- Advertisment -
HomeNew postsE-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!

E-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!

ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಮತ್ತು ನಗರ ಪ್ರದೇಶ ವ್ಯಾಪ್ತಿಯಲ್ಲಿ ನಗರ ಸಭೆ/ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯಿಂದ ಆನ್ಲೈನ್ ಮೂಲಕ ಅರ್ಜಿಯನ್ನು(E-Khata Application) ಸಲ್ಲಿಸಲು ಅವಕಾಶ ಮಾಡಲಾಗಿದ್ದು ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ನಕಲಿ ದಾಖಲೆಗಳನ್ನು ಸಲ್ಲಿಸಿ ಆಸ್ತಿ ನೋಂದಣಿಯನ್ನು(Home land registration)ಮಾಡಿಕೊಂಡು ತೆರಿಗೆ ವಂಚನೆ ಮತ್ತು ಇನ್ನಿತರೆ ಅಕ್ರಮ ವ್ಯವಹಾರಗಳನ್ನು ನಡೆಯುವುದಕ್ಕೆ ಬ್ರೇಕ್ ಹಾಕುಲು ರಾಜ್ಯ ಸರಕಾರದಿಂದ ಗ್ರಾಮೀಣ ಭಾಗದ ಆಸ್ತಿ ನೋಂದಣಿಗೆ ಡಿಜಿಟಲ್ ಸ್ಪರ್ಶ ನೀಡಿದ್ದು ಸಾರ್ವಜನಿಕರು ಗ್ರಾಮ ಪಂಚಾಯತಿಯಲ್ಲೇ ಆಸ್ತಿ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

ಇ-ಖಾತಾ ಮಾಡಿಕೊಳ್ಳಲು(NA Land registration) ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಇ-ಖಾತಾ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಇ-ಖಾತಾ ಮಾಡಿಸುವುದರ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Kharif Bele Parihara-ಮುಂಗಾರು ಹಂಗಾಮಿನಿ ಬೆಳೆ ಪರಿಹಾರ ಹಣ ಜಮಾ ಅದ ರೈತರ ಪಟ್ಟಿ ಬಿಡುಗಡೆ!

NA Land Registration Details-ಗ್ರಾಮ ಪಂಚಾಯತಿ/BBMP ಅಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು:

ಮೂಲ ಖಾತೆ ತಮ್ಮ ಕುಟುಂಬದವರ ಹೆಸರಿನಲ್ಲಿ ಇರುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹಳ್ಳಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿ ಅಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿರುವವರು BBMP ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಇ-ಖಾತಾವನ್ನು ಮಾಡಿಕೊಳ್ಳಬಹುದಾಗಿದೆ.

Documents for NA Land Registration-ಅರ್ಜಿ ಸಲ್ಲಿಸಲು ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡ
(2) ವಂಶವೃಕ್ಷ
(3) ಮನೆ ವಿದ್ಯುತ್ ಬಿಲ್
(4) ಕಂದಾಯ ರಶೀದಿ
(5) ಅರ್ಜಿದಾರರನ್ನು ಮನೆ ಮುಂಭಾಗ ಮತ್ತು ಹಿಂಭಾಗದಲ್ಲಿ ನಿಲ್ಲಿಸಿ ಪೋಟೋ ತೆಗೆಸಿ ಅರ್ಜಿಯೊಂದಿಗೆ ಸಲ್ಲಿಸಬೇಕು.
(6) ಲಿಖಿತ ಅರ್ಜಿ

ಇದನ್ನೂ ಓದಿ: Drip Irrigation-ರಾಜ್ಯ ಸರಕಾರದಿಂದ ಹನಿ ಮತ್ತು ತುಂತುರು ನೀರಾವರಿ ಘಟಕಕ್ಕೆ ₹255 ಕೋಟಿ ಅನುದಾನ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

E-Khata Application

ಇದನ್ನೂ ಓದಿ: PMAY 2.0 Yojana-2024: ಸ್ವಂತ ಮನೆ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! PMAY 2.0 ಯೋಜನೆಯಡಿ ₹ 2.50 ಲಕ್ಷ ಸಬ್ಸಿಡಿ!

E-Khata/ E-swathu- ಇ-ಖಾತಾ/ಇ-ಸ್ವತ್ತು ಏಕೆ ಮಾಡಿಸಬೇಕು?

ಪ್ರಸ್ತುತ ಸನ್ನಿವೇಶದಲ್ಲಿ ಭೂಮಿ/ಜಾಗದ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ನಿಮ್ಮ ಬಳಿಯಿರುವ ಆಸ್ತಿಯ ದಾಖಲೆಗಳು ಸರಿಯಾಗಿ ನಿಮ್ಮ ಹೆಸರಿಗೆ ನೋಂದಣಿ ಮಾಡಿಸಿಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ ಆಸ್ತಿಯನ್ನು ಇ-ಖಾತಾ ಮಾಡಿಸಿಕೊಳ್ಳದೇ ಇದ್ದಲ್ಲಿ ಮೂಲ ಖಾತೆದಾರರು ತಕರಾರು ಮಾಡಿದರೆ ಸಮಸ್ಯೆಯಾಗುತ್ತದೆ ಆದ್ದರಿಂದ ಇ-ಖಾತಾ ಮಾಡಿಸಿಕೊಂಡರೆ ಉತ್ತಮ.

(A) ಬ್ಯಾಂಕ್ ಮೂಲಕ ಮನೆ/ಆಸ್ತಿಯ ಮೇಲೆ ಸಾಲವನ್ನು ತೆಗೆದುಕೊಳ್ಳಲು ಇ-ಖಾತ ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

(B) ನಿಖರವಾಗಿ ಆಸ್ತಿಯ ಮಾಲೀಕರನ್ನು ಗುರುತಿಸಲು ಇ-ಖಾತಾ ಸಹಕಾರಿಯಾಗಿದೆ.

(C) ನಿಮ್ಮ ಆಸ್ತಿಯ ಮಾಲೀಕತ್ವವನ್ನು ಸಾಬೀತುಪದಿಸಲು ಈ ದಾಖಲೆ ಹೊಂದಿರುವುದು ಕಡ್ಡಾಯವಾಗಿದೆ.

(D) ಆಸ್ತಿಯನ್ನು ಮಾರಾಟ ಮಾಡಲು ಸಹ ಇ-ಖಾತಾ ಅತ್ಯಗತ್ಯವಾಗಿ ಹೊಂದಿರಬೇಕು.

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

E Khatha Application Process- ಅರ್ಜಿ ವಿಲೇವಾರಿ ಪ್ರಕ್ರಿಯೆ:

ಈ ಹಿಂದೆ ಆಸ್ತಿ ನೋಂದಣಿಯನ್ನು ಕಾಗದ ದಾಖಲೆಗಳಲ್ಲಿ ದಾಖಲಿಸಿ ನೋಂದಣಿಯನ್ನು ಮಾಡಿಕೊಡಲಾಗುತ್ತಿತ್ತು ಈ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳು ನಡೆಯುತ್ತಿದ್ದ ಕಾರಣ ಈಗ ಆನ್ಲೈನ್ ಮೂಲಕ ಅರ್ಜಿ ವಿಲೇವಾರಿ ಮಾಡಲು ಇಲಾಖೆಯಿಂದ ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದು ಅರ್ಜಿದಾರರು ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಅವರ ವೈಯಕ್ತಿಕ ವಿವರ ಮತ್ತು ಆಸ್ತಿ ಆಳತೆ,

ಆಸ್ತಿಯ ಚಕ್ಕಬಂದಿ ವಿವರ(ಅಕ್ಕ-ಪಕ್ಕದ ಆಸ್ತಿಯ ಮಾಲೀಕರ ಹೆಸರುಗಳು) ವನ್ನು ಆನ್ಲೈನ್ ನಲ್ಲಿ ನಮೂದಿಸಿ ಇಲಾಖೆ ಸಿಬ್ಬಂದಿಗಳು ಆ ಆಸ್ತಿಯ ಸ್ಥಳ ಭೇಟಿ ಮಾಡಿ ಜಿಪಿಎಲ್ ಪೋಟೋ ವನ್ನು ತೆಗೆದು ಅಪ್ಲೋಡ್ ಮಾಡಿ ಸ್ಥಳ ಪರೀಶಿಲನೆ ಮಾಡಿ ನಿಗದಿತ ಅರ್ಜಿ ಶುಲ್ಕ ಪಾವತಿ ಮಾಡಿ ಡಿಜಿಟಲ್ ಸಂಖ್ಯೆ ಸಹಿತ ಇ-ಖಾತಾವನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -