ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿ ಇ-ಕೆವೈಸಿ ಮಾಡಿಕೊಳ್ಳದ ರೈತರ ಪಟ್ಟಿಯನ್ನು(PM Kisan E-kyc pending list) ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ರೈತರು ಅರ್ಥಿಕ ನೆರವನ್ನು ಪಡೆಯಲು ಇ-ಕೆವೈಸಿಯನ್ನು ಮಾಡಿಕೊಳ್ಳುವುದನ್ನು ಕೃಷಿ ಇಲಾಖೆಯಿಂದ ಕಡ್ಡಾಯಗೊಳಿಸಲಾಗಿದ್ದು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಯೋಜನೆಯಡಿ ಹಣವನ್ನು ಪಡೆಯಲು ಇ-ಕೆವೈಸಿಯನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: Krishi Mela Bengalore- ನಾಳೆಯಿಂದ ಬೆಂಗಳೂರು ಕೃಷಿ ಮೇಳ! ಈ ಬಾರಿಯ ಮೇಳದ ವಿಶೇಷತೆಗಳೇನು?
ರೈತರು ಕೃಷಿ ಇಲಾಖೆಯ PM-Kisan Fruits ತಂತ್ರಾಂಶವನ್ನು ತಮ್ಮ ಮೊಬೈಲ್ ನಲ್ಲೇ ಭೇಟಿ ಮಾಡಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಇ-ಕೆವೈಸಿ ಅಗದ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಬಹುದು.
PM Kisan E-kyc pending list- ಪಿಎಂ ಕಿಸಾನ್ ಇ-ಕೆವೈಸಿ ಆಗದ ರೈತರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:
ರಾಜ್ಯ ಸರಕಾರದ ಕೃಷಿ ಇಲಾಖೆಯಿಂದ ನಿರ್ವಹಣೆ ಮಾಡುತ್ತಿರುವ PM-Kisan Fruits ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಇ-ಕೆವೈಸಿ ಅಗದ ರೈತರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಪಟ್ಟಿಯಲ್ಲಿ ಹೆಸರು ಇದಿಯಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಬಹುದು.
Step-1: ಪ್ರಥಮದಲ್ಲಿ PM Kisan E-kyc pending list ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಪಿ ಎಂ ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ಇದಾದ ನಂತರ ಇಲ್ಲಿ “ವರದಿಗಳು” ಬಟನ್ ಮೇಲೆ ಕ್ಲಿಕ್ ಮಾಡಿ “EKYC Pending List” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Rice MSP- ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ! ಬೆಲೆ ಎಷ್ಟು ನಿಗದಿ ಮಾಡಲಾಗಿದೆ?
Step-3: ಇಲ್ಲಿ ಜಿಲ್ಲಾವಾರು ಇ-ಕೆವೈಸಿ ಆಗದ ರೈತರ ಅಂಕಿ-ಸಂಖ್ಯೆ ವಿವರ ತೋರಿಸುತ್ತದೆ ನಿಮ್ಮ ಜಿಲ್ಲೆಯ ಹೆಸರಿನ ಮುಂದೆ ಇರುವ ಒಟ್ಟು ಸಂಖ್ಯೆಯ ಮೇಲೆ ಕ್ಲಿಕ್ ಮಾಡಿದರೆ ಇ-ಕೆವೈಸಿ ಮಾಡಿಕೊಳ್ಳದ ರೈತರ ಪಟ್ಟಿ ಡೌನ್ಲೋಡ್ ಅಗುತ್ತದೆ ಈ ಪಟ್ಟಿಯನ್ನು ಒಪನ್ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಬೇಕು.
ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಏನು? ಮಾಡಬೇಕು:
ಒಂದೊಮ್ಮೆ ಈ ಮೇಲಿನ ಹಂತವನ್ನು ಅನುಸರಿಸಿ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ರೈತರ ಪಟ್ಟಿಯನ್ನು ಚೆಕ್ ಮಾಡಿದಾಗ ಪಟ್ಟಿಯಲ್ಲಿ ನಿಮ್ಮ ಹೆಸರು ಕಂಡುಬಂದರೆ ಅಗತ್ಯ ದಾಖಲಾತಿಗಲಾದ ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಸಮೇತ ಅರ್ಜಿದಾರರರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು.
E-kyc documents-ಇ-ಕೆವೈಸಿ ಮಾಡಿಸಲು ಅಗತ್ಯ ದಾಖಲೆಗಳು:
1) ಅರ್ಜಿದಾರರು ಖುದ್ದು ಹಾಜರಾಗಬೇಕು.
2) ಅರ್ಜಿದಾರರ ಆಧಾರ್ ಕಾರ್ಡ
3) ಜಮೀನಿನ ಪಹಣಿ
4) ಬ್ಯಾಂಕ್ ಪಾಸ್ ಬುಕ್
ಇದನ್ನೂ ಓದಿ: Land owner details- ಒಂದೆರಡು ಕ್ಲಿಕ್ ನಲ್ಲಿ ಜಮೀನಿನ ಮಾಲೀಕರ ವಿವರ ತಿಳಿಯಬಹುದು!
E-kyc application-ಇ-ಕೆವೈಸಿಯನ್ನು ಎಲ್ಲಿ ಮಾಡಿಸಬೇಕು?
ಪಿ ಎಂ ಕಿಸಾನ್ ಫಲಾನುಭವಿಗಳು ತಮ್ಮ ಹಳ್ಳಿ ವ್ಯಾಪ್ತಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಕಚೇರಿ ಸಮಯದಲ್ಲಿ ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಸಿಕೊಳ್ಳಬಹುದು.
District wise pending e-kyc details-ಜಿಲ್ಲಾವಾರು ಇ-ಕೆವೈಸಿ ಮಾಡಿಕೊಳ್ಳದ ರೈತರ ಅಂಕಿ-ಸಂಖ್ಯೆ ವಿವರ ಹೀಗಿದೆ:
Bagalkote-21824, Bangalore Rura- 12597, BANGALORE URBAN- 6806, Belgaum- 24836, BELLARY- 11109, Bidar- 22998, Bijapur-20730, Chamarajanagara-17417, Chikkaballapur-12259
Chikmagalur-10761, chitradurga-9924, Dakshina Kannada-18217, Davanagere-16231, DHARWAD-10547, Gadag-12622, Gulbarga-9379,
Hassan-23301, Haveri-10078, Kodagu-3805, KOLAR-6803, koppal-21937, mandya-27091, Mysore-14622, Raichur-23870, Ramanagara-10771, Shimoga-9526, Tumkur-36259, UDUPI-14808, Uttar Kannada- 14116, VIJAYANAGARA-8519, Yadagir-8271, Total-4,72,033