ಕರ್ನಾಟಕ ರಾಜ್ಯ ಸರ್ಕಾರದಿಂದ ಹಳ್ಳಿಗರಿಗೂ ಸಹ ಅನಧಿಕೃತ ಆಸ್ತಿಗಳ(Akrama-sakrama) ನೋಂದಣಿಗೆ(Property registration) ಕುರಿತಂತೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಇಷ್ಟು ದಿನ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾದ ಬಿ-ಖಾತಾ(E-Khatha) ವಿತರಣೆ ಗ್ರಾಮೀಣ ಮಟ್ಟಕ್ಕೂ ಸಹ ವಿಸ್ತರಣೆ ಮಾಡಲು ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಈಗಾಗಲೇ ರಾಜ್ಯದ್ಯಂತ ನಗರ ಮತ್ತು ಪಟ್ಟಣ(city) ಹಾಗೂ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಅನಧಿಕೃತ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡವರಿಗೆ ಬಿ-ಖಾತಾವನ್ನು(B-Khatha) ವಿತರಣೆ ಮಾಡಲು ರಾಜ್ಯ ಸರಕಾರದಿಂದ ಅಬಿಯಾನವನ್ನು ಪ್ರಾರಂಭಿಸಲಾಗಿದ್ದು ಇದೆ ಮಾದರಿಯಲ್ಲಿ ಗ್ರಾಮೀಣ ಮಟ್ಟದಲ್ಲಿಯೂ ಸಹ ಖಾತಾವನ್ನು ವಿತರಣೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: Scholarship- SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ! ಶುಲ್ಕ ಮರುಪಾವತಿ ಅವಕಾಶ!
ಏನಿದು ಅನಧಿಕೃತ ಖಾತೆಗಳಿಗೆ ಬಿ-ಖಾತಾ ವಿತರಣೆ ಯೋಜನೆ? ಯಾರೆಲ್ಲ ಈ ಯೋಜನೆಯ ಪ್ರಯೋಜನ(Khatha Benefits) ಪಡೆದುಕೊಳ್ಳಬಹುದು? ಇದರಿಂದ ಆಸ್ತಿ ಮಾಲೀಕರಿಗೆ ಅಗುವ ಪ್ರಯೋಜನವೇನು? ಆಸ್ತಿಗಳಿಗೆ ಬಿ-ಖಾತಾ ಪಡೆಯುವುದರಿಂದ ಮಾಲೀಕರಿಗ ಅಗುವ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Khatha Benefits Details-ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿಯನ್ನು ಮಾಡುವ ಮೂಲಕ ಅನಧಿಕೃತ ಜಾಗದಲ್ಲಿ ಅಂದರೆ ಸರ್ಕಾರಿ, ಸ್ಥಳೀಯ ಸಂಸ್ಥೆ, ಶಾಸನಬದ್ಧ ಸಂಸ್ಥೆ, ಅರಣ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಖಾಸಗಿ ಜಾಗದಲ್ಲಿ ಅಂದರೆ ಕೃಷಿ ಭೂಮಿ/ ಗ್ರಾಮ ಠಾಣ ಜಾಗ ಹೊರತುಪಡಿಸಿದ ಜಾಗದಲ್ಲಿ ಮನೆ/ಇನ್ನಿತರೆ ಕಟ್ಟಡಗಳನ್ನು 2013ರ ಬಳಿಕ ಹಾಗೂ ಹಿಂದಿನ ಅವದಿಯಲ್ಲಿ ನಿರ್ಮಾಣ ಮಾಡಿಕೊಂಡಿರುವ ಈ ಯೋಜನೆಯಡಿ ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ಖಾತಾವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: Vasati Yojane-ವಿವಿಧ ವಸತಿ ಯೋಜನೆಯಡಿ ಈ ವರ್ಷ 2.30 ಲಕ್ಷ ಮನೆ ಮಂಜೂರು!

What Is B-khatha-ಏನಿದು ಅನಧಿಕೃತ ಖಾತೆಗಳಿಗೆ ಬಿ-ಖಾತಾ ವಿತರಣೆ ಯೋಜನೆ?
ಅಧಿಕೃತ ಅಂಕಿ-ಅಂಶದ ಮಾಹಿತಿಯ ಪ್ರಕಾರ ಪ್ರಸ್ತುತ ರಾಜ್ಯಾದ್ಯಂತ ಗ್ರಾಮೀಣ ಮಟ್ಟದಲೇ 96 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇ-ಖಾತಾ ತಂತ್ರಾಂಶದಡಿ ಆಸ್ತಿಯ ಮಾಲೀಕತ್ವವನ್ನು ಆಸ್ತಿಯ ಮಾಲೀಕರು ನೊಂದಣಿಯನ್ನು ಮಾಡಿಕೊಂಡಿರುವುದಿಲ್ಲ ಇದರಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹಣೆ ತೊಂದರೆ ಅಗುತ್ತದೆ ಮತ್ತು ಆಸ್ತಿಯ ಮಾಲೀಕರಿಗೆ ಅಧಿಕೃತ ಮಾಲೀಕತ್ವವನ್ನು ಸಾಬೀತುಪಡಿಸಲು ದಾಖಲೆ ಇಲ್ಲದಂತಾಗಿದೆ.
ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ರಾಜ್ಯ ಸರಕಾರದಿಂದ ಒಂದೇ ಬಾರಿಗೆ ಎಲ್ಲಾ ಅನಧಿಕೃತ ಆಸ್ತಿಗಳಿಗೆ ಇ-ಖಾತಾವನ್ನು ವಿತರಣೆ ಮಾಡಲು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಿಗೆ ತಿದ್ದುಪಡಿಯನ್ನು ತಂದು ಸರಳ ವಿಧಾನದ ಮೂಲಕ ಆಸ್ತಿಯನ್ನು ನೊಂದಣಿ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ: Sheep farming- ಉಚಿತ ಕುರಿ ಸಾಕಾಣಿಕೆ ತರಬೇತಿ ಪಡೆಯಲು ಅವಕಾಶ!
Grama Panchayat-ದೊಡ್ಡ ಪ್ರಮಾಣದಲ್ಲಿ ಆಸ್ತಿಗಳು ಇನ್ನು ಸಹ ನೊಂದಣಿಯೇ ಅಗಿಲ್ಲ:
ಗ್ರಾಮೀಣ ಮಟ್ಟದಲ್ಲಿ ಒಟ್ಟೂ ಚಾಲ್ತಿಯಲ್ಲಿರುವ 1.40 ಕೋಟಿ ಆಸ್ತಿಯಲ್ಲಿ ಕೇವಲ 44 ಲಕ್ಷ ಆಸ್ತಿಯ ಖಾತಾಗಳು ಮಾತ್ರ ಅಧಿಕೃತ ಇ-ಸ್ವತ್ತು ತಂತ್ರಾಂಶದಲ್ಲಿ ನೊಂದಣಿಯಾಗಿದ್ದು ಇನ್ನು 96 ಲಕ್ಷ ಆಸ್ತಿಯ ಮಾಲೀಕರು ಸರ್ಕಾರದ ತಂತ್ರಾಂಶದಲ್ಲಿ ನೊಂದಣಿಯಾಗಿ ಅಧಿಕೃತ ಮಾಲೀಕತ್ವ ದಾಖಲೆಯನ್ನು ಪಡೆದಿರುವುದಿಲ್ಲ.
Property registration Method-ಆಸ್ತಿ ನೊಂದಣಿಯನ್ನು ಮಾಡಿಕೊಳ್ಳುವುದು ಹೇಗೆ?
ಗ್ರಾಮೀಣ ಮಟ್ಟದಲ್ಲಿ ಆಸ್ತಿಯನ್ನು/ಮನೆಯನ್ನು ಹೊಂದಿರುವವರು ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸಲು ಇ-ಸ್ವತ್ತು ದಾಖಲೆಯನ್ನು ಹೊಂದಿರಬೇಕು ಇಲ್ಲಿಯವರೆಗೆ ಈ ದಾಖಲೆಯನ್ನು ಪಡೆಯದಿರುವವರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂದು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಯಾತಿಯನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಸ್ತಿಯ ನೊಂದಣಿಯನ್ನು ಮಾಡಿಕೊಳ್ಳಬಹುದು.
ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ
Property Registration Benefits-ಖಾತಾ ಪಡೆಯುವುದರಿಂದ ಆಗುವ ಪ್ರಯೋಜನಗಳು:
ಗ್ರಾಮೀಣ ಮಟ್ಟದಲ್ಲಿನ ಆಸ್ತಿ(NA Land)/ನಿವೇಶನಗಳನ್ನು ಗ್ರಾಮ ಪಂಚಾಯತಿಯಲ್ಲಿ ನೊಂದಣಿಯನ್ನು ಮಾಡಿ ಖಾತಾವನ್ನು ಪಡೆಯುವುದರಿಂದ ಆಸ್ತಿಯ ಮಾಲೀಕರಿಗೆ ಅನೇಕ ಪ್ರಯೋಜನಗಳು ಇದ್ದು ಅವುಗಳ ವಿವರ ಈ ಕೆಳಗಿನಂತಿದೆ:
ಆಸ್ತಿಯ ಮಾಲೀಕತ್ವವನ್ನು ಸಾಬೀತುಪಡಿಸಲು ಅಧಿಕೃತ ದಾಖಲೆ ಇದಾಗಿರುತ್ತದೆ.
ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಪಡೆಯಲು ಖಾತಾವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಈ ದಾಖಲೆಯನ್ನು ಪಡೆಯುವುದರ ಮೂಲಕ ಬ್ಯಾಂಕ್ ನಿಂದ ಸಾಲವನ್ನು ಪಡೆಯಬಹುದು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಕಡಿವಾಣ ಬೀಳುತ್ತದೆ.
ಆಸ್ತಿಯನ್ನು ಮಾರಾಟ ಮಾಡಲು ಖರೀದಿದಾರರಿಗೆ ಮತ್ತು ಮಾರಾಟದಾರಿಗೆ ಈ ದಾಖಲೆ ನೆರವಾಗುತ್ತದೆ.