ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಗ್ರಾಮೀಣ ಭಾಗದ ಅನಧಿಕೃತ ನಿವೇಶನ ಮತ್ತು ಆಸ್ತಿಗಳನ್ನು ಸಕ್ರಮಗೊಳಿಸಲು(e-Swathu) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿಯನ್ನು ಮಾಡಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ನೂತನ ಕ್ರಮವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಪ್ರಸ್ತುತ ನಗರ ಪ್ರದೇಶದಲ್ಲಿ ಅನಧಿಕೃತ ನಿವೇಶನ ಮತ್ತು ಆಸ್ತಿಗಳನ್ನು(e-Swathu property records) ಸಕ್ರಮಗೊಳಿಸಲು ಅಭಿಯಾನವನ್ನು ಈಗಾಗಲೇ ಚಾಲನೆ ಮಾಡಲಾಗಿದ್ದು ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿರುವ ಅನಧಿಕೃತ ನಿವೇಶನ ಮತ್ತು ಆಸ್ತಿಗಳನ್ನು ಸಕ್ರಮಗೊಳಿಸಲು ಸಾರ್ವಜನಿಕರಿಗೆ ಸೂಕ್ತ ಅವಕಾಶವನ್ನು ನೀಡಲು ಗ್ರಾಮ ಪಂಚಾಯತಿಯಲ್ಲಿ ಅವಕಾಶ ನೀಡಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸಚಿವರು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: Bele Parihara-2025: 2.3 ಲಕ್ಷ ರೈತರ ಖಾತೆಗೆ ₹667.73 ಕೋಟಿ ಬೆಳೆ ಪರಿಹಾರ!
ಅನಧಿಕೃತ ನಿವೇಶನ ಮತ್ತು ಆಸ್ತಿಗಳಿಗೆ ಅಧಿಕೃತವಾಗಿ ನೋಂದಣಿಯನ್ನು ಮಾಡಿಕೊಂಡು ಇ-ಸ್ವತ್ತು ದಾಖಲೆಯನ್ನು(e-Swathu portal) ಪಡೆಯುವುದು ಹೇಗೆ? ಇದಕ್ಕಾಗಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇ-ಸ್ವತ್ತು ಕುರಿತು ನೂತನ ಕ್ರಮದ ವಿವರ ಹಾಗೂ ನೂತನ ನಿಯಮದಿಂದ ಆಸ್ತಿಯ ಮಾಲೀಕರಿಗೆ ಯಾವೆಲ್ಲ ಪ್ರಯೋಜನ ಸಿಗಲಿವೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
Home Registration-ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ವಿತರಣೆ:
ಹಳ್ಳಿ ಮಟ್ಟದಲ್ಲಿ ಅರ್ದಕ್ಕಿಂತ ಹೆಚ್ಚು ಆಸ್ತಿಯ ಮಾಲೀಕರು ಅನೇಕ ತಾಂತ್ರಿಕ ಕಾರಣಗಳಿಂದ ಇನ್ನು ಸಹ ಆಸ್ತಿಯನ್ನು(Gram Panchayat e-Swathu) ನೋಂದಣಿಯನ್ನು ಮಾಡಿಕೊಂಡಿಲ್ಲದ ಕಾರಣ ರಾಜ್ಯ ಸರ್ಕಾರಕ್ಕೆ ಆಸ್ತಿ ತೆರಿಗೆ ಸಂಗ್ರಹಣೆಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಅಗುತ್ತಿದ್ದು ಇದಲ್ಲದೇ ಆಸ್ತಿಯ ಮಾಲೀಕರಿಗೂ ಸಹ ಅನೇಕ ತೊಂದರೆಗಳು ಉಂಟಾಗುತ್ತಿವೆ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡಲು ಗ್ರಾಮ ಪಂಚಾಯತಿಯಲ್ಲಿ ಆಸ್ತಿ ನೋಂದಣಿಯನ್ನು ಮಾಡಲು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಿಗೆ ತಿದ್ದುಪಡಿಯನ್ನು ತಂದು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಲಾಗಿದೆ.
