಪದೇ 10 ಫೆಬ್ರವರಿ 2025 ರ ಒಳಗಾಗಿ ಇ-ಖಾತಾವನ್ನು ವಿತರಣೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಖಾತಾ ಅಗದೇ ಇರುವುದರಿಂದ ತೆರಿಗೆ ಸಂಗ್ರಹಣೆಯಲ್ಲಿ ಸರಕಾರಕ್ಕೆ ತೀರ್ವ ನಷ್ಟ:

ಸರಕಾರದ ಬಳಿಯಿರುವ ಅಂಕಿ-ಅಂಶದ ಮಾಹಿತಿಯ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಿ ಸುಮಾರು 15 ಲಕ್ಷ ಆಸ್ತಿದಾರರು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 90 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇನ್ನು ಖಾತಾ ಅಗದೇ ಇರುವುದರಿಂದ ಈ ಆಸ್ತಿಗಳಿಂದ ತೆರಿಗೆ ಸಂಗ್ರಹಣೆ ಮಾಡಲು ಅಗದೇ ಇರುವ ಕಾರಣ ರಾಜ್ಯ ಸರಕಾರಕ್ಕೆ ತೆರಿಗೆ ಸಂಗ್ರಹಣೆಯಲ್ಲಿ ತೀರ್ವ ನಷ್ಟವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದನ್ನೂ ಓದಿ: Yuva nidhi scheme-ಯುವನಿಧಿ ಯೋಜನೆ ನೋಂದಣಿ ಕುರಿತು ಸರಕಾರದಿಂದ ನೂತನ ಆದೇಶ ಪ್ರಕಟ!

ಇ-ಖಾತಾ

Khata Information-ಸಭೆಯಲ್ಲಿ ತೆಗೆದುಕೊಂಡು ಪ್ರಮುಖ ನಿರ್ಣಯಗಳು:

1) ಆಸ್ತಿಗಳಿಗೆ ಖಾತೆಯಿಲ್ಲದೆ ಖೊಟ್ಟಿ ದಾಖಲೆಯನ್ನು ಸೃಷ್ಠಿ ಮಾಡಿ ನೋಂದಣಿಯನ್ನು ಮಾಡುವುದನ್ನು ಸಂಪೂರ್ಣ ಸ್ಥಗಿತಗೊಳಿಸುವುದು.

2) ನಗರ ವ್ಯಾಪ್ತಿಯಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗೆ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಮತ್ತೊಷ್ಟು ಸರಳಗೊಳಿಸಲು ಕಾವೇರಿ ಮತ್ತು ಇ-ಆಸ್ತಿ ಜಾಲತಾಣವನ್ನು ಸಂಯೋಜನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

3) ಇಲ್ಲಿಯವರೆಗೆ ಗ್ರಾಮ ಪಂಚಾಯತಿಗಳಲ್ಲಿನ 44 ಲಕ್ಷ ಆಸ್ತಿಗಳಿಗೆ ತೆರಿಗೆ ಸಂಗ್ರಹವಾಗುತ್ತಿದ್ದು ಇದರಿಂದ ಒಂದು ವರ್ಷಕ್ಕೆ 800 ಕೋಟಿ ಮಾತ್ರ ಆದಾಯ ಬರುತ್ತಿದ್ದು ಇನ್ನು ಸುಮಾರು 90 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಖಾತಾ ಮಾಡಿಸುವುದು ಬಾಕಿಯಿರುವುದರಿಂದ ಕೂಡಲೇ ಖಾತೆ ನೋಂದಣಿಯನ್ನು ಆರಂಭಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Kashi Yatra Subsidy-ನೀವೇನಾದರೂ ಕಾಶಿಯಾತ್ರೆ ಪ್ಲ್ಯಾನ್ ಮಾಡಿದ್ದೀರಾ? ಈ ಯೋಜನೆಯಡಿ ಸಿಗುತ್ತದೆ ಸಹಾಯಧನ!

What is eKhata- ಇ- ಖಾತಾ ಎಂದರೇನು?

ಒಂದು ಆಸ್ತಿಯ ಮಾಲೀಕತ್ವವನ್ನು ಡಿಜಿಟಲ್ ತಂತ್ರಾಂಶದಲ್ಲಿ ನೋಂದಣಿ ಮಾಡಿ ಇದಕ್ಕೆ ಒದಗಿಸಬೇಕಾದ ಪ್ರಮಾಣ ಪತ್ರ ವಿತರಣೆ ಮಾಡುವುದಕ್ಕೆ ಇ- ಖಾತಾ ಎನ್ನುತ್ತಾರೆ ಈ ದಾಖಲೆಯಲ್ಲಿ ಆ ಆಸ್ತಿಯ ಜಾಗದ GPS ಅಂಕಿ-ಅಂಶ ಮತ್ತು ಮಾಲೀಕರ ಪೋಟೋ ಸ್ಥಳದ ಪೋಟೊ ಸೇರಿದಂತೆ ಪ್ರಮುಖ ಅಗತ್ಯ ಮಾಹಿತಿ ಡಿಜಿಟಲ್ ಮಾದರಿಯಲ್ಲಿ ಈ ತಂತ್ರಾಂಶದಲ್ಲಿ ದಾಖಲೀಕರಣ ಮಾಡಿರಲಾಗುತ್ತದೆ.

e-Khata Benefits- ಇ- ಖಾತಾ ಮಾಡಿಸುವುದರ ಲಾಭಗಳು:

A) ಆಸ್ತಿ ಮಾರಾಟ ಮತ್ತು ಖರೀದಿ ಸಮಯದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಮೋಸ ಹೋಗುವುದಕ್ಕೆ ಬ್ರ‍ೇಕ್ ಹಾಕಿದಂತಾಗುತ್ತದೆ.

B) ಆಸ್ತಿ ನೋಂದಣಿ ಮಾಡಿಕೊಳ್ಳಲು ಸಾಮಾನ್ಯವಾಗಿ ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಲು ನೂತನ ಮಾದರಿಯಲ್ಲಿ ಸಹಕಾರಿಯಾಗಿದೆ.

C) ಆಸ್ತಿಯ ಮಾಲೀಕರ ವಿವರ ಮತ್ತು ಅವರ ಆಸ್ತಿಯ ಜಾಗದ ನೈಜ ಮಾಹಿತಿಯನ್ನು ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಿರುವುದರಿಂದ ಸುಲಭವಾಗಿ ವಿವರವನ್ನು ಯಾವುದೇ ಸಮಯದಲ್ಲಿ ಯಾವ ಸ್ಥಳ ದಲ್ಲಿ ಇದ್ದು ಬೇಕಾದರು ಪಡೆಯಬಹುದು.

ಇದನ್ನೂ ಓದಿ: Land Registration-ರಾಜ್ಯ ಸರಕಾರದಿಂದ ಆಸ್ತಿ ಖಾತಾ ರಿಜಿಸ್ಟರ್‌ ಮಾಡಿಸಿಕೊಳ್ಳುವವರಿಗೆ ಸಿಹಿ ಸುದ್ಧಿ!

Documents for e-Khata- ಇ- ಖಾತಾ ಮಾಡಿಸಲು ಬೇಕಾಗುವ ದಾಖಲೆಗಳೇನು ?

1) ಆಸ್ತಿ ತೆರಿಗೆ ಪಾವತಿ ಮಾಡಿರುವ ರಶೀದಿ(Tax bill)

2) ಆಸ್ತಿ ಮಾರಾಟ ಅಥವಾ ನೋಂದಾಯಿತ ಪತ್ರ(Registered Deed)

3) ಅಸ್ತಿಗೆ ಸಂಬಂಧಪಟ್ಟ ಎಲ್ಲಾ ಮಾಲೀಕರ ಆಧಾರ್ ಕಾರ್ಡ್‌ ಪ್ರತಿ(Aadhar)

4) ಜಾಗದ ಪೋಟೋ(Property Photo)

5) ವಿದ್ಯುತ್ ಬಿಲ್

How to Apply for e-Khata-ಅರ್ಜಿಯಲ್ಲಿ ಎಲ್ಲಿ ಸಲ್ಲಿಸಬೇಕು?

ಗ್ರಾಮೀನ ಭಾಗದ ಜನರು ತಮ್ಮ ಹಳ್ಳಿಯ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು ಬೆಂಗಳೂರು ವ್ಯಾಪ್ತಿಯ ಜನರು ಬಿಬಿಎಂಪಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: