ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಇ-ಆಸ್ತಿ ಖಾತಾವನ್ನು ಪಡೆಯಲು ರಾಜ್ಯ ಸರಕಾರದಿಂದ ಎಲ್ಲಾ ಜಿಲ್ಲೆಗಳಲ್ಲಿ ಇ-ಆಸ್ತಿ ಖಾತಾವನ್ನು(E-Khata) ವಿತರಣೆ ಮಾಡಲು ಅಭಿಯಾನವನ್ನು ಆಯೋಜನೆ ಮಾಡಲಾಗಿದ್ದು, ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಯ ಎಲ್ಲ ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಬರುವ ಸರಕಾರಿ, ಅರೆಸರಕಾರಿ, ಸ್ಥಳೀಯ ಸಂಸ್ಥೆಗಳ ಒಡೆತನದ ಆಸ್ತಿಗಳನ್ನು ಹೊರತುಪಡಿಸಿ ಉಳಿಕೆ ಕಟ್ಟಡಗಳ, ನಿವೇಶನಗಳ ಮಾಲೀಕರು ಆಸ್ತಿ ಗಣಕೀಕರಣ ಮಾಡಿಸಿ, ನಮೂನೆ 3 ಮತ್ತು ನಮೂನೆ 3 ಎ ಪಡೆದುಕೊಳ್ಳುವುದನ್ನು ರಾಜ್ಯ ಸರಕಾರದಿಂದ ಕಡ್ಡಾಯ ಮಾಡಲಾಗಿದೆ.
ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳಾದ(E-Khata Documents) ನೋಂದಾಯಿತ ಪತ್ರಗಳು, ಆಸ್ತಿ. ಛಾಯಾಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕರ ಚುನಾವಣೆ ಗುರುತಿನ ಚೀಟಿ, ಪಾನ್ ಕಾರ್ಡ್, ರೇಷನ್ ಕಾರ್ಡ್ ನಮೂನೆ 15 (ಇಸಿ), ವಿದ್ಯುತ್ ಬಿಲ್, ನೀರಿನ ಬಿಲ್, ಕಟ್ಟಡ ಪರವಾನಗಿ ಮತ್ತು ಅನುಮೋದಿತ ನಕ್ಷೆ ನಕಲು ಪ್ರತಿ, ಏಕ ನಿವೇಶನ, ಬಹು ನಿವೇಶನ ತಾಂತ್ರಿಕ ಅನುಮೋದನೆ ನಕ್ಷೆ ಕಂದಾಯ ಪಾವತಿಸಿದ ರಶೀದಿ ಹಾಗೂ ಅವಶ್ಯಕತೆ ಇರುವ ಇತರೆ ದಾಖಲೆಗಳನ್ನು ಕಚೇರಿಗೆ ಹಾಜರುಪಡಿಸಿ ಇ-ಆಸ್ತಿ ಖಾತಾ ವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: Karmika ilake Yojana-ಕಾರ್ಮಿಕ ಮಂಡಳಿಯಿಂದ ಈ ಯೋಜನೆಯಡಿ ಸಿಗುತ್ತೆ 1,00,000/- ಧನ ಸಹಾಯ!
Required Documents For E-Khata-ಇ-ಆಸ್ತಿ ಖಾತಾ ಪಡೆಯಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!
1) ಎ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು:
ಆಸ್ತಿಯ ಮಾಲೀಕರು ಎ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಶ್ಯಕವಾಗಿ ಸಲ್ಲಿಸಬೇಕಾಗಿರುವ ದಾಖಲಾತಿಗಳು ಈ ಕೆಳಗಿನಂತಿವೆ:
A) ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 cc ಅಡಿ ನೀಡಲಾದ ಹಕ್ಕು ಪತ್ರ.
B) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ.
C) ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
D) ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.
E) ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ..
F) ಮಾಲೀಕರ ಗುರತಿನ ದಾಖಲೆ ಪ್ರತಿ.
ಇದನ್ನೂ ಓದಿ: Karnataka Cabinet-ರಾಜ್ಯ ಸರಕಾರದಿಂದ “ಮಸ್ವಾಶ್ರಯ ಯೋಜನೆ” ಅಡಿ 10,000 ಮನೆ ಮಂಜೂರು!

2) ಬಿ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಸಲ್ಲಿಸಬೇಕಿರುವ ಕನಿಷ್ಟ ದಾಖಲೆಗಳು:
ಆಸ್ತಿಯ ಮಾಲೀಕರು ಬಿ-ರಿಜಿಸ್ಟರ್‌ನಲ್ಲಿರುವ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಶ್ಯಕವಾಗಿ ಸಲ್ಲಿಸಬೇಕಾಗಿರುವ ದಾಖಲಾತಿಗಳು ಈ ಕೆಳಗಿನಂತಿವೆ:
A) ಆಸ್ತಿಗೆ ಸಂಬಂಧಿಸಿದಂತೆ ಸ್ಮತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ:10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು.
B) ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
C) ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.
D) ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ.
E) ಮಾಲೀಕರ ಗುರತಿನ ದಾಖಲೆ ಪ್ರತಿ.
ಇದನ್ನೂ ಓದಿ: Land Survey-ನಿಮ್ಮ ಜಮೀನಿನ ಸರ್ವೇ ಇನ್ನೂ ಮುಂದೆ ಕೇವಲ 10 ನಿಮಿಷದಲ್ಲಿ ಮಾಡಿಸಬಹುದು!v
E-aasthi Application Download Link-ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲಿಸಲು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:
ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಲು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ವೆಬ್ಸೈಟ್ E-aasthi Application Download ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ E-aasthi ತಂತ್ರಾಂಶವನ್ನು ಭೇಟಿ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Search Property Details On Online-ಆನ್ಲೈನ್ ನಲ್ಲಿ ಆಸ್ತಿ ವಿವರವನ್ನು ಪಡೆಯುವ ವಿಧಾನ:
ಸಾರ್ವಜನಿಕರು ರಾಜ್ಯ ಸರಕಾರದ ಅಧಿಕೃತ ಇ-ಆಸ್ತಿ ತಂತ್ರಾಂಶವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆಸ್ತಿಯ ಅಧಿಕೃತ ವಿವರವನ್ನು ತಮ್ಮ ಮೊಬೈಲ್ ನಲ್ಲೇ ಪಡೆಯಬಹುದು.
Step-1: ಮೊದಲಿಗೆ ಈ Search Property Details ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಇ-ಆಸ್ತಿ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು/ನಗರ ಸ್ಥಳೀಯ ಸಂಸ್ಥೆ, ಸ್ವತ್ತಿನ ಸಂಖ್ಯೆ, ನಿರ್ಧರಣಾ ಸಂಖ್ಯೆ ಮತ್ತು ಮಾಲೀಕರ ಹೆಸರನ್ನು ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಸ್ತಿಯ ವಿವರವನ್ನು ಆನ್ಲೈನ್ ನಲ್ಲಿ ಪಡೆಯಬಹುದು.