ಗ್ರಾಮಠಾಣ ಪ್ರದೇಶವನ್ನು ಹೊರತುಪಡಿಸಿ ಇತರೆ ಜಾಗದಲ್ಲಿ ಅಂದರೆ ಕೃಷಿ ಜಮೀನಿನಲ್ಲಿ ಇತ್ಯಾದಿ ಸ್ಥಳದಲ್ಲಿ ಹಳ್ಳಿಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವವರಿಗೆ ತಮ್ಮ ಆಸ್ತಿಯನ್ನು ಗ್ರಾಮ ಪಂಚಾಯತಿಯಲ್ಲಿ ನೋಂದಣಿಯನ್ನು ಮಾಡಿಕೊಂಡು ಬಿ-ಖಾತಾವನ್ನು ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: Scholarship Amount-ವಿದ್ಯಾರ್ಥಿಗಳಿಗೆ ₹5.16 ಕೋಟಿ ವಿದ್ಯಾರ್ಥಿ ವೇತನ ಬಿಡುಗಡೆ!
E-Swathu-ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ವಿತರಣೆಗೆ ಕುರಿತು ನೂತನ ಕ್ರಮ!
ಗ್ರಾಮ ಪಂಚಾಯತಿಯಲ್ಲಿ ಸಮರ್ಪಕರವಾಗಿ ಆಸ್ತಿಯ ಮಾಲೀಕರಿಗೆ ತ್ವರಿತವಾಗಿ ಇ-ಸ್ವತ್ತು ದಾಖಲೆ ಇನ್ನಿತರೆ ಸಂಬಂಧಪಟ್ಟ ಸೇವೆಗಳನ್ನು ಆಸ್ತಿಯ ಮಾಲೀಕರಿಗೆ ನೀಡಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
E-swathu Committee Details-ಸಮಿತಿಯು ಹೇಗೆ ಕಾರ್ಯನಿರ್ವಹಿಸಲಿದೆ?
ಪ್ರಸ್ತುತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ನಿರ್ಮಾಣವಾಗಿರವ ನಿವೇಶನ ಹಾಗೂ ಖಾಲಿ ಜಾಗ ಎಲ್ಲಾ ಸೇರಿ ರಾಜ್ಯದ್ಯಂತ 96 ಲಕ್ಷ ಆಸ್ತಿಯ ಮಾಲೀಕರು ತಮ್ಮ ಆಸ್ತಿಯ ಮಾಲೀಕತ್ವವನ್ನು ಗ್ರಾಮ ಪಂಚಾಯತಿಯಲ್ಲಿ ನೋಂದಣಿಯನ್ನು ಮಾಡಿಕೊಂಡು ಅಧಿಕೃತ ದಾಖಲೆಯನ್ನು ಪಡೆದಿರುವುದಿಲ್ಲ ಈ ಎಲ್ಲಾ ಆಸ್ತಿಗಳನ್ನು ನೋಂದಣಿಯನ್ನು ಮಾಡಿಸಲು ನಾಗರಿಕರಿಗೆ ಅಗತ್ಯ ಮಾಹಿತಿ ಸೇರಿದಂತೆ ಇನ್ನಿತರೆ ಸೇವೆಗಳನ್ನು ತಲುಪಿಸಲು ಸೂಕ್ತ ಕ್ರಮಗಳನ್ನು ಅನುಷ್ಥಾನಕ್ಕೆ ತರಲು ಈ ಸಮಿತಿಯನ್ನು ರಚನೆ ಮಾಡಲು ಸರ್ಕಾರ ಯೋಜನೆಯನ್ನು ಹಾಕಿಕೊಂಡಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Gruhalakshmi Yojane-2025: ಒಂದೇ ಬಾರಿಗೆ ಎರಡು ಕಂತಿನ ಗೃಹಲಕ್ಷ್ಮಿ ಹಣ ವರ್ಗಾವಣೆಗೆ ದಿನಾಂಕ ನಿಗದಿ!

E-swathu Committee-ಸಮಿತಿಯಲ್ಲಿ ಯಾರೆಲ್ಲ ಇರುತ್ತಾರೆ?
ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚನೆ ಮಾಡಲು ಹೊರಟಿರುವ ಇ-ಸ್ವತ್ತು ಸಮಿತಿಯಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳು ಮತ್ತು ಅಧಿಕಾರೇತರ ಸದಸ್ಯರನ್ನು ಸಹ ಈ ಸಮಿತಿಯಲ್ಲಿ ಆಯ್ಕೆ ಮಾಡಿಕೊಂಡು ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
E-swathu Benefits-ಇ-ಸ್ವತ್ತು ಮಾಡಿಸುವುದರಿಂದ ನಾಗರಿಕರಿಗೆ ಆಗುವ ಲಾಭಗಳು:
ಇ-ಸ್ವತ್ತು ಎಂದರೆ ಇದು ಹಳ್ಳಿಯಲ್ಲಿರುವ ಆಸ್ತಿ/ಮನೆಯ ಮಾಲೀಕತ್ವವನ್ನು ಸಾಬೀತುಪಡಿಸುವ ರಾಜ್ಯ ಸರ್ಕಾರದಿಂದ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಂಡು ಆಸ್ತಿಯ ಮಾಲೀಕರಿಗೆ ನೀಡುವ ಅಧಿಕೃತ ದಾಖಲೆ ಇದಾಗಿದೆ. ಈ ದಾಖಲೆಯನ್ನು ಪಡೆಯುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ನಾಗರಿಕರು ಪಡೆಯಬಹುದು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Voter ID-ವೋಟರ್ ಐಡಿ ಕುರಿತು ಮಹತ್ವದ ಮಾಹಿತಿ ಪ್ರಕಟ!
ಪಾರದರ್ಶಕತೆ: ಇ-ಸ್ವತ್ತು ಆಸ್ತಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸುವುದರಿಂದ, ಭೂಮಿ ಸಂಬಂಧಿತ ಮಾಹಿತಿಯಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ ಮತ್ತು ಮೋಸದ ಸಾಧ್ಯತೆ ಕಡಿಮೆಯಾಗುತ್ತದೆ.
ಸುಲಭ ಪ್ರವೇಶ: ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಆನ್‌ಲೈನ್ ಮೂಲಕ ಪರಿಶೀಲಿಸಬಹುದು, ಇದರಿಂದ ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುವ ಅಗತ್ಯವಿಲ್ಲ.
ಇದನ್ನೂ ಓದಿ: Yashaswini Card-2025: ಯಶಸ್ವಿನಿ ಕಾರ್ಡ ಪಡೆಯಲು ಇನ್ನು 10 ದಿನ ಮಾತ್ರ ಅವಕಾಶ!
ಸಮಯ ಮತ್ತು ವೆಚ್ಚ ಉಳಿತಾಯ: ಡಿಜಿಟಲ್ ದಾಖಲೆಗಳಿಂದಾಗಿ ಆಸ್ತಿ ಸಂಬಂಧಿತ ವ್ಯವಹಾರಗಳು ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಪೂರ್ಣಗೊಳ್ಳುತ್ತವೆ.
ವಂಚನೆ ತಡೆಗಟ್ಟುವಿಕೆ: ಆಸ್ತಿ ದಾಖಲೆಗಳು ಡಿಜಿಟಲ್ ರೂಪದಲ್ಲಿ ಇರುವುದರಿಂದ, ಭೂಮಿ ವಂಚನೆ, ದಾಖಲೆಗಳಲ್ಲಿ ತಿದ್ದುಪಡಿ ಮಾಡುವುದು ಮುಂತಾದ ಅಕ್ರಮಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.
ಕಾನೂನು ರಕ್ಷಣೆ: ಇ-ಸ್ವತ್ತು ದಾಖಲೆಗಳು ಆಸ್ತಿಯ ಮಾಲೀಕತ್ವವನ್ನು ಸ್ಪಷ್ಟವಾಗಿ ದೃಢೀಕರಿಸುತ್ತವೆ, ಇದು ಆಸ್ತಿ ವಿವಾದಗಳನ್ನು ಪರಿಹರಿಸುವಲ್ಲಿ ಮತ್ತು ಕಾನೂನು ರಕ್ಷಣೆ ಪಡೆಯುವಲ್ಲಿ ಸಹಾಯಕವಾಗುತ್ತದೆ.
ಬ್ಯಾಂಕ್ ಸಾಲ ಸೌಲಭ್ಯ: ಡಿಜಿಟಲ್ ದಾಖಲೆಗಳು ಬ್ಯಾಂಕ್‌ಗಳಿಗೆ ಸುಲಭವಾಗಿ ಲಭ್ಯವಾದಾಗ, ಆಸ್ತಿಯನ್ನು ಆಧಾರವಾಗಿಟ್ಟು ಸಾಲ ಪಡೆಯುವ ಪ್ರಕ್ರಿಯೆ ಸರಳವಾಗುತ್ತದೆ.