LPG e-KYC status- ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ?

ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮನೆ ಬಳಕೆಗೆ ಬಳಸುವ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಖರೀದಿಗೆ ಗ್ರಾಹಕರು ಇ-ಕೆವೈಸಿ ಮಾಡಿಕೊಳ್ಳುತ್ತಿದ್ದಾರೆ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಹೇಗೆ ತಿಳಿಯಬವುದು ಎಂದು ಈ ಕೆಳಗೆ ತಿಳಿಸಲಾಗಿದೆ.

ಗ್ರಾಹಕರು ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ಪಡೆಯಲು ತಾವು ಪ್ರತಿ ಬಾರಿ ಸಿಲಿಂಡರ್ ಖಾಲಿಯಾದಗ ಗ್ಯಾಸ್ ಬುಕಿಂಗ್ ಮಾಡಿ ತುಂಬಿದ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುವ ಗ್ಯಾಸ್ ಎಜೆನ್ಸಿಯ ಕಚೇರಿ ಭೇಟಿ ಮಾಡಿ ಇ-ಕೆವೈಸಿ ಮಾಡಿಕೊಳ್ಳುವುದು ಅತ್ಯಗತ್ಯ.

ಇ-ಕೆವೈಸಿ ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲ ಇದಲ್ಲದೇ ನಿನ್ನೆಯಿಂದ ಹೊಸ ಆದೇಶ ಹೊರಡಿಸಲಾಗಿದ್ದು ಗ್ಯಾಸ್ ಎಜೆನ್ಸಿಯಲ್ಲಿ ಜನ ದಟ್ಟನೆಯನ್ನು ಕಡಿಮೆ ಮಾಡಲು ಮತ್ತು ಗ್ರಾಹಕರಿಗೆ ನೆರವಾಗಲು ರಾಜ್ಯ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಗ್ಯಾಸ್ ಎಜೆನ್ಸಿಯವರೆ ಹಳ್ಳಿಗೆ ತೆರಲಿ ಇ-ಕೆವೈಸಿ ಮಾಡಿಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: LPG E-KYC: ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ  ಮಾಡಿಸಲು 31 ಡಿಸೆಂಬರ್ 2023 ಕೊನೆಯ ದಿನಾಂಕವಲ್ಲ!

LPG e-KYC Status-ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ?

ಬಹುತೇಕ ಅನೇಕ ಗ್ರಾಹಕರಿಗೆ ಈ ಪ್ರಶ್ನೆ ಕಾಡುತ್ತಿರುತ್ತದೆ ನಮ್ಮ ಗ್ಯಾಸ್ ಸಿಲಿಂಡರ್ ಗೆ ಇ-ಕೆವೈಸಿ ಅಗಿದಿಯೋ ಅಥವಾ ಇಲ್ಲವೋ ಎಂದು ಹೇಗೆ ತಿಳಿಯಬೇಕು ಎಂದು ಈ ಪ್ರಶ್ನೆಗೆ ಉತ್ತರವನ್ನು ಈ ಕೆಳಗೆ ತಿಳಿಸಲಾಗಿದ್ದು ಎರಡು ವಿಧಾನವನ್ನು ಅನುಸರಿಸಿ ಗ್ರಾಹಕರು ತಮ್ಮ ಗ್ಯಾಸ್ ಸಿಲಿಂಡರ್ ಗೆ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬವುದು.

ವಿಧಾನ-1: ಗ್ಯಾಸ್ ಎಜೆನ್ಸಿಗೆ ಕರೆ ಮಾಡಿ ತಿಳಿದುಕೊಳ್ಳಬವುದು:

ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವ ಎಲ್ಲಾ ಗ್ರಾಹಕರಿಗೂ ಎಜೆನ್ಸಿ ವತಿಯಿಂದ ಗ್ಯಾಸ್ ಬುಕಿಂಗ್ ವಿವರ ದಾಖಲಿಸಲು ಬ್ಯಾಂಕ್ ಪಾಸ್ ಬುಕ್ ರೀತಿ ಒಂದು ಬುಕ್ ಅನ್ನು ನೀಡಿರುತ್ತಾರೆ ಅದರಲ್ಲಿ ನೀವು ಪ್ರತಿ ಬಾರಿ ಗ್ಯಾಸ್ ಖಾಲಿಯಾದಗ ಗ್ಯಾಸ್ ಸಿಲಿಂಡರ್ ನೀಡುವ ಎಜೆನ್ಸಿಯ ಕಚೇರಿಯ ಮೊಬೈಲ್ ನಂಬರ್ ನೀಡಿರುತ್ತಾರೆ ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಇ-ಕೆವೈಸಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬವುದು.

ಇದನ್ನೂ ಓದಿ: Yuva nidhi application link-ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ!

ಗ್ಯಾಸ್ ಬುಕ್ ಇಲ್ಲದಿದ್ದಲಿ ಗ್ಯಾಸ್ ಸಿಲಿಂಡರ್ ನೀಡುವ ಡಿಲೆವರಿ ಬಾಯ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿಯು ಇ-ಕೆವೈಸಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬವುದು.

ವಿಧಾನ-2: www.mylpg.in ಈ ವೆಬ್ಸೈಟ್ ಭೇಟಿ ಮಾಡಿ ತಿಳಿಯಬವುದು:

ಗ್ರಾಹಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು www.mylpg.in ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಇ-ಕೆವೈಸಿ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಬವುದು. ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.

Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ LPG e-KYC status check ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಬಳಿಕ ಮುಖಪುಟದಲ್ಲಿ ಕಾಣುವ ಎಲ್ಲಾ ಕಂಪನಿಯ ಸಿಲಿಂಡರ್ ಚಿತ್ರದಲ್ಲಿ ನೀವು ಯಾವ ಕಂಪನಿಯ ಸಿಲಿಂಡರ್ ಬಳಕೆ ಮಾಡುತ್ತಿರುವಿರೋ ಆ ಕಂಪನಿಯ ಸಿಲಿಂಡರ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Gruhalakshmi Camp-ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಹಣ ಬರದವರು ತಪ್ಪದೇ ಈ ದಿನ ನಿಮ್ಮ ಗ್ರಾಮ ಪಂಚಾಯತ್ ಭೇಟಿ ಮಾಡಿ.

Step-2: ಬಳಿಕ ಈ ಪೇಜ್ ನ ಬಲ ಬದಿಯ ಮೇಲೆ ಎರಡು ಆಯ್ಕೆಗಳು ತೋರಿಸುತ್ತವೆ New user ಮತ್ತು Sign in ಎಂದು ಇದರಲ್ಲಿ ಈಗಾಗಲೇ ಈ ವೆಬ್ಸೈಟ್ ಬಳಕೆದಾರರಾಗಿದಲ್ಲಿ Sign in ಮೇಲೆ ಕ್ಲಿಕ್ ಮಾಡಿ ಹೊಸ ಬಳಕೆದಾರದಾಗಿದ್ದಲ್ಲಿ New user ಮೇಲೆ ಕ್ಲಿಕ್ ಮಾಡಬೇಕು.

Step-3: New user ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಗ್ಯಾಸ್ ಬುಕ್ ನಲ್ಲಿರುವ Consumer Number ಮತ್ತು ಲಿಂಕ್ ಅಗಿರುವ ಮೊಬೈಲ್ ನಂಬರ್ ಅನ್ನು ಹಾಕಿ ಈ ವೆಬ್ಸೈಟ್ ಗೆ ಲಾಗಿನ್ ಅಗಲು ಪಾಸ್ವರ್ಡ ರಚನೆ ಮಾಡಿಕೊಳ್ಳಬೇಕು.

Step-4: ಪಾಸ್ವರ್ಡ ಮತ್ತು ಯುಸರ್ ಐಡಿಯನ್ನು ಪಡೆದುಕೊಂಡ ಬಳಿಕ Login/Sign in ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಯುಸರ್ ಐಡಿ ಮತ್ತು ಪಾಸ್ವರ್ಡ ಹಾಕಿ ಲಾಗಿನ್ ಅದರೆ ಈ ಕೆಳಗಿನ ಚಿತ್ರದಲ್ಲಿ ತೋರಿಸಿದ ಕಾಲಂ ನಲ್ಲಿ Aadhaar linked with LPG distributor: “Yes” ಎಂದು ತೋರಿಸಿದರೆ ಇ-ಕೆವೈಸಿ ಅಗಿದೆ ಎಂದು “No” ಎಂದು ತೋರಿಸಿದರೆ ಇ-ಕೆವೈಸಿ ಅಗಿಲ್ಲವೆಂದು.

ಈ ಮಾಹಿತಿ ಉಪಯುಕ್ತ ಅನಿಸಿದ್ದರೆ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Adhar address-ಆಧಾರ್ ಕಾರ್ಡನಲ್ಲಿ ವಿಳಾಸ ಬದಲಾವಣೆಗೆ ನೂತನ ವ್ಯವಸ್ಥೆ ಜಾರಿ

ಎಲ್ ಪಿ ಜಿ ಗ್ಯಾಸ್ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: click here